ಇಂಡಿಯನ್ ಪ್ರೀಮಿಯರ್ ಲೀಗ್ 17 ಆವೃತ್ತಿಗಳನ್ನ ಮುಗಿಸಿ 18ನೇ ಆವೃತ್ತಿಗೆ ಕಾಲಿಟ್ಟಿದೆ. 2008ರಿಂದ 2022ರವರೆಗೆ 8 ತಂಡವಿದ್ದ ಲೀಗ್ನಲ್ಲಿ 2022ರಿಂದ 10 ತಂಡಗಳು ಆಡುತ್ತಿವೆ. ಇಷ್ಟು ಆವೃತ್ತಿಗಳಲ್ಲಿ ಎಲ್ಲಾ ತಂಡಗಳು ಹಲವು ನಾಯಕರನ್ನ ಬದಲಾಯಿಸಿವೆ. ಯಾವ ತಂಡ ಎಷ್ಟು ನಾಯಕರನ್ನ ಬದಲಾಯಿಸಿದೆ, ಯಾರು ಯಾರು ನಾಯಕತ್ವ ವಹಿಸಿಕೊಂಡಿದ್ದಾರೆ ಎನ್ನುವುದನ್ನ ಈ ಸುದ್ದಿಯಲ್ಲಿ ನೋಡೋಣ.
ಎಲ್ಲಾ ಋತುಗಳನ್ನಾಡಿರುವ ಪಂಜಾಬ್ ಕಿಂಗ್ಸ್ ತಂಡ ಬರೋಬ್ಬರಿ 2025ನೇ ಆವೃತ್ತಿ ಸೇರಿ 16 ನಾಯಕರನ್ನ ಪ್ರಯೋಗಿಸಿ ಅಗ್ರಸ್ಥಾನದಲ್ಲಿದೆ. ದೆಹಲಿ ಕ್ಯಾಪಿಟಲ್ಸ್ (DC) 13, ಸನ್‌ರೈಸರ್ಸ್ ಹೈದರಾಬಾದ್ (SRH) 11, ಮುಂಬೈ ಇಂಡಿಯನ್ಸ್ (MI) 10, ಕೋಲ್ಕತ್ತಾ ನೈಟ್ ರೈಡರ್ಸ್ (KKR) 9, ರಾಯಲ್ ಚಾಲೆಂಜರ್ಸ್ ಬೆಂಗಲೂರು (RCB)8, ರಾಜಸ್ಥಾನ ರಾಯಲ್ಸ್ (RR) 6, ಚೆನ್ನೈ ಸೂಪರ್ ಕಿಂಗ್ಸ್ (CSK) 4, ಗುಜರಾತ್ ಟೈಟಾನ್ಸ್ (GT) 3 , ಲಕ್ನೋ ಸೂಪರ್ ಜೈಂಟ್ಸ್ (LSG) 3 ನಾಯಕರನ್ನ ಪ್ರಯೋಗಿಸಿದೆ.
ಪಂಜಾಬ್ ಕಿಂಗ್ಸ್ ತಂಡವನ್ನು ಯುವರಾಜ್ ಸಿಂಗ್, ಕುಮಾರ ಸಂಗಕ್ಕಾರ, ಮಹೇಲ ಜಯವರ್ಧನೆ , ಆಡಮ್ ಗಿಲ್‌ಕ್ರಿಸ್ಟ್ , ಡೇವಿಡ್ ಹಸ್ಸಿ , ಜಾರ್ಜ್ ಬೇಲಿ, ವೀರೇಂದ್ರ ಸೆಹ್ವಾಗ್, ಡೇವಿಡ್ ಮಿಲ್ಲರ್, ಮುರಳಿ ವಿಜಯ್, ಗ್ಲೆನ್ ಮ್ಯಾಕ್ಸ್‌ವೆಲ್, ರವಿಚಂದ್ರನ್ ಅಶ್ವಿನ್, ಕೆಎಲ್ ರಾಹುಲ್, ಮಯಂಕ್ ಅಗರವಾಲ್, ಶಿಖರ್ ಧವನ್,ಸ್ಯಾಮ್ ಕರನ್ ನಾಯಕರಾಗಿದ್ದರು. ಈ ವರ್ಷ ಶ್ರೇಯಸ್ ಅಯ್ಯರ್ ಮುನ್ನಡೆಸಲಿದ್ದಾರೆ.
ದೆಹಲಿ ಕ್ಯಾಪಿಟಲ್ಸ್ ತಂಡವನ್ನು ಆರಂಭಿಕ IPL ಋತುವಿನಿಂದ ಮುನ್ನಡೆಸಿದ ನಾಯಕರ ಪಟ್ಟಿಯಲ್ಲಿ ವೀರೇಂದ್ರ ಸೆಹ್ವಾಗ್, ಗೌತಮ್ ಗಂಭೀರ್, ದಿನೇಶ್ ಕಾರ್ತಿಕ್, ಜೇಮ್ಸ್ ಹೋಪ್ಸ್, ಮಹೇಲ ಜಯವರ್ಧನೆ, ರಾಸ್ ಟೇಲರ್, ಡೇವಿಡ್ ವಾರ್ನರ್, ಕೆವಿನ್ ಪೀಟರ್ಸನ್, ಜೆಪಿ ಡುಮಿನಿ, ಜಹೀರ್ ಖಾನ್, ಕರುಣ್ ನಾಯರ್, ಶ್ರೇಯಸ್ ಅಯ್ಯರ್, ರಿಷಭ್ ಪಂತ್ (2024) ಸೇರಿದ್ದಾರೆ. ಈ ವರ್ಷ ಅಕ್ಷರ್ ಪಟೇಲ್ ತಂಡವನ್ನು ಮುನ್ನಡಸಲಿದ್ದಾರೆ.
ಸನ್‌ರೈಸರ್ಸ್ ಹೈದರಾಬಾದ್ (ಡೆಕ್ಕನ್ ಜಾರ್ಜಸ್ ಸೇರಿ) 10 ನಾಯಕರು ಮುನ್ನಡೆಸಿದ್ದಾರೆ. ಕುಮಾರ ಸಂಗಕ್ಕಾರ, ಕ್ಯಾಮರಾನ್ ವೈಟ್, ಶಿಖರ್ ಧವನ್, ಡಾರೆನ್ ಸ್ಯಾಮಿ, ಡೇವಿಡ್ ವಾರ್ನರ್, ಕೇನ್ ವಿಲಿಯಮ್ಸನ್, ಭುವನೇಶ್ವರ ಕುಮಾರ, ಮನೀಶ್ ಪಾಂಡೆ, ಐಡನ್ ಮಾರ್ಕ್ರಮ್ ಹಾಗೂ ಪ್ಯಾಟ್ ಕಮಿನ್ಸ್ ತಂಡವನ್ನು ಮುನ್ನಡೆಸಿದ್ದರು. ಈ ವರ್ಷವೂ ಕಮಿನ್ಸ್ ನಾಯಕನಾಗಿದ್ದಾರೆ.
ಮುಂಬೈ ಇಂಡಿಯನ್ಸ್ ಇಷ್ಟು ವರ್ಷಗಳಲ್ಲಿ 9 ನಾಯಕರು ಮುನ್ನಡೆಸಿದ್ದಾರೆ. ಹರ್ಭಜನ್ ಸಿಂಗ್, ಶಾನ್ ಪೊಲಾಕ್, ಸಚಿನ್ ತೆಂಡೂಲ್ಕರ್, ಡ್ವೇನ್ ಬ್ರಾವೋ, ರಿಕಿ ಪಾಂಟಿಂಗ್, ರೋಹಿತ್ ಶರ್ಮಾ, ಕೀರನ್ ಪೊಲಾರ್ಡ್, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ ತಂಡವನ್ನು ಮುನ್ನಡೆಸಿದ್ದಾರೆ. ಈ ವರ್ಷವೂ ಪಾಂಡ್ಯ ನಾಯಕನಾಗಲಿದ್ದಾರೆ.
ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನ ಈ ವರ್ಷ ಸೇರಿ 8 ನಾಯಕರು ತಂಡಕ್ಕೆ ನಾಯಕರಾಗಿದ್ದಾರೆ. ಸೌರವ್ ಗಂಗುಲಿ, ಬ್ರೆಂಡನ್ ಮೆಕಲಮ್, ಗೌತಮ್ ಗಂಭೀರ್, ಜಾಕ್ವೆಸ್ ಕಾಲಿಸ್, ದಿನೇಶ್ ಕಾರ್ತಿಕ್, ಇಯಾನ್ ಮಾರ್ಗನ್, ಶ್ರೇಯಸ್ ಅಯ್ಯರ್, ನಿತೀಶ್ ರಾಣಾ ನಾಯಕರಾಗಿದ್ದರು. ಈ ವರ್ಷ ಅಜಿಂಕ್ಯ ರಹಾನೆ ಹಾಲಿ ಚಾಂಪಿಯನ್ ತಂಡವನ್ನು ಮುನ್ನಡೆಸಲಿದ್ದಾರೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಇಷ್ಟು ವರ್ಷಗಳಲ್ಲಿ 7 ನಾಯಕರು ಮುನ್ನಡೆಸಿದ್ದಾರೆ. ರಾಹುಲ್ ದ್ರಾವಿಡ್, ಕೆವಿನ್ ಪೀಟರ್ಸನ್, ಅನಿಲ್ ಕುಂಬ್ಳೆ, ಡ್ಯಾನಿಯಲ್ ವೆಟ್ಟೋರಿ, ವಿರಾಟ್ ಕೊಹ್ಲಿ, ಶೇನ್ ವಾಟ್ಸನ್, ಫಾಫ್ ಡು ಪ್ಲೆಸಿಸ್ ಹಾಗೂ ಈ ವರ್ಷ ರಜತ್ ಪಾಟೀದಾರ್ ನಾಯಕರಾಗಿ ನೇಮಕವಾಗಿದ್ದಾರೆ.
ರಾಜಸ್ಥಾನ ರಾಯಲ್ಸ್ ತಂಡವನ್ನು ಇಷ್ಟು ವರ್ಷಗಳಲ್ಲಿ ಒಟ್ಟು 6 ನಾಯಕರು ಮುನ್ನಡೆಸಿದ್ದಾರೆ. ಶೇನ್ ವಾರ್ನ್, ಶೇನ್ ವಾಟ್ಸನ್, ರಾಹುಲ್ ದ್ರಾವಿಡ್, ಸ್ಟೀವನ್ ಸ್ಮಿತ್, ಅಜಿಂಕ್ಯ ರಹಾನೆ, ಸಂಜು ಸ್ಯಾಮ್ಸನ್ ತಂಡವನ್ನು ಮುನ್ನಡೆಸಿದ್ದಾರೆ.
ಚೆನ್ನೈ ಸೂಪರ್ ಕಿಂಗ್ಸ್: ಸಿಎಸ್ಕೆ ತಂಡವನ್ನ ಇಲ್ಲಿಯವರೆಗೆ 4 ನಾಯಕರು ಮುನ್ನಡೆಸಿದ್ದು, ಎಂಎಸ್ ಧೋನಿ, ಸುರೇಶ್ ರೈನಾ, ರವೀಂದ್ರ ಜಡೇಜಾ ಹಾಗೂ ಗಾಯಕ್ವಾಡ್ ಸಿಎಸ್ಕೆ ತಂಡಕ್ಕೆ ನಾಯಕರಾಗಿದ್ದಾರೆ.
ಗುಜರಾತ್ ಟೈಟನ್ಸ್: 2022ರಲ್ಲಿ ಐಪಿಎಲ್ ಪ್ರವೇಶಿಸಿದ ಗುಜರಾತ್ ಟೈಟನ್ಸ್ ತಂಡಕ್ಕೆ ಮೂವರು ಆಟಗಾರರು ನಾಯಕರಾಗಿ ಆಯ್ಕೆಯಾಗಿದ್ದಾರೆ. ಹಾರ್ದಿಕ್ ಪಾಂಡ್ಯ, ರಶೀದ್ ಖಾನ್, ಶುಭ್ಮನ್ ಗಿಲ್ ತಂಡವನ್ನು ಮುನ್ನಡೆಸಿದ್ದಾರೆ.
ಲಕ್ನೋ ಸೂಪರ್ ಜೈಂಟ್ಸ್: ಎಲ್ಎಸ್ಜಿ ತಂಡವೂ ಕೂಡ 2022ರಲ್ಲೇ ಐಪಿಎಲ್ ಪ್ರವೇಶಿಸಿತ್ತು. ಇದುವರೆಗೆ ಮೂವರು ನಾಯಕರನ್ನ ಕಂಡಿದೆ. ಕೆಎಲ್ ರಾಹುಲ್, ಕೃನಾಲ್ ಪಾಂಡ್ಯ ಹಾಗೂ ನಿಕೋಲಸ್ ಪೂರನ್ ತಂಡಕ್ಕೆ ಕ್ಯಾಪ್ಟನ್ ಆಗಿದ್ದಾರೆ.