AUS vs SA: ಬೇಬಿ ಎಬಿಡಿ ವಿಧ್ವಂಸಕ ಶತಕ! ಆಸ್ಟ್ರೆಲಿಯಾಕ್ಕೆ ತವರಿನಲ್ಲೇ ಭಾರೀ ಮುಖಭಂಗ | dewald brevis century helped south africa beat australia by 53 runs | ಕ್ರೀಡೆ

AUS vs SA: ಬೇಬಿ ಎಬಿಡಿ ವಿಧ್ವಂಸಕ ಶತಕ! ಆಸ್ಟ್ರೆಲಿಯಾಕ್ಕೆ ತವರಿನಲ್ಲೇ ಭಾರೀ ಮುಖಭಂಗ | dewald brevis century helped south africa beat australia by 53 runs | ಕ್ರೀಡೆ

Last Updated:


ಬ್ರೆವಿಸ್‌ನ 125* ರನ್‌ಗಳ ಇನ್ನಿಂಗ್ಸ್ (223.21 ಸ್ಟ್ರೈಕ್ ರೇಟ್) ಆಸ್ಟ್ರೇಲಿಯಾ-ದಕ್ಷಿಣ ಆಫ್ರಿಕಾ ಟಿ20ಯಲ್ಲಿ ಗರಿಷ್ಠ ವೈಯಕ್ತಿಕ ಸ್ಕೋರ್ ಆಗಿದ್ದು, ಹಾಶಿಮ್ ಆಮ್ಲಾರ 97 (2016) ದಾಖಲೆಯನ್ನು ಮುರಿದರು. ಜೊತೆಗೆ 22 ವರ್ಷ ಮತ್ತು 105 ದಿನಗಳ ವಯಸ್ಸಿನಲ್ಲಿ, ಟಿ20ಯಲ್ಲಿ ಶತಕ ಗಳಿಸಿದ ದಕ್ಷಿಣ ಆಫ್ರಿಕಾದ ಕಿರಿಯ ಆಟಗಾರರಾದರು.

ಆಸ್ಟ್ರೇಲಿಯಾ ವಿರುದ್ಧ ಗೆಲುವುಆಸ್ಟ್ರೇಲಿಯಾ ವಿರುದ್ಧ ಗೆಲುವು
ಆಸ್ಟ್ರೇಲಿಯಾ ವಿರುದ್ಧ ಗೆಲುವು

ಆಸ್ಟ್ರೇಲಿಯಾ(Australia) ಪ್ರವಾಸದ ಎರಡನೇ ಟಿ20 ಅಂತರರಾಷ್ಟ್ರೀಯ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ (South Africa) 53 ರನ್‌ಗಳ ಭರ್ಜರಿ ಗೆಲುವು ಸಾಧಿಸಿ, ಮೂರು ಪಂದ್ಯಗಳ ಸರಣಿಯನ್ನು 1-1 ರಿಂದ ಸಮಬಲಗೊಳಿಸಿತು. ಮಂಗಳವಾರ ಡಾರ್ವಿನ್‌ನ ಮರಾರಾ ಕ್ರಿಕೆಟ್ ಗ್ರೌಂಡ್‌ನಲ್ಲಿ ಆಗಸ್ಟ್ 12, 2025ರಂದು ನಡೆದ ಈ ಪಂದ್ಯದಲ್ಲಿ, ಯುವ ಬ್ಯಾಟ್ಸ್‌ಮನ್ ಡೆವಾಲ್ಡ್ ಬ್ರೆವಿಸ್ (125 ರನ್ಸ್) (Dewald Brevis) ಅಜೇಯ ಶತಕ ಹಾಗೂ ಬೌಲರ್​ಗಳ ಕಟ್ಟುನಿಟ್ಟಿನ ಬೌಲಿಂಗ್​​ ನೆರವಿನಿಂದ ದಕ್ಷಿಣ ಆಫ್ರಿಕಾ ಸುಲಭ ಗೆಲುವು ಪಡೆದುಕೊಂಡಿತು. ಬ್ರೆವಿಸ್ ಆಸ್ಟ್ರೇಲಿಯಾ ವಿರುದ್ಧದ ಟಿ20ಯಲ್ಲಿ ಶತಕ ಸಿಡಿಸಿದ ಹಾಗೂ ದಕ್ಷಿಣ ಆಫ್ರಿಕಾ ಆಟಗಾರನಾಗಿ ಗರಿಷ್ಠ ಸ್ಕೋರ್ ಸಿಡಿಸಿದ ಬ್ಯಾಟರ್ ಎಂಬ ದಾಖಲೆಗೆ ಪಾತ್ರರಾದರು.

ಆಸ್ಟ್ರೇಲಿಯಾದ ನಾಯಕ ಮಿಚೆಲ್ ಮಾರ್ಷ್ ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡರು. ದಕ್ಷಿಣ ಆಫ್ರಿಕಾದ ಆರಂಭಿಕ ಜೋಡಿಗಳಾದ ಐಡೆನ್ ಮಾರ್ಕ್ರಮ್ (18) ಹಾಗೂ ರಯಾನ್ ರಿಕಲ್ಟನ್ (14) ಅಲ್ಪಮೊತ್ತಕ್ಕೆ ವಿಕೆಟ್ ಒಪ್ಪಿಸಿದರು. ಆದರೆ 4ನೇ ಕ್ರಮಾಂಕದಲ್ಲಿ ಬಂದ ಬ್ರೆವಿಸ್ ತಂಡವನ್ನು ಆಧರಿಸಿದರು. 5ನೇ ಓವರ್‌ನಲ್ಲಿ 44/2 ರಿಂದ ಆರಂಭಿಸಿದ ಬ್ರೆವಿಸ್, ಟ್ರಿಸ್ಟಾನ್ ಸ್ಟಬ್ಸ್ (22 ಎಸೆತಗಳಲ್ಲಿ 31, 3 ಬೌಂಡರಿ) ಜೊತೆ 57 ಎಸೆತಗಳಲ್ಲಿ 126 ರನ್‌ಗಳ ಜೊತೆಯಾಟ ರಚಿಸಿದರು. ಬ್ರೆವಿಸ್ 41 ಎಸೆತಗಳಲ್ಲಿ ಶತಕ ಪೂರೈಸಿದರು, ಇದು ದಕ್ಷಿಣ ಆಫ್ರಿಕಾದ ಎರಡನೇ ವೇಗದ ಟಿ20 ಶತಕವಾಯಿತು. ಒಟ್ಟಾರೆ 56 ಎಸೆತಗಳಲ್ಲಿ12 ಬೌಂಡರಿ, 8 ಸಿಕ್ಸರ್​ಗಳ ಜೊತೆಗೆ ಅಜೇಯ 125 ರನ್​ಗಳಿಸಿ ದಕ್ಷಿಣ ಆಫ್ರಿಕಾ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 218 ರನ್‌ಗಳ ಬೃಹತ್ ಮೊತ್ತ ಗಳಿಸಲು ನೆರವಾದರು.

ಹಲವು ದಾಖಲೆ ಬರೆದ ಬ್ರೆವಿಸ್‌

ಬ್ರೆವಿಸ್‌ನ 125* ರನ್‌ಗಳ ಇನ್ನಿಂಗ್ಸ್ (223.21 ಸ್ಟ್ರೈಕ್ ರೇಟ್) ಆಸ್ಟ್ರೇಲಿಯಾ-ದಕ್ಷಿಣ ಆಫ್ರಿಕಾ ಟಿ20ಯಲ್ಲಿ ಗರಿಷ್ಠ ವೈಯಕ್ತಿಕ ಸ್ಕೋರ್ ಆಗಿದ್ದು, ಹಾಶಿಮ್ ಆಮ್ಲಾರ 97 (2016) ದಾಖಲೆಯನ್ನು ಮುರಿದರು. ಜೊತೆಗೆ 22 ವರ್ಷ ಮತ್ತು 105 ದಿನಗಳ ವಯಸ್ಸಿನಲ್ಲಿ, ಟಿ20ಯಲ್ಲಿ ಶತಕ ಗಳಿಸಿದ ದಕ್ಷಿಣ ಆಫ್ರಿಕಾದ ಕಿರಿಯ ಆಟಗಾರರಾದರು. ಅವರ 8 ಸಿಕ್ಸರ್‌ಗಳು ಆಸ್ಟ್ರೇಲಿಯಾ vs ದಕ್ಷಿಣ ಆಫ್ರಿಕಾ ಟಿ20ಯಲ್ಲಿ ಬ್ಯಾಟರ್​ನಿಂದ ಗರಿಷ್ಠ ಸಿಕ್ಸರ್‌ಗಳ ಜಂಟಿ ದಾಖಲೆಯಾಯಿತು. ಅಸ್ಟ್ರೇಲಿಯಾದ ಟಿಮ್ ಡೇವಿಡ್ ಕೂಡ 8 ಸಿಕ್ಸರ್‌ ಸಿಡಿಸಿದ್ದಾರೆ. ಆದರೆ ದಕ್ಷಿಣ ಆಫ್ರಿಕಾ ಪರ ಇದು ವಿಶ್ವದಾಖಲೆಯಾಗಿದೆ.

ಇನ್ನು ಆಸ್ಟ್ರೇಲಿಯಾದ ಬೌಲರ್‌ಗಳಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್ (2/44) ಮತ್ತು ಬೆನ್ ದ್ವಾರ್‌ಶುಯಿಸ್ (2/24) ತಲಾ ಎರಡು ವಿಕೆಟ್‌ಗಳನ್ನು ಪಡೆದರೆ, ಜೋಶ್ ಹ್ಯಾಜಲ್‌ವುಡ್ ಮತ್ತು ಆಡಮ್ ಜಂಪಾ ತಲಾ ಒಂದು ವಿಕೆಟ್ ಪಡೆದರು.

ಆಸ್ಟ್ರೇಲಿಯಾದ ಬ್ಯಾಟಿಂಗ್ ಕುಸಿತ

219 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಆಸ್ಟ್ರೇಲಿಯಾ 17.4 ಓವರ್‌ಗಳಲ್ಲಿ 165 ರನ್‌ಗಳಿಗೆ ಆಲೌಟ್ ಆಗಿ ಸೋಲನುಭವಿಸಿತು. ಟಿಮ್ ಡೇವಿಡ್ 24 ಎಸೆತಗಳಲ್ಲಿ 4 ಬೌಂಡರಿ, 4 ಸಿಕ್ಸರ್‌ಗಳ ಜೊತೆಗೆ 50 ರನ್‌ಗಳಿಸಿ ಗಮನ ಸೆಳೆದರೂ, ಉಳಿದ ಬ್ಯಾಟ್ಸ್‌ಮನ್‌ಗಳು ವಿಫಲರಾದರು. ಮಿಚೆಲ್ ಮಾರ್ಷ್ (13 ಎಸೆತಗಳಲ್ಲಿ 22, 2 ಬೌಂಡರಿ, 1 ಸಿಕ್ಸರ್) ಮತ್ತು ಅಲೆಕ್ಸ್ ಕ್ಯಾರಿ (18 ಎಸೆತಗಳಲ್ಲಿ 26, 3 ಬೌಂಡರಿ) ಕೊಂಚ ಪ್ರತಿರೋಧ ತೋರಿದರಾದರೂ, ಅವರ ಆಟ ಗೆಲುವಿಗೆ ಸಾಕಾಗಲಿಲ್ಲ. ಮ್ಯಾಕ್ಸ್​ವೆಲ್(16), ಟ್ರಾವಿಸ್ ಹೆಡ್(5), ಕ್ಯಾಮರೂನ್ ಗ್ರೀನ್ (9), ಮಿಚೆಲ್ ಓವೆನ್ (8) ಮತ್ತೊಮ್ಮೆ ವಿಫಲರಾದರು.

ಈ ಗೆಲುವಿನೊಂದಿಗೆ, ಮೂರು ಪಂದ್ಯಗಳ ಟಿ20 ಸರಣಿಯು 1-1 ರಿಂದ ಸಮಬಲವಾಗಿದೆ. ಸರಣಿಯ ನಿರ್ಣಾಯಕ ಮೂರನೇ ಟಿ20 ಆಗಸ್ಟ್ 16, 2025ರಂದು ಶನಿವಾರ ನಡೆಯಲಿದೆ. ಈ ಪಂದ್ಯದಲ್ಲಿ ಗೆದ್ದ ತಂಡವು ಸರಣಿಯನ್ನು ತನ್ನದಾಗಿಸಿಕೊಳ್ಳಲಿದೆ.