ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಕೋಟಿ ಗಾಯತ್ರಿಯಾಗ ಕಣ್ತುಂಬಿಕೊಂಡ ಜನರು | Koti Gayatri at Sri Durgaparameshwari Temple in Mangaluru

ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಕೋಟಿ ಗಾಯತ್ರಿಯಾಗ ಕಣ್ತುಂಬಿಕೊಂಡ ಜನರು | Koti Gayatri at Sri Durgaparameshwari Temple in Mangaluru

Last Updated:

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಕೇಂದ್ರ ಸಮಿತಿ ಹಾಗೂ ಮಹಾಸಭಾದ ದಕ್ಷಿಣ ಕನ್ನಡ ಜಿಲ್ಲಾ ಘಟಕ ಜಂಟಿಯಾಗಿ ಮಂಗಳೂರಿನ ಚಿತ್ರಾಪುರ ಮಠದ ಸಹಕಾರದೊಂದಿಗೆ ನಡೆದ ಕಾರ್ಯಕ್ರಮದಲ್ಲಿ ಗಾಯತ್ರಿ ಯಾಗದ ಪೂರ್ಣಾಹುತಿ ನಡೆಯಿತು.

X

ವಿಡಿಯೋ ಇಲ್ಲಿ ನೋಡಿ

ಮಂಗಳೂರಿನ ಚಿತ್ರಾಪುರ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ” ಗಾಯತ್ರಿ ಸಂಗಮ” ಸಾಂಘಿಕ ಕೋಟಿ ಗಾಯತ್ರೀ ಜಪ ಯಜ್ಞ ಅದ್ದೂರಿಯಾಗಿ ನೆರವೇರಿತು. ಎರಡನೇ ದಿನ ಕೋಟಿ ಗಾಯತ್ರಿ ಯಾಗದ ಪೂರ್ಣಾಹುತಿ ನಡೆದಿದ್ದು, ಪೇಜಾವರ ಶ್ರೀಗಳು, ಸೇರಿದಂತೆ ಸಾವಿರಾರು ಮಂದಿ ವಿಶೇಷ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

ಲೋಕ ಕಲ್ಯಾಣಾರ್ಥವಾಗಿ, ಸಾಮರಸ್ಯದಿ ಜಗವ ಬೆಳಗುವ ಬ್ರಹ್ಮತೇಜದ ಬೆಳಕಲಿ ಎಂಬ ಸದಾಶಯದೊಂದಿಗೆ, ಮಂಗಳೂರಿನ ಚಿತ್ರಾಪುರ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಎರಡು ದಿನಗಳ ಕಾಲ “ಗಾಯತ್ರಿ ಸಂಗಮ” ಸಾಂಘಿಕ ಕೋಟಿ ಗಾಯತ್ರೀ ಜಪ ಯಜ್ಞ ಎನ್ನುವ ವಿಶೇಷ ಧಾರ್ಮಿಕ ಕಾರ್ಯಕ್ರಮ ನಡೆಯಿತು.

ಇದನ್ನೂ ಓದಿ: Jobs in Koppal: ಜಿಲ್ಲಾ ಆರೋಗ್ಯ & ಕುಟುಂಬ ಕಲ್ಯಾಣ ಇಲಾಖೆಯಲ್ಲಿದೆ ಉದ್ಯೋಗಾವಕಾಶ- ಆಸಕ್ತರು ಇವತ್ತೇ ಅಪ್ಲೈ ಮಾಡಿ

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಕೇಂದ್ರ ಸಮಿತಿ ಹಾಗೂ ಮಹಾಸಭಾದ ದಕ್ಷಿಣ ಕನ್ನಡ ಜಿಲ್ಲಾ ಘಟಕ ಜಂಟಿಯಾಗಿ ಮಂಗಳೂರಿನ ಚಿತ್ರಾಪುರ ಮಠದ ಸಹಕಾರದೊಂದಿಗೆ ನಡೆದ ಕಾರ್ಯಕ್ರಮದಲ್ಲಿ ಗಾಯತ್ರಿ ಯಾಗದ ಪೂರ್ಣಾಹುತಿ ನಡೆಯಿತು. ವೇದ ಮೂರ್ತಿ ಕುಡುಪು ಕೃಷ್ಣ ರಾಜ ತಂತ್ರಿಗಳ ನೇತೃತ್ವದಲ್ಲಿ, ಬ್ರಾಹ್ಮಣ ಸಮಾಜದ ಎಂಟು ಯತ್ವಿಜರ ಪೂರ್ಣಾಹುತಿ ನೇರವೇರಿಸಿದ್ದರು. ಪೇಜಾವರ ವಿಶ್ವ ಪ್ರಸನ್ನ ತೀರ್ಥರು, ಎಡ ನೀರು ಮಠದ ಸಚ್ಚಿದಾನಂದ ಭಾರತಿ ಸ್ವಾಮೀಜಿ ಹಾಗೂ ಚಿತ್ರಾಪುರ ಮಠದ ವಿದ್ಯೇಂದ್ರ ತೀರ್ಥರು ಗಾಯತ್ರಿ ಯಾಗದ ಪೂರ್ಣಾಹುತಿಯಲ್ಲಿ ಪಾಲ್ಗೊಂಡರು.

ಇನ್ನೂ, ಎರಡು ದಿನಗಳ‌ ಎರಡು ದಿನಗಳ ಕಾಲ ವಿಪ್ರ ಬಾಂದವರಿಂದ ಗಾಯತ್ರಿ ಮಂತ್ರ ಹಾಗೂ ಸರ್ವ ಮಂಗಲ ಮಂತ್ರ ಪಠಣ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಯಿತು. ಗಾಯತ್ರಿ ಸಂಗಮದಲ್ಲಿ ವಿಪ್ರ ಸಮಾಜ ಸೇರಿದಂತೆ, ಇತರೆ ಸಮುದಾಯದ ಸಾವಿರಾರು ಮಂದಿ ಭಾಗವಹಿಸಿದ್ದರು. ಕೋಟಿ ಗಾಯತ್ರಿ ಯಾಗ ಕಣ್ತುಂಬಿಕೊಂಡು‌ ಪುನೀತರಾದರು.