ಎರಡು ಮರಿ ಹಾಕಿದ ಬಳಿಕ ಪಿಲಿಕುಳದ ಹುಲಿ “ರಾಣಿ” ಈಗ 10 ಮಕ್ಕಳ ತಾಯಿ; ಇನ್ನೊಂದು ತಿಂಗಳಲ್ಲಿ ವೀಕ್ಷಣೆಗೆ ಲಭ್ಯ! – TIGER GAVE BIRTH TWO TIGERS

ಎರಡು ಮರಿ ಹಾಕಿದ ಬಳಿಕ ಪಿಲಿಕುಳದ ಹುಲಿ “ರಾಣಿ” ಈಗ 10 ಮಕ್ಕಳ ತಾಯಿ; ಇನ್ನೊಂದು ತಿಂಗಳಲ್ಲಿ ವೀಕ್ಷಣೆಗೆ ಲಭ್ಯ! – TIGER GAVE BIRTH TWO TIGERS

 

ಎರಡು ಮರಿ ಹಾಕಿದ ಬಳಿಕ ಪಿಲಿಕುಳದ ಹುಲಿ “ರಾಣಿ” ಈಗ 10 ಮಕ್ಕಳ ತಾಯಿ; ಇನ್ನೊಂದು ತಿಂಗಳಲ್ಲಿ ವೀಕ್ಷಣೆಗೆ ಲಭ್ಯ! – TIGER GAVE BIRTH TWO TIGERS

credits : pilikula Nisargadhama

ಮಂಗಳೂರಿನ ಪಿಲಿಕುಳ ಮೃಗಾಲಯದಲ್ಲಿ ರಾಣಿ ಎಂಬ ಹುಲಿ ಹತ್ತು ಮರಿಗಳ ತಾಯಿಯಾಗಿದೆ. ಒಮ್ಮೆಗೆ ಐದು ಮರಿಗಳಿಗೆ ಜನ್ಮ ನೀಡಿ ದಾಖಲೆ ಮಾಡಿದೆ.

ಮಂಗಳೂರು (ದಕ್ಷಿಣ ಕನ್ನಡ) : ಮಂಗಳೂರಿನ ಪಿಲಿಕುಳ ಮೃಗಾಲಯ ರಾಜ್ಯದಲ್ಲಿಯೇ ವಿಸ್ತಾರವಾಗಿರುವ ಮೃಗಾಲಯಗಳಲ್ಲಿ ಒಂದು. ಇಲ್ಲಿ ಪ್ರವಾಸಿಗರ ಪ್ರಮುಖ ಆಕರ್ಷಣೆಗಳಲ್ಲಿ ಹುಲಿ ಕೂಡ ಒಂದು. ಈ ಪಿಲಿಕುಳದಲ್ಲಿ ಇರುವ ರಾಣಿ ಎಂಬ ಹುಲಿ ಎರಡು ತಿಂಗಳ ಹಿಂದೆ ಎರಡು ಮರಿ ಹಾಕಿತ್ತು. ಈ ಮೂಲಕ ಅದು ಹತ್ತು ಮಕ್ಕಳ ತಾಯಿ ಆಗಿದೆ. ಇನ್ನೊಂದು ತಿಂಗಳಲ್ಲಿ ಮರಿ ಹುಲಿಗಳು ಸಾರ್ವಜನಿಕರ ವೀಕ್ಷಣೆಗೆ ಲಭ್ಯವಾಗಲಿವೆ.

ಪಿಲಿಕುಳ ಮೃಗಾಲಯದಲ್ಲಿ ಈ ರಾಣಿ ಹುಲಿ ತನ್ನ ಸಂತಾನೋತ್ಪತ್ತಿ ಮೂಲಕ ಹುಲಿ ಸಂತತಿಗೆ ಕೊಡುಗೆ ನೀಡಿದೆ. ಹುಲಿಗಳ ಸಂಖ್ಯೆ ತೀವ್ರವಾಗಿ ಕಡಿಮೆಯಾಗುತ್ತಿದೆ ಎಂಬ ಅಂಕಿ – ಅಂಶಗಳ ನಡುವೆ ಪಿಲಿಕುಳದಲ್ಲಿರುವ ರಾಣಿ ಹುಲಿ ಹತ್ತು ಮರಿಗೆ ಜನ್ಮ ನೀಡಿದ್ದು, ಜನ್ಮ ನೀಡಿದ ಎಲ್ಲಾ ಮರಿಗಳು ಬದುಕಿವೆ. ಸಾಧಾರಣವಾಗಿ ಹುಲಿಗಳು ಜನ್ಮ ನೀಡುವ ಎಲ್ಲ ಮರಿಗಳು ಬದುಕುವ ಸಾಧ್ಯತೆ ಕಡಿಮೆ. ಇಂತಹುದರಲ್ಲಿ ಉತ್ತಮ ವಾತಾವರಣ ಇರುವುದರಿಂದ ಪಿಲಿಕುಳದಲ್ಲಿ ಜನಿಸಿದ ಹುಲಿ ಮರಿಗಳು ಆರೋಗ್ಯವಾಗಿ ಜನಿಸಿ ದೊಡ್ಡದಾಗಿವೆ.

ಈ ರಾಣಿ ಹುಲಿಯನ್ನು 2016ರಲ್ಲಿ ಪ್ರಾಣಿ ವಿನಿಮಯ ಕಾರ್ಯಕ್ರಮದಡಿ ಬನ್ನೇರುಘಟ್ಟದಿಂದ ಪಿಲಿಕುಳಕ್ಕೆ ತರಲಾಗಿತ್ತು. ಬದಲಾಗಿ ಇಲ್ಲಿನ ಗಂಡು ಹುಲಿಯನ್ನು ಬನ್ನೇರುಘಟ್ಟಕ್ಕೆ ನೀಡಲಾಗಿತ್ತು. 2016 ಕ್ಕೆ ಪಿಲಿಕುಳಕ್ಕೆ ಬಂದ ರಾಣಿ ಅದೇ ವರ್ಷದಲ್ಲಿ 5 ಮರಿಗಳಿಗೆ ಜನ್ಮ ನೀಡಿತ್ತು. ಮೃಗಾಲಯದಲ್ಲಿರುವ ಹುಲಿ 5 ಮರಿಗಳಿಗೆ ಏಕಕಾಲದಲ್ಲಿ ಜನ್ಮ ನೀಡಿರುವುದು ದೇಶದ ಮೃಗಾಲಯದಲ್ಲಿ ಏಕೈಕ ದಾಖಲೆಯಾಗಿದೆ. ಆ ಬಳಿಕ 2021ರಲ್ಲಿ ರಾಣಿ ಮೂರು ಮರಿಗಳಿಗೆ ಜನ್ಮ ನೀಡಿತ್ತು. ಹೀಗೆ ಒಟ್ಟು ಹತ್ತು ಮರಿಗಳಿಗೆ ರಾಣಿ ಜನ್ಮ ನೀಡಿದ್ದು, ಇದರಲ್ಲಿ 7 ಮರಿಗಳನ್ನು ಪ್ರಾಣಿ ವಿನಿಮಯ ಕಾರ್ಯಕ್ರಮದಡಿ ಇತರ ಮೃಗಾಲಯಗಳಿಗೆ ಹಸ್ತಾಂತರಿಸಲಾಗಿದೆ. ಇದೀಗ ರಾಣಿ ಮತ್ತು ಅದರ ಮೂರು ಮರಿ ಮತ್ತು ಇತರ 6 ಹುಲಿಗಳು ಸೇರಿ ಒಟ್ಟು ಹತ್ತು ಹುಲಿಗಳು ಪಿಲಿಕುಳ ಮೃಗಾಲಯದಲ್ಲಿ ಇವೆ.

ಮುಂದಿನ ತಿಂಗಳಿನಿಂದ ಸಾರ್ವಜನಿಕರ ವೀಕ್ಷಣೆಗೆ ಲಭ್ಯ : ಎರಡು ತಿಂಗಳ ಹಿಂದೆ ರಾಣಿ ಹುಲಿ ಜನ್ಮ ನೀಡಿದ ಗಂಡು ಮತ್ತು ಹೆಣ್ಣು ಮರಿಗಳಿಗೆ ಇನ್ನೂ ಹೆಸರನ್ನು ಇಡಲಾಗಿಲ್ಲ. ಈ ಮರಿಗಳನ್ನು ಎರಡು ತಿಂಗಳಿನಿಂದ ತುಂಬಾ ಜೋಪಾನವಾಗಿ ನೋಡಿಕೊಳ್ಳಲಾಗಿದೆ. ಈಗಾಗಲೆ ಇವುಗಳಿಗೆ ವ್ಯಾಕ್ಸಿನೇಷನ್ ಮಾಡಲಾಗಿದ್ದು, ಬೂಸ್ಟರ್ ಡೋಸ್ ಕೊಡುವ ಕಾರ್ಯ ಆಗಬೇಕಾಗಿದೆ. ಇನ್ನು ಒಂದು ತಿಂಗಳ ಬಳಿಕ ಈ ಹುಲಿ ಮರಿಗಳನ್ನ ಪ್ರವಾಸಿಗರ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗುತ್ತದೆ.

google photos

ಪಿಲಿಕುಳ ಜೈವಿಕ ಉದ್ಯಾನವನದ ನಿರ್ದೇಶಕ ಹೆಚ್, ಜಯಪ್ರಕಾಶ್​ ಭಂಡಾರಿ ಹೇಳಿದ್ದೇನು? : ”ಪಿಲಿಕುಳ ನಿಸರ್ಗಧಾಮದಲ್ಲಿ ಪ್ರಾಣಿಗಳನ್ನು ಕಾಡಿನ ವಾತಾವರಣದಲ್ಲಿ ಬೆಳೆಸಿ ಜೀವಿಸಲು ಅವಕಾಶ ನೀಡಲಾಗಿದೆ. ಇದರ ಪರಿಣಾಮ ಪ್ರಾಣಿ ಪಕ್ಷಿಗಳ ಸಂತಾನೋತ್ಪತ್ತಿ ಹೆಚ್ಚುತ್ತದೆ. ಇಲ್ಲಿ ಜಾಸ್ತಿ ಪ್ರಮಾಣದ ಜನನ, ಕಡಿಮೆ ಪ್ರಮಾಣದ ಮರಣ ಇದ್ದರೆ ಉತ್ತಮ ಮೃಗಾಲಯ ಎಂದು ಹೇಳಲಾಗುತ್ತದೆ. ಅದೇ ರೀತಿ ಪಿಲಿಕುಳದಲ್ಲಿ ಜಾಸ್ತಿ ಪ್ರಮಾಣದ ಜನನ, ಕಡಿಮೆ ಪ್ರಮಾಣದ ಮರಣ ಇದೆ” ಎಂದರು.

ಐದು ಮರಿಗಳಿಗೆ ಜನ್ಮ ನೀಡಿ ದೇಶದಲ್ಲಿ ದಾಖಲೆ : ”ಹುಲಿಗಳ ಸಂಖ್ಯೆ ಇದೀಗ 10ಕ್ಕೆ ಏರಿಕೆಯಾಗಿದೆ. ಹುಲಿಗಳು ಗುಂಪಾಗಿ ಇದ್ದು, ಇವುಗಳ ಸಂತಾನೋತ್ಪತ್ತಿ ಅವುಗಳ ಗುಂಪಿನಿಂದಲೇ ಆಗುತ್ತದೆ. ಆದರೆ, ನಾವು ಇಲ್ಲಿ ಅವುಗಳ ಗುಂಪಿನಿಂದ ಸಂತಾನಾಭಿವೃದ್ದಿ ಆಗಲು ಬಿಡದೇ, ಬೇರೆ ಮೃಗಾಲಯದಿಂದ ಬೇರೆ ಹುಲಿಗಳನ್ನು ತಂದು ಸಂತಾನಾಭಿವೃದ್ದಿ ಮಾಡುತ್ತೇವೆ. ಈಗ ಹತ್ತರಲ್ಲಿ 5 ಗಂಡು ಮತ್ತು 5 ಹೆಣ್ಣು ಇವೆ. ಇಲ್ಲಿ ರಾಣಿ ಒಂದೇ ಬಾರಿ ಐದು ಮರಿಗಳಿಗೆ ಜನ್ಮ ನೀಡಿ ದೇಶದಲ್ಲಿ ದಾಖಲೆ ಮಾಡಿದೆ” ಎಂದು ಹೇಳಿದರು.

google photos


ಒಂದು ತಿಂಗಳಲ್ಲಿ ಸಾರ್ವಜನಿಕರ ವೀಕ್ಷಣೆಗೆ ಲಭ್ಯ: ”ದೇಶದಲ್ಲಿ ಮೃಗಾಲಯದಲ್ಲಿರುವ ಹುಲಿಗಳು ನಾಲ್ಕು ಮರಿಗೆ ಜನ್ಮ ನೀಡಿದ್ದೂ ಇದೆ. ಆದರೆ ಪಿಲಿಕುಳದ ರಾಣಿ ಒಮ್ಮೆಗೆ ಐದು ಮರಿಗಳಿಗೆ ಜನ್ಮ ನೀಡಿತ್ತು. ಆ ನಂತರ 2021 ರಲ್ಲಿ ಮೂರು ಮರಿಗಳು ಹುಟ್ಟಿದ್ದವು. ಎರಡು ತಿಂಗಳ ಹಿಂದೆ ಎರಡು ಮರಿಗಳು ಜನ್ಮ ತಾಳಿದ್ದವು. ಈ ಮರಿಗಳನ್ನು ನೋಡಲು ಸಾರ್ವಜನಿಕರಿಗೆ ಅವಕಾಶ ಇರಲಿಲ್ಲ. ಮುಂದಿನ ಒಂದು ತಿಂಗಳಲ್ಲಿ ಸಾರ್ವಜನಿಕರ ವೀಕ್ಷಣೆಗೆ ಲಭ್ಯವಾಗಲಿವೆ. ರಾಣಿಯ ಹತ್ತು ಮರಿಗಳಲ್ಲಿ ಏಳು ಮರಿಗಳನ್ನು ಪ್ರಾಣಿ ವಿನಿಮಯದಲ್ಲಿ ಬೇರೆ ಬೇರೆ ಮೃಗಾಲಯಗಳಿಗೆ ನೀಡಲಾಗಿದೆ’ ಎಂದರು.

Leave a Reply

Your email address will not be published. Required fields are marked *