ಫ್ರಿಡ್ಜ್‌ನಲ್ಲಿ ಪ್ರತಿಯೊಬ್ಬರು ತಿಳಿಯಬೇಕಾದ ಒಂದು ಪ್ರಮುಖ ಅಂಶವೇ “ಲೀಟರ್ ಸಾಮರ್ಥ್ಯ”. ನಾವಿಂದು ಈ ಲೀಟರ್(Liter) ಎಂದರೇನು? ಮತ್ತು ಇತರ ಮಾಹಿತಿಗಳನ್ನು ಇಲ್ಲಿ ಹಂಚಿಕೊಂಡಿದ್ದೇವೆ.
ಹಾಗಾದರೆ ‘ಲೀಟರ್’ ಎಂದರೇನು?
ಲೀಟರ್ ಎಂಬುದು ಸಾಮಾನ್ಯವಾಗಿ ದ್ರವ ವಸ್ತುಗಳನ್ನು ಅಳೆಯುವ ಅಳತೆಯ ಮಾನದಂಡವಾಗಿದೆ. ಆದರೆ ರೆಫ್ರಿಜರೇಟರ್‌ಗಳ ವಿಷಯದಲ್ಲಿ, ಇದು ಅದರ ಶೇಖರಣಾ ಸಾಮರ್ಥ್ಯವನ್ನು ಸೂಚಿಸುತ್ತದೆ. ಅಂದರೆ, ಫ್ರಿಡ್ಜಿನಲ್ಲಿ ಎಷ್ಟು ಆಹಾರ, ಪಾನೀಯ ಮತ್ತು ಇತರ ವಸ್ತುಗಳನ್ನು ಇಡಬಹುದು ಎಂಬುದನ್ನು ತೋರಿಸುತ್ತದೆ.
ಇದನ್ನೂ ಓದಿ: ವಾಟ್ಸಾಪ್‌ನಿಂದಾಗಿ ಫೋನ್ ಸ್ಟೋರೇಜ್ ಫುಲ್ ಆಗ್ತಿದೆಯೇ? ಇಲ್ಲಿದೆ ಪರಿಹಾರ
ಹೆಚ್ಚು ಮಂದಿ ಈ ಅಳತೆಯನ್ನು ಗಂಭೀರವಾಗಿ ಪರಿಗಣಿಸದೆ, ಬಣ್ಣ, ಡಿಸೈನ್ ಅಥವಾ ಬ್ರ್ಯಾಂಡ್ ಆಧಾರಿತವಾಗಿ ಆಯ್ಕೆ ಮಾಡುತ್ತಾರೆ. ಆದರೆ ನಿಮ್ಮ ಕುಟುಂಬದ ಅಗತ್ಯಕ್ಕೆ ತಕ್ಕಷ್ಟು ಸಾಮರ್ಥ್ಯವಿರುವ ಫ್ರಿಡ್ಜ್ ಆಯ್ಕೆ ಮಾಡುವುದು ಬಹು ಮುಖ್ಯ.
ಲೀಟರ್ ಸಾಮರ್ಥ್ಯವು ಶೇಕರಣಾ ಸ್ಥಳಕ್ಕೆ ಹೇಗೆ ಸಂಬಂಧಿಸಿದೆ?
ನೀವು 200 ಲೀಟರ್ ಸಾಮರ್ಥ್ಯದ ರೆಫ್ರಿಜರೇಟರ್ ಅನ್ನು ಖರೀದಿಸಿದರೆ, ಅಂದರೆ ಅದು ಸುಮಾರು 200 ಲೀಟರ್ ವಸ್ತುಗಳನ್ನು ಶೇಖರಿಸಬಹುದಾದಷ್ಟು ಜಾಗ ಹೊಂದಿರುತ್ತದೆ. ಇದರಲ್ಲಿ ಫ್ರಿಜ್ ವಿಭಾಗ, ಬಾಟಲ್ ಸ್ಟ್ಯಾಂಡ್, ವೆಜಿಟೆಬಲ್ ಟ್ರೇ, ಡೋರ್ ಪಾಕೆಟ್‌ಗಳು ಸೇರಿವೆ.
ಇದು ಶುದ್ಧ ಅಥವಾ ನೆಟ್ ಸಾಮರ್ಥ್ಯವಲ್ಲ, ಏಕೆಂದರೆ ಕೆಲವೊಂದು ಜಾಗಗಳನ್ನು ಶೇಖರಣೆಗಾಗಿ ಬಳಸಲಾಗುವುದಿಲ್ಲ. ಹೆಚ್ಚಿನ ಕಂಪನಿಗಳು ಗ್ರಾಸ್ ಸಾಮರ್ಥ್ಯ (ಒಟ್ಟು ಲೀಟರ್) ತೋರಿಸುತ್ತವೆ, ಆದರೆ ಶುದ್ಧ ಶೇಖರಣಾ ಸಾಮರ್ಥ್ಯವನ್ನು ಕೆಲವು ಕಂಪನಿಗಳು ಮಾತ್ರ ತೋರಿಸುತ್ತವೆ.
ಸಂಗ್ರಹ ಚಿತ್ರ
ನಿಮ್ಮ ಕುಟುಂಬದ ಗಾತ್ರಕ್ಕೆ ತಕ್ಕಂತೆ ಎಷ್ಟು ಲೀಟರ್ ಫ್ರಿಡ್ಜ್ ಬೇಕು?
ವ್ಯಕ್ತಿಗಳ ಸಂಖ್ಯೆಯ ಆಧಾರದ ಮೇಲೆ ಲೀಟರ್ ಆಯ್ಕೆ ಮಾಡಬಹುದು:
- ಒಬ್ಬ ವ್ಯಕ್ತಿ ಅಥವಾ ದಂಪತಿ: 150–250 ಲೀಟರ್
- ಸಣ್ಣ ಕುಟುಂಬ (3–4 ಮಂದಿ): 250–350 ಲೀಟರ್
- ದೊಡ್ಡ ಕುಟುಂಬ (5 ಮಂದಿ ಮತ್ತು ಹೆಚ್ಚು): 400 ಲೀಟರ್ ಅಥವಾ ಹೆಚ್ಚು
ಇದು ಸರಾಸರಿ ಗಾತ್ರದ ಲೆಕ್ಕಾಚಾರ. ನೀವು ಹೆಚ್ಚು ಅಡುಗೆ ಮಾಡುವವರಾಗಿದ್ದರೆ, ಅಥವಾ ತಾಜಾ ತರಕಾರಿಗಳನ್ನು, ಹಣ್ಣನ್ನು ಸಂಗ್ರಹಿಸಬೇಕಾದರೆ, ಹೆಚ್ಚಿನ ಸಾಮರ್ಥ್ಯ ಬೇಕಾಗಬಹುದು.
ಫ್ರಿಡ್ಜ್ ಖರೀದಿಸುವಾಗ ಗಮನದಲ್ಲಿಡಬೇಕಾದ ಮುನ್ನೋಟಗಳು
- ಅಗತ್ಯಕ್ಕೆ ತಕ್ಕ ಶೇಖರಣಾ ಸಾಮರ್ಥ್ಯ: ನೀವು ದಿನಸಿ, ತಿಂಡಿ ಹೆಚ್ಚು ಶೇಖರಿಸುತ್ತೀರಾ? ಹಳೆ ಆಹಾರ ಉಳಿದುಕೊಳ್ಳುತ್ತೀರಾ? ಇದಕ್ಕೆ ಅನುಗುಣವಾಗಿ ಫ್ರಿಡ್ಜ್ ಆಯ್ಕೆ ಮಾಡಿಕೊಳ್ಳಿ.
- ಶಕ್ತಿಯ ಬಳಕೆ: ದೊಡ್ಡ ಸಾಮರ್ಥ್ಯದ ಫ್ರಿಡ್ಜ್‌ಗಳು ಹೆಚ್ಚು ವಿದ್ಯುತ್ ಬಳಸುತ್ತವೆ. ಕಡಿಮೆ ಬಳಕೆದಾರರಿಗೆ ಅತಿಯಾದ ಸಾಮರ್ಥ್ಯವನ್ನು ಆರಿಸುವ ಅಗತ್ಯವಿಲ್ಲ.
- ಅನುಕೂಲಕರ ಗಾತ್ರ: ನಿಮ್ಮ ಮನೆಯಲ್ಲಿನ ಅಡುಗೆಮನೆಯ ಸ್ಥಳಕ್ಕೆ ಹೊಂದಿಕೊಳ್ಳುವ ಗಾತ್ರವೇನೂ ಎಂಬುದನ್ನು ಪರಿಶೀಲಿಸಿ. ಫ್ರಿಡ್ಜ್ ತೆಗೆದು ಇಡುವ ಜಾಗ, ಡೋರ್ ಓಪನ್ ಆಗುವ ಸ್ಥಳ, ಗಾತ್ರ ಎಲ್ಲವೂ ಮುಖ್ಯ.
- ಸ್ಮಾರ್ಟ್ ಫೀಚರ್‌ಗಳ ಅವಶ್ಯಕತೆ: ಇತ್ತೀಚಿನ ಮಾದರಿಗಳಲ್ಲಿ ಡಿಜಿಟಲ್ ತಾಪಮಾನ ನಿಯಂತ್ರಣ, ಡಿಫ್ರಾಸ್ಟ್ ಫ್ರೀ ತಂತ್ರಜ್ಞಾನ, ಇನ್ವೆಟರ್ ಕಂಪ್ರೆಸರ್ ಇತ್ಯಾದಿ ಲಭ್ಯವಿವೆ. ಆದರೆ ಇವೆಲ್ಲವೂ ನಿಮ್ಮ ಬಳಕೆಗೆ ಅನ್ವಯಿಸುವುದಾದರೆ ಮಾತ್ರ ಅದನ್ನು ಆಯ್ಕೆಮಾಡಿ.
ಫ್ರಿಡ್ಜ್‌ಗಳ ಲೀಟರ್ ಸಾಮರ್ಥ್ಯ ಕೇವಲ ಸಂಖ್ಯೆ ಅಲ್ಲ. ಇದು ನಿಮ್ಮ ದಿನನಿತ್ಯದ ಜೀವನದ ಸುಧಾರಣೆಗೆ ಪೂರಕವಾಗಿರುವ ಅಳತೆಯ ವಿಧಾನವಾಗಿದೆ. ನಾವು ಶಾಲೆಯಲ್ಲಿ ಕಲಿತ ಅಳತೆ ಪದ್ಧತಿಗಳು ಹೇಗೆ ಪ್ರಾಯೋಗಿಕ ಜೀವನದಲ್ಲಿ ಉಪಯುಕ್ತವೆಂಬುದಕ್ಕೆ ರೆಫ್ರಿಜರೇಟರ್‌ಗಳು ಒಳ್ಳೆಯ ಉದಾಹರಣೆ.
ಹೊಸ ಫ್ರಿಡ್ಜ್ ಖರೀದಿಸುವ ಮೊದಲು ನೀವು ನಿಮ್ಮ ಕುಟುಂಬದ ಅಗತ್ಯ, ಉಪಯೋಗದ ಮಾದರಿ ಮತ್ತು ಸ್ಥಳಾವಕಾಶ ಅನ್ನು ಗಮನಿಸಿ, ಸೂಕ್ತ ಲೀಟರ್ ಸಾಮರ್ಥ್ಯದ ಆಯ್ಕೆಮಾಡಿ.
April 24, 2025 11:28 PM IST