Last Updated:
ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಿಗೆ ಯಕ್ಷಗಾನ ಅತ್ಯಂತ ಪ್ರೀತಿ, ಅರ್ಚಕರು ವಿಶೇಷ ಮಂತ್ರದಿಂದ ಆರಾಧನೆ ಆರಂಭಿಸಿ, ಭಕ್ತರು ಹಾಗೂ ಅನ್ಯಮತೀಯರೂ ಹರಕೆ ಯಕ್ಷಗಾನ ಸೇವೆ ಸಲ್ಲಿಸುತ್ತಾರೆ.
ಮಂಗಳೂರು: ಕಟೀಲು ಶ್ರೀ ದುರ್ಗಾಪರಮೇಶ್ವರಿ ಅಂದ್ರೆ ತುಳುನಾಡಿನ ಜನರಿಗೆ ತುಂಬಾ ಪ್ರೀತಿ. ತಾಯಿ ಸ್ವರೂಪಿಣಿ ಶ್ರೀ ದೇವಿ ನಂಬಿದ ಭಕ್ತರನ್ನು (Devotees) ಪೊರೆಯುತ್ತಾಳೆ. ಅಮ್ಮನ ಪ್ರೀತಿ (Love) ತೋರಿಸುತ್ತಾಳೆ. ಎಡವಿದವರಿಗೆ ಸರಿ ದಾರಿ (Correction) ತೋರಿಸಿ ಭಾಗ್ಯದಾಯಿಣಿ (Boon Giver) ಆಗಿದ್ದಾಳೆ. ಭಕ್ತರಿಗೆ ಕಟೀಲು ದೇವಿ ಪ್ರೀಯವಾದ್ರೆ ಕಟೀಲಮ್ಮನಿಗೆ ಯಕ್ಷಗಾನ ಅಂದ್ರೆ ತುಂಬಾ ಪ್ರೀತಿ.
“ಘಂಟಾಮೃದಂಗ ಮುರಜಾಡಿ ನಿನಾದ, ಭಂಗೀ-ತುಂಗೀ ಭವಚ್ಪ್ರುತಿ ರಸಾಯನ ಯಕ್ಷಗಾನೈಃ… ಭಕ್ಷೇ ಸುನಾಟ್ಯ ಕುಶಲೈಃ, ಪರಿತೋಷ್ಯಮಾಣೇ ದುರ್ಗೇ ಕಟೀಲುವರದೇ ತವ ಸುಪ್ರಭಾತಂ” ಈ ಶ್ಲೋಕ ಹೇಳದೇ ಕಟೀಲು ಕ್ಷೇತ್ರದ ಅರ್ಚಕರು ದೇವಿಯ ಗರ್ಭಗುಡಿಯ ಬಾಗಿಲು ತೆಗೆಯೋದಿಲ್ಲ. ದೇವಿಯ ಮೊದಲ ಸ್ತುತಿ ಆರಂಭಗೊಳ್ಳುವುದೇ ಈ ಮಂತ್ರದಿಂದ. ಈ ಮಂತ್ರದ ಬಳಿಕ ದೇವಿಯ ಆರಾಧನೆ ಪೂಜೆ ನಡೆಯುತ್ತದೆ. ಅರ್ಚಕರು ಮಂತ್ರ ತಂತ್ರಗಳನ್ನು ಮಾಡಿದರೆ ನೃತ್ಯ ಗೀತೆಗಳ ಮೂಲಕ ಯಕ್ಷಗಾನದಲ್ಲಿ ದೇವಿಯ ಆರಾಧನೆ ಯಾಗುತ್ತದೆ.
ಕಟೀಲು ಮೇಳವು ಶ್ರೀದೇವಿಯ ಜಂಗಮ ಸ್ವರೂಪ. ಸ್ವತಃ ದೇವಿಯೇ ಕಟೀಲಿನ ಯಕ್ಷಗಾನ ಸೇವೆ ನಡೆಯುವ ಸ್ಥಳಕ್ಕೆ ತೆರಳಿ ಯಕ್ಷಗಾನ ನೋಡುತ್ತಾಳೆ ಎಂಬುವುದು ಕ್ಷೇತ್ರದ ಐತಿಹ್ಯ. ಕಟೀಲು ದೇವಸ್ಥಾನದ ಮುಂಭಾಗದಲ್ಲಿರುವ ರಕ್ತೇಶ್ವರಿ ಶಿಲೆಯ ಹತ್ತಿರದ ಪೀಠದಲ್ಲಿ ಆಸೀನಳಾಗಿ ದೇವಿ ಯಕ್ಷಗಾನ ನೋಡುತ್ತಾಳೆ. ಕವಾಟಬಂಧನ ವಾದ ಬಳಿಕ ವಿನೋದಕ್ಕಾಗಿ ಯಕ್ಷಗಾನ ನೋಡಳು ಹೊರಡುತ್ತಾಳೆ ಎಂಬುವುದು ಭಕ್ತರ ನಂಬಿಕೆ.
ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಿಗೆ ಯಕ್ಷಗಾನ ಬಯಲಾಟದ ಮೇಲೆ ಅತ್ಯಂತ ಪ್ರೀತಿ. ಕಟೀಲು ಯಕ್ಷಗಾನದಲ್ಲಿ ಎಲ್ಲವೂ ಸೇವೆ. ಸೇವಾಕರ್ತರು ನಡೆಸುವ ಆಟವೂ ಸೇವೆ. ಭಕ್ತಿಯಿಂದ ಬಡಿಸುವ ಊಟವೂ ಸೇವೆ. ಅನ್ನಪ್ರಸಾದವನ್ನು ಸ್ವೀಕರಿಸೋದು ಸೇವೆ. ಇತ್ತ ಯಕ್ಷಗಾನವನ್ನು ನೋಡುವುದೂ ಸೇವೆಯೇ.
ಅನ್ಯಮತೀಯರೂ ಕೂಡ ಯಕ್ಷಗಾನ ಆಡಿಸುತ್ತಾರೆ
ಕಟೀಲು ಮೇಳದ ಯಕ್ಷಗಾನವನ್ನು ಹರಕೆ ರೂಪದಲ್ಲಿ ಆಡಿಸುವವರೇ ಜಾಸ್ತಿ. ಮದುವೆಗಾಗಿ ಸ್ವಯಂವರ ಪಾರ್ವತೀ ಕಲ್ಯಾಣ ಪ್ರಸಂಗಗಳು, ಸಂತಾನಕ್ಕಾಗಿ ಪುತ್ರಕಾಮೇಷ್ಠಿ, ಕುಮಾರ ಸಂಭವ, ಜಯಪ್ರಾಪ್ತಿಗಾಗಿ ದಶವತಾರ ತ್ರಿ ಜನ್ಮ ಮೋಕ್ಷ, ಯಶಸ್ಸು ಗಾಗಿ ಪಾಂಡವಾಶ್ವಮೇಧ, ರಾಮಾಶ್ವವೇಧ, ಸರ್ವ ಅನಿಷ್ಠ ನಿವಾರಣೆಗಾಗಿ ಶ್ರೀ ದೇವಿ ಮಹಾತ್ಮೆ, ಕಟೀಲು ಕ್ಷೇತ್ರ ಮಹಾತ್ಮೆ, ಲಲಿತೋಪಾಖ್ಯಾನ ಹೀಗೆ ಹತ್ತು ಹಲವು ಪ್ರಸಂಗಗಳನ್ನು ಹರಕೆ ಕಟ್ಟಿ ಕೊಂಡು ಯಶಸ್ಸು ಆದ ಬಳಿ ಹರಕೆ ಯ ಆಟವನ್ನು ಮಾಡಿಸುತ್ತಾರೆ. ಕೇವಲ ಕಟೀಲು ದೇವಿಯ ಭಕ್ತರು ಮಾತ್ರವಲ್ಲದೇ ಅನ್ಯಮತೀಯರೂ ಈ ಯಕ್ಷಗಾನ ಸೇವೆಯನ್ನು ಹರಕೆ ಹೇಳಿ ಆಡಿಸೋದು ವಿಶೇಷವಾಗಿದೆ.
Disclaimer
ಇಲ್ಲಿ ನೀಡಿರುವ ಎಲ್ಲಾ ಮಾಹಿತಿಯನ್ನು ಜ್ಯೋತಿಷ್ಯ ಶಾಸ್ತ್ರಜ್ಞರು ಮತ್ತು ತಜ್ಞರನ್ನು ಸಂಪರ್ಕಿಸಿ ರಾಶಿ, ಧರ್ಮ ಮತ್ತು ಶಾಸ್ತ್ರಗಳಿಗೆ ಅನುಸಾರವಾಗಿ ನೀಡಲಾಗಿದೆ. ಯಾವುದೇ ಘಟನೆ-ದುರ್ಘಟನೆ ಅಥವಾ ಲಾಭ-ನಷ್ಟಗಳು ಕೇವಲ ಕಾಕತಾಳೀಯ. ಸಾರ್ವಜನಿಕ ಹಿತದೃಷ್ಟಿಯಿಂದ ಜ್ಯೋತಿಷಿಗಳ ಮಾಹಿತಿ ನೀಡಲಾಗಿದೆ. ಇಲ್ಲಿ ತಿಳಿಸಿರುವ ಯಾವುದೇ ಮಾಹಿತಿಯನ್ನು ಲೋಕಲ್ 18 ವ್ಯಕ್ತಿಗತವಾಗಿ ಸಮರ್ಥಿಸಿಕೊಳ್ಳುವುದಿಲ್ಲ.
Dakshina Kannada,Karnataka
November 29, 2025 11:47 AM IST