Black Cobra: ಪಶ್ಚಿಮ ಘಟ್ಟದಲ್ಲಿ ಹೆಚ್ಚಾಯ್ತು ಕಾಳಿಂಗ ಸರ್ಪಗಳ ಹಾವಳಿ- 10 ಅಡಿ ಉದ್ದದ ಕಿಂಗ್‌ ಕೋಬ್ರಾ ರಕ್ಷಣೆ! | The threat of Kalinga snakes has increased in the Western Ghats – 10-foot long king cobra rescued!

Black Cobra: ಪಶ್ಚಿಮ ಘಟ್ಟದಲ್ಲಿ ಹೆಚ್ಚಾಯ್ತು ಕಾಳಿಂಗ ಸರ್ಪಗಳ ಹಾವಳಿ- 10 ಅಡಿ ಉದ್ದದ ಕಿಂಗ್‌ ಕೋಬ್ರಾ ರಕ್ಷಣೆ! | The threat of Kalinga snakes has increased in the Western Ghats – 10-foot long king cobra rescued!

Last Updated:

ಮಾರ್ಚ್, ಏಪ್ರಿಲ್ ತಿಂಗಳು ಕಾಳಿಂಗ ಸರ್ಪದ ಸಂತಾನಾಭಿವೃದ್ಧಿಯ ಸಮಯವಾಗಿದ್ದು, ಗಂಡು ಕಾಳಿಂಗಗಳು ಹೆಣ್ಣು ಕಾಳಿಂಗವನ್ನು ಹುಡುಕಿಕೊಂಡು ಹೋಗುತ್ತವೆ.

X

ವಿಡಿಯೋ ಇಲ್ಲಿ ನೋಡಿ

ದಕ್ಷಿಣ ಕನ್ನಡ: ಪಶ್ಚಿಮ ಘಟ್ಟದಲ್ಲಿ(Western Ghats) ಈಗ ಕಾಳಿಂಗ ಸರ್ಪಗಳ(King Cobra) ಓಡಾಟ ಜಾಸ್ತಿಯಾಗಿದೆ‌. ಬೇಸಿಗೆಯ ಈ ತಿಂಗಳು(Summer) ಕಾಳಿಂಗ ಸರ್ಪಗಳ ವಂಶಾಭಿವೃದ್ಧಿ ಸಮಯವಾಗಿದೆ. ಕಾಡಿನಲ್ಲಿ, ಕಾಡಂಚಿನ ಗ್ರಾಮಗಳಲ್ಲಿ ಕಾಳಿಂಗ ಸರ್ಪಗಳ ಚಟುವಟಿಕೆ ಕಂಡುಬರುತ್ತಿದೆ. ಸುಬ್ರಹ್ಮಣ್ಯದ ಕಾಡಂಚಿನ ತೋಟದಲ್ಲಿ ಕಾಡು ಪ್ರಾಣಿಗಳ(Wild Animals) ಉಪಟಳ ತಡೆಯೋದಕ್ಕೆ ಹಾಕಿದ್ದ ಬಲೆಯಲ್ಲಿ ಕಾಳಿಂಗ ಸರ್ಪ ಸಿಲುಕಿ ಹಾಕಿಕೊಂಡಿದ್ದು, ರಕ್ಷಣೆ ಮಾಡಲಾಗಿದೆ. ಆದಿ ಸುಬ್ರಹ್ಮಣ್ಯ ಸಮೀಪದ ತೋಟದಲ್ಲಿ ಒಂದು ಕಾಳಿಂಗ ಸರ್ಪ ಬಲೆಗೆ ಸಿಲುಕಿದ್ದು, ಉರಗ ಪ್ರೇಮಿ ಮಾಧವ ಕಾಳಿಂಗ ಸರ್ಪದ ರಕ್ಷಣೆ ಮಾಡಿದ್ದಾರೆ.

ಇದನ್ನೂ ಓದಿ: Kolar: ಮಾರ್ಕಂಡೇಶ್ವರ ಬೆಟ್ಟಕ್ಕೆ ಕಾಂಕ್ರೀಟ್ ರಸ್ತೆ ಭಾಗ್ಯ- ಹೇಗಿದ್ದ ರಸ್ತೆ ಹೇಗಾಗಿದೆ ನೋಡಿ!

ಕಾಳಿಂಗ ಸರ್ಪದ ಹೊಟ್ಟೆಯ ಭಾಗದಲ್ಲಿ ಸುತ್ತಿಕೊಂಡಿದ್ದ ಬಲೆಯನ್ನು ಸೂಕ್ಷ್ಮವಾಗಿ ತೆಗೆದು ಬಂಧಮುಕ್ತ ಮಾಡಿದ್ದಾರೆ. ಗಂಡು ಕಾಳಿಂಗ ಸರ್ಪ ಇದಾಗಿದ್ದು, ಸುಮಾರು ಹತ್ತು ಅಡಿ ಉದ್ದವಿತ್ತು. ತೋಟದಲ್ಲಿ ಸಂಚಾರ ಮಾಡುತ್ತಿದ್ದ ವೇಳೆ ಬಲೆಗೆ ಸಿಲುಕಿ ಒದ್ದಾಡೋದನ್ನು ಗಮನಿಸಿದ ಸ್ಥಳೀಯರು ಮಾಧವ ಅವರಿಗೆ ವಿಚಾರ ತಿಳಿಸಿದ್ದು, ಬಲೆಯೊಳಗೆ ಸಿಲುಕಿದ್ದ ಕಾಳಿಂಗ ಸರ್ಪವನ್ನು ಬಿಡುಗಡೆಗೊಳಿಸಿದ್ದಾರೆ.

ಮಾರ್ಚ್, ಏಪ್ರಿಲ್ ತಿಂಗಳು ಕಾಳಿಂಗ ಸರ್ಪದ ಸಂತಾನಾಭಿವೃದ್ಧಿಯ ಸಮಯವಾಗಿದ್ದು, ಗಂಡು ಕಾಳಿಂಗಗಳು ಹೆಣ್ಣು ಕಾಳಿಂಗವನ್ನು ಹುಡುಕಿಕೊಂಡು ಹೋಗುತ್ತವೆ. ಪಶ್ಚಿಮ ಘಟ್ಟ ಮತ್ತು ಅದರ ತಪ್ಪಲಿನ ತಂಪಾದ ಜಾಗದಲ್ಲಿ ಕಾಳಿಂಗಗಳ ಸಂಚಾರ ಅತಿಯಾಗಿದ್ದು, ಕಾಡಂಚಿನ ಕೃಷಿಕರು ತೋಟಕ್ಕೆ ಹೋದ ಸಂದರ್ಭದಲ್ಲಿ ಜಾಗರೂಕತೆಯಿಂದ ಇರಲು ಉರಗರಕ್ಷಕ ಮಾಧವ ಅವರು ವಿನಂತಿಸಿಕೊಂಡಿದ್ದಾರೆ‌.