Last Updated:
ಪಂಜಾಬ್ ಕಿಂಗ್ಸ್ ಸ್ಪಿನ್ನರ್ ಯುಜ್ವೇಂದ್ರ ಚಾಹಲ್ ಐಪಿಎಲ್‌ನಲ್ಲಿ ಎರಡನೇ ಹ್ಯಾಟ್ರಿಕ್ ವಿಕೆಟ್ ಪಡೆದಿದ್ದಾರ. ಈ ನಡುವೆ ಆರ್ ಜೆ ಮಹ್ವಾಶ್ ಹಾಕಿರುವ ಇನ್ಸ್ಟಾಗ್ರಾಮ್ ಪೋಸ್ಟ್ ಒಂದು ವೈರಲ್ ಆಗಿದೆ.
ಪಂಜಾಬ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ (PBKS vs CSK) ನಡುವಿನ ಬುಧವಾರದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡದ ಸ್ಪಿನ್ನರ್ ಯುಜ್ವೇಂದ್ರ ಚಾಹಲ್ (Yuzvendra Chahal) ಐಪಿಎಲ್‌ನಲ್ಲಿ ತಮ್ಮ ಎರಡನೇ ಹ್ಯಾಟ್ರಿಕ್ (Hattrick) ವಿಕೆಟ್ ಪಡೆಯುವ ಮೂಲಕ ಇತಿಹಾಸ ನಿರ್ಮಿಸಿದರು. ಜಗತ್ತು ಚಹಲ್ ಅವರ ಸಾಧನೆಯನ್ನು ಕೊಂಡಾಡುತ್ತಿದೆ. ಈ ನಡುವೆ ಆರ್‌ಜೆ ಮಹ್ವಾಶ್ (RJ Mahvash) ಅವರ ಸೋಶಿಯಲ್ ಮೀಡಿಯಾ ಪೋಸ್ಟ್ ಒಂದು ಸಿಕ್ಕಾಪಟ್ಟೆ ವೈರಲ್ ಆಗ್ತಾ ಇದೆ.
ಅವರ ಮಾಜಿ ಪತ್ನಿ ಧನಶ್ರೀ ಜೊತೆಗಿನ ವಿಚ್ಛೇದನದ ಬಳಿಕ ಅವರು ನಟ ಮತ್ತು ಸೋಶುಯಲ್ ಮೀಡಿಯಾ ಕ್ರಿಯೇಟರ್ ಆಗಿರುವ ಆರ್ ಜೆ ಮಹ್ವಾಶ್ ಅವರ ಜೊತೆಗೆ ಪ್ರೀತಿಯಲ್ಲಿದ್ದಾರೆ ಎಂಬ ವದಂತಿಗಳು ಹರಡಿದ್ದವು. ಇದೀಗ ಚಹಲ್ ಹ್ಯಾಟ್ರಿಕ್ ವಿಕೆಟ್ ತೆಗೆಯುತ್ತಿದ್ದಂತೆ ಮಹ್ವಾಶ್ ಅವರು ಚಹಲ್ ಸಾಧನೆಯನ್ನು ಹೊಗಳಿ ಹಾಕಿರುವ ಇನ್ಸ್ಟಾಗ್ರಾಮ್ ಪೋಸ್ಟ್ ಕೂಡ ಸಖತ್ ವೈರಲ್ ಆಗ್ತಾ ಇದೆ.
ಚಾಹಲ್ ಅವರನ್ನು ಹೊಗಳಿದ ಆರ್ ಜೆ ಮಹ್ವಾಶ್!
ಬುಧವಾರ ರಾತ್ರಿ, ಸಿಎಸ್‌ಕೆ ಇನ್ನಿಂಗ್ಸ್‌ನ 19 ನೇ ಓವರ್‌ನಲ್ಲಿ ಬೌಲಿಂಗ್ ಮಾಡಿದ ಚಹಲ್ ಹ್ಯಾಟ್ರಿಕ್ ವಿಕೆಟ್ ಪಡೆದು ಮಿಂಚಿದರು. ಇದಾದ ಕೆಲವೇ ನಿಮಿಷಗಳ ನಂತರ, ಮಹ್ವಾಶ್ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ, “God Mode On Kyaa? Yuzi Strenth Off a Warrior” ಎಂದು ಬರೆದುಕೊಂಡಿದ್ದಾರೆ. ನಿನ್ನದು ಹೋರಾಡುವ ಯೋಧನ ಶಕ್ತಿ ಎಂದು ಹುರಿದುಂಬಿಸಿದ್ದಾರೆ. ಸದ್ಯ ಈ ಪೋಸ್ಟ್ ವ್ಯಾಪಕ ವೈರಲ್ ಆಗ್ತಾ ಇದೆ.
ಹಲವು ಬಾರಿ ಚಹಲ್ ಜೊತೆ ಕಾಣಿಸಿಕೊಂಡಿರುವ ಮಹ್ವಾಶ್
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್ 2025) ಗಿಂತ ಮೊದಲು ಅವರು ಚಹಲ್ ಜೊತೆ ಕಾಣಿಸಿಕೊಂಡು ಸುದ್ದಿಯಾಗಿದ್ದರು. ಈ ವರ್ಷದ ಆರಂಭದಲ್ಲಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ಕ್ರಿಕೆಟ್ ತಂಡ ಪಾಕಿಸ್ತಾನ ವಿರುದ್ಧ ಆಡುವಾಗಲು ಇಬ್ಬರು ದುಬೈನಲ್ಲಿ ಪಂದ್ಯ ವೀಕ್ಷಿಸುವಾಗ ಕ್ಯಾಮೆರಾ ಕಣ್ಣಿಗೆ ಸೆರೆಯಾಗಿದ್ದರು. ಇದು ಅವರಿಬ್ಬರ ನಡುವಿನ ಸಂಬಂಧದ ಕುರಿತು ವದಂತಿಗಳಿಗೆ ಕಾರಣವಾಯಿತು.
ಒಂದು ಪೋಸ್ಟ್ ಹಲವು ಆಯಾಮ!
ಹೌದು, ಕಳೆದ ಕೆಲವು ದಿನಗಳ ಹಿಂದೆ, ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಪಂಜಾಬ್ ಕಿಂಗ್ಸ್ ನಡುವಿನ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿದ ನಂತರ, ಚಹಲ್ ಸ್ಟಾಗ್ರಾಮ್‌ನಲ್ಲಿ ನಗುತ್ತಿರುವ ಮತ್ತು ಕೆಂಪು ಗುಲಾಬಿ ಹೂಗುಚ್ಛವನ್ನು ಹಿಡಿದಿರುವ ಸ್ಟೋರಿಯನ್ನು ಹಂಚಿಕೊಂಡಿದ್ದರು. ಈ ಸ್ಟೋರಿಯನ್ನು ಚಹಲ್ ಮೊದಲು ಮಹ್ವಾಶ್‌ಗೆ ಟ್ಯಾಗ್ ಮಾಡಿ ನಂತರ ಡಿಲಿಟ್ ಮಾಡಿದ್ದರು. ಹಾಗಾಗಿ ಈ ಇಬ್ಬರ ಸಂಬಂಧದ ಕುರಿತು ವ್ಯಾಪಕ ಚರ್ಚೆಗಳು ಆರಂಭವಾಗಿವೆ.
32 ರನ್ ನೀಡಿ 4 ವಿಕೆಟ್ ಪಡೆದ ಚಹಲ್
ಚಹಲ್ ನಿನ್ನೆ ನಡೆದ ಸಿಎಸ್‌ಕೆ ವಿರುದ್ಧದ ಪಂದ್ಯದಲ್ಲಿ 4 ಓವರ್ ಬೌಲಿಂಗ್ ಮಾಡಿ 32 ರನ್ ನೀಡಿ ಪ್ರಮುಖ 4 ವಿಕೆಟ್ ಪಡೆದುಕೊಂಡರು. ಅವರು 19ನೇ ಓವರ್‌ನಲ್ಲಿ ಮೂರು ಎಸೆತಗಳಲ್ಲಿ ಮೂರು ವಿಕೆಟ್ ಪಡೆಯುವ ಮೂಲಕ ಐಪಿಎಲ್‌ನಲ್ಲಿ 2 ಬಾರಿ ಹ್ಯಾಟ್ರಿಕ್ ವಿಕೆಟ್ ಪಡೆದ ಸಾಧನೆ ಮಾಡಿದರು. ಅಷ್ಟೇ ಅಲ್ಲ ಅವರು ಅತೀ ಹೆಚ್ಚು ಬಾರಿ 4 ವಿಕೆಟ್ ಪಡೆದ ಸಾಧನೆಯನ್ನು ತಮ್ಮದಾಗಿಸಿಕೊಂಡರು.