IPL 2025: RCB ವಿರುದ್ಧದ ಪಂದ್ಯಕ್ಕೂ ಮುನ್ನ CSKಗೆ ಬಿಗ್ ಶಾಕ್! 13 ಕೋಟಿಯ ಸ್ಟಾರ್ ಬೌಲರ್ ಪಂದ್ಯದಿಂದ ಔಟ್! | Matheesha Pathirana Injury Benefits RCB Big Setback for CSK

IPL 2025: RCB ವಿರುದ್ಧದ ಪಂದ್ಯಕ್ಕೂ ಮುನ್ನ CSKಗೆ ಬಿಗ್ ಶಾಕ್! 13 ಕೋಟಿಯ ಸ್ಟಾರ್ ಬೌಲರ್ ಪಂದ್ಯದಿಂದ ಔಟ್! | Matheesha Pathirana Injury Benefits RCB Big Setback for CSK

Last Updated:

ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಹಾಗೂ ಚೆನ್ನೈ ಸೂಪರ್ ಕಿಂಗ್ಸ್ (CSK) ನಡುವಿನ ಹೈವೋಲ್ಟೇಜ್ ಪಂದ್ಯ ನಡೆಯಲಿದೆ. ಈ ಪಂದ್ಯದಲ್ಲಿ ಸಿಎಸ್ ತಂಡದ ಸ್ಟಾರ್ ಬೌಲರ್ ಅಲಭ್ಯರಾಗಲಿದ್ದಾರೆ ಎನ್ನಲಾಗಿದೆ.

ಸಿಎಸ್‌ಕೆಸಿಎಸ್‌ಕೆ
ಸಿಎಸ್‌ಕೆ

IPL 2025ರ 8ನೇ ಪಂದ್ಯದಲ್ಲಿ ನಾಳೆ ಅಂದ್ರೆ ಮಾರ್ಚ್ 28ರಂದು ಚೆನ್ನೈನ (Chennai) ಚೆಪಾಕ್ ನಲ್ಲಿ ಐಪಿಎಲ್‌ನ (IPL) ಸಾಂಪ್ರದಾಯಿಕ ಎದುರಾಳಿಗಳು ಎನಿಸಿಕೊಂಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಹಾಗೂ ಚೆನ್ನೈ ಸೂಪರ್ ಕಿಂಗ್ಸ್ (CSK) ನಡುವಿನ ಹೈವೋಲ್ಟೇಜ್ ಪಂದ್ಯ ನಡೆಯಲಿದೆ. ಈ ಪಂದ್ಯದಲ್ಲಿ ಸಿಎಸ್ ತಂಡದ ಸ್ಟಾರ್ ಬೌಲರ್ ಅಲಭ್ಯರಾಗಲಿದ್ದು ಆರ್‌ಸಿಬಿಗೆ ಲಾಭವಾಗಲಿದೆ ಎನ್ನಲಾಗಿದೆ.

ಮತೀಶ ಪತಿರಾನ ಔಟ್

ಚೆನ್ನೈನ ಚೆಪಾಕ್‌ನಲ್ಲಿ ನಡೆಯಲಿರುವ ಈ ಪಂದ್ಯಕ್ಕೂ ಮುನ್ನ ಚೆನ್ನೈ ತಂಡ ದೊಡ್ಡ ಹಿನ್ನಡೆ ಉಂಟಾಗಿದೆ. ಏಕೆಂದರೆ ಚೆನ್ನೈ ತಂಡದ ಸ್ಟಾರ್ ಬೌಲರ್ ಗಾಯದ ಕಾರಣ ಪಂದ್ಯದಿಂದ ಹೊರಗುಳಿದಿದ್ದಾರೆ. ಆ ಆಟಗಾರ ಬೇರೆ ಯಾರೂ ಅಲ್ಲ ಅವರು ಮತೀಶ ಪತಿರಾನ. ಮುಂಬೈ ಇಂಡಿಯನ್ಸ್ ವಿರುದ್ಧದ ಸಿಎಸ್‌ಕೆಯ ಮೊದಲ ಪಂದ್ಯದಲ್ಲಿಯೂ ಮತೀಶ ಪತಿರಾನ ಆಡಲು ಸಾಧ್ಯವಾಗಲಿಲ್ಲ. ಅದಾದ ನಂತರ, ಅವರು ಈಗ ಗಾಯದ ಕಾರಣದಿಂದಾಗಿ ಚೆನ್ನೈನಲ್ಲಿ ನಡೆಯುವ ಋತುವಿನ ಎರಡನೇ ಪಂದ್ಯವನ್ನು ತಪ್ಪಿಸಿಕೊಳ್ಳುವ ಸಾಧ್ಯತೆಯಿದೆ.

ಗಾಯದಿಂದ ತಂಡದಿಂದ ಹೊರಗುಳಿದ ಮತೀಶ ಪತಿರಾನ

ಇಂಡಿಯನ್ ಎಕ್ಸ್‌ಪ್ರೆಸ್‌ನ ವರದಿಯ ಪ್ರಕಾರ, ಮತೀಶ ಪತಿರಾನ ಗಾಯದಿಂದ ಚೇತರಿಸಿಕೊಳ್ಳುತ್ತಿದ್ದಾರೆ ಹಾಗಾಗಿ ಅವರು ಆರ್‌ಸಿಬಿ ವಿರುದ್ಧ ಆಡುವ ನಿರೀಕ್ಷೆಯಿಲ್ಲ ಎಂದು ಸ್ಟೀಫನ್ ಫ್ಲೆಮಿಂಗ್ ಹೇಳಿದ್ದಾರೆ. ಆದ್ದರಿಂದ, ಚೆನ್ನೈನಲ್ಲಿ ನಡೆಯಲಿರುವ ಈ ಪಂದ್ಯಕ್ಕೆ ಮತೀಶ ಪತಿರಾನ ಲಭ್ಯವಿರುವುದಿಲ್ಲ ಎಂದು ಸಿಎಸ್‌ಕೆ ತಂಡದ ಮುಖ್ಯ ತರಬೇತುದಾರ ಅಧಿಕೃತವಾಗಿ ಸ್ಪಷ್ಟಪಡಿಸಿದ್ದಾರೆ. ವಿಶೇಷ ಅಂದ್ರೆ, ಕೋಚ್ ಫ್ಲೆಮಿಂಗ್ ಮತೀಶ ಪತಿರಾನ ಅವರ ಗಾಯದ ಸ್ವರೂಪದ ಎಷ್ಟು ತೀವ್ರವಾಗಿದೆ ಎಂದು ತಿಳಿಸಿಲ್ಲ.

2022ರಲ್ಲಿ ಪಾದಾರ್ಪಣೆ ಮಾಡಿದ್ದ ಪತಿರಣಾ

2022 ರಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ಐಪಿಎಲ್‌ಗೆ ಪಾದಾರ್ಪಣೆ ಮಾಡಿದಾಗಿನಿಂದ ಮತೀಶ ಪತಿರಾನ ಚೆನ್ನೈ ಸೂಪರ್ ಕಿಂಗ್ಸ್ ಪರ ಪ್ರಮುಖ ವೇಗದ ಬೌಲರ್ ಆಗಿದ್ದಾರೆ. ಮೊದಲ ಪಂದ್ಯದಲ್ಲಿ ಸಿಎಸ್‌ಕೆ ಸೋತರೂ ಕೂಡ ಮತೀಶ ಪತಿರಾನ 24 ರನ್‌ಗಳಿಗೆ 2 ವಿಕೆಟ್‌ ಪಡೆದು ಮಿಂಚಿದ್ದರು.

ಸಿಎಸ್‌ಕೆ ಪರ ಪ್ರಮುಖ ಬೌಲರ್ ಆಗಿರುವ ಮತೀಶ ಪತಿರಾನ

ಶ್ರೀಲಂಕಾದ ಬೌಲರ್ 2023 ರಲ್ಲಿ 12 ಪಂದ್ಯಗಳಿಂದ 19 ವಿಕೆಟ್‌ಗಳನ್ನು ಕಬಳಿಸಿದರು ಮತ್ತು ಸಿಎಸ್‌ಕೆ ಪ್ರಶಸ್ತಿ ಅಭಿಯಾನದಲ್ಲಿ ಪ್ರಮುಖ ಪಾತ್ರ ವಹಿಸಿದರು. ಮತೀಶ ಪತಿರಾನ 2024 ರ ಐಪಿಎಲ್‌ನಲ್ಲಿ ಕೇವಲ ಆರು ಪಂದ್ಯಗಳಲ್ಲಿ 13 ವಿಕೆಟ್‌ಗಳನ್ನು ಕಬಳಿಸುವ ಮೂಲಕ ತಮ್ಮ ಅದ್ಭುತ ಫಾರ್ಮ್ ಅನ್ನು ತೋರಿಸಿದ್ದರು.

ಮುಂಬೈ ವಿರುದ್ಧ ಬೆಸ್ಟ್ ಬೌಲಿಂಗ್

ಕಳೆದ ಮೂರು ಋತುಗಳಲ್ಲಿ ಪತಿರಣ ಸಿಎಸ್‌ಕೆ ಪರ 20 ಪಂದ್ಯಗಳನ್ನು ಆಡಿದ್ದು, 7.68 ರ ಎಕಾನಮಿ ದರದಲ್ಲಿ 34 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಐಪಿಎಲ್ 2024 ರಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ 28 ರನ್ ಗಳಿಗೆ 4 ವಿಕೆಟ್ ಪಡೆದಿರುವುದು ಅವರ ಅತ್ಯುತ್ತಮ ಪ್ರದರ್ಶನವಾಗಿತ್ತು.