Last Updated:
ಸೆಕ್ಯುರಿಟಿ ವೈಫಲ್ಯದ ಹಿನ್ನೆಲೆ ಸರ್ಕಾರ ಇದನ್ನು ಕ್ಯಾನ್ಸಲ್ ಮಾಡಿತ್ತು. ಇದೀಗ ಸ್ವತಃ ಆರ್‌ಸಿಬಿ (RCB) ಪೋಸ್ಟ್ ಒಂದನ್ನು ಹಾಕಿದ್ದು, ಆರ್‌ಸಿಬಿ ವಿಜಯೋತ್ಸವ (RCB Victory Parade) ನಡೆಯಲಿದೆ ಎಂದು ಅಧಿಕೃತವಾಗಿ ಹೇಳಿದೆ.
ಬೆಂಗಳೂರು: ದಶಕಗಳ ಕನಸು (Dream) ನನಸಾಗಿಸಿದ ಆರ್‌ಸಿಬಿ ತಂಡ (RCB Team) ಇದೀಗ ಬೆಂಗಳೂರಿಗೆ ಕಾಲಿಟ್ಟಿದೆ. ನಿನ್ನೆ ಪಂಜಾಬ್ ಕಿಂಗ್ಸ್ (Punjab Kings) ವಿರುದ್ಧ ರೋಚಕ ಪಂದ್ಯ ಗೆದ್ದ ಆರ್‌ಸಿಬಿ ತಂಡ ಕಪ್ (RCB Win the Cup) ಜೊತೆಗೆನೇ ಬೆಂಗಳೂರಿಗೆ (Bengaluru) ಬಂದಿದ್ದಾರೆ. ಆರ್‌ಸಿಬಿ ಆಟಗಾರರನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾತುರದಿಂದ ಕಾದು ಕುಳಿತ ದಿನ ಬಂದಾಗಿದೆ. ಇಂದು ಮಧ್ಯಾಹ್ನ ಆರ್‌ಸಿಬಿ ತಂಡ ರಾಜ್ಯ ರಾಜಧಾನಿಯಲ್ಲಿ ವಿಜಯಯಾತ್ರೆ ನಡೆಸಲಿದ್ದು, ಸರ್ಕಾರದಿಂದ ಆರ್‌ಸಿಬಿ ತಂಡಕ್ಕೆ ಸನ್ಮಾನ (Tribute) ಮಾಡಲಾಗುತ್ತೆ ಎಂದು ಹೇಳಲಾಗಿತ್ತು. ಆದ್ರೆ ಆ ಬಳಿಕ ಸೆಕ್ಯುರಿಟಿ ವೈಫಲ್ಯದ ಹಿನ್ನೆಲೆ ಸರ್ಕಾರ ಇದನ್ನು ಕ್ಯಾನ್ಸಲ್ ಮಾಡಿತ್ತು. ಇದೀಗ ಸ್ವತಃ ಆರ್‌ಸಿಬಿ (RCB) ಪೋಸ್ಟ್ ಒಂದನ್ನು ಹಾಕಿದ್ದು, ಆರ್‌ಸಿಬಿ ವಿಜಯೋತ್ಸವ (RCB Victory Parade) ನಡೆಯಲಿದೆ ಎಂದು ಅಧಿಕೃತವಾಗಿ ಹೇಳಿದೆ.
ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡ ಆರ್‌ಸಿಬಿ!\
ಇನ್ನು ಸರ್ಕಾರ ಆಗಲೇ ಎಕ್ಸ್ ಪ್ಲಾಟ್ ಫಾರ್ಮ್‌ನಲ್ಲಿ ಪೋಸ್ಟ್ ಶೇರ್ ಮಾಡಿಕೊಂಡಿದ್ದು, ಆರ್‌ಸಿಬಿ ವಿಕ್ಟರಿ ಪೆರೇಡ್ ಇಂದು ಸಂಜೆ 5 ಗಂಟೆಗೆ ನಡೆಯಲಿದೆ ಎಂದು ಬರೆದಿದ್ದಾರೆ. ವಿಜಯೋತ್ಸವದ ಮೆರವಣಿಗೆಯ ನಂತರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಂಭ್ರಮಾಚರಣೆ ನಡೆಯಲಿದೆ ಎಂದು ಹೇಳಲಾಗಿದೆ. ಎಲ್ಲರೂ ರೋಡ್ ಶೋ ಅನ್ನು ಶಾಂತಿಯುತವಾಗಿ ಆನಂದಿಸಲು, ಪೊಲೀಸರು ಮತ್ತು ಇತರ ಅಧಿಕಾರಿಗಳು ನಿಗದಿಪಡಿಸಿದ ಮಾರ್ಗಸೂಚಿಗಳನ್ನು ಅನುಸರಿಸುವಂತೆ ಅಭಿಮಾನಿಗಳಲ್ಲಿ ವಿನಂತಿ ಮಾಡಿದ್ದಾರೆ.
🚨 RCB Victory Parade: Today at 5 pm IST. ‼️
Victory Parade will be followed by celebrations at the Chinnaswamy stadium.
We request all fans to follow guidelines set by police and other authorities, so that everyone can enjoy the roadshow peacefully.
Free passes (limited… pic.twitter.com/raJMXlop5O
— Royal Challengers Bengaluru (@RCBTweets) June 4, 2025
ಆಟಗಾರರನ್ನು ಸಿಎಂಗೂ ಮೊದಲೇ ಅಭಿನಂದಿಸಿದ ಡಿಕೆಶಿ
ಬೆಂಗಳೂರಿನ ಹೆಚ್‌ಎಎಲ್ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಆರ್‌ಸಿಬಿ ಆಟಗಾರರ ತಂಡವನ್ನು ಡಿಸಿಎಂ ಡಿಕೆ ಶಿವಕುಮಾರ್ ಅವರು ಸ್ವಾಗತಿಸಿದರು. ಕನಕಪುರದಿಂದ ನೇರವಾಗಿ ವಿಮಾನ ನಿಲ್ದಾಣಕ್ಕೆ ಬಂದ ಡಿಸಿಎಂ ಡಿಕೆಶಿ ಆರ್‌ಸಿಬಿ ತಂಡದ ಆಟಗಾರರನ್ನು ಸ್ವಾಗತಿಸಲು ಸೇರಿದ್ದ ಸಾವಿರಾರು ಅಭಿಮಾನಿಗಳತ್ತ ಕೈಬೀಸಿ ಮುಂದೆ ಹೋದರು. ಮಾತ್ರವಲ್ಲ ಸಿಎಂ ಸಿದ್ದರಾಮಯ್ಯನವರು ಆರ್‌ಸಿಬಿ ಆಟಗಾರರಿಗೆ ಅಭಿನಂದನೆ ಸಲ್ಲಿಸುವುದಕ್ಕೆ ಮೊದಲು ಕನಕಪುರದಿಂದ ನೇರವಾಗಿ ಹೆಚ್‌ಎಎಲ್‌ಗೆ ಬಂದ ಡಿಕೆಶಿ ಆಟಗಾರರನ್ನು ಅಭಿನಂದಿಸಿದ್ದಾರೆ.
Bangalore [Bangalore],Bangalore,Karnataka
June 04, 2025 3:49 PM IST