Asia Cup: ಅಂದು ಆಪರೇಷನ್ ಸಿಂದೂರ, ಇಂದು ಆಪರೇಷನ್ ತಿಲಕ! ಪಾಕಿಗಳಿಗೆ ತಕ್ಕ ಉತ್ತರ ಕೊಟ್ಟಿದ್ದೇವೆಂದ ಬಿಸಿಸಿಐ ಕಾರ್ಯದರ್ಶಿ| Operation Tilak: BCCI Secretary Devajit Saikia Hails team india’s ‘Befitting Reply’ to Pakistan | ಕ್ರೀಡೆ

Asia Cup: ಅಂದು ಆಪರೇಷನ್ ಸಿಂದೂರ, ಇಂದು ಆಪರೇಷನ್ ತಿಲಕ! ಪಾಕಿಗಳಿಗೆ ತಕ್ಕ ಉತ್ತರ ಕೊಟ್ಟಿದ್ದೇವೆಂದ ಬಿಸಿಸಿಐ ಕಾರ್ಯದರ್ಶಿ| Operation Tilak: BCCI Secretary Devajit Saikia Hails team india’s ‘Befitting Reply’ to Pakistan | ಕ್ರೀಡೆ

Last Updated:

ಭಾರತ ಫೈನಲ್​​ನಲ್ಲಿ ಪಾಕಿಸ್ತಾವನ್ನ ಮಣಿಸಿ ಚಾಂಪಿಯನ್ ಆಗುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿ ಭಾರತ ಗೇಮ್​ ಫೀಲ್ಡ್​​ನಲ್ಲೂ ಆಫರೇಷನ್ ಸಿಂಧೂರವನ್ನ ಯಶಸ್ವಿಗೊಳಿಸಿದೆ. ಅಂದು ಗಡಿಯಾಚೆ, ಇಂದು ಕ್ರಿಕೆಟ್​ ಮೈದಾನದಲ್ಲಿ, ಎರಡೂ ಫಲಿತಾಂಶ ಒಂದೇ ಭಾರತಕ್ಕೆ ಗೆಲುವು ಸಿಕ್ಕಿದೆ ಎಂದು ಟ್ವೀಟ್ ಮಾಡಿದ್ದರು.

 ಏಷ್ಯಾಕಪ್ ಗೆದ್ದ ಭಾರತ ಏಷ್ಯಾಕಪ್ ಗೆದ್ದ ಭಾರತ
ಏಷ್ಯಾಕಪ್ ಗೆದ್ದ ಭಾರತ

ಭಾನುವಾರ ನಡೆದ ಏಷ್ಯಾ ಕಪ್ 2025ರ Asia Cup) ಫೈನಲ್ ಪಂದ್ಯದಲ್ಲಿ ಭಾರತ ಕ್ರಿಕೆಟ್ ತಂಡ ಪಾಕಿಸ್ತಾನವನ್ನು (India vs Pakistan) ಮಣಿಸಿ ಏಷ್ಯಾಕಪ್ ಟ್ರೋಫಿ ಎತ್ತಿ ಹಿಡಿದಿದೆ. ಟೀಮ್ ಇಂಡಿಯಾ 19.4 ಓವರ್‌ಗಳಲ್ಲಿ 147 ರನ್‌ಗಳ ಗುರಿಯನ್ನು ತಲುಪಿ ಪಾಕಿಸ್ತಾನಕ್ಕೆ ಹೀನಾಯ ಸೋಲುಣಿಸಿತು. ಭಾರತ ತಂಡ ಚಾಂಪಿಯನ್ ಆದರೂ, ಪಾಕಿಸ್ತಾನದ ಗೃಹ ಸಚಿವ ಮತ್ತು ಎಸಿಸಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಅವರಿಂದ ಟ್ರೋಫಿಯನ್ನು ಸ್ವೀಕರಿಸಲು ನಿರಾಕರಿಸಿತು. ಇದರಿಂದ ಪಾಕಿಸ್ತಾನ ಮತ್ತೊಮ್ಮೆ ಜಾಗತಿಕವಾಗಿ ಅವಮಾನಕ್ಕೊಳಗಾಗಿದೆ. ಭಾರತ ಈ ಗೆಲುವನ್ನು ಆಪರೇಷನ್ ತಿಲಕ ಎಂದು ಭಾರತೀಯ ಸೇನೆಯ ಆಪರೇಷನ್ ಸಿಂಧೂರಕ್ಕೆ ಹೋಲಿಕೆ ಮಾಡಿದೆ.

ಭಾರತ ಫೈನಲ್​​ನಲ್ಲಿ ಪಾಕಿಸ್ತಾವನ್ನ ಮಣಿಸಿ ಚಾಂಪಿಯನ್ ಆಗುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿ ಭಾರತ ಗೇಮ್​ ಫೀಲ್ಡ್​​ನಲ್ಲೂ ಆಫರೇಷನ್ ಸಿಂಧೂರವನ್ನ ಯಶಸ್ವಿಗೊಳಿಸಿದೆ. ಅಂದು ಗಡಿಯಾಚೆ, ಇಂದು ಕ್ರಿಕೆಟ್​ ಮೈದಾನದಲ್ಲಿ, ಎರಡೂ ಫಲಿತಾಂಶ ಒಂದೇ ಭಾರತಕ್ಕೆ ಗೆಲುವು ಸಿಕ್ಕಿದೆ ಎಂದು ಟ್ವೀಟ್ ಮಾಡಿದ್ದರು.

ಈ ಟ್ವೀಟ್​ ಬಗ್ಗೆ ಮಾತನಾಡಿದ ಬಿಸಿಸಿಐ ಕಾರ್ಯದರ್ಶಿ ಮೊಹ್ಶಿನ್ ನಖ್ವಿ, ಪ್ರಧಾನಮಂತ್ರಿ ಮೋದಿಯವರ ಟ್ವೀಟ್ ನೋಡಿ ಖುಷಿಯಾಗಿದೆ. ಮೊದಲು ಭಾರತೀಯ ಸೇನೆಯಿಂದ ಆಪರೇಷನ್ ಸಿಂದೂರ ಆಗಿತ್ತು,ಈಗ ಅದು ಆಪರೇಷನ್ ತಿಲಕ್ ಆಗಿದೆ. ಈ ವಿಜಯಗಳು ದುಷ್ಟ ದೇಶದ ಕೆಲವು ಜನರು ಮಾಡಿದ ಎಲ್ಲಾ ಅಸಂಬದ್ಧ ಚಟುವಟಿಕೆಗಳಿಗೆ ಇದು ಸೂಕ್ತ ಉತ್ತರವಾಗಿದೆ ಎಂದು ತಿಳಿಸಿದ್ದಾರೆ.

ನಖ್ವಿಯಿಂದ ಟ್ರೋಫಿ ಸ್ವೀಕರಿಸದ ಭಾರತ

ದುಬೈನಲ್ಲಿ ನಡೆದ 2025 ರ ಏಷ್ಯಾಕಪ್ ಫೈನಲ್‌ನಲ್ಲಿ ಭಾರತ ಪಾಕಿಸ್ತಾನವನ್ನು ಸೋಲಿಸಿ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ, ಭಾರತೀಯ ತಂಡವು ಟ್ರೋಫಿ ಮತ್ತು ಪದಕಗಳನ್ನು ಸ್ವೀಕರಿಸಲು ನಿರಾಕರಿಸಿತು. ಕಾರಣವೆಂದರೆ ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಅಧ್ಯಕ್ಷ ಮೊಹ್ಸಿನ್ ನಖ್ವಿ ಟ್ರೋಫಿಯನ್ನು ಪ್ರದಾನ ಮಾಡಬೇಕಾಗಿತ್ತು.

ಭಾರತದ ವಿರುದ್ಧ ಯುದ್ಧ ಸಾರಿದ ಯಾರಿಂದಲೂ ಟ್ರೋಫಿಯನ್ನು ಸ್ವೀಕರಿಸಲು ಸಾಧ್ಯವಿಲ್ಲ ಎಂದು ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ತಿಳಿಸಿದ್ದಾರೆ. ಸಮಾರಂಭದಲ್ಲಿ ಪಾಕಿಸ್ತಾನ ಸರ್ಕಾರದ ಸಚಿವನಾಗಿರುವ ಮೊಹ್ಸಿನ್ ನಖ್ವಿ ಉಪಸ್ಥಿತಿಯ ಬಗ್ಗೆ ಭಾರತೀಯ ಆಟಗಾರರು ಅಸಮಾಧಾನಗೊಂಡಿದ್ದರು. ಭಾರತ ಅವರ ಉಪಸ್ಥಿತಿಯನ್ನು ತೀವ್ರವಾಗಿ ಆಕ್ಷೇಪಿಸಿ, ಅವರನ್ನು ಹೊರಹೋಗುವಂತೆ ಒತ್ತಾಯಿಸಿತು. ಆದರೆ ನಖ್ವಿ ತಾವೇ ಪ್ರಶಸ್ತಿ ನೀಡುವುದಾಗಿ ಪಟ್ಟು ಹಿಡಿದರು. ಟೀಮ್ ಇಂಡಿಯಾ ಕೂಡ ತಮ್ಮ ನಿಲುವಿಗೆ ಬದ್ಧರಾಗಿ, ಪ್ರಶಸ್ತಿ ಸ್ವೀಕರಿಸಲಿಲ್ಲ. ಕೊನೆಗೆ ಕೋಪಗೊಂಡ ನಖ್ವಿ, ಟ್ರೋಫಿ ಮತ್ತು ಮೆಡಲ್​ಗಳನ್ನ ತಗೆದುಕೊಂಡು ಹೋದರು.

ಬಿಸಿಸಿಐ ಈ ಕ್ರಮವನ್ನು ಖಂಡಿಸಿದ್ದು, ನವೆಂಬರ್‌ನಲ್ಲಿ ದುಬೈನಲ್ಲಿ ನಡೆಯಲಿರುವ ಐಸಿಸಿ ಸಮ್ಮೇಳನದಲ್ಲಿ ಭಾರತ ಈ ವಿಷಯದ ಬಗ್ಗೆ ಬಲವಾದ ಪ್ರತಿಭಟನೆ ನಡೆಸಲಿದೆ ಎಂದು ಹೇಳಿದೆ. ಮೊಹ್ಸಿನ್ ನಖ್ವಿ ಶೀಘ್ರದಲ್ಲೇ ಟ್ರೋಫಿ ಮತ್ತು ಪದಕವನ್ನು ಭಾರತಕ್ಕೆ ಹಿಂದಿರುಗಿಸುತ್ತಾರೆ ಎಂದು ದೇವಜಿತ್ ಸೈಕಿಯಾ ಆಶಿಸಿದ್ದಾರೆ.

ಪಂದ್ಯದ ಹೈಲೈಟ್ಸ್

ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡ ಭಾರತ, ಪಾಕಿಸ್ತಾನ ತಂಡವನ್ನ 146ಕ್ಕೆ ಆಲೌಟ್ ಮಾಡಿತು. ಶಾಹಿದ್‌ಜಾದಾ ಫರ್ಹಾನ್ ಮತ್ತು ಫಖರ್ ಜಮಾನ್ ಅವರ ನೆರವಿನಿಂದ ಒಂದು ಹಂತದಲ್ಲಿ 113/1 ರನ್ ಗಳಿಸಿತು. ಶಾಹಿದ್‌ಜಾದಾ ಫರ್ಹಾನ್ 57 ರನ್ ಗಳಿಸಿದರು ಮತ್ತು ಫಖರ್ ಜಮಾನ್ 46 ರನ್ ಗಳಿಸಿದರು. ಆದರೆ ಭಾರತೀಯ ಬೌಲರ್​ಗಳ ದಾಳಿಗೆ ಉತ್ತರಿಸಲಾಗದೇ ಮಧ್ಯಮ ಕ್ರಮಾಂಕ ಪರದಾಡಿ ಕೇವಲ 146ಕ್ಕೆ ಆಲೌಟ್ ಆಯಿತು. ಕುಲದೀಪ್ ಯಾದವ್ 30 ರನ್‌ಗಳಿಗೆ 4 ವಿಕೆಟ್ ಪಡೆದರು, ವರುಣ್ ಚಕ್ರವರ್ತಿ 30 ರನ್‌ಗಳಿಗೆ 2 ವಿಕೆಟ್ , ಜಸ್ಪ್ರೀತ್ ಬುಮ್ರಾ 25 ಎಸೆತಗಳಲ್ಲಿ 2 ವಿಕೆಟ್ ಪಡೆದು ಅಕ್ಷರ್ ಪಟೇಲ್ 26ಕ್ಕೆ2 ವಿಕೆಟ್ ಪಡೆದರು.

147 ರನ್​ಗಳ ಗುರಿಯನ್ನ ಭಾರತ ಆರಂಭಿಕ ಆಘಾತದ ನಡುವೆಯೂ 19.4 ಓವರ್​ಗಳಲ್ಲಿ ತಲುಪಿತು. 20 ರನ್​ಗಳಿಗೆ ಆರಂಭಿಕ 3 ವಿಕೆಟ್ ಕಳೆದುಕೊಂಡರೂ, ತಿಲಕ್ ವರ್ಮಾ ಸಿಡಿಸಿದ ಅಜೇಯ ಅರ್ಧಶತಕ (53 ಎಸೆತಗಳಲ್ಲಿ 69, 4 ಸಿಕ್ಸರ್,3 ಬೌಂಡರಿ) ಹಾಗೂ ಸಂಜು ಸ್ಯಾಮ್ಸನ್ 24, ಶಿವಂ ದುಬೆ 33 ರನ್​ಗಳ ನೆರವಿನಿಂದ ಭಾರತ ಚಾಂಪಿಯನ್ ಆಯಿತು.