ನಾಳೆ ಭಾರತ – ಪಾಕ್​ ಮಹಾಯುದ್ಧ: ತಂಡಕ್ಕೆ ಡೇಂಜರಸ್​ ಪ್ಲೇಯರ್ ಎಂಟ್ರಿ​! – IND VS PAK

 

ನಾಳೆ ಭಾರತ – ಪಾಕ್​ ಮಹಾಯುದ್ಧ: ತಂಡಕ್ಕೆ ಡೇಂಜರಸ್​ ಪ್ಲೇಯರ್ ಎಂಟ್ರಿ​! – IND VS PAK

ನಾಳೆ ಪಾಕಿಸ್ತಾನ ವಿರುದ್ಧ ನಡೆಯಲಿರುವ ಪಂದ್ಯದಲ್ಲಿ ಭಾರತದ ಪರ ಡೇಂಜರಸ್​ ಬೌಲರ್​ ಕಣಕ್ಕಿಳಿಯಲಿದ್ದಾರೆ.

IND vs PAK: ಐಸಿಸಿ ಚಾಂಪಿಯನ್ಸ್​ ಟ್ರೋಫಿ 2025ರ ಭಾಗವಾಗಿ ಗುರುವಾರ ನಡೆದಿದ್ದ ಬಾಂಗ್ಲಾದೇಶ ವಿರುದ್ಧದ ಮೊದಲ ಪಂದ್ಯದಲ್ಲಿ ಭಾರತ ಜಯಭೇರಿ ಭಾರಿಸಿರುವುದು ಗೊತ್ತೇ ಇದೆ. ಇದೀಗ ಭಾನುವಾರ (ನಾಳೆ) ಪಾಕ್​ ವಿರುದ್ಧ ಕಾಳಗಕ್ಕೆ ಇಳಿಯಲಿದೆ.

ಮೊದಲ ಪಂದ್ಯದಲ್ಲಿ ಬ್ಯಾಟಿಂಗ್​ ಮತ್ತು ಬೌಲಿಂಗ್​​ ಎರಡರಲ್ಲೂ ಉತ್ತಮ ಪ್ರದರ್ಶನ ನೀಡಿರುವ ರೋಹಿತ್​ ಸೈನ್ಯ ಇದೀಗ ಪಾಕ್​ ವಿರುದ್ಧದ ಪಂದ್ಯದಲ್ಲೂ ಅದೇ ಫಾರ್ಮ್​ ಮುಂದುವರೆಸಿ ಗೆಲುವು ಸಾಧಿಸಲು ಯೋಜನೆ ರೂಪಿಸಿಕೊಂಡಿದೆ. ಆದರೆ, ಈ ಪಂದ್ಯದಲ್ಲಿ ಒಂದು ಬದಲಾವಣೆ ಮಾಡಲು ಭಾರತ ನಿರ್ಧರಿಸಿದೆ.

ಈ ಹಿಂದೆ ಚಾಂಪಿಯನ್ಸ್​ ಟ್ರೋಫಿ ಅಂತಿಮ ಪಂದ್ಯದಲ್ಲಿ ಪಾಕ್​ ವಿರುದ್ಧ ಸೋಲು ಕಂಡಿದ್ದ ಭಾರತ ಈ ಪಂದ್ಯದಲ್ಲಿ ಗೆದ್ದು ಸೇಡು ತೀರಿಸಿಕೊಳ್ಳಲು ಯೋಜನೆ ರೂಪಿಸಿಕೊಂಡಿದೆ. ಅದಕ್ಕಾಗಿ ಬಲಿಷ್ಠ ತಂಡದೊಂದಿಗೆ ಕಣಕ್ಕಿಳಿಯಲು ಸಿದ್ಧತೆ ನಡೆಸಿದೆ. ಈ ಹಿನ್ನೆಲೆ ತಂಡದಲ್ಲಿ ಪ್ರಮುಖ ಬೌಲರ್​ ಬದಲಾವಣೆ ಮಾಡುವ ಪ್ರಯೋಗಕ್ಕೆ ಮುಂದಾಗಿದೆ.

ಸ್ಟಾರ್​ ಬೌಲರ್​ ಕಳಪೆ ಫಾರ್ಮ್​: ಹೌದು, ಸ್ಟಾರ್​ ಸ್ಪಿನ್​ ಬೌಲರ್​ ಕುಲ್ದೀಪ್​ ಯಾದವ್​ ಕಳಪೆ ಫಾರ್ಮ್​ನಿಂದ ಬಳಲುತ್ತಿದ್ದಾರೆ. ಇತ್ತೀಚೆಗೆ ತವರಿನಲ್ಲಿ ನಡೆದಿದ್ದ ಇಂಗ್ಲೆಂಡ್​ ವಿರುದ್ಧ ಏಕದಿನ ಸರಣಿಯಲ್ಲಿ 2 ಪಂದ್ಯಗಳನ್ನು ಆಡಿದ್ದ ಕುಲ್ದೀಪ್​ ಕೇವಲ 2 ವಿಕೆಟ್​ ಪಡೆಯವಲ್ಲಿ ಮಾತ್ರ ಯಶಸ್ವಿ ಆಗಿದ್ದರು. ಅಲ್ಲದೇ ಬಾಂಗ್ಲಾ ವಿರುದ್ಧ ಮೊದಲ ಪಂದ್ಯದಲ್ಲಿ ವಿಕೆಟ್​ ಪಡೆಯುವಲ್ಲಿ ವಿಫಲರಾಗಿದ್ದರು.

ಮಿಸ್ಟರಿ ಸ್ಪಿನ್ನರ್​​ ಕಣಕ್ಕೆ: ಇದೀಗ ಪಾಕ್​ ವಿರುದ್ಧ ಪಂದ್ಯ ಗೆಲ್ಲಲೇಬೇಕು ಎಂಬ ಯೋಜನೆ ರೂಪಿಸಿರುವ ಭಾರತ ಕುಲ್ದೀಪ್​ ಬದಲಿಗೆ ಅವರ ಸ್ಥಾನಕ್ಕೆ ವರುಣ್​ ಚಕ್ರವರ್ತಿ ಅವರನ್ನು ಕರೆತರಲು ಪ್ಲಾನ್​ ರೂಪಿಸಿದೆ. ಇಂಗ್ಲೆಂಡ್​ ವಿರುದ್ಧದ ಟಿ20 ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ವರುಣ್​ 5 ಪಂದ್ಯಗಳಿಂದ 14 ವಿಕೆಟ್​ ಪಡೆದಿದ್ದರು. ನಂತರ ಏರಡನೇ ಏಕದಿನ ಪಂದ್ಯದಲ್ಲೂ ಬೌಲಿಂಗ್​ ಮಾಡಿ 1 ವಿಕೆಟ್​ ಉರುಳಿಸಿದ್ದರು. ಈ ಹಿನ್ನೆಲೆ ಪಾಕ್​ ವಿರುದ್ಧದ ಪಂದ್ಯಕ್ಕೆ ಕಣಕ್ಕಿಳಿಸುವ ಸಾಧ್ಯತೆ ದಟ್ಟವಾಗಿದೆ.

ಸಂಭಾವ್ಯ ಭಾರತ ತಂಡ: ರೋಹಿತ್​ ಶರ್ಮಾ (ನಾಯಕ), ಶುಭಮನ್​ ಗಿಲ್​, ವಿರಾಟ್​ ಕೊಹ್ಲಿ, ಶ್ರೇಯಸ್​ ಅಯ್ಯರ್​, ಅಕ್ಷರ್​ ಪಟೇಲ್​, ಕೆಎಲ್​ ರಾಹುಲ್​ (ವಿಕೆಟ್​ ಕೀಪರ್​), ಹಾರ್ದಿಕ್​ ಪಾಂಡ್ಯ, ರವೀಂದ್ರ ಜಡೇಜಾ, ಹರ್ಷಿತ್​ ರಾಣಾ, ಮೊಹಮ್ಮದ್​ ಶಮಿ, ವರುಣ್​ ಚಕ್ರವರ್ತಿ / ಕುಲ್ದೀಪ್​ ಯಾದವ್​.

Leave a Reply

Your email address will not be published. Required fields are marked *