Last Updated:
ಕಳೆದ ಪಂದ್ಯದಲ್ಲಿ (ಅಕ್ಟೋಬರ್ 19) ಪರ್ತ್‌ನ ಆಪ್ಟಸ್ ಸ್ಟೇಡಿಯಂನಲ್ಲಿ ನಡೆದ ಮೊದಲ ODIಯಲ್ಲೂ ಕೊಹ್ಲಿ ಎಂಟು ಎಸೆತಗಳನ್ನಾಡಿ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದ್ದರು. ಭಾರತೀಯ ಅಭಿಮಾನಿ ಗುರುವಾರ ಅವರಿಂದ ದೊಡ್ಡ ನಿರೀಕ್ಷೆಗಳನ್ನು ಹೊಂದಿದ್ದರು. ಆದರೆ ಕೊಹ್ಲಿ ಆ ಭರವಸೆಯನ್ನು ನೆರವೇರಿಸಲು ಮತ್ತೆ ವಿಫಲರಾದರು.
ವಿರಾಟ್ ಕೊಹ್ಲಿ(Virat Kohli) ODI ಕ್ರಿಕೆಟ್‌ನಲ್ಲಿ ಸಾಲು ದಾಖಲೆಗಳನ್ನು ಮಾಡಿದ ಬ್ಯಾಟ್ಸ್‌ಮನ್. ಆದರೆ ಗುರುವಾರ (ಅಕ್ಟೋಬರ್ 23) ಅಡಿಲೇಡ್ ಓವಲ್‌ನಲ್ಲಿ ಆಸ್ಟ್ರೇಲಿಯಾ (India vs Australiaವಿರುದ್ಧದ ಎರಡನೇ ODI ಪಂದ್ಯದಲ್ಲಿ ಅವರು ನಾಲ್ಕು ಬಾಲ್‌ಗಳಲ್ಲಿ ಒಂದು ರನ್ ಗಳಿಸಲಾಗದೇ ವಿಕೆಟ್ ಒಪ್ಪಿಸಿದರು. 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ ಕೊಹ್ಲಿ, ಏಳನೇ ಓವರ್‌ನ ಐದನೇ ಬಾಲ್‌ನಲ್ಲಿ ಕ್ಷೇವಿಯರ್ ಬಾರ್ಟ್‌ಲೆಟ್ ಅವರ ಬೌಲಿಂಗ್‌ನಲ್ಲಿ LBW ಔಟ್ ಆದರು. ಇದು ಅವರ ವೃತ್ತಿಜೀವನದಲ್ಲಿ ಮೊದಲ ಬಾರಿಗೆ ಸತತ ಎರಡು ODIಗಳಲ್ಲಿ ಡಕ್ ಆಗಿರುವುದು.
ಕಳೆದ ಪಂದ್ಯದಲ್ಲಿ (ಅಕ್ಟೋಬರ್ 19) ಪರ್ತ್‌ನ ಆಪ್ಟಸ್ ಸ್ಟೇಡಿಯಂನಲ್ಲಿ ನಡೆದ ಮೊದಲ ODIಯಲ್ಲೂ ಕೊಹ್ಲಿ ಎಂಟು ಎಸೆತಗಳನ್ನಾಡಿ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದ್ದರು. ಭಾರತೀಯ ಅಭಿಮಾನಿ ಗುರುವಾರ ಅವರಿಂದ ದೊಡ್ಡ ನಿರೀಕ್ಷೆಗಳನ್ನು ಹೊಂದಿದ್ದರು. ಆದರೆ ಕೊಹ್ಲಿ ಆ ಭರವಸೆಯನ್ನು ನೆರವೇರಿಸಲಿಲ್ಲ. ಇದು ಅವರ ODI ವೃತ್ತಿಜೀವನದಲ್ಲಿ 18ನೇ ಡಕ್ ಆಗಿದೆ. ಅಡಿಲೇಡ್ ಓವಲ್‌ನಲ್ಲಿ ಕೊಹ್ಲಿಯ ಹಿಂದಿನ ಪ್ರದರ್ಶನಗಳು ಅತ್ಯುತ್ತಮವಾಗಿತ್ತು. ಈ ಮೈದಾನದಲ್ಲಿ ಎಲ್ಲಾ ಮಾದರಿಯಲ್ಲಿ ಕೊಹ್ಲಿ ಆಸ್ಟ್ರೇಲಿಯನ್ನರಿಗಿಂತಲೂ ಹೆಚ್ಚು ರನ್ಗಳಿಸಿದ್ದರು. ಆದರೆ ಇಂದು ದಯನೀಯ ವೈಫಲ್ಯ ಅನುಭವಿಸಿದರು.
ಈ ಮೈದಾನದಲ್ಲಿ ಕೊಹ್ಲಿ ಹಿಂದಿನ 2 ಪಂದ್ಯಗಳಲ್ಲಿ 2 ಶತಕ ಸಿಡಿಸಿದ್ದರು. 2015ರಲ್ಲಿ ಪಾಕಿಸ್ತಾನ ವಿರುದ್ಧ ಅವರು 107 ರನ್ ಮತ್ತು 2019ರಲ್ಲಿ ಆಸ್ಟ್ರೇಲಿಯಾ ವಿರುದ್ಧ 104 ರನ್‌ಗಳ ಶತಕಗಳನ್ನು ಗಳಿಸಿದ್ದರು. ಆದರೆ ಈ ಬಾರಿ ಅವರ ಇನ್ನಿಂಗ್ಸ್ ಕೇವಲ ನಾಲ್ಕು ಬಾಲ್‌ಗಳಲ್ಲಿ ಕೊನೆಗೊಂಡಿತು.ಭಾರತದ ODI ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಡಕ್‌ಗಳನ್ನು ಗಳಿಸಿದ ಆಟಗಾರರ ಪಟ್ಟಿಯಲ್ಲಿ ಕೊಹ್ಲಿ ಇದೀಗ ಮೂರನೇ ಸ್ಥಾನದಲ್ಲಿದ್ದಾರೆ. ಸಚಿನ್ ತೆಂಡೂಲ್ಕರ್ 463 ಪಂದ್ಯಗಳಲ್ಲಿ 20 ಡಕ್ ಆಗಿ ಅಗ್ರಸ್ಥಾನದಲ್ಲಿದ್ದಾರೆ.
ಸಚಿನ್ ತೆಂಡೂಲ್ಕರ್: 463 ಪಂದ್ಯ- 20 ಡಕ್
ಜಾವಗಲ್ ಶ್ರೀನಾಥ್: 229 ಪಂದ್ಯ- 19 ಡಕ್
ಅನಿಲ್ ಕುಂಬ್ಳೆ: 269 ಪಂದ್ಯ- 18 ಡಕ್
ಯುವರಾಜ್ ಸಿಂಗ್: 301 ಪಂದ್ಯ: 18 ಡಕ್
ವಿರಾಟ್ ಕೊಹ್ಲಿ: 304 ಪಂದ್ಯ: 18 ಡಕ್
ಆದರೆ ODI ಕ್ರಿಕೆಟ್‌ನಲ್ಲಿ ಒಟ್ಟು ಅತಿ ಹೆಚ್ಚು ಡಕ್ ಔಟ್ ಆಗಿರುವ ವಿಶ್ವದಾಖಲೆ ಶ್ರೀಲಂಕಾದ ಮಾಜಿ ನಾಯಕ ಸನತ್ ಜಯಸೂರ್ಯ ಹೆಸರಿನಲ್ಲಿದೆ. 1989ರಿಂದ ೨2011ರವರೆಗೆ 445 ಪಂದ್ಯಗಳಲ್ಲಿ ಅವರು 34 ಡಕ್ ಆಗಿದ್ದಾರೆ. ಪಾಕಿಸ್ತಾನದ ಶಾಹೀದ್ ಅಫ್ರಿದಿ 398 ಪಂದ್ಯಗಳಲ್ಲಿ 30 ಬಾರಿ ಡಕ್‌ಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ.
ವಿರಾಟ್ ಕೊಹ್ಲಿ 18 ಡಕ್ ಔಟ್ ಗಳಲ್ಲಿ ಆಸ್ಟ್ರೇಲಿಯಾ ವಿರುದ್ಧ 4, ಇಂಗ್ಲೆಂಡ್ ವಿರುದ್ಧ 4, ವೆಸ್ಟ್ ಇಂಡೀಸ್ ವಿರುದ್ಧ 3, ದಕ್ಷಿಣ ಆಫ್ರಿಕಾ ವಿರುದ್ಧ 2, ಶ್ರೀಲಂಕಾ ವಿರುದ್ಧ 2, ನ್ಯೂಜಿಲ್ಯಾಂಡ್, ಜಿಂಬಾಬ್ವೆ ಹಾಗೂ ಪಾಕಿಸ್ತಾನದ ವಿರುದ್ಧ ತಲಾ ಒಮ್ಮೆ ಡಕ್ ಔಟ್ ಆಗಿದ್ದಾರೆ. ಇದರಲ್ಲಿ12 ಬಾರಿ ಕ್ಯಾಚ್ ಔಟ್, 2 ಬಾರಿ ಎಲ್ಬಿಡಬ್ಲ್ಯೂ, 2 ಬಾರಿ ರನ್ ಔಟ್, 2 ಬಾರಿ ಬೌಲ್ಡ್ ಆಗಿದ್ದಾರೆ.
October 23, 2025 11:52 AM IST
Virat Kohli: ಕೊಹ್ಲಿ ಯಾವ ದೇಶದ ವಿರುದ್ಧ ಹೆಚ್ಚು ಡಕ್ ಔಟ್ ಆಗಿದ್ದಾರೆ? ಭಾರತದ ಪರ ಹೆಚ್ಚು ಶೂನ್ಯಕ್ಕೆ ಔಟ್ ಆದ ಟಾಪ್ 5 ಆಟಗಾರರು ಲಿಸ್ಟ್ ಇಲ್ಲಿದೆ