Women’s ODI World Cup: ನ್ಯೂಜಿಲೆಂಡ್ ಬೌಲರ್ಸ್ ಬೆವರಿಳಿಸಿದ ಪ್ರತೀಕಾ-ಮಂಧಾನ ಜೋಡಿ; ಕಿವೀಸ್ ಪಡೆಗೆ ಸವಾಲಿನ ಗುರಿ ನೀಡಿದ ಭಾರತ / Smriti Mandhana and Pratika Rawal scored centuries as India posted big score against New Zealand in ICC Women’s ODI World Cup 2025 | ಕ್ರೀಡೆ

Women’s ODI World Cup: ನ್ಯೂಜಿಲೆಂಡ್ ಬೌಲರ್ಸ್ ಬೆವರಿಳಿಸಿದ ಪ್ರತೀಕಾ-ಮಂಧಾನ ಜೋಡಿ; ಕಿವೀಸ್ ಪಡೆಗೆ ಸವಾಲಿನ ಗುರಿ ನೀಡಿದ ಭಾರತ / Smriti Mandhana and Pratika Rawal scored centuries as India posted big score against New Zealand in ICC Women’s ODI World Cup 2025 | ಕ್ರೀಡೆ

Last Updated:

ಐಸಿಸಿ ಮಹಿಳಾ ಏಕದಿನ ವಿಶ್ವಕಪ್ 2025 ರ 24 ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಸ್ಮೃತಿ ಮಂಧಾನ ಮತ್ತು ಪ್ರತಿಕಾ ರಾವಲ್‌ ಶತಕಗಳನ್ನು ಬಾರಿಸಿ ಮಿಂಚಿದರು. ಪರಿಣಾಮ ಭಾರತ ತಂಡ ಬಿಗ್ ಸ್ಕೋರ್ ಗಳಿಸಿದೆ.

Smriti Mandhana and Pratika Rawal
Smriti Mandhana and Pratika Rawal

ನವಿ ಮುಂಬೈನ ಡಾ. ಡಿ.ವೈ ಪಾಟೀಲ್ ಸ್ಟೇಡಿಯಂನಲ್ಲಿ ಐಸಿಸಿ (ICC) ಮಹಿಳಾ ಏಕದಿನ ವಿಶ್ವಕಪ್ (World Cup) 2025 ರ 24 ಪಂದ್ಯ ನಡೆಯುತ್ತಿದೆ. ಈ ಪಂದ್ಯದಲ್ಲಿ ಭಾರತ ಮತ್ತು ನ್ಯೂಜಿಲೆಂಡ್ (India vs New Zealand) ವನಿತೆಯರ ತಂಡಗಳು ಮುಖಾಮುಖಿಯಾಗಿವೆ. ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಟೀಮ್ ಇಂಡಿಯಾ (Team India) ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದೆ. ಮಳೆಯಿಂದಾಗಿ 1 ಓವರ್ ಕಡಿತಗೊಳಿಸಿ ಪಂದ್ಯವನ್ನು 49 ಓವರ್​​ಗಳಿಗೆ ಆಡಿಸಲಾಯಿತು. ಟೀಮ್ ಇಂಡಿಯಾ ಪರ ಸ್ಟಾರ್ ಆರಂಭಿಕ ಬ್ಯಾಟರ್ಸ್ ಆದ ಸ್ಮೃತಿ ಮಂಧಾನ (Smriti Mandhana) ಮತ್ತು ಪ್ರತಿಕಾ ರಾವಲ್‌ (Pratika Rawal) ಭರ್ಜರಿ ಶತಕಗಳನ್ನು ಬಾರಿಸಿ ಮಿಂಚಿದರು. ಪರಿಣಾಮ ಭಾರತ ತಂಡ 49 ಓವರ್​ಗಳಲ್ಲಿ 3 ವಿಕೆಟ್ ಕಳೆದುಕೊಂಡು 340 ರನ್​ಗಳ ಸವಾಲಿನ ಮೊತ್ತವನ್ನು ಕಲೆ ಹಾಕಿತು. ಈ ಪಂದ್ಯವನ್ನು ನ್ಯೂಜಿಲೆಂಡ್ ವನಿತೆಯರು ಗೆಲ್ಲಲು 341 ರನ್ ಗಳಿಸಬೇಕಾಗಿದೆ.

ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತದ ಪರ ಆರಂಭಿಕ ಬ್ಯಾಟರ್ಸ್ ಸ್ಮೃತಿ ಮಂಧಾನ ಮತ್ತು ಪ್ರತಿಕಾ ರಾವಲ್‌ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಕಿವೀಸ್ ಬೌಲರ್ಸ್​ಗೆ ಬೆವರಿಳಿಸಿದ ಈ ಜೋಡಿ ಮೊದಲ ವಿಕೆಟ್​ಗೆ ದ್ವಿಶತಕದ ಜೊತೆಯಾಟವನ್ನು ಆಡಿದರು.

ಪ್ರತೀಕಾ-ಮಂಧಾನ ದ್ವಿಶತಕ ಜೊತೆಯಾಟ

ಸ್ಮೃತಿ ಮಂಧಾನ ಏಕದಿನ ವೃತ್ತಿಜೀವನದ 14ನೇ ಶತಕ ಸಿಡಿಸಿ ಮಿಂಚಿದರು. ಕೇವಲ 88 ಎಸೆತಗಳಲ್ಲಿ ತನ್ನ ಸ್ಫೋಟಕ ಶತಕವನ್ನು ಪೂರೈಸಿದ ಮಂಧಾನ ಅವರಿಗೆ ಪ್ರಸ್ತುತ ನಡೆಯುತ್ತಿರುವ ವಿಶ್ವಕಪ್‌ನಲ್ಲಿ ಇದು ಮೊದಲ ಶತಕ. ಅಲ್ಲದೆ ಸತತ ಮೂರನೇ ಪಂದ್ಯದಲ್ಲಿ 50 ರನ್​ಗಳ ಗಡಿ ದಾಟಿದ ಸ್ಮೃತಿ ಈ ಅರ್ಧಶತಕವನ್ನು ಶತಕವಾಗಿ ಪರಿವರ್ತಿಸುವಲ್ಲಿ ಯಶಸ್ವಿಯಾದರು. ಮತ್ತೊರ್ವ ಆರಂಭಿಕ ಬ್ಯಾಟರ್ ಪ್ರತಿಕಾ ರಾವಲ್ ಕೂಡ ತಮ್ಮ ವೃತ್ತಿಜೀವನದ ಎರಡನೇ ಮತ್ತು ಮೊದಲ ಏಕದಿನ ವಿಶ್ವಕಪ್‌ ಶತಕವನ್ನು ಬಾರಿಸಿ ಸಂಭ್ರಮಿಸಿದರು.

ಜೆಮಿಮಾ ರೋಡ್ರಿಗಸ್ ಅಬ್ಬರ

ಅಂತಿಮವಾಗಿ ಸ್ಮೃತಿ ಮಂಧಾನ 95 ಎಸೆತಗಳಲ್ಲಿ 10 ಬೌಂಡರಿ ಮತ್ತು 4 ಸಿಕ್ಸರ್ ನೆರವಿನಿಂದ 109 ರನ್‌ ಗಳಿಸಿ ಔಟಾದರೆ, ಪ್ರತಿಕಾ 134 ಎಸೆತಗಳಲ್ಲಿ 13 ಬೌಂಡರಿ ಮತ್ತು 2 ಸಿಕ್ಸರ್ ಸಹಾಯದಿಂದ 122 ರನ್‌ ಬಾರಿಸಿ ಅಬ್ಬರಿಸಿ ವಿಕೆಟ್ ಕಳೆದುಕೊಂಡರು. ಎರಡನೇ ವಿಕೆಟ್​ಗೆ ಜೊತೆಯಾದ ಜೆಮಿಮಾ ರೋಡ್ರಿಗಸ್ ಮತ್ತು ಪ್ರತಿಕಾ ಜೋಡಿ ರನ್ ಮಳೆ ಹರಿಸಿದರು. ಈ ಜೋಡಿ 58 ಎಸೆತಗಳಲ್ಲಿ 76 ರನ್‌ ಸಿಡಿಸಿದರು.

ಪ್ರತಿಕಾ ಔಟಾದ ಬಳಿಕ ಬಂದ ನಾಯಕಿ ಹರ್ಮನ್ಪ್ರೀತ್ ಕೌರ್ ಕೇವಲ 10 ರನ್ ಗಳಿಸಿ ಔಟಾಗಿ ನಿರಾಸೆ ಮೂಡಿಸಿದರು. ಕೊನೆಯಲ್ಲಿ ಜೆಮಿಮಾ ರೋಡ್ರಿಗಸ್ 55 ಎಸೆತಗಳಲ್ಲಿ 11 ಬೌಂಡರಿ ನೆರವಿನಿಂದ ಅಜೇಯ 76 ರನ್ ಗಳಿಸಿ ಭಾರತ ಬಿಗ್ ಸ್ಕೋರ್ ಕಲೆ ಹಾಕಲು ಕಾರಣವಾದರು. ಇತ್ತ ರಿಚಾ ಘೋಷ್ ಕೊನೆಯ ಎಸೆತದಲ್ಲಿ ಬೌಂಡರಿ ಬಾರಿಸಿದರು.