ಐಫೋನ್ SE 4 ಲಾಂಚಿಂಗ್​ ಡೇಟ್​ ಯಾವಾಗ? ಬೆಲೆ, ವಿಶೇಷತೆಗಳಿವು – IPHONE SE 4 LAUNCH DATE

 

ಐಫೋನ್ SE 4 ಲಾಂಚಿಂಗ್​ ಡೇಟ್​ ಯಾವಾಗ? ಬೆಲೆ, ವಿಶೇಷತೆಗಳಿವು – IPHONE SE 4 LAUNCH DATE

Phone SE 4: ಐಫೋನ್ ಎಸ್ಇ 4ಕ್ಕಾಗಿ ಬಹಳ ದಿನಗಳಿಂದ ನಿರೀಕ್ಷಿಸಲಾಗುತ್ತಿದೆ. ಫೆಬ್ರವರಿ 11ರಂದು ಮಾರುಕಟ್ಟೆ ಪ್ರಾರಂಭವಾಗಬಹುದು ಎಂದು ಈ ಹಿಂದೆ ವರದಿಯಾಗಿತ್ತು.

iPhone SE 4 Launch Date: ಫೆಬ್ರವರಿ 11ರಂದು ಐಫೋನ್ ಎಸ್​ಇ 4 ಬಿಡುಗಡೆಯಾಗಲಿದೆ ಎಂದು ಕಾಯುತ್ತಿದ್ದ ಅಭಿಮಾನಿಗಳಿಗೆ ನಿರಾಶೆಯಾಗಿದೆ. ಈಗ ಆ್ಯಪಲ್ ತನ್ನ ಬಿಡುಗಡೆಯನ್ನು ಮುಂದೂಡಿದೆ ಎಂದು ವರದಿಯೊಂದು ಹೇಳಿದೆ. ಈ ವಾರ ಆ್ಯಪಲ್ ವಿಷನ್ ಪ್ರೊ ಕುರಿತು ಘೋಷಣೆ ಮಾಡಬಹುದು ಎಂದು ಹೇಳಲಾಗುತ್ತಿದೆ.

ಐಫೋನ್ SE 4 ಯಾವಾಗ ಬಿಡುಗಡೆ?: ವರದಿಗಳ ಪ್ರಕಾರ, ಆ್ಯಪಲ್ ಮುಂದಿನ ವಾರದ ವೇಳೆಗೆ ಹೊಸ ಐಫೋನ್ ಘೋಷಿಸಬಹುದು. ಇದಕ್ಕಾಗಿ ಯಾವುದೇ ಕಾರ್ಯಕ್ರಮವನ್ನು ಆಯೋಜಿಸಲಾಗುವುದಿಲ್ಲ ಮತ್ತು ಕಂಪೆನಿಯು ಪ್ರಿ-ರೆಕಾರ್ಡ್ ಮಾಡಿದ ವಿಡಿಯೋ ಮತ್ತು ಮಾಧ್ಯಮ ಪ್ರಕಟಣೆಯ ಮೂಲಕ ಬಿಡುಗಡೆ ಬಗ್ಗೆ ಮಾಹಿತಿ ನೀಡುತ್ತದೆ.

ಹೊಸ ಡಿಸೈನ್​ ಜೊತೆ ಬರಲಿದೆ ಐಫೋನ್ ಎಸ್ಇ 4: ಹಲವು ವರ್ಷಗಳ ನಂತರ ಆ್ಯಪಲ್ ಎಸ್​ಇ ಸೀರಿಸ್​ಫೋನ್‌ಗಳ ಡಿಸೈನ್​ ಬದಲಾಯಿಸಲಿದೆ. ಈಗ ಐಫೋನ್ 8ರಂತೆಯೇ ವಿನ್ಯಾಸದ ಬದಲಿಗೆ, ಐಫೋನ್ SE 4 ಐಫೋನ್ 14 ಮತ್ತು ಐಫೋನ್ 16 ರ ವೈಶಿಷ್ಟ್ಯಗಳನ್ನು ಹೊಂದಿರಬಹುದು. ಇದು ಫುಲ್​-ಸ್ಕ್ರೀನ್​ ಡಿಸೈನ್​ ಜೊತೆ ಬರಲಿದ್ದು, ಟಚ್ ಐಡಿ ಬದಲಿಗೆ ಫೇಸ್ ಐಡಿ ವೈಶಿಷ್ಟ್ಯವನ್ನು ಹೊಂದಿರುತ್ತದೆ. ಇದರೊಂದಿಗೆ 18 ವರ್ಷಗಳ ನಂತರ ಹೋಮ್ ಬಟನ್ ವೈಶಿಷ್ಟ್ಯಕ್ಕೆ ವಿದಾಯ ಹೇಳಲಿ

ಇವು ಹೊಸ ಐಫೋನ್‌ನ ವೈಶಿಷ್ಟ್ಯಗಳಾಗಿರಬಹುದು!: ಐಫೋನ್ ಎಸ್​ಇ 4 6.1-ಇಂಚಿನ OLED ಡಿಸ್​ಪ್ಲೇಯನ್ನು ಹೊಂದಿರುತ್ತದೆ. ರಿಯರ್​ನಲ್ಲಿ 48MP ಸಿಂಗಲ್ ಕ್ಯಾಮೆರಾ ಲಭ್ಯ. ಪರ್ಫಾರ್ಮೆನ್ಸ್​ ವಿಷಯದಲ್ಲಿ iPhone 16ನೊಂದಿಗೆ ಸ್ಪರ್ಧಿಸಲಿದೆ. ಐಫೋನ್ 16ರಂತೆ ಇದು ಕಂಪೆನಿಯ ಪ್ರಮುಖ A18 ಚಿಪ್‌ಸೆಟ್ ಹೊಂದಬಹುದು. 8 GB RAMನೊಂದಿಗೆ ಜೋಡಿಸಲ್ಪಡುತ್ತದೆ. ಕನಿಷ್ಠ 128 GB ಇಂಟರ್ನಲ್​ ಸ್ಟೋರೇಜ್​ ಮತ್ತು ಆ್ಯಪಲ್ ಇಂಟೆಲಿಜೆನ್ಸ್ ಸಪೋರ್ಟ್​ ಹೊಂದಿರುವ ನಿರೀಕ್ಷೆಯಿದೆ. ಚಾರ್ಜಿಂಗ್ ಪೋರ್ಟ್‌ನಲ್ಲಿ ದೊಡ್ಡ ಬದಲಾವಣೆ ಕಂಡುಬರಲಿದ್ದು, USB-C ಪೋರ್ಟ್‌ನೊಂದಿಗೆ ಬಿಡುಗಡೆ ಮಾಡಲಾಗುವುದು.

ಬೆಲೆ ಮತ್ತು ಲಭ್ಯತೆ: ಭಾರತದಲ್ಲಿ ಐಫೋನ್ ಎಸ್​ಇ 4 ಬೆಲೆ 49,900 ರೂ.ಗಳಿಂದ ಪ್ರಾರಂಭವಾಗಬಹುದು ಎಂದು ಊಹಿಸಲಾಗಿದೆ. ಆದರೆ ಇದನ್ನು ಕಂಪೆನಿ ಅಧಿಕೃತವಾಗಿ ದೃಢಪಡಿಸಿಲ್ಲ. ಬಿಡುಗಡೆಯಾದ ತಕ್ಷಣ ಅದರ ಪ್ರಿ-ಆರ್ಡರ್‌ಗಳು ಪ್ರಾರಂಭವಾಗುತ್ತವೆ. ಇದರ ಮಾರಾಟವೂ ಶೀಘ್ರದಲ್ಲೇ ಪ್ರಾರಂಭವಾಗುವ ನಿರೀಕ್ಷೆಯಿದೆ.

Leave a Reply

Your email address will not be published. Required fields are marked *