Last Updated:
ವಿಶಾಲ್, ಪುತ್ತೂರಿನ ವಿದ್ಯಾರ್ಥಿ, ತನ್ನ ಸೈಕಲ್ ಅನ್ನು ಎಲೆಕ್ಟ್ರಿಕಲ್ ಸೈಕಲ್ ಆಗಿ ಪರಿವರ್ತಿಸಿ, 30 ಕಿಮೀ ಓಡುವಂತೆ ಮಾಡಿದ್ದಾನೆ. ಯೂಟ್ಯೂಬ್ ಮೂಲಕ ಕಲಿತು, 10 ಸಾವಿರ ರೂಪಾಯಿಗಳಲ್ಲಿ ಈ ಸಾಧನೆ ಮಾಡಿದ.
ದಕ್ಷಿಣ ಕನ್ನಡ: ನಾವೆಲ್ಲಾ ‘3 ಈಡಿಯಟ್ಸ್’ ಚಿತ್ರ ನೋಡಿದ್ದೇವೆ, ಅದರಲ್ಲಿನ ಮುಖ್ಯ ಪಾತ್ರ ತನಗೆ ಒದಗುವ ಆತಂಕದ ಹಾಗೂ ತಪ್ಪಿಸಿಕೊಳ್ಳಲೇಬೇಕಾದ ಅನಿವಾರ್ಯ ಪರಿಸ್ಥಿತಿಯಲ್ಲಿ ಏನಾದರೊಂದು ಪ್ರಯೋಗ ಮಾಡಿ ಯಶಸ್ವಿಯಾಗುತ್ತದೆ. ಹೌದು, ಆ ಪಾತ್ರ ‘ಫುನ್ ಸುಕ್ ವಾಂಗ್ಡು’ ದು ಅರ್ಥಾತ್ ನಿಜಜೀವನದಲ್ಲಿ ಅವರು ರಾಮೋನ್ ಮ್ಯಾಗಸ್ಸೆ ವಿಜೇತ ‘ಸೋನಮ್ ವಾಂಗ್ಚುಕ್’ ಅವರದ್ದು ಅದೇ ರೀತಿ ಒಬ್ಬ ಹುಡುಗ ಈಗ ನಮ್ಮ ಕರ್ನಾಟಕದಲ್ಲೂ ಹುಟ್ಟಿಕೊಂಡಿದ್ದಾನೆ. ಶಾಲೆಗೆ (School) ಹೋಗಬೇಕಾದರೆ ಸೈಕಲ್ (Bicycle) ತುಳಿದು ಕಾಲು ನೋವಿನ ಅನುಭವ ಬಂದಾಗ ಈ ಬಾಲಕ ತನ್ನ ಸೈಕಲನ್ನು ಎಲೆಕ್ಟ್ರಿಕಲ್ ಸೈಕಲ್ (Electric Bicycle) ಆಗಿ ಪರಿವರ್ತಿಸಿದ್ದಾನೆ. ಒಮ್ಮೆ ಚಾರ್ಜ್ ಮಾಡಿದರೆ 30 ಕಿಲೋ ಮೀಟರ್ ಓಡುವ ಈ ಸೈಕಲ್ ಸ್ವತಹ ಇದೇ ಬಾಲಕನ (Student) ಶ್ರಮದಿಂದ ನಿರ್ಮಾಣಗೊಂಡಿದೆ. ಯಾರಿವನು? ಏನೀ ಕಥೆ? ಅಂತೀರಾ ಈ ಸ್ಟೋರಿ ನೋಡಿ.
ಹೌದು, ಇದು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಉಲಾರ್ಂಡಿ ನಿವಾಸಿ ರಾಜಾರಾಮ್ ಮತ್ತು ರಾಜೇಶ್ವರಿ ದಂಪತಿಗಳ ಪುತ್ರ ವಿಶಾಲ್ ನ ಕಥೆ. ತನ್ನ ಮನೆ ಉಲಾರ್ಂಡಿಯಿಂದ ಕೊಂಬೆಟ್ಟು ಸರಕಾರಿ ಫ್ರೌಢಶಾಲೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ನಡೆದುಕೊಂಡೇ ಹೋಗಬೇಕಾದ ಪರಿಸ್ಥಿತಿಯಿತ್ತು. ಈ ಭಾಗವನ್ನು ಸಂಪರ್ಕಿಸಲು ಆಟೋ ಬಿಟ್ಟರೆ ಬೇರೆ ಯಾವುದೇ ವ್ಯವಸ್ಥೆಯೂ ಇಲ್ಲ. ಈ ಸಂದರ್ಭದಲ್ಲಿಪೋಷಕರು ನೀಡಿದ ಸೈಕಲ್ ಬಳಸಿಕೊಂಡು ಶಾಲೆ ಸೇರುತ್ತಿದ್ದ ವಿಶಾಲ್ ಹತ್ತನೇ ತರಗತಿಯಲ್ಲಿರುವ ಸಂದರ್ಭದಲ್ಲಿ ತನ್ನ ಸೈಕಲ್ ಅನ್ನ ಮೋಡಿಫೈ ಮಾಡಲು ನಿರ್ಧರಿಸಿದ್ದಾನೆ. ಯೂಟ್ಯೂಬ್ ಮೂಲಕ ತನ್ನ ಸೈಕಲ್ ಅನ್ನ ಬ್ಯಾಟರಿ ಚಾಲಿತ ಎಲೆಕ್ಟ್ರಿಲ್ ಸೈಕಲ್ ಮಾಡುವ ವಿಧಾನವನ್ನು ಕಲಿತುಕೊಂಡಿದ್ದಾನೆ. ಆ ಬಳಿಕ ಹಿಂದೆ ಮುಂದೆ ನೋಡದೆ, ತನ್ನ ಮನೆಯಲ್ಲೇ ಇರುವ ವ್ಯವಸ್ಥೆಗಳನ್ನು ಬಳಸಿಕೊಂಡು ಸೈಕಲ್ ಅನ್ನ ಬ್ಯಾಟರಿ ಚಾಲಿತ ಸೈಕಲ್ ಆಗಿ ಪರಿವರ್ತಿಸಿದ್ದಾನೆ.
ಸುಮಾರು 10 ಸಾವಿರ ರೂಪಾಯಿಗಳ ಬಂಡವಾಳವನ್ನು ಹಾಕಿ ಸೈಕಲ್ ಗೆ ಬೇಕಾದ ಎಲ್ಲಾ ಪರಿಕರಗಳನ್ನು ಸಂಗ್ರಹಿಸಿ ಮನೆಯಲ್ಲೇ ಪರಿವರ್ತನೆಯ ಕೆಲಸ ಮಾಡಿದ್ದಾನೆ. ಸೈಕಲ್ ನ ಮೋಟಾರು ಚಾಲನೆಗೆ 52 ಲಿಥಿಯಂ ಬ್ಯಾಟರಿಗಳನ್ನು ಒಟ್ಟು ಸೇರಿಸಿ ಬ್ಯಾಟರಿ ಪ್ಯಾಕ್ ಸಿದ್ಧಪಡಿಸಲಾಗಿದೆ.ಬ್ಯಾಟರಿಗೆ ತಕ್ಕುದಾದ ಮೋಟಾರ್ ಅನ್ನು ಸೈಕಲ್ ನ ಚೈನ್ ಗೆ ಅಳವಡಿಸಲಾಗಿದೆ.
ಬ್ಯಾಟರಿಯನ್ನು ಎರಡು ಗಂಟೆ ಕಾಲ ಚಾರ್ಜ್ ಮಾಡಿದಲ್ಲಿ ಈ ಸೈಕಲ್ 25 ರಿಂದ 30 ಕಿಲೋಮೀಟರ್ ಓಡುತ್ತೆ. ಗಂಟೆಗೆ 25 ಕಿಲೋಮೀಟರ್ ವೇಗದಲ್ಲಿ ಚಲಿಸುವ ಈ ಸೈಕಲ್ ಗೆ ಇನ್ನಷ್ಟು ವೇಗ ಪಡೆಯಲು ಬೇಕಾದ ವ್ಯವಸ್ಥೆಯನ್ನೂ ವಿಶಾಲ್ ಈ ಸೈಕಲ್ ನಲ್ಲಿ ಮಾಡಿದ್ದು, ಅಗತ್ಯ ಬಿದ್ದಲ್ಲಿ ಮಾತ್ರ ಈ ವೇಗದ ವ್ಯವಸ್ಥೆಯನ್ನು ವಿಶಾಲ್ ಬಳಸಿಕೊಳ್ಳುತ್ತಾನೆ. ಸದ್ಯ ವಿವೇಕಾನಂದ ಪಾಲಿಟೆಕ್ನಿಕ್ ಕಾಲೇಜು ಸೇರಿಕೊಂಡಿರುವ ವಿಶಾಲ್ ತನ್ನ ಸೈಕಲ್ ನಲ್ಲಿ ಇನ್ನಷ್ಟು ಪರಿವರ್ತನೆಯನ್ನು ಮಾಡಲು ನಿರ್ಧರಿಸಿದ್ದಾನೆ
Dakshina Kannada,Karnataka
July 14, 2025 1:02 PM IST