Last Updated:
WTC ಪಾಯಿಂಟ್‌ಗಳ ಪಟ್ಟಿಯಲ್ಲಿ ಆಸ್ಟ್ರೇಲಿಯಾ ಅಗ್ರಸ್ಥಾನದಲ್ಲಿದೆ. ಇದುವರೆಗೆ ಆಡಿದ ಮೂರು ಟೆಸ್ಟ್‌ಗಳಲ್ಲಿ ಗೆದ್ದಿದೆ, 100 ಗೆಲುವಿನ ಶೇಕಡಾವಾರು ಸಾಧಿಸಿದೆ. ಆಸ್ಟ್ರೇಲಿಯಾ 36 ಅಂಕಗಳನ್ನು ಹೊಂದಿದೆ. ನಂತರ ಶ್ರೀಲಂಕಾ ತಂಡ ಇದ್ದು, 2 ಪಂದ್ಯಗಳನ್ನಾಡಿದ್ದು, 1 ಗೆಲುವು, 1 ಡ್ರಾ ಸಾಧಿಸಿ 66.67 ಪಿಸಿಟಿಯೊಂದಿಗೆ 2ನೇ ಸ್ಥಾನದಲ್ಲಿದೆ.
ದಕ್ಷಿಣ ಆಫ್ರಿಕಾ ತಂಡ ಪಾಕಿಸ್ತಾನ ವಿರುದ್ಧದ ರಾವಲ್ಪಿಂಡಿಯಲ್ಲಿ ನಡೆದ 2ನೇ ಟೆಸ್ಟ್ ಪಂದ್ಯವನ್ನ 8 ವಿಕೆಟ್‌ಗಳಿಂದ ಗೆಲ್ಲುವ ಮೂಲಕ ಸರಣಿಯನ್ನ 1-1ರಲ್ಲಿ ಸಮಬಲಗೊಳಿಸಿದೆ. ನಾಲ್ಕನೇ ಇನ್ನಿಂಗ್ಸ್‌ನಲ್ಲಿ 73 ರನ್‌ಗಳ ಗುರಿ ಪಡೆದಿದ್ದ ಹರಿಣ ಪಡೆ, ಕೇವಲ 2 ವಿಕೆಟ್ ಕಳೆದುಕೊಳ್ಳುವ ಮೂಲಕ ಸಾಧಿಸಿತು. ಈ ಗೆಲುವಿನ ಮೂಲಕ ದಕ್ಷಿಣ ಆಫ್ರಿಕಾ 18 ವರ್ಷಗಳ ನಂತರ ಪಾಕಿಸ್ತಾನದಲ್ಲಿ ಟೆಸ್ಟ್ ಪಂದ್ಯವನ್ನು ಗೆದ್ದಿತು. ಜೊತೆಗೆ ಈ ಗೆಲುವು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (WTC) ಪಾಯಿಂಟ್ಸ್ ಟೇಬಲ್ ಅನ್ನು ಗಮನಾರ್ಹವಾಗಿ ಬದಲಾಯಿಸಿತು. ಪಾಕಿಸ್ತಾನ ಸೋಲಿನೊಂದಿಗೆ 2 ಸ್ಥಾನ ಕುಸಿತ ಕಂಡರೆ ಭಾರತಕ್ಕೆ ಲಾಭ ಪಡೆದು 4ರಿಂದ 3ನೇ ಸ್ಥಾನಕ್ಕೆ ಬಡ್ತಿಪಡೆಯಿತು.
ರಾವಲ್ಪಿಂಡಿ ಟೆಸ್ಟ್‌ನಲ್ಲಿನ ಸೋಲಿನೊಂದಿಗೆ ಪಾಕಿಸ್ತಾನ ವಿಶ್ವಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ನಲ್ಲಿ ಭಾರೀ ಕುಸಿತ ಕಂಡಿದೆ. ಈ ಹಿಂದೆ, ಪಾಕಿಸ್ತಾನ ತಂಡ ಆಸ್ಟ್ರೇಲಿಯಾ ನಂತರ 100 ಪಿಸಿಟಿಯೊಂದಿಗೆ ಎರಡನೇ ಸ್ಥಾನದಲ್ಲಿತ್ತು, ಆದರೆ ಗುರುವಾರದ ಸೋಲಿನ ನಂತರ ನಾಲ್ಕನೇ ಸ್ಥಾನಕ್ಕೆ ಕುಸಿದಿದೆ. ಪ್ರಸ್ತುತ WTC ಸೈಕಲ್ 2025-27 ರಲ್ಲಿ ಪಾಕಿಸ್ತಾನ ಎರಡು ಟೆಸ್ಟ್‌ಗಳನ್ನು ಆಡಿದ್ದು, ಒಂದನ್ನು ಗೆದ್ದು ಒಂದು ಸೋತಿದೆ. ಇದು 12 ಅಂಕಗಳು ಮತ್ತು 50 ಪ್ರತಿಶತ ಗೆಲುವಿನ ಶೇಕಡಾವಾರು ಅಂಕಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ. ರಾವಲ್ಪಿಂಡಿಯಲ್ಲಿನ ಗೆಲುವಿನೊಂದಿಗೆ, ದಕ್ಷಿಣ ಆಫ್ರಿಕಾ ಪಾಯಿಂಟ್‌ಗಳ ಪಟ್ಟಿಯಲ್ಲಿ ಖಾತೆ ತೆರೆದು ಐದನೇ ಸ್ಥಾನಕ್ಕೆ ಏರಿದೆ. ಪ್ರಸ್ತುತ ಸೈಕಲ್‌ನಲ್ಲಿ ಇದುವರೆಗೆ ದಕ್ಷಿಣ ಆಫ್ರಿಕಾ ಎರಡು ಟೆಸ್ಟ್‌ಗಳನ್ನು ಆಡಿದ್ದು, ಒಂದನ್ನು ಗೆದ್ದು ಒಂದು ಸೋತಿದೆ.
WTC ಪಾಯಿಂಟ್‌ಗಳ ಪಟ್ಟಿಯಲ್ಲಿ ಆಸ್ಟ್ರೇಲಿಯಾ ಅಗ್ರಸ್ಥಾನದಲ್ಲಿದೆ. ಇದುವರೆಗೆ ಆಡಿದ ಮೂರು ಟೆಸ್ಟ್‌ಗಳಲ್ಲಿ ಗೆದ್ದಿದೆ, 100 ಗೆಲುವಿನ ಶೇಕಡಾವಾರು ಸಾಧಿಸಿದೆ. ಆಸ್ಟ್ರೇಲಿಯಾ 36 ಅಂಕಗಳನ್ನು ಹೊಂದಿದೆ. ನಂತರ ಶ್ರೀಲಂಕಾ ತಂಡ ಇದ್ದು, 2 ಪಂದ್ಯಗಳನ್ನಾಡಿದ್ದು, 1 ಗೆಲುವು, 1 ಡ್ರಾ ಸಾಧಿಸಿ 66.67 ಪಿಸಿಟಿಯೊಂದಿಗೆ 2ನೇ ಸ್ಥಾನದಲ್ಲಿದೆ.
ರಾವಲ್ಪಿಂಡಿ ಟೆಸ್ಟ್‌ನಲ್ಲಿ ಪಾಕಿಸ್ತಾನದ ಸೋಲು ಭಾರತಕ್ಕೆ ಲಾಭವಾಗಿದೆ. ಟೀಮ್ ಇಂಡಿಯಾ 4ನೇ ಸ್ಥಾನದಿಂದ ಮೂರನೇ ಸ್ಥಾನಕ್ಕೆ ಏರಿಕೆ ಕಂಡಿದೆ. ಪ್ರಸ್ತುತ WTC ಸೈಕಲ್‌ನಲ್ಲಿ, ಭಾರತ ಇದುವರೆಗೆ ಏಳು ಟೆಸ್ಟ್‌ಗಳನ್ನು ಆಡಿದೆ, ನಾಲ್ಕು ಗೆಲುವು, 2 ಸೋಲು ಮತ್ತು ಒಂದು ಡ್ರಾ ಸಾಧಿಸಿದೆ. ಭಾರತವು 52 ಅಂಕಗಳನ್ನು ಮತ್ತು 61.90 ಪಿಸಿಟಿ ಹೊಂದಿದೆ.
ಇಂಗ್ಲೆಂಡ್ ತಂಡ 5 ಪಂದ್ಯಗಳನ್ನಾಡಿದ್ದು, ತಲಾ 2 ಗೆಲುವು, ಸೋಲಿನೊಂದಿಗೆ 43.33 ಪಿಸಿಟಿ ಯೊಂದಿಗೆ 6ರಲ್ಲಿದ್ದರೆ, ಬಾಂಗ್ಲಾದೇಶ 2 ಪಂದ್ಯಗಳನ್ನಾಡಿ 1 ಡ್ರಾ, 1 ಸೋಲಿನೊಂದಿಗೆ 16. 67 ಪಿಸಿಟಿ ಪಡೆದು 7ನೇ ಸ್ಥಾನದಲ್ಲಿದೆ. ವೆಸ್ಟ್ ಇಂಡೀಸ್ 5ಕ್ಕೆ 5 ಸೋಲು ಕಂಡಿದ್ದರೆ, ಕಿವೀಸ್ ಇನ್ನು ಒಂದು ಟೆಸ್ಟ್ ಪಂದ್ಯವನ್ನಾಡದೇ ಅಂಕಪಟ್ಟಿಯಲ್ಲಿ ಶೂನ್ಯದೊಂದಿಗೆ ಕೊನೆಯ ಸ್ಥಾನಗಳಲ್ಲಿವೆ.
October 23, 2025 6:09 PM IST
WTC Point Table: ಭಾರತಕ್ಕೆ ಒಂದು ಸ್ಥಾನ ಬಡ್ತಿ ತಂದುಕೊಟ್ಟ ಪಾಕಿಸ್ತಾನ ವಿರುದ್ಧದ ದಕ್ಷಿಣ ಆಫ್ರಿಕಾ ಗೆಲುವು! ಈಗ ಹೇಗಿದೆ ನೋಡಿ WTC ಅಂಕಪಟ್ಟಿ