Hardik Pandya: ಹೊಸ ಗರ್ಲ್‌ಫ್ರೆಂಡ್ ಜೊತೆಯೂ ಪಾಂಡ್ಯ ಕಿರಿಕ್‌? ಇದ್ದಕ್ಕಿದ್ದ ಹಾಗೇ ಇಬ್ಬರು ಆ ಕೆಲಸ ಮಾಡಿದ್ಯಾಕೆ?Hardik Pandya Unfollows Jasmin Walia on Instagram Breakup Rumours Go Viral

Hardik Pandya: ಹೊಸ ಗರ್ಲ್‌ಫ್ರೆಂಡ್ ಜೊತೆಯೂ ಪಾಂಡ್ಯ ಕಿರಿಕ್‌? ಇದ್ದಕ್ಕಿದ್ದ ಹಾಗೇ ಇಬ್ಬರು ಆ ಕೆಲಸ ಮಾಡಿದ್ಯಾಕೆ?Hardik Pandya Unfollows Jasmin Walia on Instagram Breakup Rumours Go Viral

Last Updated:

Hardik Pandya: ಹಾರ್ದಿಕ್‌ ಪಾಂಡ್ಯ- ಜಾಸ್ಮಿನ್ ವಾಲಿಯಾ ಅವರೊಂದಿಗೆ ತಳುಕು ಹಾಕಿಕೊಂಡಿತ್ತು. ಇವರಿಬ್ಬರ ಡೇಟಿಂಗ್ ಬಗ್ಗೆ ಗುಸುಗುಸು ಕೇಳಿಬರುತ್ತಿರುವಾಗಲೇ, ಈಗ ಈ ಪ್ರೇಮಕಥೆಗೆ ಬ್ರೇಕ್ ಬಿದ್ದಿದೆ ಎಂಬ ಹೊಸ ಸುದ್ದಿ ಹರಿದಾಡುತ್ತಿದೆ.

ಪಾಂಡ್ಯ-ಜಾಸ್ಮಿನ್ಪಾಂಡ್ಯ-ಜಾಸ್ಮಿನ್
ಪಾಂಡ್ಯ-ಜಾಸ್ಮಿನ್

ಟೀಮ್ ಇಂಡಿಯಾದ (Team India) ಸ್ಟಾರ್ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ (Hardik Pandya) ಅವರ ವೈಯಕ್ತಿಕ ಜೀವನ ಸದಾ ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಲ್ಲಿರುತ್ತದೆ. ಪತ್ನಿ ನತಾಶಾ ಸ್ಟಾಂಕೋವಿಕ್ ಅವರಿಂದ ವಿಚ್ಛೇದನ (Divorce) ಪಡೆದ ನಂತರ, ಹಾರ್ದಿಕ್ ಅವರ ಹೆಸರು ಇದೀಗ ಬ್ರಿಟಿಷ್-ಇಂಡಿಯನ್ ಮಾಡೆಲ್ ಮತ್ತು ಗಾಯಕಿ ಜಾಸ್ಮಿನ್ ವಾಲಿಯಾ ಅವರೊಂದಿಗೆ ತಳುಕು ಹಾಕಿಕೊಂಡಿತ್ತು. ಇವರಿಬ್ಬರ ಡೇಟಿಂಗ್ ಬಗ್ಗೆ ಗುಸುಗುಸು ಕೇಳಿಬರುತ್ತಿರುವಾಗಲೇ, ಈಗ ಈ ಪ್ರೇಮಕಥೆಗೆ ಬ್ರೇಕ್ ಬಿದ್ದಿದೆ ಎಂಬ ಹೊಸ ಸುದ್ದಿ ಹರಿದಾಡುತ್ತಿದೆ.

ಪ್ರೀತಿಯ ಪಿಸುಮಾತು ಶುರುವಾಗಿದ್ದು ಹೇಗೆ?

ಹಾರ್ದಿಕ್ ಮತ್ತು ಜಾಸ್ಮಿನ್ ನಡುವೆ ಏನೋ ಬೇಯುತ್ತಿದೆ ಎಂಬ ಸುದ್ದಿ ಹರಡಲು ಆರಂಭವಾಗಿದ್ದು ಚಾಂಪಿಯನ್ಸ್ ಟ್ರೋಫಿ ಪಂದ್ಯಗಳ ಸಮಯದಲ್ಲಿ. ಹಾರ್ದಿಕ್ ಆಡುವ ಪಂದ್ಯಗಳನ್ನು ನೋಡಲು ಜಾಸ್ಮಿನ್ ಕ್ರೀಡಾಂಗಣದಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಅಷ್ಟೇ ಅಲ್ಲ, ಮುಂಬೈ ಇಂಡಿಯನ್ಸ್ ತಂಡದ ಬಸ್‌ನಲ್ಲಿಯೂ ಜಾಸ್ಮಿನ್ ಕಾಣಿಸಿಕೊಂಡಿದ್ದು ಕ್ಯಾಮರಾ ಕಣ್ಣಿಗೆ ಬಿದ್ದಿತ್ತು.

ಇದಾದ ಮೇಲೆ, ಇವರಿಬ್ಬರ ಗ್ರೀಸ್ ಪ್ರವಾಸದ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ಲೀಕ್ ಆದಾಗ, ಇವರಿಬ್ಬರೂ ಡೇಟಿಂಗ್ ಮಾಡುತ್ತಿರುವುದು ಬಹುತೇಕ ಖಚಿತ ಎಂದೇ ಎಲ್ಲರೂ ನಂಬಿದ್ದರು.

ಇನ್‌ಸ್ಟಾಗ್ರಾಮ್‌ನಲ್ಲಿ ‘ಅನ್‌ಫಾಲೋ’ ಆಟ! ಬ್ರೇಕಪ್‌ಗೆ ಸಾಕ್ಷ್ಯಾ?

ಹಲವು ತಿಂಗಳುಗಳಿಂದ ಸದ್ದಿಲ್ಲದೆ ಸಾಗುತ್ತಿದ್ದ ಇವ್ರ ಪ್ರೇಮಕಥೆಯಲ್ಲಿ ಈಗ ಹೊಸ ಬಿರುಗಾಳಿ ಎದ್ದಿದೆ. ಈಗಿನ ಕಾಲದಲ್ಲಿ ಸಂಬಂಧಗಳು ಶುರುವಾಗುವುದು ಮತ್ತು ಮುಗಿಯುವುದು ಎರಡಕ್ಕೂ ಸಾಮಾಜಿಕ ಜಾಲತಾಣವೇ ವೇದಿಕೆ. ಅದರಂತೆಯೇ, ಹಾರ್ದಿಕ್ ಮತ್ತು ಜಾಸ್ಮಿನ್ ಇಬ್ಬರೂ ಇದೀಗ ಇನ್‌ಸ್ಟಾಗ್ರಾಮ್‌ನಲ್ಲಿ ಒಬ್ಬರನ್ನೊಬ್ಬರು ‘ಅನ್‌ಫಾಲೋ’ ಮಾಡಿದ್ದಾರೆ.

ಇದನ್ನೂ ಓದಿ: IND vs ENG: ಮ್ಯಾಂಚೆಸ್ಟರ್​​ನಲ್ಲಿ ಭಾರತದ ಟೆಸ್ಟ್ ದಾಖಲೆ ಕೇಳಿದ್ರೆ ಬೆಚ್ಚಿ ಬಿಳೋದು ಗ್ಯಾರಂಟಿ!

ಈ ವಿಷಯವನ್ನು ಮೊದಲು ಗಮನಿಸಿದ್ದು ರೆಡ್ಡಿಟ್ (Reddit) ಬಳಕೆದಾರರೊಬ್ಬರು. “ಹಾರ್ದಿಕ್ ಪಾಂಡ್ಯ ಮತ್ತು ಜಾಸ್ಮಿನ್ ವಾಲಿಯಾ ಒಬ್ಬರನ್ನೊಬ್ಬರು ಅನ್‌ಫಾಲೋ ಮಾಡಿದ್ದಾರೆಯೇ? ಏನಾಗುತ್ತಿದೆ?” ಎಂದು ಅವರು ಪೋಸ್ಟ್ ಹಾಕುತ್ತಿದ್ದಂತೆ, ಈ ಸುದ್ದಿ ಕಾಡ್ಗಿಚ್ಚಿನಂತೆ ಹರಡಿತು. ಸಾಮಾಜಿಕ ಜಾಲತಾಣಗಳಲ್ಲಿ ಇಬ್ಬರೂ ದೂರವಾಗಿದ್ದು, ಬಹುಶಃ ಇವರ ಸಂಬಂಧ ಮುರಿದುಬಿದ್ದಿರಬಹುದು ಎಂಬ ಚರ್ಚೆ ಜೋರಾಗಿದೆ.

ಮೌನ ಮುರಿಯದ ಜೋಡಿ

ಅಚ್ಚರಿಯ ವಿಷಯವೆಂದರೆ, ತಮ್ಮ ಡೇಟಿಂಗ್ ಸುದ್ದಿಯ ಬಗ್ಗೆ ಹಾರ್ದಿಕ್ ಆಗಲಿ ಅಥವಾ ಜಾಸ್ಮಿನ್ ಆಗಲಿ ಈವರೆಗೂ ತುಟಿ ಬಿಚ್ಚಿಲ್ಲ. ಈಗ ಈ ಬ್ರೇಕಪ್ ವದಂತಿಗಳ ಬಗ್ಗೆಯೂ ಇಬ್ಬರೂ ಮೌನಕ್ಕೆ ಶರಣಾಗಿದ್ದಾರೆ. ಈ ಮೌನವೇ ಅಭಿಮಾನಿಗಳಲ್ಲಿ ಮತ್ತಷ್ಟು ಕುತೂಹಲವನ್ನು ಕೆರಳಿಸಿದೆ.

ಯಾರು ಈ ಜಾಸ್ಮಿನ್ ವಾಲಿಯಾ?

ಜಾಸ್ಮಿನ್ ವಾಲಿಯಾ ಮೂಲತಃ ಭಾರತೀಯ ಪೋಷಕರಿಗೆ ಇಂಗ್ಲೆಂಡ್‌ನಲ್ಲಿ ಜನಿಸಿದ ಬ್ರಿಟಿಷ್ ಗಾಯಕಿ ಮತ್ತು ಮಾಡೆಲ್. ‘ದಿ ಓನ್ಲಿ ವೇ ಈಸ್ ಎಸೆಕ್ಸ್’ (TOWIE) ಎಂಬ ಜನಪ್ರಿಯ ಬ್ರಿಟಿಷ್ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ ನಂತರ ಅವರು ಬೆಳಕಿಗೆ ಬಂದರು. ಈ ಕಾರ್ಯಕ್ರಮವು ಅವರಿಗೆ ಮನರಂಜನಾ ಜಗತ್ತಿನಲ್ಲಿ ದೊಡ್ಡ ಹೆಸರು ತಂದುಕೊಟ್ಟಿತು. ಅಂದಿನಿಂದ, ಅವರು ಸಂಗೀತ ಮತ್ತು ಮಾಡೆಲಿಂಗ್ ಎರಡರಲ್ಲೂ ತಮ್ಮ ಛಾಪು ಮೂಡಿಸಿದ್ದಾರೆ.

ಸದ್ಯಕ್ಕೆ, ಹಾರ್ದಿಕ್ ಮತ್ತು ಜಾಸ್ಮಿನ್ ಕಥೆ ಏನಾಗಿದೆ ಎಂಬುದು ಮಾತ್ರ ಯಕ್ಷಪ್ರಶ್ನೆಯಾಗಿಯೇ ಉಳಿದಿದೆ. ಅಧಿಕೃತವಾಗಿ ಘೋಷಣೆ ಮಾಡದ ಸಂಬಂಧವೊಂದು, ಕೇವಲ ‘ಅನ್‌ಫಾಲೋ’ ಮೂಲಕ ಅಂತ್ಯವಾಗಿತೇ? ಕಾಲವೇ ಇದಕ್ಕೆ ಉತ್ತರ ನೀಡುತ್ತದೆ.