5ಜಿ ಆರಂಭಿಸಲು ಕಾತುರದಿಂದ ಕಾಯ್ತಿದೆ ವೊಡಾಫೋನ್​-ಐಡಿಯಾ: ಮೊದಲು ಮುಂಬೈ, ಆಮೇಲೆ ಬೆಂಗಳೂರು – VODAFONE IDEA 5G SERVICE

 

5ಜಿ ಆರಂಭಿಸಲು ಕಾತುರದಿಂದ ಕಾಯ್ತಿದೆ ವೊಡಾಫೋನ್​-ಐಡಿಯಾ: ಮೊದಲು ಮುಂಬೈ, ಆಮೇಲೆ ಬೆಂಗಳೂರು – VODAFONE IDEA 5G SERVICE

Vodafone Idea 5G Service Launch Date: ಈಗ ದೇಶಾದ್ಯಂತ 5G ಬಳಕೆಗೆ ಬೇಡಿಕೆ ಹೆಚ್ಚುತ್ತಿದೆ. ಈಗಾಗಲೇ ಅತಿ ದೊಡ್ಡ ಖಾಸಗಿ ಟೆಲಿಕಾಂ ಕಂಪೆನಿಗಳಾದ ಜಿಯೋ ಮತ್ತು ಏರ್‌ಟೆಲ್ 5ಜಿ ಸೇವೆಗಳನ್ನು ವಿಸ್ತರಿಸಿವೆ. ಏರ್​ಟೆಲ್ ತನ್ನ 5G ಸೇವೆಯನ್ನು 2022ರಲ್ಲಿ ಪ್ರಾರಂಭಿಸಿತ್ತು. ನಂತರ Jio. ಸದ್ಯ ವೊಡಾಫೋನ್​-ಐಡಿಯಾ ಈ ಎರಡು ಕಂಪೆನಿಗಳಿಗೆ ಠಕ್ಕರ್​ ಕೊಡಲು ಸಿದ್ಧತೆ ನಡೆಸುತ್ತಿದೆ.

ಹೌದು, ಭಾರತದಲ್ಲಿ 5G ಸೇವೆಯನ್ನು ತರುವುದಾಗಿ ವೊಡಾಫೋನ್​ ಘೋಷಿಸಿದೆ. ಜಿಯೋ, ಏರ್‌ಟೆಲ್ ಮತ್ತು ವೊಡಾಫೋನ್-ಐಡಿಯಾ ನಮ್ಮ ದೇಶದ ಮೂರು ದೊಡ್ಡ ಖಾಸಗಿ ಟೆಲಿಕಾಂ ಕಂಪೆನಿಗಳು. ಮೊದಲಿನಿಂದಲೂ ನಡೆಯುತ್ತಿರುವ ತ್ರಿಕೋನ ಸಮರದಲ್ಲಿ ವೊಡಾಫೋನ್-ಐಡಿಯಾ ಕೊನೆಯ ಸ್ಥಾನದಲ್ಲಿದೆ. ಪ್ರಸ್ತುತ ಈ ಕಂಪೆನಿಯ ಬಳಕೆದಾರರ ಸಂಖ್ಯೆ ಕಡಿಮೆಯಾಗಿದೆ. ಈ ಹಿನ್ನೆಲೆಯಲ್ಲಿ ವೋಡಾಫೋನ್​ ಐಡಿಯಾ ತನ್ನ ಸ್ಥಾನವನ್ನು 5ಜಿ ಸೆಕ್ಟರ್​ನಲ್ಲಿ ಭದ್ರಗೊಳಿಸಲು ಜಿಯೋ ಮತ್ತು ಏರ್‌ಟೆಲ್​ದೊಂದಿಗೆ ಕಠಿಣ ಸ್ಪರ್ಧೆಯೊಡ್ಡುತ್ತಿದೆ.

ವೊಡಾಫೋನ್-ಐಡಿಯಾ 5G ರೂಪದಲ್ಲಿ ಕಠಿಣ ಸವಾಲನ್ನು ಎದುರಿಸಿದೆ ಎಂದು ಹೇಳಬಹುದು. 5G ಸ್ಪೆಕ್ಟ್ರಮ್ ಪಡೆದುಕೊಂಡಿರುವ ಕಂಪೆನಿಯು ಹಣದ ಕೊರತೆಯಿಂದಾಗಿ 5G ಬಿಡುಗಡೆಯನ್ನು ವಿಳಂಬಗೊಳಿಸಿದೆ. ಇನ್ನು ಹೆಚ್ಚಿನ ಬಳಕೆದಾರರನ್ನು ತಮ್ಮತ್ತ ಆಕರ್ಷಿಸಲು ಜಿಯೋ ಮತ್ತು ಏರ್​ಟೆಲ್​ ತಮ್ಮ 5G ಸೇವೆಗಳನ್ನು ವೇಗವಾಗಿ ವಿಸ್ತರಿಸುತ್ತಿವೆ. ಈ 5ಜಿ ಹಿನ್ನೆಲೆಯಲ್ಲಿ ವೊಡಾಫೋನ್-ಐಡಿಯಾ ಹೆಚ್ಚಿನ ಸಂಖ್ಯೆಯ ಬಳಕೆದಾರರನ್ನು ಕಳೆದುಕೊಂಡಿದೆ. ಆದರೆ ಈಗ ಸ್ವಲ್ಪ ತಡವಾದರೂ ಸಹ 5G ಸೇವೆಗಳನ್ನು ಪರಿಚಯಿಸುವ ಮೂಲಕ ವಿಐ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದೆ.

ದೇಶದಲ್ಲಿ ಪ್ರಾರಂಭವಾಗಲಿದೆ ವಿಐ 5G ಸರ್ವೀಸ್​: ವೊಡಾಫೋನ್-ಐಡಿಯಾ ತನ್ನ ಇತ್ತೀಚಿನ ಫೈನಾನ್ಶಿಯಲ್​ ರಿಪೋರ್ಟ್​ ಪ್ರಕಾರ,​ ಮಾರ್ಚ್ 2025ರಿಂದ ಕಂಪೆನಿ ತನ್ನ 5G ಸೇವೆಯನ್ನು ಪ್ರಾರಂಭಿಸುವುದಾಗಿ ಘೋಷಿಸಿದೆ. ಕಂಪೆನಿಯು ತನ್ನ ಮೊದಲ 5G ಸೇವೆಗಳನ್ನು ಮಾರ್ಚ್ 2025ರಲ್ಲಿ ಮುಂಬೈನಲ್ಲಿ ಪ್ರಾರಂಭಿಸುವುದಾಗಿ ಹೇಳಿದೆ. ಆದರೂ ಈ ಸೇವೆಗಳ ಪ್ರಾರಂಭದ ದಿನಾಂಕವನ್ನು ವಿಐ ಇನ್ನೂ ಬಹಿರಂಗಪಡಿಸಿಲ್ಲ. ಆದರೆ ಮೊದಲು ಮುಂಬೈನಲ್ಲಿ ಈ ಸೇವೆಗಳನ್ನು ಪ್ರಾರಂಭಿಸಿದ ನಂತರ, ಏಪ್ರಿಲ್ 2025ರಲ್ಲಿ ದೆಹಲಿ, ಚಂಡೀಗಢ, ಬೆಂಗಳೂರು ಮತ್ತು ಪಾಟ್ನಾ ಇತರ ನಾಲ್ಕು ನಗರಗಳಲ್ಲಿ ಇದನ್ನು ವಿಸ್ತರಿಸಲಾಗುವುದು ಎಂದು ಹೇಳಿದೆ.

ವೊಡಾಫೋನ್ ಐಡಿಯಾ 2024-25ರ ಹಣಕಾಸು ವರ್ಷದ ಮೂರನೇ ತ್ರೈಮಾಸಿಕ ವರದಿಯಲ್ಲಿ ಈ ಮಾಹಿತಿಯನ್ನು ಒದಗಿಸಿದೆ. ಕಂಪೆನಿಯ ಸಿಇಒ ಅಕ್ಷಯ್ ಮುಂದ್ರಾ, “ನಾವು ಹೂಡಿಕೆಯನ್ನು ಹೆಚ್ಚಿಸುತ್ತಿದ್ದೇವೆ. ಮುಂದಿನ ತ್ರೈಮಾಸಿಕದಲ್ಲಿ ಹೂಡಿಕೆಯ ವೆಚ್ಚದ ವೇಗವು ಹೆಚ್ಚಾಗುತ್ತದೆ. ಇದಲ್ಲದೆ, ಕಂಪನಿಯು 5G ಸೇವೆಯನ್ನು ಹಂತಹಂತವಾಗಿ ವಿಸ್ತರಿಸಲಿದೆ” ಎಂದು ಹೇಳಿದ್ದರು.

4G ಸರ್ವೀಸ್​ ರಿಪೋರ್ಟ್​: ವೊಡಾಫೋನ್-ಐಡಿಯಾ ತನ್ನ 5G ಸೇವೆಯ ರೋಲ್‌ಔಟ್ ಅನ್ನು ಘೋಷಿಸಿದ್ದು ಮಾತ್ರವಲ್ಲದೆ ಕಳೆದ ಒಂಬತ್ತು ತಿಂಗಳುಗಳಲ್ಲಿ ದೇಶಾದ್ಯಂತ 4G ಸೇವೆಗಳ ವಿಸ್ತರಣೆಯ ವರದಿಯನ್ನೂ ಸಹ ಪ್ರಸ್ತುತಪಡಿಸಿದೆ. ಮಾರ್ಚ್ 2024ರ ವೇಳೆಗೆ 4G ಸೇವೆಯನ್ನು 1.03 ಬಿಲಿಯನ್ ಜನರಿಗೆ ವಿಸ್ತರಿಸಲಾಗುವುದು ಮತ್ತು ಡಿಸೆಂಬರ್ 2024ರ ಅಂತ್ಯದ ವೇಳೆಗೆ ಸೇವೆಯು 1.07 ಶತಕೋಟಿ ಬಳಕೆದಾರರನ್ನು ತಲುಪಲಿದೆ ಎಂದು ಕಂಪೆನಿ ಹೇಳಿದೆ.

Leave a Reply

Your email address will not be published. Required fields are marked *