Last Updated:
ರೋಹಿತ್ ಮೊದಲ ಬಾರಿಗೆ 2007-08 ರಲ್ಲಿ ಏಕದಿನ ಸರಣಿಗಾಗಿ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿದ್ದರು, ಆದರೆ ಕೊಹ್ಲಿ ಮೊದಲ ಪ್ರವಾಸ 2011-12ರಲ್ಲಿ ಟೆಸ್ಟ್ ಸರಣಿಯೊಂದಿಗೆ ಆರಂಭವಾಗಿತ್ತು. ಇದೀಗ ಈ ಇಬ್ಬರಿಗೆ ಇದೇ ಕೊನೆಯ ಪ್ರವಾಸವಾಗಲಿದ್ದು, ಸಿಡ್ನಿ ಮೈದಾನದಲ್ಲಿ ನಡೆಯುವ ಪಂದ್ಯವೇ ಅವರ ಆಸ್ಟ್ರೇಲಿಯಾದಲ್ಲಿನ ಕೊನೆಯ ಅಂತಾರಾಷ್ಟ್ರೀಯ ಪಂದ್ಯವಾಗಲಿದೆ.
ಭಾರತದ ಲೆಜೆಂಡರಿ ಆಟಗಾರರಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ (Rohit Sharma-Virat Kohli) ಆಸ್ಟ್ರೇಲಿಯಾ ನೆಲದಲ್ಲಿ ತಮ್ಮ ಕೊನೆಯ ಪಂದ್ಯವನ್ನು ಆಡಲಿದ್ದಾರೆ. ಈಗಾಗಲೇ ಟೆಸ್ಟ್ ಕ್ರಿಕೆಟ್ ಹಾಗೂ ಅಂತಾರಾಷ್ಟ್ರೀಯ ಟಿ20ಯಿಂದ ನಿವೃತ್ತರಾಗಿರುವ ಇಬ್ಬರು ಸ್ಟಾರ್ ಕ್ರಿಕೆಟಿಗರು ಏಕದಿನ ಕ್ರಿಕೆಟ್‌ನಲ್ಲಿ ಮಾತ್ರ ಆಡುತ್ತಿದ್ದಾರೆ. ಆದರೆ 6 ತಿಂಗಳ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಮರಳಿರುವ ಈ ಜೋಡಿ ನಿರೀಕ್ಷಿತ ಪ್ರದರ್ಶನ ತೋರಿಲ್ಲ. ರೋಹಿತ್ ಕಳೆದ ಪಂದ್ಯದಲ್ಲಿ ಅರ್ಧಶತಕ ಸಿಡಿಸಿದರೂ, ಅದು ಅವರ ನೈಜ ಆಟದಂತಿರಲಿಲ್ಲ. ಇನ್ನೂ ಕೊಹ್ಲಿ ಮಾತ್ರ ಖಾಯೆಯನ್ನೇ ತೆರೆಯಲಾಗಿಲ್ಲ. ಇದೀಗ ತಮ್ಮ ವೃತ್ತಿ ಜೀವನದಲ್ಲಿ ಕಾಂಗರೂಗಳ ನೆಲದಲ್ಲಿ ಕೊನೆಯ ಪಂದ್ಯವನ್ನಾಡಲು ಸಜ್ಜಾಗುತ್ತಿದ್ದಾರೆ.
ರೋಹಿತ್ ಮೊದಲ ಬಾರಿಗೆ 2007-08 ರಲ್ಲಿ ಏಕದಿನ ಸರಣಿಗಾಗಿ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿದ್ದರು, ಆದರೆ ಕೊಹ್ಲಿ ಮೊದಲ ಪ್ರವಾಸ 2011-12ರಲ್ಲಿ ಟೆಸ್ಟ್ ಸರಣಿಯೊಂದಿಗೆ ಆರಂಭವಾಗಿತ್ತು. ಇದೀಗ ವೃತ್ತಿ ಜೀವನದ ಅಂತ್ಯದಲ್ಲಿದ್ದಾರೆ. ಮುಂದಿನ ಎರಡು ವರ್ಷಗಳ ಕಾಲ ಆಸ್ಟ್ರೇಲಿಯಾದಲ್ಲಿ ಯಾವುದೇ ಏಕದಿನ ಸರಣಿಯನ್ನು ನಿಗದಿಪಡಿಸದ ಕಾರಣ, ಈ ಜೋಡಿ ಮತ್ತೆ ಆಸ್ಟ್ರೇಲಿಯಾದಲ್ಲಿ ಭಾರತಕ್ಕಾಗಿ ಆಡುವ ಸಾಧ್ಯತೆ ಕಡಿಮೆ. ಹಾಗಾಗಿ ಇದೇ ಅವರಿಬ್ಬರಿಗೆ ಕೊನೆಯ ಆಸ್ಟ್ರೇಲಿಯಾ ಪ್ರವಾಸವಾಗಲಿದ್ದು, ನಾಳೆ ಈ ಇಬ್ಬರು ಲೆಜೆಂಡರಿ ಆಟಗಾರರು ಆಸೀಸ್ ನೆಲದಲ್ಲಿ ತಮ್ಮ ಕೊನೆಯ ಪಂದ್ಯವನ್ನಾಡಲಿದ್ದಾರೆ.
ಅಕ್ಟೋಬರ್ 23ರಂದು ನಡೆದ ಮೂರು ಪಂದ್ಯಗಳ ಸರಣಿಯ ಎರಡನೇ ಏಕದಿನ ಪಂದ್ಯದಲ್ಲಿ ರೋಹಿತ್ ಶರ್ಮಾ 97 ಎಸೆತಗಳಲ್ಲಿ 73 ರನ್ ಗಳಿಸುವ ಮೂಲಕ ಸ್ವಲ್ಪ ತಮ್ಮ ಮೇಲಿನ ಟೀಕೆಗಳಿಗೆ ತಕ್ಕಮಟ್ಟಿನ ಉತ್ತರಕೊಟ್ಟಿದ್ದರು. ಆದರೆ ಕೊಹ್ಲಿ ಎರಡೂ ಪಂದ್ಯಗಳಲ್ಲಿ ತಮ್ಮ ಖಾತೆಯನ್ನು ತೆರೆಯಲು ವಿಫಲರಾಗಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ ಸತತ 2 ಪಂದ್ಯಗಳಲ್ಲಿ ಅವರು ಖಾತೆಯನ್ನು ತೆರೆಯಲು ವಿಫಲರಾಗಿರುವುದು ಇದೇ ಮೊದಲು. ಇದು ಅವರ ಅಭಿಮಾನಿಗಳನ್ನು ಇದು ಕೊಹ್ಲಿ ಕರಿಯರ್ ಅಂತ್ಯದ ಆರಂಭವೇ ಎಂದು ಆತಂಕ ಪಡುವಂತೆ ಮಾಡಿದೆ.
ಆಸ್ಟ್ರೇಲಿಯಾ ತಂಡವು ಪ್ರಸ್ತುತ ಸರಣಿಯ ಮೊದಲ ಎರಡು ಪಂದ್ಯಗಳನ್ನು ಗೆಲ್ಲುವ ಮೂಲಕ ಸರಣಿಯನ್ನು ಈಗಾಗಲೇ ವಶಪಡಿಸಿಕೊಂಡಿದೆ, ಆದರೆ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರ ಉಪಸ್ಥಿತಿಯು ಮೂರನೇ ಏಕದಿನ ಪಂದ್ಯವನ್ನು ಕ್ರಿಕೆಟ್ ಅಭಿಮಾನಿಗಳಿಗೆ ಮಹತ್ವದ ಘಟನೆಯನ್ನಾಗಿ ಮಾಡಿದೆ. ಸಿಡ್ನಿ ಕ್ರಿಕೆಟ್ ಮೈದಾನದಲ್ಲಿರುವ ಪ್ರೇಕ್ಷಕರು ಖಂಡಿತವಾಗಿಯೂ ಈ ಇಬ್ಬರಿಂದ ಬಲವಾದ ಇನ್ನಿಂಗ್ಸ್‌ಗಳನ್ನು ನಿರೀಕ್ಷಿಸುತ್ತಾರೆ.
ಭಾರತ ತಂಡವು 0-3 ಅಂತರದ ಕ್ಲೀನ್ ಸ್ವೀಪ್ ಅನ್ನು ತಪ್ಪಿಸಲು ಬಯಸುತ್ತಿರುವುದರಿಂದ ಈ ಪಂದ್ಯವು ಮುಖ್ಯವಾಗಿದೆ, ಆದರೆ ಅಂಕಿಅಂಶಗಳು ಭಾರತ ತಂಡದ ಪರವಾಗಿಲ್ಲ, ಇಲ್ಲಿ ಆಡಿದ ಕೊನೆಯ ಐದು ODI ಪಂದ್ಯಗಳಲ್ಲಿ, ಅದು ಕೇವಲ ಒಂದು ಪಂದ್ಯವನ್ನು ಮಾತ್ರ ಗೆದ್ದಿದೆ. ಒಟ್ಟಾರೆ ಈ ಮೈದಾನದಲ್ಲಿ 19 ಪಂದ್ಯಗಳನ್ನಾಡಿದ್ದು, ಕೇವಲ 2ರಲ್ಲಿ ಗೆಲುವು ಸಾಧಿಸಿದ್ದರೆ, 16ರಲ್ಲಿ ಸೋಲು ಕಂಡಿದೆ. ಒಂದು ಪಂದ್ಯ ಮಾತ್ರ ರದ್ದಾಗಿದೆ. ಕೊನೆಯ ಪಂದ್ಯವನ್ನಾಡುತ್ತಿರುವ ರೋ-ಕೊ ಜೋಡಿಗೆ ಟೀಮ್ ಇಂಡಿಯಾದಿಂದ ಸಿಗುತ್ತಾ ಗೆಲುವಿನ ಉಡುಗೊರೆ ಅಂತಾ ಕಾದು ನೋಡಬೇಕಿದೆ.
October 24, 2025 5:10 PM IST