Yakshagana: ಈ ಪರಿಕರಗಳ ಬೆಲೆ ಕೋಟಿ ರೂಪಾಯಿ! ಯಕ್ಷಗಾನದ ಆಭೂಷಣಗಳಿಗೆ ಭರ್ಜರಿ ಮೆರವಣಿಗೆ, ವಿಜೃಂಭಣೆಯಿಂದ ಮೇಳಕ್ಕೆ ಚಾಲನೆ! | Kateelu Yakshagana Seventh Troupe gets 1 crore gold silver equipment donation | ದಕ್ಷಿಣ ಕನ್ನಡ

Yakshagana: ಈ ಪರಿಕರಗಳ ಬೆಲೆ ಕೋಟಿ ರೂಪಾಯಿ! ಯಕ್ಷಗಾನದ ಆಭೂಷಣಗಳಿಗೆ ಭರ್ಜರಿ ಮೆರವಣಿಗೆ, ವಿಜೃಂಭಣೆಯಿಂದ ಮೇಳಕ್ಕೆ ಚಾಲನೆ! | Kateelu Yakshagana Seventh Troupe gets 1 crore gold silver equipment donation | ದಕ್ಷಿಣ ಕನ್ನಡ

Last Updated:

ಕಟೀಲು ದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮಂಡಳಿಯ ಏಳು ಮೇಳಗಳ ಮೆರವಣಿಗೆಯಲ್ಲಿ 1 ಕೋಟಿ ಚಿನ್ನ ಬೆಳ್ಳಿ ಪರಿಕರ ದೇಣಿಗೆ, 180 ಆಟಗಳ ಪ್ರದರ್ಶನ, ಸಾವಿರಾರು ಭಕ್ತರು ಭಾಗವಹಿಸಿದರು.

+

ಇಲ್ಲಿ

ಇಲ್ಲಿ ವಿಡಿಯೋ ನೋಡಿ

ಮಂಗಳೂರು: ಕಟೀಲು ದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯ ಏಳು ಮೇಳಗಳ ಪರಿಕರಗಳ ಮೆರವಣಿಗೆ (Procession) ನಡೆದಿದೆ. ಬಜಪೆಯ ಶಾರಾದಾ ಮಂಟಪದಿಂದ ಹೊರಟ ಏಳು ಮೇಳಗಳ ಸ್ತಬ್ಧ ಚಿತ್ರಗಳು (Tablo) ಸಹಿತ ಏಳು ಮೇಳಗಳ ಆಭರಣ, ಪರಿಕರಗಳ ಮೆರವಣಿಗೆ ನಡೆದಿದೆ. ಮೆರವಣಿಗೆ ಸಾಗುವ ದಾರಿಯುದ್ದಕ್ಕೂ ಅಲಂಕಾರ (Decoration) ಮಾಡಿದ್ದು, ಮೆರವಣಿಗೆಯಲ್ಲಿ 16 ಭಜನಾ ತಂಡಗಳು, 8 ಟ್ಯಾಬ್ಲೋಗಳು, 30 ಕೊಂಬು ಕೀಲು ಕುದುರೆ, ಬೇತಾಳ, ಹುಲಿ ವೇಷದ ತಂಡಗಳು ಭಾಗವಹಿಸಿದ್ದವು. ದಾರಿಯುದ್ದಕ್ಕೂ ಸಾವಿರಾರು ಭಕ್ತರು (Devotees) ಮೆರವಣಿಗೆಯನ್ನು ಕಣ್ತುಂಬಿಕೊಂಡರು.

1 ಕೋಟಿ ರೂಪಾಯಿಯ ಚಿನ್ನ, ಬೆಳ್ಳಿ ಪರಿಕರ ದೇಣಿಗೆ

ಈ ಬಾರಿ ಹೊಸದಾಗಿ ಆರಂಭಿಸಿರುವ ಏಳನೇ ಮೇಳಕ್ಕೆ ಭಕ್ತರು ಒಂದು ಕೋಟಿ ಪಾಯಿ ಮೊತ್ತದ ಚಿನ್ನ ಮತ್ತು ಬೆಳ್ಳಿಯ ಪರಿಕರವನ್ನು ನೀಡಿದ್ದಾರೆ. ಇದರಲ್ಲಿ ಎರಡು ಪೂಜಾ ಕಿರೀಟಗಳು, ತಲಾ ಒಂದೊಂದು ದೇವಿ ಕಿರೀಟ, ಮತ್ತು ರಾಜಕಿರೀಟ, ಒಂದು ತೊಟ್ಟಿಲು, ತುರಾಯಿ, ಚಕ್ರಗಳು, ಪೆಟ್ಟಿಗೆ ಇತ್ಯಾದಿಗಳು ಆಭರಣದಲ್ಲಿ ಸೇರಿವೆ. ಹೊಸ ಮೇಳಕ್ಕೆ ಬಸ್, ಟ್ರಕ್ ಸೇರಿದಂತೆ ಎಲ್ಲಾ ವ್ಯವಸ್ಥೆಗಳು ಭಕ್ತರಿಂದಲೇ ನಡೆದಿದೆ.

15 ವರ್ಷಕ್ಕಾಗುವಷ್ಟು 180 ಆಟಗಳ ಆಯೋಜನೆ

ಒಂದು ಮೇಳ ಸರಾಸರಿ 180 ಆಟಗಳನ್ನು ಪ್ರದರ್ಶಿಸುತ್ತದೆ. ಆದರೂ 15 ವರ್ಷಕ್ಕೆ ಆಡಿಸುವಷ್ಟು ಹರಕೆಯ ಆಟಗಳು ಉಳಿದಿದೆ. ಹೊಸ ಮೇಳಗಳ ಸೇರ್ಪಡೆಯೊಂದಿಗೆ ಈ ವರ್ಷ ಸುಮಾರು 180 ಆಟಗಳು ಹೆಚ್ಚುವರಿಯಾಗಿ ಪ್ರದರ್ಶನಗೊಳ್ಳಲಿದೆ. ಭಾನುವಾರ ಬೆಳಗ್ಗೆ ಧಾರ್ಮಿಕ ಪೂಜಾ ವಿಧಿವಿಧಾನ ನಡೆದ ಬಳಿಕ ಸಂಜೆ ಏಳನೇ ಮೇಳದ ಉದ್ಘಾಟನೆ ನಡೆದಿದೆ.

ದೇವಿ ಮಹಾತ್ಮೆ ಎಂಬ ಶಕ್ತಿಶಾಲಿ ಯಕ್ಷಗಾನ ಪ್ರಸಂಗ

ಇದನ್ನೂ ಓದಿ: Yakshagana: ಕಟೀಲು ಯಕ್ಷಗಾನದ ತಿರುಗಾಟ ಪ್ರಾರಂಭ, ಈ ಬಾರಿ ನೂತನವಾಗಿ ಏಳನೇ ಮೇಳ ಸೇರ್ಪಡೆ!

ಕಟೀಲು ದೇವಿ ದುರ್ಗಾಂಬಾ ಯಕ್ಷಗಾನ ಪ್ರಿಯೆ ಎಂಬ ಅಭಿದಾನ ಹೊಂದಿದ್ದಾಳೆ. ಅದರಲ್ಲೂ ದೇವಿ ಮಹಾತ್ಮೆ ಎಂಬ ಯಕ್ಷಗಾನವನ್ನು ಅನಾದಿ ಕಾಲದಿಂದ ಇಲ್ಲಿ ಸಂಪ್ರದಾಯವಾಗಿ ಆಡಿಸಿಕೊಂಡು ಬರಲಾಗುತ್ತಿದೆ. ಮತ್ತು ದೇವಿ ಮಹಾತ್ಮೆಯು ಕೂಡ ದುರ್ಗಾ ಸಪ್ತಶತಿಯ ಕಾವ್ಯ-ನಾಟಕ ರೂಪವಾಗಿದ್ದರಿಂದ ಜನರು ಆ ಮೇಳದ ಪ್ರಭಾವ ಅಧಿಕ ಎಂದು ಭಾವಿಸುತ್ತಾರೆ.