‘ನನಗೂ ಹಾಗನಿಸಿದೆ, ಓರ್ವ ತಂದೆಯಾಗಿ ಈ ಮಾತನ್ನು ಹೇಳುತ್ತಿಲ್ಲ’: ನೆಪೋಟಿಸಂ ಬಗ್ಗೆ ಅಮಿತಾಭ್ ಬಚ್ಚನ್ ಹೇಳಿದ್ದಿಷ್ಟು – AMITABH BACHCHAN
ಚಿತ್ರರಂಗದಲ್ಲಿ ನೆಪೋಟಿಸಂ ಬಗ್ಗೆ ಚರ್ಚೆ ಮುಂದುವರಿದಿದ್ದು, ಬಾಲಿವುಡ್ ಹಿರಿಯ ನಟ ಅಮಿತಾಭ್ ಬಚ್ಚನ್ ಮತ್ತೊಮ್ಮೆ ಪುತ್ರ ಅಭಿಷೇಕ್ ಬಚ್ಚನ್‌ಗೆ ತಮ್ಮ ಅಗಾಧ ಬೆಂಬಲ ವ್ಯಕ್ತಪಡಿಸಿದ್ದಾರೆ. ನಟ ಅಭಿಷೇಕ್ ಬಚ್ಚನ್ ಅವರ ವೃತ್ತಿಜೀವನದ ಮೇಲೆ ನೆಪೋಟಿಸಂ ಬೀರಿರುವ ಪರಿಣಾಮದ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಅಭಿಮಾನಿಗಳು ಮತ್ತು ವಿಮರ್ಶಕರಿಗೆ ಹಿರಿಯ ನಟ ಅಮಿತಾಭ್ ಬಚ್ಚನ್ ಎಕ್ಸ್ (ಟ್ವಿಟರ್)ನಲ್ಲಿ ಪ್ರತಿಕ್ರಿಯಿಸಿದ್ದಾರೆ. ಬಿಗ್ ಬಿ ಎಕ್ಸ್ ಪೋಸ್ಟ್ ಸೋಷಿಯಲ್ ಮೀಡಿಯಾ ಬಳಕೆದಾರರನ್ನು ವ್ಯಾಪಕವಾಗಿ ಸೆಳೆದಿದೆ.
ಬಿಗ್ ಬಿ ರಿಯಾಕ್ಷನ್: ಹಲವು ಯಶಸ್ವಿ ಚಿತ್ರಗಳನ್ನು ಹೊಂದಿರುವ ನಟ ಅಭಿಷೇಕ್ ಬಚ್ಚನ್ ಅವರು ತಮ್ಮ ಉತ್ತಮ, ವೈವಿಧ್ಯಮಯ ಸಿನಿಮಾಗಳ ಹೊರತಾಗಿಯೂ, “ಅನಗತ್ಯವಾಗಿ ಸ್ವಜನಪಕ್ಷಪಾತದ ನಕಾರಾತ್ಮಕತೆಗೆ ಬಲಿಯಾಗಿದ್ದಾರೆ” ಎಂದು ಬರೆಯಲಾಗಿರುವ ಎಕ್ಸ್ ಪೋಸ್ಟ್ ನೆಟ್ಟಿಗರ ಗಮನ ಸೆಳೆದಿದೆ. ಈ ಪೋಸ್ಟ್ ಹಲವು ಪ್ರತಿಕ್ರಿಯೆಗಳನ್ನು ಸ್ವೀಕರಿಸಿದೆ. ಬಿಗ್ ಬಿ ಕೂಡಾ ರಿಯಾಕ್ಟ್ ಮಾಡಿದ್ದಾರೆ.
credits ; twitter ( x ) |
ಯಶಸ್ವಿ ಸಿನಿಮಾಗಳಲ್ಲಿ ಅಭಿನಯಿಸಿರುವ ಅಭಿಷೇಕ್: 2 ದಶಕಗಳಿಗೂ ಹೆಚ್ಚು ಕಾಲದಿಂದ ಬಾಲಿವುಡ್ನಲ್ಲಿ ಗುರುತಿಸಿಕೊಂಡಿರುವ ಅಭಿಷೇಕ್ ಬಚ್ಚನ್, ಗುರು, ಯುವ, ಸರ್ಕಾರ್, ಪಾ, ಧೂಮ್ ಮತ್ತು ಹೌಸ್‌ಫುಲ್‌ನಂತಹ ಚಿತ್ರಗಳಲ್ಲಿ ತಮ್ಮ ನಟನಾ ಪ್ರತಿಭೆ ಸಾಬೀತುಪಡಿಸಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ, ‘ಬ್ರೀತ್: ಇನ್‌ಟು ದಿ ಶಾಡೋಸ್’ ಮತ್ತು ‘ಐ ವಾಂಟ್ ಟು ಟಾಕ್’ನಂತಹ ವಿಮರ್ಶಾತ್ಮಕವಾಗಿ ಮೆಚ್ಚುಗೆ ಪಡೆದ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ಯಶಸ್ಸಿನ ಹೊರತಾಗಿಯೂ, ಅವರ ತಂದೆಯ ಯಶಸ್ವಿ ವೃತ್ತಿಜೀವನ, ಸಿನಿಮಾಗಳೊಂದಿಗೆ ನಟನ ಕೆಲಸಗಳನ್ನು ನಿರಂತರವಾಗಿ ಹೋಲಿಕೆ ಮಾಡುತ್ತಿರೋದು ಅವರ ವೃತ್ತಿಜೀವನದ ಮೇಲೆ ಪರಿಣಾಮ ಬೀರಿದೆ. ಹೋಲಿಕೆ ನಿರಂತರವಾಗಿ ಸಾಗಿದ್ದು, ಅಭಿಷೇಕ್ ಪ್ರತಿಭೆ ಮತ್ತು ಯಶಸ್ಸು ಸೈಡ್ಲೈನ್ ಆಗಿದೆ ಅನ್ನೋದು ಅಪಾರ ಸಂಖ್ಯೆಯ ಅಭಿಮಾನಿಗಳ ಅಭಿಪ್ರಾಯ.
ಎಕ್ಸ್ ವೇದಿಕೆಯಲ್ಲಿ ನೆಪೋಟಿಸಂ ಬಗ್ಗೆ ಚರ್ಚೆ (Photo: X Post) |