Bisu Parba: ತುಳುನಾಡು ಮತ್ತು ಕೇರಳದಲ್ಲಿ ಬಿಸು ಪರ್ಬದ ಸಂಭ್ರಮ- ದೇವರಿಗೆ ಕಣಿ ಇಡುವ ಮೂಲಕ ಹಬ್ಬ ಆಚರಣೆ! | Bisu Parba celebrations in Tulunadu and Kerala – The festival is celebrated by making offerings to the gods!

Last Updated:

ಕ್ರಮೇಣ ಈ ಒಕ್ಕಲು ಪದ್ಧತಿ ಮರೆಯಾದ ಬಳಿಕ ಪ್ರತಿ ಕುಟುಂಬಗಳೂ ತಮ್ಮಲ್ಲಿ ಬೆಳೆದಂತಹ ದವಸ- ಧಾನ್ಯಗಳನ್ನು, ತರಕಾರಿ ಬೆಳೆಗಳನ್ನು ದೇವರಿಗೆ ಕಾಣಿಕೆ ಇಡುವಂತಹ ಸಂಪ್ರದಾಯ ಬೆಳೆದು ಬಂದಿದೆ. ಈ ರೀತಿಯ ಕಾಣಿಕೆ ಇಡುವುದನ್ನು ಬಿಸು ಕಣಿ ಎನ್ನುವ ರೀತಿಯಲ್ಲೂ ಕರೆಯುತ್ತಾರೆ.

X

ವಿಡಿಯೋ ಇಲ್ಲಿ ನೋಡಿ

ದಕ್ಷಿಣ ಕನ್ನಡ: ಸೌರಮಾನ ಯುಗಾದಿಯನ್ನು(Ugadi Festival) ಕೇರಳ ಹಾಗೂ ತುಳುನಾಡಿನ ಜನ ಬಿಸು ಪರ್ಬವನ್ನಾಗಿ(Bisu Parba) ಆಚರಿಸಿಕೊಂಡು ಬರುತ್ತಾರೆ. ಇಂದಿನಿಂದ ಈ ಭಾಗದಲ್ಲಿ ಹೊಸ ಸಂವತ್ಸರ ಆರಂಭಗೊಳ್ಳುವುದರಿಂದಾಗಿ ಈ ದಿನವನ್ನು ಹೊಸ ವರ್ಷವನ್ನಾಗಿಯೂ(New Year) ಈ ಭಾಗದ ಜನ ಸಂಭ್ರಮಿಸುತ್ತಾರೆ. ಈ ದಿನದಂದು ಕೃಷಿಕರು(Farmers) ತಾವು ಬೆಳೆದ ಬೆಳೆಗಳನ್ನು ದೇವರಿಗೆ ಕಾಣಿಕೆಯಾಗಿ ನೀಡುತ್ತಿದ್ದು, ಇದಕ್ಕೆ ಈ ಭಾಗದ ಜನ ಬಿಸು ಕಣಿ ಎಂದೂ ಕರೆಯುತ್ತಾರೆ.

ತುಳುನಾಡು ಹಾಗೂ ಕೇರಳದ ಜನರಿಗೆ ಇಂದು ಹೊಸ ವರ್ಷದ ಸಂಭ್ರಮ. ಸೌರಮಾನ ಯುಗಾದಿಯ ಈ ದಿನವನ್ನು ಈ ಭಾಗದ ಜನ ಬಿಸು ಪರ್ಬವನ್ನಾಗಿ ಆಚರಿಸುತ್ತಿದ್ದಾರೆ. ತುಳುನಾಡಿನ ಹಾಗೂ ಕೇರಳದ ಎಲ್ಲಾ ದೇವಸ್ಥಾನಗಳಲ್ಲಿ ಈ ದಿನ ವಿಶೇಷ ಪೂಜೆ ಪುನಸ್ಕಾರಗಳು ನಡೆಯುತ್ತಿದ್ದು, ಜನರೂ ಅಧಿಕ ಸಂಖ್ಯೆಯಲ್ಲಿ ದೇವಸ್ಥಾನಗಳಲ್ಲಿ ದೇವರ ಪೂಜೆಯಲ್ಲಿ ತೊಡಗುತ್ತಾರೆ. ದೇವರಿಗೆ ಈ ದಿನ ವಿಶೇಷವಾಗಿ ಬಿಸು ಕಣಿಯನ್ನು ಇಡುತ್ತಿದ್ದು, ಹಿಂದೆ ಒಕ್ಕಲು ಪದ್ಧತಿ ವ್ಯವಸ್ಥೆಯಿದ್ದ ಸಂದರ್ಭದಲ್ಲಿ ಒಕ್ಕಲು ಮನೆಯವರು ಧಣಿಗಳಿಗೆ ಸೌರಮಾನ ಯುಗಾದಿಯಾದ ಈ ದಿನ ತಾವು ಬೆಳೆದ ಬೆಳೆಗಳನ್ನು ಧಣಿಗಳಿಗೆ ಅರ್ಪಿಸುವಂತಹ ಸಂಪ್ರದಾಯವಿತ್ತು.

ಇದನ್ನೂ ಓದಿ: Belagavi: ಅಥಣಿ ಭಾಗದ ಜನಮಾನಸದಲ್ಲಿ ಅಚ್ಚಳಿಯದೆ ಉಳಿದಿರುವ ಬಾಬಾಸಾಹೇಬರ ನೆನಪುಗಳು!

ಕ್ರಮೇಣ ಈ ಒಕ್ಕಲು ಪದ್ಧತಿ ಮರೆಯಾದ ಬಳಿಕ ಪ್ರತಿ ಕುಟುಂಬಗಳೂ ತಮ್ಮಲ್ಲಿ ಬೆಳೆದಂತಹ ದವಸ- ಧಾನ್ಯಗಳನ್ನು, ತರಕಾರಿ ಬೆಳೆಗಳನ್ನು ದೇವರಿಗೆ ಕಾಣಿಕೆ ಇಡುವಂತಹ ಸಂಪ್ರದಾಯ ಬೆಳೆದು ಬಂದಿದೆ. ಈ ರೀತಿಯ ಕಾಣಿಕೆ ಇಡುವುದನ್ನು ಬಿಸು ಕಣಿ ಎನ್ನುವ ರೀತಿಯಲ್ಲೂ ಕರೆಯುತ್ತಾರೆ.

ಹೊಸ ವರ್ಷವೆಂದೇ ಆಚರಿಸಲ್ಪಡುವ ಈ ದಿನದಂದು ತುಳುನಾಡಿನ ಜನ ಈ ದಿನ ಹೊಸ ಬಟ್ಟೆಯನ್ನು ಧರಿಸಿ ದೇವಸ್ಥಾನಗಳಿಗೆ ಭೇಟಿ ನೀಡುತ್ತಾರೆ. ಪ್ರತಿ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ನೆರವೇರುತ್ತಿದ್ದು, ಈ ದಿನದಂದು ದೇವಸ್ಥಾನಗಳಿಗೆ ಭೇಟಿ ನೀಡಿದಲ್ಲಿ ಮುಂದಿನ ಜೀವನ ಸುಖಮಯವಾಗುತ್ತದೆ ಎನ್ನುವುದು ಭಕ್ತರ ನಂಬಿಕೆಯಾಗಿದೆ. ಉತ್ತರ ಕರ್ನಾಟಕದ ಭಾಗದಲ್ಲಿ ಯಾವ ರೀತಿ ಯುಗಾದಿಯನ್ನು ಆಚರಿಸುತ್ತಾರೋ, ಅದೇ ರೀತಿಯಲ್ಲಿ ಕರಾವಳಿ ಭಾಗದ ಜನರು ಈ ದಿನವನ್ನು ಬಿಸು ಪರ್ಬವಾಗಿ ಆಚರಿಸುತ್ತಾರೆ.