ಚಹಲ್ ತಂಗಿ ಕೇನಾ ದ್ವಿವೇದಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ, ತಮ್ಮ ಸಹೋದರ ಮಹಿಳೆಯರನ್ನು ಎಷ್ಟು ಗೌರವಿಸುತ್ತಾರೆ ಎಂಬುದನ್ನು ಅದು ಉಲ್ಲೇಖಿಸಿದ್ದಾರೆ. ಈಗ ಅಭಿಮಾನಿಗಳು ಆ ಪೋಸ್ಟ್ಗೆ ಧನಶ್ರೀ ವರ್ಮಾರನ್ನ ಲಿಂಕ್ ಮಾಡುವ ಮೂಲಕ ಈ ಪೋಸ್ಟ್ಅನ್ನ ವೈರಲ್ ಮಾಡುತ್ತಿದ್ದಾರೆ.
” ನೀವು ಮಹಿಳೆಯರನ್ನು ನಿಜವಾಗಿಯೂ ಗೌರವಿಸುವವರು, ಪ್ರತಿಯೊಬ್ಬ ಮಹಿಳೆಯನ್ನು ‘ಮೇಡಮ್’ ಎಂದು ಕರೆಯುವವರು, ತಮ್ಮ ಸುತ್ತಲಿನ ಎಲ್ಲರನ್ನೂ ಸುರಕ್ಷಿತೆಯೆ ಬಗ್ಗೆ ಸದಾ ಕಾಳಜಿ ವಹಿಸುವುದಕ್ಕೆ ನಿಮಗೆ ಧನ್ಯವಾದಗಳು. ಮತ್ತು ಜಗತ್ತು ನಿಮ್ಮ ವಿರುದ್ಧ ನಿಂತರೂ ನೀವು ಮೌನವಾಗಿರಲು ಬಯಸುವ ವ್ಯಕ್ತಿ. ನಾನು ಕೋಪಗೊಂಡು ‘ನೀವು ನಿಮ್ಮ ನೋವನ್ನ ಏಕೆ ಹೇಳುವುದಿಲ್ಲ?’ ಎಂದು ಕೇಳಿದಾಗಲೂ, ಸಮಯದೊಂದಿಗೆ ಎಲ್ಲವೂ ಉತ್ತಮಗೊಳ್ಳುತ್ತದೆ ಮತ್ತು ಮೌನ ತುಂಬಾ ಬಲವಾಗಿರುತ್ತದೆ ಎಂದು ನೀವು ಯಾವಾಗಲೂ ನನಗೆ ನೆನಪಿಸುತ್ತೀರಿ.
ನಿಮ್ಮ ಬುದ್ಧಿವಂತಿಕೆ, ಶಕ್ತಿ ಮತ್ತು ನಿಮ್ಮನ್ನೇ ನೀವೆ ಗೇಲಿ ಮಾಡುವ ಮೂಲಕ ಇತರರನ್ನು ನಗಿಸುವ ಸಾಮರ್ಥ್ಯವನ್ನು ಎಷ್ಟು ಥ್ಯಾಂಕ್ಸ್ ಹೇಳಿದರು ಸಾಲದು ಎಂದು ಬರೆದುಕೊಂಡಿದ್ದಾರೆ.
ಕಾರ್ಯಕ್ರಮದಲ್ಲಿ ನಟ ಅರ್ಜುನ್ ಬಿಜ್ಲಾನಿ ಜೊತೆ ಮಾತನಾಡಿದ ಧನಶ್ರೀ ತಮ್ಮ ಮತ್ತು ಚಹಲ್ ನಡುವಿನ ಪ್ರೀತಿ, ಮದುವೆ ಬಗ್ಗೆ ಮಾತನಾಡಿದ್ದರು. ” ಇದು ಲವ್ ಕಮ್ ಅರೇಂಜ್ಡ್ ಮ್ಯಾರೇಜ್ ಆಗಿತ್ತು. ಚಹಲ್ ಡೇಟಿಂಗ್ ಮಾಡದೆ ಮದುವೆಯಾಗಲು ಬಯಸಿದ್ದರು. ಆದರೆ ನಾನು ಆ ರೀತಿಯ ಪ್ಲಾನ್ ಹೊಂದಿರಲಿಲ್ಲ. ಚಹಲ್ ಆರಂಭದಿಂದಲೂ ತನ್ನನ್ನು ಒಪ್ಪಿಸಲು ಪ್ರಯತ್ನಿಸಿದ್ದರು, ಆದರೆ ತಾನೇ ಮನವರಿಕೆ ಮಾಡಿಕೊಳ್ಳಲು ಸಮಯ ತೆಗೆದುಕೊಂಡೆ. ಇಡೀ ಪ್ರಕ್ರಿಯೆಯಲ್ಲಿ ಅವರು ತೋರಿದ ಪ್ರೀತಿಯೊಂದ ನಾನು ಅವರ ಜೊತೆಗೆ ಮದುವೆಗೆ ಒಪ್ಪಿಕೊಂಡಿದ್ದೆ. ನಾವು ಆಗಸ್ಟ್‌ನಲ್ಲಿ ನಮ್ಮ ನಿಶ್ಚಿತಾರ್ಥ ಮಾಡಿಕೊಂಡೆವು, ನಂತರ ನಾವು ಡಿಸೆಂಬರ್‌ನಲ್ಲಿ ಮದುವೆಯಾದೆವು.
ಆ ಸಮಯದಲ್ಲಿ, ನಾನು ಅವರೊಂದಿಗೆ ಟ್ರಾವೆಲ್ ಮಾಡಿದ್ದೆ, ಇಬ್ಬರು ಒಟ್ಟಿಗೆ ಸಮಯ ಕಳೆದಿದ್ದೆವು. ಆದರೆ ಅವರ ನಡವಳಿಕೆಯಲ್ಲಿ ಸೂಕ್ಷ್ಮ ಬದಲಾವಣೆಗಳನ್ನು ನಾನು ನೋಡಲಾರಂಭಿಸಿದೆ. ಜನರು ತಾವು ಬಯಸಿದ್ದಕ್ಕಾಗಿ ಹೇಗೆ ವರ್ತಿಸುತ್ತಾರೆ ಮತ್ತು ಅದು ಸಿಕ್ಕಾಗ ಹೇಗೆ ವರ್ತಿಸುತ್ತಾರೆ ಎಂಬುದರ ನಡುವೆ ವ್ಯತ್ಯಾಸವಿದೆ ಎಂಬುದು ನನಗೆ ಅರಿವಾಯಿತು” ಎಂದು ಕಾರ್ಯಕ್ರಮದಲ್ಲಿ ಹೇಳಿಕೊಂಡಿದ್ದರು.
ಚಹಲ್ ಬದಲಾವಣೆಗಳನ್ನು ಗಮನಿಸಿದರೂ ತಾವೂ ಮದುವೆಯನ್ನು ಮುಂದುವರಿಸಲು ಬಯಸಿದೆ ಎಂದು ತಿಳಿಸಿದ್ದಾರೆ ” ಅವನು ಬದಲಾಗುತ್ತಿರುವುದನ್ನು ನಾನು ನೋಡಿದ್ದರೂ, ನಾನು ಅವನ ಮೇಲೆ ಮತ್ತು ಸಂಬಂಧದ ಮೇಲೆ ನನ್ನ ನಂಬಿಕೆ ಇಟ್ಟಿದ್ದೆ. ನನ್ನ ಸಮಸ್ಯೆ ಏನೆಂದರೆ, ನನ್ನ ಸುತ್ತಮುತ್ತಲಿನ ಜನರಿಗೆ ಹೆಚ್ಚಿನ ಅವಕಾಶಗಳನ್ನು ನೀಡುವುದನ್ನು ನಾನು ಇಷ್ಟಪಡುತ್ತೇನೆ. ಆದರೆ ಅದೇ ಕೊನೆಗೆ ನನ್ನನ್ನ ಮುಗಿಸಿತು. ನನ್ನ ಕಡೆಯಿಂದ ನನ್ನಿಂದ ಸಾಧ್ಯವಿರುವ ಎಲ್ಲವನ್ನೂ ಮಾಡಲು ಮತ್ತು ನನ್ನ ನೂರು ಪ್ರತಿಶತವನ್ನು ನೀಡಲು ಪ್ರಯತ್ನಿಸಿದೆ. ನಾನು ಯಾವಾಗಲೂ ಅವರ ಬಗ್ಗೆ ಕಾಳಜಿ ವಹಿಸುತ್ತಿದ್ದೆ ಎಂಬುದನ್ನ ಮಾತ್ರ ಖಚಿತಪಡಿಸಬಲ್ಲೆ” ಎಂದು ತಾವಿಬ್ಬರು ಬೇರ್ಪಡಲು ಚಹಲ್ ಕಾರಣ, ತಮ್ಮದೇನು ಪಾತ್ರವಿಲ್ಲ ಎಂಬ ರೀತಿಯಲ್ಲಿ ಮಾತನಾಡಿದ್ದರು.
ಈ ಹೇಳಿಕೆಗೆ ಚಹಲ್ ಸಹೋದರಿ ಟಾಂಗ್ ಕೊಡಲು ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿ ಚಹಲ್ ಮಹಿಳೆಯರನ್ನ ಗೌರವಿಸುವವರು ಎಂಬ ಅರ್ಥದಲ್ಲಿ ಬರೆದುಕೊಂಡಿದ್ದಾರೆ.
ಒಂದೆಡೆ, ಕೆನ್ನಾ ದ್ವಿವೇದಿ ಪೋಸ್ಟ್ ವೈರಲ್ ಆಗುತ್ತಿದ್ದರೆ, ಮತ್ತೊಂದೆಡೆ, ಯುಜಿ ಅವರ ಇನ್ಸ್ಟಾ ಸ್ಟೋರಿ ಕೂಡ ವೈರಲ್ ಆಗುತ್ತಿದೆ. ಚಹಲ್ ಈ ಪೋಸ್ಟ್ನಲ್ಲಿ ನ್ಯಾಯಾಲಯದ ತೀರ್ಪಿನ ಸ್ಕ್ರೀನ್ ಶಾಟ್ ಅನ್ನು ಹಂಚಿಕೊಂಡಿದ್ದಾರೆ. ಈ ತೀರ್ಪಿನಲ್ಲಿ ‘ಆರ್ಥಿಕವಾಗಿ ಸ್ವತಂತ್ರ ಇರುವ ಪತ್ನಿಯರು ತಮ್ಮ ಗಂಡಂದಿರಿಂದ ಜೀವನಾಂಶವನ್ನು ಕೇಳಲು ಸಾಧ್ಯವಿಲ್ಲ’ ಎಂದು ಬರೆಯಲಾಗಿದೆ. ಇದರೊಂದಿಗೆ ‘ ನಿಮ್ಮ ತಾಯಿ ಮೇಲೆ ಪ್ರಮಾಣ ಮಾಡಿ ಈ ನಿರ್ಧಾರದಿಂದ ಹಿಂದೆ ಸರಿಯಬೇಡಿ’ ಎಂದು ಬರೆದುಕೊಂಡಿದ್ದರು. ಆದರೆ ಸ್ವಲ್ಪ ಸಮಯದ ನಂತರ ಡಿಲೀಟ್ ಮಾಡಿದ್ದಾರೆ. ಆದರೂ ಈ ಸ್ಟೋರಿ ತಕ್ಷಣ ವೈರಲ್ ಆಗಿದೆ.
ಈ ಪೋಸ್ಟ್ ಅವರ ಪತ್ನಿ ಧನಶ್ರೀ ವರ್ಮಾ ಅವರನ್ನು ಗುರಿಯಾಗಿಸಿಕೊಂಡು ಮಾಡಿದ್ದಾರೆಯೇ ಅಥವಾ ಚಹಲ್ ನ್ಯಾಯಾಲಯದ ತೀರ್ಪನ್ನು ಮಾತ್ರ ಬೆಂಬಲಿಸಿದ್ದಾರೆಯೇ ಎಂಬ ಚರ್ಚೆಯಲ್ಲಿ ಅಭಿಮಾನಿಗಳು ತೊಡಗಿಸಿಕೊಂಡಿದ್ದಾರೆ.
October 24, 2025 4:04 PM IST