ದಾಂಪತ್ಯ ಜೀವನಕ್ಕೆ ಚಹಾಲ್​ ಗುಡ್​ಬೈ!: ಧನಶ್ರೀಗೆ ಸಿಗುವ ಜೀವನಾಂಶ ಎಷ್ಟು ಕೋಟಿ ಗೊತ್ತಾ? – CHAHAL DHANASHREE VERMA DIVORCE

 

ದಾಂಪತ್ಯ ಜೀವನಕ್ಕೆ ಚಹಾಲ್​ ಗುಡ್​ಬೈ!: ಧನಶ್ರೀಗೆ ಸಿಗುವ ಜೀವನಾಂಶ ಎಷ್ಟು ಕೋಟಿ ಗೊತ್ತಾ? – CHAHAL DHANASHREE VERMA DIVORCE

ಚಹಾಲ್​ ಮತ್ತು ಧನಶ್ರೀ ವರ್ಮಾ ಅಧಿಕೃತವಾಗಿ ವಿಚ್ಛೇದನ ಪಡೆದುಕೊಂಡಿದ್ದಾರೆ ಎಂದು ವರದಿ ಆಗಿದ್ದು, ಈ ಇಬ್ಬರ ಇನ್​ಸ್ಟಾ ಪೋಸ್ಟ್​ ಕೂಡ ವೈರಲ್​ ಆಗಿದೆ.

Yuzvendra chahal dhanashree Verma Divorce: ಕಳೆದ 3 ತಿಂಗಳಿನಿಂದ ಭಾರತದ ಸ್ಟಾರ್​ ಕ್ರಿಕೆಟಿಗ ಯುಜ್ವೇಂದ್ರ ಚಹಾಲ್​ ಮತ್ತು ಧನಶ್ರೀ ವರ್ಮಾ ಬೇರ್ಪಡುತ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಇದೀಗ ಇಬ್ಬರೂ ಅಧಿಕೃತವಾಗಿ ವಿಚ್ಛೇದನ ಪಡೆದಿರುವಂತೆ ತೋರುತ್ತಿದೆ. ಮುಂಬೈನ ಕೌಟುಂಬಿಕ ನ್ಯಾಯಾಲಯ ಇಬ್ಬರ ವಿಚ್ಛೇದನಕ್ಕೆ ಅನುಮತಿ ನೀಡಿದೆ ಎಂದು ಹಲವಾರು ಇಂಗ್ಲಿಷ್​ ಮಾಧ್ಯಮಗಳು ವರದಿ ಮಾಡಿವೆ.

ಇದರ ಬೆನ್ನಲ್ಲೆ ಧನಶ್ರೀ ವರ್ಮಾ ಮತ್ತು ಚಹಾಲ್​ ಇನ್​ಸ್ಟಾ ಪೋಸ್ಟ್​ ವೈರಲ್​ ಆಗಿದ್ದು, ವಿಚ್ಛೇದನ ಸುದ್ದಿಗೆ ಪುಷ್ಟಿ ನೀಡಿದಂತಿದೆ. ಧನಶ್ರೀ ತಮ್ಮ ಇನ್​ಸ್ಟಾ ಖಾತೆಯಲ್ಲಿ ಒತ್ತಡದಿಂದ ಮುಕ್ತರಾಗಿದ್ದೇವೆ ಎಂದು ಬರೆದುಕೊಂಡಿದ್ದಾರೆ.

ಧನಶ್ರೀ ಇನ್​ಸ್ಟಾ ಪೋಸ್ಟ್​: “ನಾವು ಎದುರಿಸುವ ಕಷ್ಟ ಮತ್ತು ಸವಾಲುಗಳನ್ನು ಸ್ವಲ್ಪ ಸಮಯದ ನಂತರ ದೇವರು ಆಶೀರ್ವಾದವಾಗಿ ಪರಿವರ್ತಿಸಬಲ್ಲನೆಂದು ನಾನು ಅರಿತಿದ್ದೇನೆ. ಇಂದು ಯಾವುದಾದರೂ ವಿಷಯದ ಬಗ್ಗೆ ಒತ್ತಡದಲ್ಲಿದ್ದರೆ ಅಥವಾ ಚಿಂತೆಗೊಳಗಾಗಿದ್ದರೆ, ನಿಮಗೆ ಮತ್ತೊಂದು ಅವಕಾಶದ ಬಾಗಿಲು ತೆರೆಯಲಿದೆ ಎಂಬುದನ್ನು ಮರೆಯದಿರಿ. ನಿಮಗೆ ಎದುರಾದ ಕಷ್ಟ ಮತ್ತು ದುಃಖವನ್ನು ಮರೆತು ದೇವರಿಗೆ ಸ್ಮರಿಸಿ. ದೇವರ ಮೇಲಿನ ನಿಮ್ಮ ನಂಬಿಕೆಯು ಒಳ್ಳೆಯದನ್ನೇ ಮಾಡುತ್ತದೆ ಎಂದು ಧನಶ್ರೀ ಬರೆದುಕೊಂಡಿದ್ದಾರೆ. ತಮ್ಮ ಈ ಪೋಸ್ಟ್​ಗೆ ಒತ್ತಡದಿಂದ ಆಶೀರ್ವಾದವರೆಗೆ ಎಂದು ಶೀರ್ಷಿಕೆ ನೀಡಿದ್ದಾರೆ. ಈ ಪೋಸ್ಟ್ ಪ್ರಸ್ತುತ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.

ಚಹಾಲ್​ ಇನ್​ಸ್ಟಾ ಪೋಸ್ಟ್: ಇದಕ್ಕೂ ಮೊದಲು, ಚಹಾಲ್ ಕೂಡ ಇದೇ ರೀತಿಯ ಪೋಸ್ಟ್ ಮಾಡಿದ್ದರು. “ಆ ದೇವರು ನನ್ನನ್ನು ಹಲವಾರು ಬಾರಿ ರಕ್ಷಿಸಿದ್ದಾನೆ. ನಾನು ಕಠಿಣ ಪರಿಸ್ಥಿತಿಯಲ್ಲಿದ್ದೇನೆಂದು ಅರಿತುಕೊಳ್ಳುವ ಮೊದಲೇ ದೇವರು ಕಣ್ಣು ತೆರೆದಿದ್ದಾನೆ. ನನ್ನನ್ನು ಪ್ರತಿ ಬಾರಿಯೂ ರಕ್ಷಿಸಿದ ದೇವರಿಗೆ ಧನ್ಯವಾದ ಹೇಳುತ್ತೇನೆ” ಎಂದು ಬರೆದುಕೊಂಡಿದ್ದಾರೆ. ಇದರಿಂದಾಗಿ ಚಹಾಲ್​ ಮತ್ತು ಧನಶ್ರೀ ವಿಚ್ಛೇದನ ಪಡೆದಿದ್ದಾರೆ ಎಂಬ ಸುದ್ದಿ ನಿಜ ಎಂದು ನೆಟಿಜನ್‌ಗಳು ಕಾಮೆಂಟ್​ ಮಾಡುತ್ತಿದ್ದಾರೆ.

45 ನಿಮಿಷ ಕೌನ್ಸೆಲಿಂಗ್​: ಮಾಧ್ಯಮ ವರದಿಗಳ ಪ್ರಕಾರ, ಗುರುವಾರ ಮುಂಬೈನ ಬಾಂದ್ರಾ ಕೌಟುಂಬಿಕ ನ್ಯಾಯಾಲಯದಲ್ಲಿ ಇಬ್ಬರ ವಿಚ್ಛೇದನ ಪ್ರಕರಣದ ಅಂತಿಮ ವಿಚಾರಣೆ ನಡೆದಿತ್ತು. ವಿಚಾರಣೆಗೆ ಚಹಾಲ್ ಮತ್ತು ಧನಶ್ರೀ ಹಾಜರಾಗಿದ್ದರು. ತಮ್ಮ ನಿರ್ಧಾರ ಏನೆಂದು ತಿಳಿಸಲು ಇಬ್ಬರಿಗೆ 45 ನಿಮಿಷಗಳ ಕೌನ್ಸೆಲಿಂಗ್ ಅವಧಿಯನ್ನು ನೀಡಲಾಗಿತ್ತು ಎಂದು ವರದಿಯಾಗಿದೆ. ಆದರೆ, ಅವರ ನಿರ್ಧಾರ ಮಾತ್ರ ಬದಲಾಗದ ಕಾರಣ ನ್ಯಾಯಾಲಯವು ವಿಚ್ಛೇದನಕ್ಕೆ ಅನುಮತಿ ನೀಡಿದೆ ಎಂದು ವರದಿಯಾಗಿದೆ.

ಚಹಾಲ್​ ಮತ್ತು ಧನಶ್ರೀ ವರ್ಮಾ 2020ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಆದರೆ ಇತ್ತೀಚೆಗೆ ದಂಪತಿಗಳು ಸಾಮಾಜಿಕ ಮಾಧ್ಯಮದಲ್ಲಿ ಒಬ್ಬರನ್ನೊಬ್ಬರು ಅನ್‌ಫಾಲೋ ಮಾಡಿದ ನಂತರ ಮತ್ತು ಧನಶ್ರೀ ತಮ್ಮ ಖಾತೆಯಲ್ಲಿ ‘ಚಹಾಲ್​’ ಹೆಸರನ್ನು ತೆಗೆದುಹಾಕಿದ ಬಳಿಕ ವಿಚ್ಛೇದನದ ಬಗ್ಗೆ ಊಹಾಪೋಹಗಳು ಪ್ರಾರಂಭವಾಗಿದ್ದವು.

ಧನಶ್ರೀಗೆ ಸಿಗುವ ಜೀವನಾಂಶ ಎಷ್ಟು: ಧನಶ್ರೀ ಅವರೊಂದಿಗೆ ವಿಚ್ಛೇದನ ಪಡೆದಿರುವ ಚಹಾಲ್ 60 ಕೋಟಿ ರೂಪಾಯಿ ಜೀವನಾಂಶ ನೀಡಲಿದ್ದಾರೆ ಎಂದು ವರದಿ ಆಗಿವೆ.

Leave a Reply

Your email address will not be published. Required fields are marked *