Last Updated:
ಮೊಹಮ್ಮದ್ ಅಬ್ಬಾಸ್ ನ್ಯೂಜಿಲೆಂಡ್ ಪರ ಚೊಚ್ಚಲ ಏಕದಿನ ಪಂದ್ಯದಲ್ಲಿ 24 ಎಸೆತಗಳಲ್ಲಿ ಅರ್ಧಶತಕ ಸಿಡಿಸಿ ದಾಖಲೆ ಬರೆದರು. ನ್ಯೂಜಿಲೆಂಡ್ 344 ರನ್ ಗಳಿಸಿ ಪಾಕಿಸ್ತಾನವನ್ನು 271 ರನ್‌ಗಳಿಗೆ ಆಲೌಟ್ ಮಾಡಿತು.
ಪಾಕಿಸ್ತಾನ ಮೂಲದ ಮೊಹಮ್ಮದ್ ಅಬ್ಬಾಸ್ (Muhammad Abbas) ನ್ಯೂಜಿಲೆಂಡ್ (New Zealand) ಪರ ತಮ್ಮ ಮೊದಲ ಏಕದಿನ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿದರು. ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಅಬ್ಬಾಸ್ 26 ಎಸೆತಗಳಲ್ಲಿ 52 ರನ್ ಗಳಿಸಿದ್ದರು. ನ್ಯೂಜಿಲೆಂಡ್ ತಂಡವು 50 ಓವರ್‌ಗಳಲ್ಲಿ 9 ವಿಕೆಟ್‌ಗಳ ನಷ್ಟಕ್ಕೆ 344 ರನ್‌ಗಳನ್ನು ಗಳಿಸಿತು. ನ್ಯೂಜಿಲೆಂಡ್‌ನ ಅಗ್ರ ಕ್ರಮಾಂಕ ಆರಂಭದಲ್ಲೇ ಕುಸಿದಿತ್ತು. ತಂಡವು 50 ರನ್‌ಗಳ ಅಂತರದಲ್ಲಿ ಮೂರು ವಿಕೆಟ್‌ಗಳನ್ನು ಕಳೆದುಕೊಂಡಿತು. ಇದರ ನಂತರ, ಮಾರ್ಕ್ ಚಾಪ್‌ಮನ್ (Mark Chapman) ಮತ್ತು ಡ್ಯಾರಿಲ್ ಮಿಚೆಲ್ 199 ರನ್‌ಗಳ ಜೊತೆಯಾಟ ನಿಡಿದರು. ಮಿಚೆಲ್ 76 ರನ್ ಗಳಿಸಿ ಔಟಾದರು, ಆದರೆ ಚಾಪ್ಮನ್ ಶತಕ ಗಳಿಸಿದರು. ಅವರು 111 ಎಸೆತಗಳಲ್ಲಿ 132 ರನ್ ಗಳಿಸಿದರು.
24 ಎಸೆತಗಳಲ್ಲಿ ಅರ್ಧಶತಕ
ಆದರೆ ಕೊನೆಯಲ್ಲಿ ಅಬ್ಬರಿಸಿದ ಮುಹಮ್ಮದ್ ಅಬ್ಬಾಸ್ 24 ಎಸೆತಗಳಲ್ಲಿ ಅರ್ಧಶತಕ ಗಳಿಸಿದರು ಮತ್ತು ತಮ್ಮ ಚೊಚ್ಚಲ ಪಂದ್ಯದಲ್ಲೇ 25 ಅಥವಾ ಅದಕ್ಕಿಂತ ಕಡಿಮೆ ಎಸೆತಗಳಲ್ಲಿ ಅರ್ಧಶತಕ ಗಳಿಸಿದ ವಿಶ್ವದ ಮೊದಲ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಇದಕ್ಕೂ ಮೊದಲು ಈ ದಾಖಲೆ ಭಾರತದ ಕೃನಾಲ್ ಪಾಂಡ್ಯ ಹೆಸರಿನಲ್ಲಿತ್ತು, ಅವರು ಚೊಚ್ಚಲ ಪಂದ್ಯದಲ್ಲೇ 26 ಎಸೆತಗಳಲ್ಲಿ ವೇಗದ ಅರ್ಧಶತಕ ಗಳಿಸಿದ್ದರು. ಅಲೆಕ್ ಅಥಾನಾಸಿಯಸ್ ಕೂಡ 26 ಎಸೆತಗಳಲ್ಲಿ ಈ ಸಾಧನೆ ಮಾಡಿದರು. ಇಶಾನ್ ಕಿಶನ್ 33 ಎಸೆತಗಳಲ್ಲಿ ಅರ್ಧಶತಕ ಸಿಡಿಸಿ ಟಾಪ್ 4 ಸ್ಥಾನದಲ್ಲಿದ್ದರು.
ಇದನ್ನೂ ಓದಿ: ಸಿಎಸ್ಕೆಗೆ ಅತಿ ದೊಡ್ಡ ಸೋಲು, ಧೋನಿಯಿಂದ ಹೊಸ ಮೈಲುಗಲ್ಲು! RCB vs CSK ಪಂದ್ಯದಲ್ಲಿ ಈ 8 ದಾಖಲೆ ಬ್ರೇಕ್
22ರನ್‌ಗಳ ಅಂತರದಲ್ಲಿ 6 ವಿಕೆಟ್
ಚಾಪ್ಮನ್ ಶತಕ(132), ಡೇರಿಲ್ ಮಿಚೆಲ್ (76) ಹಾಗೂ ಮೊಹಮ್ಮದ್ ಅಬ್ಬಾಸ್ (52) ಅರ್ಧಶತಕ ಸಿಡಿಸಿ 344ರನ್‌ಗಳ ಬೃಹತ್ ಮೊತ್ತ ದಾಖಲಿಸಿತ್ತು. ಈ ಗುರಿಯನ್ನ ಬೆನ್ನಟ್ಟಿದ ಪಾಕಿಸ್ತಾನ ತಂಡ 44.1 ಓವರ್‌ಗಳಲ್ಲಿ 271 ರನ್‌ಗಳಿಗೆ ಆಲೌಟ್ ಆಗುವ ಮೂಲಕ 73 ರನ್ಗಳಿಂದ ಸೋಲು ಕಂಡಿತು. ಆರಂಭಿಕರಾದ ಉಸ್ಮಾನ್ ಖಾನ್ ಮತ್ತು ಅಬ್ದುಲ್ಲಾ ಶಫೀಕ್ ಮೊದಲ ವಿಕೆಟ್‌ಗೆ 83 ರನ್ ಸೇರಿಸಿದರು. ಇವರ ನಂತರ ಬಾಬರ್ ಮತ್ತು ಮೊಹಮ್ಮದ್ ರಿಜ್ವಾನ್ ಮೂರನೇ ವಿಕೆಟ್‌ಗೆ 76 ರನ್ ಸೇರಿಸಿದರು. ನಾಲ್ಕನೇ ವಿಕೆಟ್ ಬಾಬರ್ ಮತ್ತು ಸಲ್ಮಾನ್ ಆಘಾ 85 ರನ್‌ಗಳನ್ನು ಸೇರಿಸಿದರು. 39ನೇ ಓವರ್ ವೇಳೆಗೆ ಪಾಕಿಸ್ತಾನದ ಮೂರು ವಿಕೆಟ್‌ಗೆ 249 ರನ್‌ಗಳಿಸಿತ್ತು. ಆದರೆ ರಿಜ್ವಾನ್ ರನ್ ಔಟ್ ಆಗುತ್ತಿದ್ದಂತೆ ಪಾಕಿಸ್ತಾನ ಮುಂದಿನ 22 ರನ್‌ಗಳ ಅಂತರದಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 271ಕ್ಕೆ ಸರ್ವಪತನ ಕಂಡಿತು. ಬಾಬರ್ 78, ಸಲ್ಮಾನ್ ಆಘಾ 58 ರನ್ಗಳಿಸಿ ತಂಡದ ಗರಿಷ್ಠ ಸ್ಕೋರರ್ ಎನಿಸಿಕೊಂಡರು.
ದಿಢೀರ್ ಕುಸಿತ
ಬಾಬರ್-ಅಘಾ ಇಬ್ಬರು ಅದ್ಭುತ ಆಟದ ಮೂಲಕ ಪಂದ್ಯವನ್ನ ಕಸಿದುಕೊಳ್ಳುತ್ತಿದ್ದರು. ಈ ವೇಳೆ ನ್ಯೂಜಿಲೆಂಡ್ ನಾಯಕ ಮೈಕೆಲ್ ಬ್ರೇಸ್‌ವೆಲ್ ಮತ್ತೊಮ್ಮೆ ಚೆಂಡನ್ನು ತಮ್ಮ ಸ್ಟ್ರೈಕ್ ಬೌಲರ್‌ಗಳಾದ ವಿಲ್ ಒ’ರೂರ್ಕ್ ಮತ್ತು ಜಾಕೋಬ್ ಡಫಿಗೆ ಹಸ್ತಾಂತರಿಸಿದರು. ಒ’ರೂರ್ಕೆ ಅವರ ಶಾರ್ಟ್ ಬಾಲ್‌ಗೆ ಬಿಗ್ ಶಾಟ್ ಹೊಡೆಯುವ ಮೂಲಕ ಬಾಬರ್ ಔಟ್ ಆದರು. ಅ ನಂತರದ ಓವರ್ನಲ್ಲಿ ಡಫಿ ತೈಬ್ ತಾಹಿರ್ (1) ಅವರನ್ನು ರನೌಟ್ ಮಾಡಿದರು, ನಂತರದ ಎಸೆತದಲ್ಲಿ ಇರ್ಫಾನ್ ಖಾನ್ ಅವರನ್ನು ಬೌಲ್ಡ್ ಮಾಡಿ 3 ವಿಕೆಟ್ ಇದ್ದದ್ದನ್ನ 6ಕ್ಕೆ ಕೊಂಡೊಯ್ದರು. ಇದಾದ ನಂತರ ಪಾಕಿಸ್ತಾನ ಪಂದ್ಯಕ್ಕೆ ವಾಪಸ್ ಮರಳುವಲ್ಲಿ ವಿಫಲವಾಯಿತು. ಎರಡನೇ ಪಂದ್ಯ ಬುಧವಾರ ಹ್ಯಾಮಿಲ್ಟನ್‌ನಲ್ಲಿ ನಡೆಯಲಿದೆ.
ಇದನ್ನೂ ಓದಿ: ಸಿಎಸ್ಕೆಗೆ ಅತಿ ದೊಡ್ಡ ಸೋಲು, ಧೋನಿಯಿಂದ ಹೊಸ ಮೈಲುಗಲ್ಲು! RCB vs CSK ಪಂದ್ಯದಲ್ಲಿ ಈ 8 ದಾಖಲೆ ಬ್ರೇಕ್
ಚೊಚ್ಚಲ ಪಂದ್ಯದಲ್ಲೇ ಅತಿ ವೇಗದ ಅರ್ಧಶತಕ
24 ಎಸೆತಗಳು – ಮುಹಮ್ಮದ್ ಅಬ್ಬಾಸ್ ನ್ಯೂಜಿಲೆಂಡ್ ವಿರುದ್ಧ ಪಾಕಿಸ್ತಾನ, 2025*
26 ಎಸೆತಗಳು – ಕೃನಾಲ್ ಪಾಂಡ್ಯ ಭಾರತ vs ಇಂಗ್ಲೆಂಡ್, 2021
26 ಎಸೆತಗಳು – ಅಲಿಕ್ ಅಥನಾಸೆ ವೆಸ್ಟ್ ಇಂಡೀಸ್ ವಿರುದ್ಧ ಯುಎಇ, 2023
33 ಎಸೆತಗಳು – ಇಶಾನ್ ಕಿಶನ್ ಭಾರತ vs ಶ್ರೀಲಂಕಾ 2021
March 29, 2025 6:08 PM IST
Muhammad Abbas: ಏಕದಿನದಲ್ಲಿ ವೇಗದ ಅರ್ಧಶತಕ ಸಿಡಿಸಿ ವಿಶ್ವದಾಖಲೆ! ಪಾಕಿಸ್ತಾನ ತಂಡಕ್ಕೆ ವಿಲನ್ ಆದ ಪಾಕ್ನಲ್ಲಿ ಹುಟ್ಟಿದ ಕ್ರಿಕೆಟಿಗ