191 ರನ್ಗಳ ಗುರಿ ಬೆನ್ನಟ್ಟಿದ ಪಂಜಾಬ್ ಕಿಂಗ್ಸ್ ತಂಡ ಉತ್ತಮ ಆರಂಭ ಪಡೆದುಕೊಂಡಿತು. 4.4 ಓವರ್ ಬ್ಯಾಟಿಂಗ್ ಮಾಡಿದ ಆರಂಭಿಕರಾದ ಪ್ರಭಸಿಮ್ರನ್ ಸಿಂಗ್ ಹಾಗೂ ಪ್ರಿಯಾಂಶ್ ಆರ್ಯ 44 ರನ್ ಸೇರಿಸಿದರು. ಆರ್ಯ 15 ಎಸೆತಗಳಲ್ಲಿ 5 ಬೌಂಡರಿ ಸಹಿತ 23 ರನ್ಗಳಿಸಿ ಖಲೀಲ್ ಅಹ್ಮದ್ ಬೌಲಿಂಗ್ನಲ್ಲಿ ಧೋನಿಗೆ ಕ್ಯಾಚ್ ನೀಡಿ ಔಟ್ ಆದರು. 2ನೇ ವಿಕೆಟ್ಗೆ ಪ್ರಭಸಿಮ್ರನ್ ಜೊತೆ ಸೇರಿದ 72 ರನ್ಗಳ ಮ್ಯಾಚ್ ಟರ್ನಿಂಗ್ ಜೊತೆಯಾಟ ನಡೆಸಿದರು. ಪ್ರಭಸಿಮ್ರನ್ ಸಿಂಗ್ 36 ಎಸೆತಗಳಲ್ಲಿ 5 ಬೌಂಡರಿ, 3 ಸಿಕ್ಸರ್ಗಳ ಸಹಿತ 54 ರನ್ಗಳಿಸಿದರು.
ಪ್ರಭಸಿಮ್ರನ್ ನೂರ್ ಅಹ್ಮದ್ ಬೌಲಿಂಗ್ನಲ್ಲಿ ಡಿವಾಲ್ಡ್ ಬ್ರೆವಿಸ್ಗೆ ಕ್ಯಾಚ್ ನೀಡಿ ಔಟ್ ಆದರು. ನೆಹಾಲ್ ವಧೇರಾ 5 ರನ್ಗಳಿಸಿ ಪತೀರಣಗೆ ವಿಕೆಟ್ ನೀಡಿದರು. ನಂತರ 4ನೇ ವಿಕೆಟ್ಗೆ ಶ್ರೇಯಸ್ ಅಯ್ಯರ್ ಮತ್ತು ಶಶಾಂಕ್ ಸಿಂಗ್ 18 ಎಸೆತಗಳಲ್ಲಿ 44 ರನ್ ಸಿಡಿಸಿದರು. ಗೆಲುವಿಗೆ 11 ರನ್ ಬೇಕಿದ್ದಾಗ ಜಡೇಜಾ ಬೌಲಿಂಗ್ನಲ್ಲಿ ಡೆವಾಲ್ಡ್ ಬ್ರೆವಿಸ್ ಹಿಡಿದ ಅದ್ಭುತ ಕ್ಯಾಚ್ಗೆ ಶಶಾಂಕ್ ಸಿಂಗ್ ಔಟ್ ಆದರು. ಶಶಾಂಕ್ ಸಿಂಗ್ 12 ಎಸೆತಗಳಲ್ಲಿ 1 ಬೌಂಡರಿ, 2 ಸಿಕ್ಸರ್ ಸಿಡಿಸಿದ್ದರು.
3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಆಗಮಿಸಿದ್ದ ನಾಯಕ ಶ್ರೇಯಸ್ ಅಯ್ಯರ್ 41 ಎಸೆತಗಳಲ್ಲಿ 5 ಬೌಂಡರಿ, 4 ಸಿಕ್ಸರ್ಗಳ ಸಹಿತ 72 ರನ್ಗಳಿಸಿ ಗೆಲುವಿಗೆ 3 ರನ್ಗಳ ಅಗತ್ಯವಿದ್ದಾಗ ಪತೀರಣ ಬೌಲಿಂಗ್ನಲ್ಲಿ ಕ್ಲೀನ್ ಬೌಲ್ಡ್ ಆದರು. ಜೋಸ್ ಇಂಗ್ಲಿಸ್ ಅಜೇಯ 10 ರನ್ಗಳಿಸಿದರು.
ಚೆನ್ನೈ ಸೂಪರ್ ಕಿಂಗ್ಸ್ ಪರ ಮತೀಶ್ ಪತೀರಣ ನೂರ್ ಅಹ್ಮದ್, ಖಲೀಲ್ ಅಹ್ಮದ್ ಹಾಗೂ ರವೀಂದ್ರ ಜಡೇಜಾ ತಲಾ ಒಂದು ವಿಕೆಟ್ ಪಡೆದರು.
ಚೆನ್ನೈ ಸೂಪರ್ ಕಿಂಗ್ಸ್ ಇನ್ನಿಂಗ್ಸ್
ಇದಕ್ಕೂ ಮುನ್ನ ಟಾಸ್ ಸೋತು ಬ್ಯಾಟಿಂಗ್ ಮಾಡಿದ್ದ ಅತಿಥೇಯ ಚೆನ್ನೈ ಸೂಪರ್ ಕಿಂಗ್ಸ್ ತಂಡ 19.2 ಓವರ್ಗಳಲ್ಲಿ 190ಕ್ಕೆ ಆಲೌಟ್ ಆಗಿತ್ತು. ಸ್ಯಾಮ್ ಕರನ್ 47 ಎಸೆತಗಳಲ್ಲಿ 9 ಬೌಂಡರಿ, 4 ಸಿಕ್ಸರ್ಗಳ ಸಹಿತ 88ರನ್ಗಳಿಸಿ ತಂಡದ ಗರಿಷ್ಠ ಸ್ಕೋರರ್ ಆಗಿದ್ದರು. ಡಿವಾಲ್ಡ್ ಬ್ರೆವಿಸ್ 26 ಎಸೆತಗಳಲ್ಲಿ 2 ಬೌಂಡರಿ, 1 ಸಿಕ್ಸರ್ ಸಹಿತ 32 ರನ್ಗಳಿಸಿದ್ದರು. ಆದರೆ ಉಳಿದ ಬ್ಯಾಟರ್ಗಳು ನಿರೀಕ್ಷಿತ ಪ್ರದರ್ಶನ ತೋರದ ಕಾರಣ ತಂಡ ಸೋಲುಕಂಡಿತು.
ಶೇಖ್ ರಶೀದ್ 11, ಆಯುಷ್ ಮ್ಹಾತ್ರೆ 7, ರವೀಂದ್ರ ಜಡೇಜಾ 17, ಶಿವಂ ದುಬೆ 6, ಎಂಎಸ್ ಧೋನಿ 11, ದೀಪಕ್ ಹೂಡಾ 2, ನೂರ್ ಅಹ್ಮದ್ ಹಾಗೂ ಅನ್ಶುಲ್ ಕಾಂಬೋಜ್ ಡಕ್ ಔಟ್ ಆಗಿದ್ದರು.
ಪಂಜಾಬ್ ಕಿಂಗ್ಸ್ ಪರ ಯುಜ್ವೇಂದ್ರ ಚಹಲ್ 32 ರನ್ ನೀಡಿ ಹ್ಯಾಟ್ರಿಕ್ ಸಹಿತ 4 ವಿಕೆಟ್ ಪಡೆದು ಸಿಎಸ್ಕೆ 200 ರ ಗಢಿದಾಟದಂತೆ ತಡೆದರು. ಇದು ಸಿಎಸ್ಕೆ ಕಡೆ ಇದ್ದ ಪಂದ್ಯವನ್ನ ಪಂಜಾಬ್ ಕಡೆಗೆ ತಿರುಗಿಸಿದ ಓವರ್ ಆಗಿತ್ತು. ಮಾರ್ಕೊ ಜಾನ್ಸನ್ 30ಕ್ಕೆ2, ಅರ್ಷದೀಪ್ ಸಿಂಗ್ 25ಕ್ಕೆ 2 ವಿಕೆಟ್ ಪಡೆದು ಮಿಂಚಿದರು.
2ನೇ ಸ್ಥಾನಕ್ಕೇರಿದ ಪಂಜಾಬ್ ಕಿಂಗ್ಸ್
6ನೇ ಗೆಲುವು ಸಾಧಿಸಿದ ಪಂಜಾಬ್ ಕಿಂಗ್ಸ್ 10 ಪಂದ್ಯಗಳಲ್ಲಿ 6 ಗೆಲುವಿನೊಂದಿಗೆ 13 ಅಂಕ ಪಡೆದು 2ನೇ ಸ್ಥಾನಕ್ಕೆ ಲಗ್ಗೆಯಿಟ್ಟಿತು. ಆರ್ಸಿಬಿ 14 ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿದೆ. ಇನ್ನು 8ನೇ ಸೋಲು ಕಂಡ ಚೆನ್ನೈ ಸೂಪರ್ ಕಿಂಗ್ಸ್ ಮೊದಲ ತಂಡವಾಗಿ 18ನೇ ಆವೃತ್ತಿಯ ಐಪಿಎಲ್ನಿಂದ ಹೊರಬಿದ್ದಿತು.
April 30, 2025 11:25 PM IST