Arecanut: ಅಡಿಕೆ ಬೆಳೆಗೆ ಕಾಡ್ತಿದೆ ಈ ಕೀಟ, ಬೆಳೆಗಾರರಿಗೆ ತಪ್ಪುತ್ತಿಲ್ಲ ಕಾಟ! | Arecanut disease | ದಕ್ಷಿಣ ಕನ್ನಡ

Arecanut: ಅಡಿಕೆ ಬೆಳೆಗೆ ಕಾಡ್ತಿದೆ ಈ ಕೀಟ, ಬೆಳೆಗಾರರಿಗೆ ತಪ್ಪುತ್ತಿಲ್ಲ ಕಾಟ! | Arecanut disease | ದಕ್ಷಿಣ ಕನ್ನಡ

Last Updated:

ದಕ್ಷಿಣ ಕನ್ನಡ ಜಿಲ್ಲೆಯ ಅಡಿಕೆ ತೋಟಗಳಲ್ಲಿ ಎಲೆಚುಕ್ಕಿ ರೋಗ ವ್ಯಾಪಕವಾಗಿ ಹರಡುತ್ತಿದೆ. ಸೊಳ್ಳೆಗಿಂತ ಚಿಕ್ಕ ಕೀಟದಿಂದ ಈ ರೋಗ ತೋಟದ ಎಲ್ಲಾ ಗಿಡಗಳಿಗೆ ಹರಡುತ್ತಿದ್ದು, ಎಲೆಗಳು ಹಳದಿ ಬಣ್ಣಕ್ಕೆ ತಿರುಗಿ, ಕೊನೆಗೆ ಗಿಡ ಸಾಯುತ್ತದೆ.

+

ಇಲ್ಲಿ

ಇಲ್ಲಿ ವಿಡಿಯೋ ನೋಡಿ

ದಕ್ಷಿಣ ಕನ್ನಡ: ಖ್ಯಾತ ಬಾಲಿವುಡ್ ನಟ ನಾನಾ ಪಾಟೇಕರ್ ಅಭಿನಯದ ಚಿತ್ರ ಯಶ್ವಂತ್ ಪಾಟೇಕರ್ ಹೇಳಿದ ಡೈಲಾಗ್ ಒಂದು ಭಾರೀ ಫೇಮಸ್ ಆಗಿತ್ತು. ಏಕ್ ಮಚ್ಚರ್ ಆದ್ಮಿಕೋ ಹಿಜಡಾ ಬನಾದೇತಾ ಹೈ ಅನ್ನೋದು ಆ ಡೈಲಾಗ್.. ಅಂದರೆ ಒಂದು ಸೊಳ್ಳೆ (Mosquito) ಕೂಡಾ ಮನುಷ್ಯನನ್ನು ನಾಮರ್ದ್ ಆಗಿ ಮಾಡುತ್ತೆ. ಅದೇ ರೀತಿ ಕರಾವಳಿ ಭಾಗದ ಕೃಷಿಕರ ವಾಣಿಜ್ಯ ಬೆಳೆ, ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಆರ್ಥಿಕತೆಯ ಏರಿಕೆಗೆ ಸಹಕಾರಿಯಾದ ಅಡಿಕೆ (Arecanut) ಬೆಳೆಯನ್ನು (Crop) ಇತ್ತೀಚಿನ ದಿನಗಳಲ್ಲಿ ಗಾತ್ರದಲ್ಲಿ ಸೊಳ್ಳೆಗಿಂತಲೂ ಚಿಕ್ಕದಾದ ಕೀಟವೊಂದು ಬುಡಮೇಲು ಮಾಡುತ್ತಿದೆ.

ಎಲೆಚುಕ್ಕಿ ರೋಗ

ಹೌದು ಕರಾವಳಿ ಭಾಗದ ಪ್ರಮುಖ ವಾಣಿಜ್ಯ ಬೆಳೆಯಾದ ಅಡಿಕೆಗೆ ಇತ್ತೀಚಿನ ದಿನಗಳಲ್ಲಿ ಎಲೆಚುಕ್ಕಿ ರೋಗ ಕಾಣಿಸಿಕೊಂಡಿದೆ. ಜಿಲ್ಲೆಯ ಬಹುಪಾಲು ಅಡಿಕೆ ತೋಟಗಳಲ್ಲಿ ಈ ಎಲೆಚುಕ್ಕಿ ರೋಗ ಕಾಣಿಸಿಕೊಂಡಿದ್ದು, ಒಂದು ಅಡಿಕೆ ಗಿಡದಲ್ಲಿ ಈ ರೋಗ ಕಾಣಿಸಿಕೊಂಡಲ್ಲಿ, ಕೆಲವೇ ದಿನಗಳಲ್ಲಿ ಈ ರೋಗ ಆ ತೋಟದಲ್ಲಿರುವ ಎಲ್ಲಾ ಮರಗಳಿಗೆ ಪರಸರಿಸಿ ಕೆಲವೇ ದಿನಗಳಲ್ಲಿ ಇಡೀ ತೋಟವೇ ನಾಶವಾಗುತ್ತದೆ. ಮೊದಲಿಗೆ ಗಿಡದ ಎಲೆಗಳಲ್ಲಿ ಚುಕ್ಕಿ ರೂಪದಲ್ಲಿ ಕಾಣಿಸಿಕೊಳ್ಳುವ ಈ ರೋಗ ಬಳಿಕ ಗಿಡದ ಎಲ್ಲಾ ಎಲೆಗಳನ್ನು ಆವರಿಸಿಕೊಳ್ಳುತ್ತದೆ.

ಸಾಯುತ್ತಿವೆ ಗಿಡಗಳು

ಕ್ರಮೇಣ ಎಲೆಗಳು ಹಳದಿ ಬಣ್ಣಕ್ಕೆ ತಿರುಗಿ ಗಿಡ ಸಾಯುತ್ತದೆ. ಗಿಡಗಳ ಎಲೆಗಳು ಹಸಿರಾಗಿ, ಸೊಂಪಾಗಿ ಬೆಳೆದರೆ ಮಾತ್ರವೇ ಗಿಡವೂ ಬದುಕುಳಿಯಲು ಸಾಧ್ಯವಾಗಿದ್ದು, ಎಲೆಚುಕ್ಕಿ ರೋಗಕ್ಕೆ ಒಳಗಾದ ಗಿಡಗಳು ಇದೇ ಕಾರಣಕ್ಕೆ ಸಾಯುತ್ತದೆ. ಬ್ಯಾಕ್ಟೀರಿಯಾ, ಫಂಗಸ್ ಗಳಿಂದ ಈ ರೋಗ ಸಾಮಾನ್ಯವಾಗಿ ಕಂಡುಬರುತ್ತಿದ್ದರೂ, ಈ ರೋಗವನ್ನು ಎಲ್ಲಾ ಕಡೆಗೆ ಪಸರಿಸುವ ವಾಹಕವಾಗಿ ಸಣ್ಣದಾದ ಒಂದು ಕೀಟ ಕೆಲಸ ಮಾಡುತ್ತದೆ. ಸೊಳ್ಳೆಗಿಂತಲೂ ಗಾತ್ರದಲ್ಲಿ ಚಿಕ್ಕದಾಗಿರುವ ಮತ್ತು ಯಾರ ಕಣ್ಣಿಗೂ ಅಷ್ಟು ಸುಲಭವಾಗಿ ಬೀಳದ ಈ ಕೀಟಗಳು ಒಂದೇ ದಿನದಲ್ಲಿ ತೋಟದಲ್ಲಿದ್ದ ಎಲ್ಲಾ ಅಡಿಕೆ ಗಿಡಗಳಿಗೂ ರೋಗಕ್ಕೆ ಕಾರಣವಾಗುವ ಬ್ಯಾಕ್ಟೀರಿಯಾಗಳನ್ನು ಹರಡುತ್ತದೆ.

ಇದನ್ನೂ ಓದಿ: Temple: ದಕ್ಷಿಣ ಕನ್ನಡದ ಈ ದೇವಸ್ಥಾನದ ಅಭಿವೃದ್ಧಿಗೆ ಸಿದ್ಧತೆ, 4 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿದೆ ಟೆಂಪಲ್!

ಇದರಿಂದಾಗಿ ಬ್ಯಾಕ್ಟೀರಿಯಾ ಅಟ್ಯಾಕ್ ಆದ ಗಿಡಗಳು ಕಾಲಕ್ರಮೇಶ ಸೊರಗಿ ಸಾಯುತ್ತದೆ. ಮೊದಲಿಗೆ ಎಲೆಗಳು ಹಳದಿ ಬಣ್ಣಕ್ಕೆ ತಿರುಗಿ ಒಣಗಲು ಆರಂಭವಾಗುತ್ತದೆ. ಆ ಬಳಿಕ ಕೊಂಬೆ ಸಾಯುತ್ತದೆ. ಅದೇ ಪ್ರಕಾರ ಹಿಂಗಾರ ಬಿಟ್ಟ ಗಿಡಗಳಲ್ಲಿ ಈ ರೋಗ ಕಂಡುಬಂದಲ್ಲಿ ಹಿಂಗಾರ ಅಡಿಕೆಯಾಗುವ ಮೊದಲೇ ಒಣಗುತ್ತವೆ. ಕೆಲವೊಂದು ಸಂದರ್ಭಗಳಲ್ಲಿ ಸಣ್ಣ ಅಡಿಕೆ ಆಗಿದ್ದರೂ, ರೋಗ ಮತ್ತು ಕೀಟಗಳಿಂದಾಗಿ ಈ ಅಡಿಕೆ ನಳ್ಳಿಗಳೂ ಮುಟ್ಟಿದ ತಕ್ಷಣವೇ ಉದುರಲು ಆರಂಭಗೊಳ್ಳುತ್ತದೆ. ಸ್ಪಷ್ಟವಾಗಿ ಸಾಧ್ಯವಾಗದ ಈ ಕೀಟಗಳನ್ನು ಕಂಟ್ರೋಲ್ ಮಾಡೋದು ಕೃಷಿಕರಿಗೆ ಭಾರೀ ತಲೆನೋವಾಗಿಯೂ ಪರಿಣಮಿಸಿದೆ. ಗಿಡಗಳಿಗೆ ಸರಿಯಾದ ಸಮಯಕ್ಕೆ ಔಷಧಿಗಳನ್ನು ಸಿಂಪಡಿಸದೇ ಹೋದಲ್ಲಿ ಅಡಿಕೆ ಬೆಳೆಗಾರ ಮುಂದಿನ ವರ್ಷ ತನ್ನ ಅಡಿಕೆ ಮರಗಳು ತೋಟದಲ್ಲಿ ಇರುತ್ತೆ ಎನ್ನುವ ಕನಸನ್ನೂ ಕಾಣಲು ಸಾಧ್ಯವಿಲ್ಲದ ಮಟ್ಟಿಗೆ ಈ ಎಲೆಚುಕ್ಕಿ ರೋಗ ಪಸರಿಸಿಬಿಟ್ಟಿದೆ.