Last Updated:
ಇಂಗ್ಲೆಂಡ್ ಪರ ಜೋಫ್ರಾ ಆರ್ಚರ್ ಮತ್ತು ಬೆನ್ ಸ್ಟೋಕ್ಸ್ ತಲಾ ಮೂರು ವಿಕೆಟ್ ಪಡೆದರೆ, ಕಾರ್ ಎರಡು, ಕ್ರಿಸ್ ವೋಕ್ಸ್ ಮತ್ತು ಶೋಯೆಬ್ ಬಶೀರ್ ತಲಾ ಒಂದು ವಿಕೆಟ್ ಪಡೆದರು. ಈ ಗೆಲುವಿನೊಂದಿಗೆ ಇಂಗ್ಲೆಂಡ್ ಐದು ಟೆಸ್ಟ್‌ಗಳ ಸರಣಿಯಲ್ಲಿ 2-1 ಮುನ್ನಡೆ ಸಾಧಿಸಿತು.4ನೇ ಟೆಸ್ಟ್ ಮ್ಯಾಂಚೆಸ್ಟರ್‌ನಲ್ಲಿ ಜುಲೈ 23ರಿಂದ ನಡೆಯಲಿದೆ.
ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ (ECB) ಮಂಗಳವಾರ ಟೀಮ್ ಇಂಡಿಯಾ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯಕ್ಕೆ 14 ಸದಸ್ಯರ ತಂಡವನ್ನು ಪ್ರಕಟಿಸಿದೆ. ಎಡಗೈ ಸ್ಪಿನ್ನರ್ ಲಿಯಾಮ್ ಡಾಸನ್ ಎಂಟು ವರ್ಷಗಳ ನಂತರ ಇಂಗ್ಲೆಂಡ್ ಟೆಸ್ಟ್ ತಂಡಕ್ಕೆ ಮರಳಿದ್ದಾರೆ. ಲಾರ್ಡ್ಸ್ ಟೆಸ್ಟ್‌ನಲ್ಲಿ ಗಾಯಗೊಂಡ ಸ್ಪಿನ್ನರ್ ಶೋಯೆಬ್ ಬಶೀರ್ ಬದಲಿಗೆ ಇಂಗ್ಲೆಂಡ್ ಆಯ್ಕೆದಾರರು ಲಿಯಾಮ್ ಡಾಸನ್ ಅವರನ್ನು ಆಯ್ಕೆ ಮಾಡಿದ್ದಾರೆ.
ಇಸಿಬಿ ತನ್ನ ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ಈ ಮಾಹಿತಿಯನ್ನ ಪ್ರಕಟಿಸಿದೆ. ಮೂರನೇ ಟೆಸ್ಟ್ ಪಂದ್ಯದಲ್ಲಿ ಬೆರಳಿಗೆ ಗಾಯವಾದ ನಂತರ ಬಶೀರ್ ಉಳಿದ ಎರಡು ಟೆಸ್ಟ್‌ಗಳನ್ನು ತಪ್ಪಿಸಿಕೊಳ್ಳಲಿದ್ದಾರೆ. ಡಾಸನ್ ಕೊನೆಯ ಬಾರಿಗೆ 2017 ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಇಂಗ್ಲೆಂಡ್ ಪರ ಟೆಸ್ಟ್ ಪಂದ್ಯವನ್ನು ಆಡಿದ್ದರು. ದೇಶೀಯ ಕ್ರಿಕೆಟ್‌ನಲ್ಲಿ ಅವರ ಅದ್ಭುತ ಪ್ರದರ್ಶನದ ನಂತರ ಆಯ್ಕೆದಾರರು ಡಾಸನ್ ಅವರನ್ನು ತಂಡಕ್ಕೆ ಕರೆಸಿಕೊಂಡಿದ್ದಾರೆ.
ಡಾಸೆನ್ ಬ್ಯಾಟಿಂಗ್‌ನಲ್ಲಿಯೂ ಮಿಂಚುವ ಸಾಮರ್ಥ್ಯ ಹೊಂದಿದ್ದಾರೆ. ಇದರಿಂದಾಗಿ ಅವರು ಅಂತಿಮ ತಂಡದಲ್ಲಿ ಸ್ಥಾನ ಪಡೆಯುವುದು ಬಹುತೇಕ ಖಚಿತವಾಗಿದೆ. ಮೊದಲ ಮೂರು ಟೆಸ್ಟ್‌ಗಳಲ್ಲಿ ವಿಫಲರಾಗಿದ್ದ ಆರಂಭಿಕ ಬ್ಯಾಟ್ಸ್‌ಮನ್ ಜ್ಯಾಕ್ ಕ್ರಾಲಿಗೆ ಆಯ್ಕೆದಾರರು ಮತ್ತೊಂದು ಅವಕಾಶ ನೀಡಿದ್ದಾರೆ. ಅದೇ ರೀತಿ, ಇಂಗ್ಲೆಂಡ್ ಟೆಸ್ಟ್ ತಂಡದ ಭಾಗವಾಗಿದ್ದ ಜೇಮೀ ಓವರ್ಟನ್ ಮತ್ತು ಸ್ಯಾಮ್ ಕುಕ್ ಅವರನ್ನು ಕೌಂಟಿ ಕ್ರಿಕೆಟ್‌ಗೆ ಮರಳಲು ಇಸಿಬಿ ಬಿಡುಗಡೆ ಮಾಡಿತು. ಭಾರತ ಮತ್ತು ಇಂಗ್ಲೆಂಡ್ ನಡುವಿನ ನಾಲ್ಕನೇ ಟೆಸ್ಟ್ ಪಂದ್ಯ ಜುಲೈ 23 ರಿಂದ ಮ್ಯಾಂಚೆಸ್ಟರ್‌ನಲ್ಲಿ ಆರಂಭವಾಗಲಿದೆ.
ಲಾರ್ಡ್ಸ್‌ನಲ್ಲಿ ನಡೆದ ಮೂರನೇ ಟೆಸ್ಟ್‌ನಲ್ಲಿ ಭಾರತ ಹೋರಾಡಿ ಸೋತಿತು. ಈ ರೋಮಾಂಚಕಾರಿ ಪಂದ್ಯದಲ್ಲಿ ಟೀಮ್ ಇಂಡಿಯಾ 22 ರನ್‌ಗಳಿಂದ ಸೋತಿತು. 193 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಗಿಲ್ಸೇನಾ 170 ರನ್‌ಗಳಿಗೆ ಆಲೌಟ್ ಆಯಿತು. ಸ್ಟಾರ್ ಆಲ್ ರೌಂಡರ್ ರವೀಂದ್ರ ಜಡೇಜಾ (181 ಎಸೆತಗಳಲ್ಲಿ 4 ಬೌಂಡರಿ ಮತ್ತು 1 ಸಿಕ್ಸರ್‌ನೊಂದಿಗೆ ಔಟಾಗದೆ 61) ದಿಟ್ಟ ಹೋರಾಟ ನೀಡಿದರೂ ತಂಡವನ್ನು ಗೆಲುವಿನತ್ತ ಕೊಂಡೊಯ್ಯಲು ಸಾಧ್ಯವಾಗಲಿಲ್ಲ.
ಇಂಗ್ಲೆಂಡ್ ಪರ ಜೋಫ್ರಾ ಆರ್ಚರ್ ಮತ್ತು ಬೆನ್ ಸ್ಟೋಕ್ಸ್ ತಲಾ ಮೂರು ವಿಕೆಟ್ ಪಡೆದರೆ, ಕಾರ್ ಎರಡು, ಕ್ರಿಸ್ ವೋಕ್ಸ್ ಮತ್ತು ಶೋಯೆಬ್ ಬಶೀರ್ ತಲಾ ಒಂದು ವಿಕೆಟ್ ಪಡೆದರು. ಈ ಗೆಲುವಿನೊಂದಿಗೆ ಇಂಗ್ಲೆಂಡ್ ಐದು ಟೆಸ್ಟ್‌ಗಳ ಸರಣಿಯಲ್ಲಿ 2-1 ಮುನ್ನಡೆ ಸಾಧಿಸಿತು.4ನೇ ಟೆಸ್ಟ್ ಮ್ಯಾಂಚೆಸ್ಟರ್‌ನಲ್ಲಿ ಜುಲೈ 23ರಿಂದ ನಡೆಯಲಿದೆ.
ಬೆನ್ ಸ್ಟೋಕ್ಸ್ (ಡರ್ಹ್ಯಾಮ್) – ನಾಯಕ, ಜೋಫ್ರಾ ಆರ್ಚರ್ (ಸಸೆಕ್ಸ್), ಗಸ್ ಅಟ್ಕಿನ್ಸನ್ (ಸರ್ರೆ), ಜಾಕೋಬ್ ಬೆಥೆಲ್ (ವಾರ್ವಿಕ್‌ಷೈರ್), ಹ್ಯಾರಿ ಬ್ರೂಕ್ (ಯಾರ್ಕ್‌ಷೈರ್), ಬ್ರೈಡನ್ ಕಾರ್ಸೆ (ಡರ್ಹ್ಯಾಮ್), ಜ್ಯಾಕ್ ಕ್ರಾಲಿ (ಕೆಂಟ್), ಲಿಯಾಮ್ ಡಾಸನ್ (ಹ್ಯಾಂಪ್‌ಷೈರ್), ಬೆನ್ ಡಕೆಟ್ (ನಾಟಿಂಗ್‌ಹ್ಯಾಮ್‌ಷೈರ್), ಓಲಿ ಪೋಪ್ (ಸರ್ರೆ), ಜೋ ರೂಟ್ (ಯಾರ್ಕ್‌ಷೈರ್), ಜೇಮೀ ಸ್ಮಿತ್ (ಸರ್ರೆ), ಜೋಶ್ ಟಾಂಗ್ (ನಾಟಿಂಗ್‌ಹ್ಯಾಮ್‌ಷೈರ್), ಕ್ರಿಸ್ ವೋಕ್ಸ್ (ವಾರ್ವಿಕ್‌ಷೈರ್)
July 15, 2025 7:21 PM IST