ಭಾರತದ 90 ವರ್ಷಗಳ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಒಂದೇ ಸರಣಿಯಲ್ಲಿ ಮೂರು ಬ್ಯಾಟರ್ಗಳು 500ರ ಗಡಿದಾಟಿರುವುದು ಇದೇ ಮೊದಲಾಗಿದೆ. 1934ರಿಂದ ಇಲ್ಲಿಯವರೆಗೆ ಭಾರತದ ಸಚಿನ್, ದ್ರಾವಿಡ್, ಗಂಗೂಲಿ ಹಾಗೂ ಸೆಹ್ವಾಗ್ ರಂತಹ ಸ್ಟಾರ್ ಆಟಗಾರರು ತಂಡದಲ್ಲಿದ್ದರೂ ಒಂದೇ ಒಂದು ಸರಣಿಯಲ್ಲಿ ಮೂವರು ಈ ದಾಖಲೆ ನಿರ್ಮಿಸಲು ಆಗಿರಲಿಲ್ಲ.