Last Updated:
ಜುಲೈ ತಿಂಗಳಲ್ಲಿ ಇಂಗ್ಲೆಂಡ್‌ನಲ್ಲಿ ನಡೆದ ಮೂರು ಟೆಸ್ಟ್ ಪಂದ್ಯಗಳಲ್ಲಿ ಶುಭ್‌ಮನ್ ಗಿಲ್ ಅತ್ಯದ್ಭುತವಾಗಿ ಬ್ಯಾಟಿಂಗ್ ಮಾಡಿದ್ದರು. ಅವರು ಆ ತಿಂಗಳಲ್ಲಿ ಒಟ್ಟು 94.50ರ ಸರಾಸರಿಯಲ್ಲಿ 567 ರನ್ಸ್ ಗಳಿಸಿದ್ದರು. ಈ ಪೈಕಿ ಒಂದು ದ್ವಿಶತಕ (200+ ರನ್‌ಗಳು) ಮತ್ತು ಒಂದು ಶತಕ (100+ ರನ್‌ಗಳು) ಸೇರಿವೆ. ಈ ಅದ್ಭುತ ಪ್ರದರ್ಶನದಿಂದಾಗಿ ಅವರು ಈ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಭಾರತದ ಟೆಸ್ಟ್ ಕ್ರಿಕೆಟ್ ತಂಡದ ನಾಯಕ ಶುಭ್‌ಮನ್ ಗಿಲ್ (Shubman Gill) ಅವರು ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಯ (ICC) ತಿಂಗಳ ಆಟಗಾರ ಪ್ರಶಸ್ತಿಯನ್ನು (Player Of The Month) ಗೆದ್ದು ಇತಿಹಾಸ ಸೃಷ್ಟಿಸಿದ್ದಾರೆ. ಅವರು ಈ ಪ್ರಶಸ್ತಿಯನ್ನು ಒಟ್ಟು ನಾಲ್ಕು ಬಾರಿ ಪಡೆದ ಮೊದಲ ಪುರುಷ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ಪ್ರಶಸ್ತಿಯನ್ನು ಪ್ರತಿ ತಿಂಗಳು ಕ್ರಿಕೆಟ್‌ನ ಮೂರು ಸ್ವರೂಪಗಳಲ್ಲಿ (ಟೆಸ್ಟ್, ಒಡಿಐ, ಟಿ20) ಅತ್ಯುತ್ತಮ ಪ್ರದರ್ಶನ ನೀಡಿದ ಆಟಗಾರರಿಗೆ ಐಸಿಸಿ ನೀಡುತ್ತದೆ.
ಜುಲೈ 2025ರ ತಿಂಗಳ ಆಟಗಾರ ಪ್ರಶಸ್ತಿಯನ್ನು ಶುಭ್‌ಮನ್ ಗಿಲ್ ಗೆದ್ದಿದ್ದಾರೆ. ಇದು ಅವರ ನಾಲ್ಕನೇ ಐಸಿಸಿ ತಿಂಗಳ ಆಟಗಾರ ಪ್ರಶಸ್ತಿಯಾಗಿದೆ. ಇದಕ್ಕೂ ಮೊದಲು ಯಾವುದೇ ಆಟಗಾರ ಈ ಪ್ರಶಸ್ತಿಯನ್ನು ನಾಲ್ಕು ಬಾರಿ ಗೆದ್ದಿರಲಿಲ್ಲ. ಈ ಬಾರಿ ಶುಭ್‌ಮನ್ ಗಿಲ್, ಇಂಗ್ಲೆಂಡ್‌ನ ಬೆನ್ ಸ್ಟೋಕ್ಸ್ ಮತ್ತು ದಕ್ಷಿಣ ಆಫ್ರಿಕಾದ ವಿಯಾನ್ ಮುಲ್ಡರ್ ಅವರೊಂದಿಗೆ ಸ್ಪರ್ಧಿಸಿದ್ದರು. ಆದರೆ, ಅಭಿಮಾನಿಗಳ ಮತದಾನದಲ್ಲಿ ಗಿಲ್ ಗೆಲುವು ಸಾಧಿಸಿದರು.
ಜುಲೈ ತಿಂಗಳಲ್ಲಿ ಇಂಗ್ಲೆಂಡ್‌ನಲ್ಲಿ ನಡೆದ ಮೂರು ಟೆಸ್ಟ್ ಪಂದ್ಯಗಳಲ್ಲಿ ಶುಭ್‌ಮನ್ ಗಿಲ್ ಅತ್ಯದ್ಭುತವಾಗಿ ಬ್ಯಾಟಿಂಗ್ ಮಾಡಿದ್ದರು. ಅವರು ಆ ತಿಂಗಳಲ್ಲಿ ಒಟ್ಟು 94.50ರ ಸರಾಸರಿಯಲ್ಲಿ 567 ರನ್ಸ್ ಗಳಿಸಿದ್ದರು. ಈ ಪೈಕಿ ಒಂದು ದ್ವಿಶತಕ (200+ ರನ್‌ಗಳು) ಮತ್ತು ಒಂದು ಶತಕ (100+ ರನ್‌ಗಳು) ಸೇರಿವೆ. ಈ ಅದ್ಭುತ ಪ್ರದರ್ಶನದಿಂದಾಗಿ ಅವರು ಈ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಶುಭ್‌ಮನ್ ಗಿಲ್ ಈವರೆಗೆ ಒಟ್ಟು ನಾಲ್ಕು ಬಾರಿ ಐಸಿಸಿ ತಿಂಗಳ ಆಟಗಾರ ಪ್ರಶಸ್ತಿಯನ್ನು ಗೆದ್ದಿದ್ದಾರೆ
1. ಸೆಪ್ಟೆಂಬರ್ 2023ರಲ್ಲಿ ಇದು ಅವರ ಮೊದಲ ಐಸಿಸಿ ತಿಂಗಳ ಆಟಗಾರ ಪ್ರಶಸ್ತಿಯಾಗಿತ್ತು.
2. ಜನವರಿ 2025 ರಲ್ಲಿ ಗಿಲ್ ಎರಡನೇ ಬಾರಿಗೆ ಈ ಪ್ರಶಸ್ತಿಯನ್ನು ಗೆದ್ದರು.
3. ಫೆಬ್ರವರಿ 2025ರಲ್ಲಿ ಮತ್ತೊಮ್ಮೆ ಗಿಲ್ ಈ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.
4. ಜುಲೈ 2025ರಲ್ಲಿ ಇಂಗ್ಲೆಂಡ್ ಪ್ರವಾಸದ ನಂತರ ನಾಲ್ಕನೇ ಬಾರಿಗೆ ಈ ಪ್ರಶಸ್ತಿಯನ್ನು ಗೆದಿದ್ದಾರೆ.
ಈ ಪ್ರಶಸ್ತಿಯನ್ನು ಸ್ವೀಕರಿಸಿದ ಬಳಿಕ ಶುಭ್‌ಮನ್ ಗಿಲ್ ತಮ್ಮ ಸಂತೋಷವನ್ನು ಹಂಚಿಕೊಂಡಿದ್ದಾರೆ. “ಐಸಿಸಿ ತಿಂಗಳ ಆಟಗಾರನಾಗಿ ಆಯ್ಕೆಯಾಗಿರುವುದಕ್ಕೆ ನನಗೆ ತುಂಬಾ ಖುಷಿಯಾಗಿದೆ. ನಾಯಕನಾಗಿ ನನ್ನ ಮೊದಲ ಟೆಸ್ಟ್ ಸರಣಿಯಲ್ಲಿ ಈ ಪ್ರಶಸ್ತಿಯನ್ನು ಗೆದ್ದಿರುವುದು ವಿಶೇಷವಾದ ಕ್ಷಣ. ವಿಶೇಷವಾಗಿ ಬರ್ಮಿಂಗ್ಹ್ಯಾಮ್‌ನಲ್ಲಿ ನಾನು ಗಳಿಸಿದ ದ್ವಿಶತಕವನ್ನು ಎಂದಿಗೂ ಮರೆಯಲಾರೆ. ಈ ದ್ವಿಶತಕ ನನ್ನ ಇಂಗ್ಲೆಂಡ್ ಪ್ರವಾಸದಲ್ಲಿ ಮರೆಯಲಾಗದ ಕ್ಷಣವಾಗಿದೆ,” ಎಂದು ಗಿಲ್ ಹೇಳಿದ್ದಾರೆ.
ಶುಭ್‌ಮನ್ ಗಿಲ್ ಈ ಪ್ರಶಸ್ತಿಯನ್ನು ನಾಲ್ಕು ಬಾರಿ ಗೆದ್ದ ಮೊದಲ ಆಟಗಾರರಾದರೆ, ಬಾಬರ್ ಅಜಮ್ 3 ಬಾರಿ, ಹಾಗೂ ಇತರ ಕೆಲವು ಆಟಗಾರರು ಈ ಪ್ರಶಸ್ತಿಯನ್ನು ಎರಡು ಬಾರಿ ಗೆದ್ದಿದ್ದಾರೆ.
ಜಸ್ಪ್ರೀತ್ ಬುಮ್ರಾ (ಭಾರತ)
ಶ್ರೇಯಸ್ ಅಯ್ಯರ್ (ಭಾರತ)
ಶಕೀಬ್ ಅಲ್ ಹಸನ್ (ಬಾಂಗ್ಲಾದೇಶ)
ಕಮಿಂದು ಮೆಂಡಿಸ್ (ಶ್ರೀಲಂಕಾ)
ಆಶ್ಚರ್ಯಕರ ಸಂಗತಿ ಎಂದರೆ ಭಾರತದ ದಿಗ್ಗಜ ಆಟಗಾರ ವಿರಾಟ್ ಕೊಹ್ಲಿ ಈ ಪ್ರಶಸ್ತಿಯನ್ನು ಕೇವಲ ಒಮ್ಮೆ ಮಾತ್ರ ಗೆದ್ದಿದ್ದಾರೆ.
August 12, 2025 8:12 PM IST