Bhima Sangama: ದಲಿತ ಸಮುದಾಯಕ್ಕೆ‌ ಸೇರಿದ ದಂಪತಿಗಳ ಕಾಲು ತೊಳೆದು ಸತ್ಕರಿಸಿದ MLC ಕಿಶೋರ್ ಕುಮಾರ್! | MLC Kishore Kumar washed the feet of a couple belonging to the Dalit community

Bhima Sangama: ದಲಿತ ಸಮುದಾಯಕ್ಕೆ‌ ಸೇರಿದ ದಂಪತಿಗಳ ಕಾಲು ತೊಳೆದು ಸತ್ಕರಿಸಿದ MLC ಕಿಶೋರ್ ಕುಮಾರ್! | MLC Kishore Kumar washed the feet of a couple belonging to the Dalit community

Last Updated:

ಭಾರತೀಯ ಜನತಾ ಪಕ್ಷದ ವರಿಷ್ಠರ ಆಶಯದಂತೆ ಸಂವಿಧಾನ ಗೌರವ ಅಭಿಯಾನದ ಅಂಗವಾಗಿ ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು ಅವರ ಮನೆಯಲ್ಲಿ ಭೀಮಸಂಗಮ ಕಾರ್ಯಕ್ರಮ ಜರುಗಿತು. ದಲಿತ ಸಮಾಜದ ಸುಮಾರು 120 ದಂಪತಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

X

ವಿಡಿಯೋ ಇಲ್ಲಿ ನೋಡಿ

ದಕ್ಷಿಣ ಕನ್ನಡ: ಸಂವಿಧಾನ(Constitution) ತೊಂದರೆಯಲ್ಲಿದೆ, ಸಂವಿಧಾನ ಬದಲಾವಣೆ ಮಾಡಲಾಗುತ್ತದೆ ಎನ್ನುವ ಆರೋಪಗಳಿರುವ(Allegations) ಇತ್ತೀಚಿನ ದಿನಗಳಲ್ಲಿ ಸಂವಿಧಾನವನ್ನು ಗೌರವಿಸುವ ಕೆಲಸಗಳನ್ನು ಕೆಲವೆಡೆ ಆಯೋಜಿಸಲಾಗುತ್ತಿದೆ. ಇಂಥಹುದೇ ಒಂದು ಕಾರ್ಯಕ್ರಮದ ಭಾಗವೇ ʼಭೀಮ ಸಂಗಮʼ ಕಾರ್ಯಕ್ರಮ(Bhima Sangama Program). ಈ ಕಾರ್ಯಕ್ರಮದ ಮೂಲಕ ದಲಿತ ಸಮುದಾಯದ ದಂಪತಿಗಳ ಕಾಲು ತೊಳೆದು, ಅವರಿಗೆ ನಮಸ್ಕರಿಸಿ ಆ ಮೂಲಕ ಸಂವಿಧಾನ ಶಿಲ್ಪಿಯ ಆಶಯಗಳನ್ನು ಪೂರ್ಣಗೊಳಿಸುವ ಪ್ರಯತ್ನವನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘ ಮತ್ತು ಅದರ ಅಂಗಸಂಸ್ಥೆಗಳು ಮಾಡುತ್ತಿವೆ. ಇಂತಹುದೇ ಒಂದು ಕಾರ್ಯಕ್ರಮ ವಿಧಾನಪರಿಷತ್ ಸದಸ್ಯ ಕಿಶೋರ್ ಕುಮಾರ್(MLC Kishore Kumar) ಬೊಟ್ಯಾಡಿ ಮನೆಯಲ್ಲೂ ನಡೆದಿದೆ.

ಭಾರತೀಯ ಜನತಾ ಪಕ್ಷದ ವರಿಷ್ಠರ ಆಶಯದಂತೆ ಸಂವಿಧಾನ ಗೌರವ ಅಭಿಯಾನದ ಅಂಗವಾಗಿ ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು ಅವರ ಮನೆಯಲ್ಲಿ ಭೀಮಸಂಗಮ ಕಾರ್ಯಕ್ರಮ ಜರುಗಿತು. ದಲಿತ ಸಮಾಜದ ಸುಮಾರು 120 ದಂಪತಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕಿಶೋರ್ ಕುಮಾರ್, ಬಿಜೆಪಿ ನಗರ ಅಧ್ಯಕ್ಷರಾದ ಶಿವಕುಮಾರ್ ಭಟ್, ಗ್ರಾಮಾಂತರ ಅಧ್ಯಕ್ಷರಾದ ಶ್ರೀ ದಯಾನಂದ ಶೆಟ್ಟಿ ಉಜಿರೆಮಾರ್ ಅವರುಗಳು ಎಲ್ಲಾ ದಂಪತಿಗಳ ಕಾಲ್ತೊಳೆದು ಅವರನ್ನು ಬರಮಾಡಿಕೊಂಡರು.

ಇದನ್ನೂ ಓದಿ: Kolar: ಕದಿರೇನಹಳ್ಳಿ ಗ್ರಾಮದ ಶ್ರೀ ಗವಿ ಗಂಗಾಧರೇಶ್ವರ ದೇಗುಲ‌ದ ಜೀರ್ಣೋದ್ಧಾರ ಕಾರ್ಯ!

ಮುತ್ತೈದೆಯರು ಅವರಿಗೆ ಬಾಗಿನ ಸಮರ್ಪಿಸಿ ಆರತಿ ಬೆಳಗಿದರು. ಸಾಮರಸ್ಯದ ಕುರಿತಾಗಿ ಶ್ರೀ ರವೀಂದ್ರ ಪುತ್ತೂರು ಹಾಗೂ ಶ್ರೀ ಶಿವ ಪ್ರಸಾದ ಇವರು ಉಪನ್ಯಾಸವನ್ನು ನಡೆಸಿಕೊಟ್ಟರು. ನಂತರ ಸಹಭೋಜನ ಕಾರ್ಯಕ್ರಮ ನಡೆಯಿತು.

ಜಾತಿ ಮತಗಳ ಸೀಮೆಯನ್ನು ಮೀರಿನಿಂತು ಎಲ್ಲರೂ ಊಟ ಮಾಡಿದರು, ಊಟವನ್ನು ಬಡಿಸಿದರು. ಜಾತಿಯ ಕಾರಣದಿಂದಾಗಿರುವ ಮೇಲರಿಮೆ, ಕೀಳರಿಮೆಗಳು ಇಲ್ಲಿ ಮಾಯವಾಗಿದ್ದವು. ಅಂಬೇಡ್ಕರ್ ಅವರ ಆಶಯದಂತೆ ಹಾಗೂ ಪಕ್ಷದ ವರಿಷ್ಠರ ಕಲ್ಪನೆಯಂತೆ ಒಂದು ಅದ್ಭುತ ಸಾಮರಸ್ಯದ ಕಾರ್ಯಕ್ರಮ ಇಲ್ಲಿ ಮೇಳೈಸಿತು.