ALVAS: ಇಡೀ ಭಾರತದ ಸಂಸ್ಕೃತಿಯನ್ನು ಪುತ್ತೂರಿನ ವೇದಿಕೆಗೆ ತಂದ ಆಳ್ವಾಸ್‌! ಭರ್ಜರಿ ಕಲಾ ಪ್ರದರ್ಶನ | Alvas Nudisiri Virasat Puttur unveils art grandeur before 10 thousand people | ದಕ್ಷಿಣ ಕನ್ನಡ

ALVAS: ಇಡೀ ಭಾರತದ ಸಂಸ್ಕೃತಿಯನ್ನು ಪುತ್ತೂರಿನ ವೇದಿಕೆಗೆ ತಂದ ಆಳ್ವಾಸ್‌! ಭರ್ಜರಿ ಕಲಾ ಪ್ರದರ್ಶನ | Alvas Nudisiri Virasat Puttur unveils art grandeur before 10 thousand people | ದಕ್ಷಿಣ ಕನ್ನಡ

Last Updated:

ಆಳ್ವಾಸ್ ನುಡಿಸಿರಿ ವಿರಾಸತ್ ಪುತ್ತೂರಿನ ಮಹಾಲಿಂಗೇಶ್ವರ ದೇಗುಲದಲ್ಲಿ 350 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಂದ ವಿವಿಧ ನೃತ್ಯ, ಯಕ್ಷಗಾನ, ಮಲ್ಲಕಂಬ ಪ್ರದರ್ಶನ, 10 ಸಾವಿರಕ್ಕೂ ಹೆಚ್ಚು ಜನರ ಭಾಗವಹಿಸುವಿಕೆ.

+

ಇಲ್ಲಿ

ಇಲ್ಲಿ ವಿಡಿಯೋ ನೋಡಿ

ದಕ್ಷಿಣ ಕನ್ನಡ: ಆಳ್ವಾಸ್ ಎಜುಕೇಶನ್ ಫೌಂಡೇಶನ್ (ALVAS) ಇದರ ವತಿಯಿಂದ ಪುತ್ತೂರಿನಲ್ಲಿ ನಡೆಸಿದ ಆಳ್ವಾಸ್ ನುಡಿಸಿರಿ ವಿರಾಸತ್ ಪುತ್ತೂರಿನ (Puttur) ಸಾಂಸ್ಕೃತಿಕ ಪ್ರಿಯರಿಗೆ ವಿವಿಧ ಕಲೆಗಳ ರಸದೌತಣವನ್ನು ಉಣಬಡಿಸಿದೆ. ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ (Mahalingeshwara Temple) ದೇವರ ಮಾರುಗದ್ದೆಯಲ್ಲಿ ಆಯೋಜನೆಗೊಂಡಿದ್ದ ಕಾರ್ಯಕ್ರಮದಲ್ಲಿ ಸಾವಿರಾರು ಸಂಖ್ಯೆಯ ಕಲಾರಸಿಕರು ಭಾಗವಹಿಸಿ‌ ಕಾರ್ಯಕ್ರಮ ಮುಗಿಯುವವರೆಗೆ ನಿಂತು ಕಲಾವಿದರನ್ನು (Artist) ಹುರಿದುಂಬಿಸಿದರು.

350 ಕ್ಕೂ ಹೆಚ್ಚು ವಿದ್ಯಾರ್ಥಿಗಳ ಕಲಾ ಸಮಾಗಮ

ಆಳ್ವಾಸ್ ವಿದ್ಯಾಕೇಂದ್ರದ 350 ಕ್ಕೂ ಮಿಕ್ಕಿದ ವಿದ್ಯಾರ್ಥಿ ಕಲಾವಿದರಿಂದ ಈ ಆಳ್ವಾಸ್ ಸಾಂಸ್ಕೃತಿಕ ವೈಭವ ನಡೆದಿದ್ದು, ಕಲಾವಿದರ ಕಲಾಪ್ರೌಢಿಮೆಗೆ ನೆರೆದಿದ್ದ ಜನರನ್ನು ಮಂತ್ರಮುಗ್ಧರನ್ನಾಗಿಸಿದೆ. ಕಾರ್ಯಕ್ರಮದಲ್ಲಿ ಯೋಗ ದೀಪಿಕಾ, ಶಾಸ್ತ್ರೀಯ ನೃತ್ಯ ಅಷ್ಟಲಕ್ಷ್ಮಿ, ಬಡಗುತಿಟ್ಟು ಯಕ್ಷಗಾನ ಶ್ರೀರಾಮ ಪಟ್ಟಾಭಿಷೇಕ, ಗುಜರಾತಿನ ದಾಂಡಿಯ ನೃತ್ಯ, ಮಣಿಪುರಿ ಸ್ಟಿಕ್ ಡ್ಯಾನ್ಸ್, ಮಲ್ಲಕಂಬ ಹಾಗೂ ರೋಪ್ ಕಸರತ್ತು, ಸೃಜನಾತ್ಮಕ ನೃತ್ಯ, ಡೊಳ್ಳು ಕುಣಿತ, ಕಥಕ್ ನೃತ್ಯ ವರ್ಷಧಾರೆ, ಪುರುಲಿಯಾ, ತೆಂಕುತಿಟ್ಟು ಯಕ್ಷಗಾನ ಅಗ್ರ ಪೂಜೆ ಮತ್ತು ಬೊಂಬೆ ವಿನೋದಾವಳಿ ಮೊದಲಾದ ವಿವಿಧ ಬಗೆಯ ರೂಪಕಗಳನ್ನು ಪ್ರಸ್ತುತಪಡಿಸಲಾಗಿತ್ತು.

10 ಸಾವಿರಕ್ಕೂ ಹೆಚ್ಚು ಜನರ ಆಗಮನ

ಆಳ್ವಾಸ್ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಡಾಕ್ಟರ್ ಎಂ. ಮೋಹನ್ ಆಳ್ವರ ಅಧ್ಯಕ್ಷತೆಯಲ್ಲಿ ಈ ಕಾರ್ಯಕ್ರಮ ನೆರವೇರಿತು. ಕಾರ್ಯಕ್ರಮ ವೀಕ್ಷಣೆಗಾಗಿ ಬೃಹತ್ ವೇದಿಕೆ ಸೇರಿದಂತೆ 10 ಸಾವಿರಕ್ಕೂ ಮಿಕ್ಕಿದ ಆಸನದ ವ್ಯವಸ್ಥೆಯನ್ನು ಮಾಡಲಾಗಿತ್ತು.

ಕಾರ್ಯಕ್ರಮಗಳ ವೈಶಿಷ್ಟ್ಯ