Last Updated:
ಹಲವು ಕ್ಯಾನ್ಸರ್ ಪೀಡಿತರಿಗೆ ನೆರವು ನೀಡುತ್ತಿದ್ದ ಪ್ರಶಾಂತ್ ರೈ ಇದೀಗ ಸ್ವತಃ ರಕ್ತದ ಕ್ಯಾನ್ಸರ್ ಗೆ ತುತ್ತಾಗಿದ್ದು, ಇವರ ಚಿಕಿತ್ಸೆಗೆ 75 ಲಕ್ಷ ರೂಪಾಯಿಗಳ ಅಗತ್ಯವಿದೆ ಎಂದು ವೈದ್ಯರು ತಿಳಿಸಿದ್ದಾರೆ. ಈ ಹಿನ್ನಲೆಯಲ್ಲಿ ಇದೀಗ ಶಿಕ್ಷಕ ಮತ್ತು ವಿದ್ಯಾರ್ಥಿ ಸಮುದಾಯ ಈ ಶಿಕ್ಷಕನಿಗಾಗಿ ನೆರವಿನ ಹಸ್ತ ಚಾಚುತ್ತಿದೆ.
ದಕ್ಷಿಣ ಕನ್ನಡ: ಸದಾ ಪಾಠ, ತರಗತಿ ಎನ್ನುವ ಜಂಜಾಟದ ಮಧ್ಯೆ ಈ ಶಿಕ್ಷಕರು ದೊಡ್ಡ ಗುರಿಯೊಂದರ ಸಾಧನೆಗಾಗಿ ದುಡಿಯುತ್ತಿದ್ದಾರೆ. ಕ್ಯಾನ್ಸರ್ ರೋಗದಿಂದ(Cancer Disease) ಬಳಲುತ್ತಿರುವ ಶಿಕ್ಷಕನೋರ್ವನ(Teacher) ನೆರವಿಗೆ ಶಿಕ್ಷಕ ಸಮುದಾಯ ಮತ್ತು ವಿದ್ಯಾರ್ಥಿಗಳು ಇದೀಗ ಬೀದಿಗಿಳಿದಿದೆ. ಸಾರ್ವಜನಿಕ ಪ್ರದೇಶಗಳಲ್ಲಿ, ಶಾಲೆಗಳಲ್ಲಿ(Schools) ಭಿತ್ತಿಪತ್ರ ಹಿಡಿದು ಶಿಕ್ಷಕರು, ಶಿಕ್ಷಕನಿಗಾಗಿ ನೆರವು ಯಾಚಿಸುತ್ತಿದ್ದಾರೆ.
ಕೇರಳದ ಕಾಸರಗೋಡು ಜಿಲ್ಲೆಯ ಮುಂಡಿತ್ತಡ್ಕ ಶಾಲೆಯ ಹಿಂದಿ ಶಿಕ್ಷಕರಾಗಿರುವ ಪ್ರಶಾಂತ್ ರೈ (41) ಕಳೆದ ಎರಡು ವರ್ಷಗಳಿಂದ ರಕ್ತದ ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ. ಅತ್ಯಂತ ಕ್ರೀಯಾಶೀಲ ಶಿಕ್ಷಕರಾಗಿ ಗುರುತಿಸಿಕೊಂಡಿರುವ ಪ್ರಶಾಂತ್ ರೈ ಕನ್ನಡಪರ ಹೋರಾಟಗಳಲ್ಲೂ ಮುಂಚೂಣಿಯಾಗಿದ್ದರು. ಹಲವು ಕ್ಯಾನ್ಸರ್ ಪೀಡಿತರಿಗೆ ನೆರವು ನೀಡುತ್ತಿದ್ದ ಪ್ರಶಾಂತ್ ರೈ ಇದೀಗ ಸ್ವತಃ ರಕ್ತದ ಕ್ಯಾನ್ಸರ್ ಗೆ ತುತ್ತಾಗಿದ್ದು, ಇವರ ಚಿಕಿತ್ಸೆಗೆ 75 ಲಕ್ಷ ರೂಪಾಯಿಗಳ ಅಗತ್ಯವಿದೆ ಎಂದು ವೈದ್ಯರು ತಿಳಿಸಿದ್ದಾರೆ. ಈ ಹಿನ್ನಲೆಯಲ್ಲಿ ಇದೀಗ ಶಿಕ್ಷಕ ಮತ್ತು ವಿದ್ಯಾರ್ಥಿ ಸಮುದಾಯ ಈ ಶಿಕ್ಷಕನಿಗಾಗಿ ನೆರವಿನ ಹಸ್ತ ಚಾಚುತ್ತಿದೆ.
ಇದನ್ನೂ ಓದಿ: Chikkamagaluru: ಕಾಫಿನಾಡು ಚಿಕ್ಕಮಗಳೂರಿನಲ್ಲಿ ಚಂದಮಾಮನ ಪೂಜೆ!
ಶಾಲೆಯ ಆವರಣದಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಭಿತ್ತಿ ಪತ್ರಗಳನ್ನು ಹಿಡಿದು ಸಾರ್ವಜನಿಕರಲ್ಲಿ ನೆರವು ಯಾಚಿಸಲಾರಂಭಿಸಿದ್ದಾರೆ. ಸಾಮಾಜಿಕ ಕಾರ್ಯಕರ್ತ ಫಯಾಜ್ ಮಾಡೂರು ಇತರ ಮೂಲಗಳಿಂದ ನೆರವು ಪಡೆಯಲು ಶ್ರಮಿಸುತ್ತಿದ್ದಾರೆ. ಈಗಾಗಲೇ ಸುಮಾರು 50 ಲಕ್ಷ ರೂಪಾಯಿಗಳನ್ನು ಸಂಗ್ರಹಿಸಲಾಗಿದ್ದು, ಇನ್ನುಳಿದ ಹಣದ ನಿರೀಕ್ಷೆಯಲ್ಲಿದ್ದಾರೆ. ಪ್ರಶಾಂತ್ ರೈ ಕುಟುಂಬ ಚಿಕಿತ್ಸೆಗಾಗಿ ಈಗಾಗಲೇ 40 ಲಕ್ಷ ರೂಪಾಯಿಗಳನ್ನು ಖರ್ಚು ಮಾಡಿದೆ.
ಶಿಕ್ಷಕನ ಉಳಿಸಿ ಎನ್ನುವ ಈ ಕ್ಯಾಂಪೇನ್ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದ್ದು, ಈ ಮೂಲಕವಾದರೂ ಶಿಕ್ಷಕನ ಬಾಳು ಬೆಳಗಲಿ ಎನ್ನುವ ನಿರೀಕ್ಷೆಯಲ್ಲಿ ಶಿಕ್ಷಕ ವೃಂದವಿದೆ.
Dakshina Kannada,Karnataka
March 18, 2025 5:37 PM IST