ಕೊಣಾಜೆ : ದೇರಳಕಟ್ಟೆಯ ಬದ್ರಿಯಾ ಜುಮಾ ಮಸ್ಜಿದ್ ಇದರ ವಿಸ್ತೃತ ಮತ್ತು ನವೀಕರಿಸಿದ ಮಸೀದಿಯ ಉದ್ಘಾಟನೆ ಹಾಗೂ ವಕ್ಫ್ ನಿರ್ವಹಣೆ ಕಾರ್ಯಕ್ರಮ ಶುಕ್ರವಾರ ನಡೆಯಿತು. ನವೀಕರಿಸಿದ ಮಸೀದಿಯನ್ನು ಸಯ್ಯಿದುಲ್ ಉಲಮಾ ಸಯ್ಯಿದ್ ಮುಹಮ್ಮದ್ ಜಿಫ್ರಿ ಮುತ್ತುಕೋಯ ತಂಙಳ್ ಉದ್ಘಾಟಿಸಿದರು. ಖಾಝಿ ತ್ವಾಖ ಅಹ್ಮದ್ ಮುಸ್ಲೀಯಾರ್ ಮಸೀದಿ ವಕ್ಫ್ ಕಾರ್ಯ ನೆರವೇರಿಸಿದರು. ಬದ್ರಿಯಾ ಜುಮಾ ಮಸೀದಿ ಅಧ್ಯಕ್ಷ ಅಬ್ದುಲ್ ಆರ್. ಅಹ್ಮದ್ ಶೇಟ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಈ ಸಂದರ್ಭದಲ್ಲಿ ಮಸೀದಿ ಗೌರವಾಧ್ಯಕ್ಷ ಅಬ್ದುಲ್ ಖಾದರ್, ಎಚ್.ಎಚ್ ಅಮೀನ್ ಹಾಜಿ, ಡಾ. ಅಬ್ದುಲ್ ಶಕೀಲ್ ಚಾರಿಟೇಬಲ್ ಟ್ರಸ್ಟ್ ಸ್ಥಾಪಕಾಧ್ಯಕ್ಷ ಡಾ. ಅಬ್ದುಲ್ ಶಕೀಲ್, ಮೊಹಮ್ಮದ್ ಮುದಸರ್ ಶೇಖ್, ಅಬ್ದುಲ್ ಜಲೀಲ್.ಎಮ್.ಎಚ್, ಸಲ್ಮಾನ್ ಹುಸೈನ್ ರವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಅಲೈಡ್ ಮತ್ತು ಹೆಲ್ತ್ ಕೇರ್ ಕೌನ್ಸಿಲ್ ಅಧ್ಯಕ್ಷ ಯು.ಟಿ ಇಫ್ತಿಕಾರ್ ಫರೀದ್, ಕಣಚೂರು ಸಮೂಹ ಸಂಸ್ಥೆಯ ಅಧ್ಯಕ್ಷ ಡಾ. ಹಾಜಿ ಯು.ಕೆ ಮೋನು, ಅರಫಾ ಮಸೀದಿ ಅಧ್ಯಕ್ಷ ಎ.ಎ ಹೈದರ್ ಪರ್ತಿಪ್ಪಾಡಿ, ಇರ್ಷಾದ್ ದಾರಿಮಿ ಮಿತ್ತಬೈಲ್, ಸಿದ್ದೀಕ್ ಟೇಡರ್ಸ್ ನ ಮಾಲಕ ಸಿದ್ದೀಕ್ ಹಾಜಿ, ಎಚ್.ಎಚ್ ಅಬ್ದುಲ್ ಅಝೀಝ್ ಹಾಜಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಬದ್ರಿಯ ಜುಮಾ ಮಸೀದಿ ಖತೀಬ್ ಮುಹಮ್ಮದ್ ತಾಜುದ್ದೀನ್ ರಹ್ಮಾನಿ, ಬದ್ರಿಯ ಜುಮಾ ಮಸೀದಿ ಉಪಾಧ್ಯಕ್ಷ ಅಬೂಶಾಲಿ ಹಾಜಿ ಜನ್ನತ್, ಕೋಶಾಧಿಕಾರಿ ಹಸನ್ ಬಾವಾ ಎಮ್.ಎಚ್, ಕಾರ್ಯದರ್ಶಿ ಉಸ್ಮಾನ್ ಎಮ್.ಎಚ್, ಜೊತೆಕಾರ್ಯದರ್ಶಿ ಅಬ್ದುಲ್ ರಶೀದ್ ಡಿ.ಎಂ, ಮಾಜಿ ಅಧ್ಯಕ್ಷರಾದ ಅಬ್ಬಾಸ್ ಹಾಜಿ ರಹ್ಮತ್ತುಲ್ಲಾ, ಅಬೂಬಕ್ಕರ್ ಹಾಜಿ ನಾಟೆಕಲ್, ಬೆಳ್ಮ ಗ್ರಾ.ಪಂ ಸದಸ್ಯರಾದ ಇಬ್ರಾಹೀಂ ಬದ್ಯಾರ್, ಹನೀಫ್, ಇಕ್ಬಾಲ್ ಎಚ್.ಆರ್, ಉದ್ಯಮಿ ಪಿ.ಎಂ ಇಬ್ರಾಹೀಂ ಕತ್ತಾರ್. ಕೊಟೆಕಾರು ಪಟ್ಟಣ ಪಂಚಾಯತ್ ಮಾಜಿ ಸದಸ್ಯ ಡಿ.ಎಂ ಮೋಹಮ್ಮದ್ ಪುಷ್ಟಿ, ಅನ್ಸಾರುಲ್ ಮುಸ್ಲಮೀನ್ ಅಸೋಸಿಯೇಷನ್ ಅಧ್ಯಕ್ಷ ಹನೀಫ್.ಜೆ, ಬದ್ರಿಯಾ ಫಾಳಿಲಿ ಮಹಿಳಾ ಶರೀಅತ್ ಕಾಲೇಜಿನ ಉಸ್ತುವಾರಿ ಲತೀಫ್ ಮದಕ, ಸ್ಥಳೀಯರಾದ ಹಂಝ ಎಚ್.ಆರ್, ಅಬ್ಬಾಸ್ ಪದವು, ಉಸ್ಮಾನ್ ಪದವು ಮೊದಲಾದವರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಬದ್ರಿಯಾ ಫಾಳಿಲ ಮಹಿಳಾ ಶರೀಯತ್ ಕಾಲೇಜಿನ ನೂತನ ಕಟ್ಟಡಕ್ಕೂ ಶಿಲಾನ್ಯಾಸ ನೆರವೇರಿತು.