Last Updated:
ದೇವಾಲಯಗಳಲ್ಲಿ ಜಾತ್ರೋತ್ಸವ, ಬ್ರಹ್ಮಕಲಶೋತ್ಸವದಂತಹ ಕಾರ್ಯಕ್ರಮಗಳಲ್ಲಿ ಭಕ್ತರಿಗೆ ಅನ್ನಪ್ರಸಾದ ನೀಡುವುದಕ್ಕೂ ಮೊದಲು ಪಲ್ಲ ಪೂಜೆ ಮಾಡುತ್ತಾರೆ. ಅದರ ಬಗ್ಗೆ ತಿಳಿದುಕೊಳ್ಳಲು ಈ ಸ್ಟೋರಿ ನೋಡಿ.
ದಕ್ಷಿಣ ಕನ್ನಡ: ದೇವಸ್ಥಾನಗಳಲ್ಲಿ ಜಾತ್ರೋತ್ಸವ, ಬ್ರಹ್ಮಕಲಶೋತ್ಸವದಂತಹ ದೊಡ್ಡ ಕಾರ್ಯಕ್ರಮಗಳಲ್ಲಿ ಭಕ್ತರಿಗೆ ಅನ್ನಪ್ರಸಾದವನ್ನು (Anna Prasadam) ನೀಡುವುದಕ್ಕೂ ಮೊದಲು ಪಲ್ಲ ಪೂಜೆಯನ್ನು (Palla Puja) ಮಾಡಲಾಗುತ್ತದೆ. ಅನ್ನದ ರಾಶಿ ಮಾಡಿ ಅದರಲ್ಲಿ ಅನ್ನಪೂರ್ಣೇಶ್ವರಿ ದೇವಿಯ ಚಿತ್ರ ಬಿಡಿಸಿ ಪೂಜೆಯನ್ನು ಮಾಡಲಾಗುತ್ತದೆ. ಪಲ್ಲ ಪೂಜೆ ಮಾಡುವುದರಿಂದ ಅನ್ನವು ಅಕ್ಷಯದಂತೆ ವೃದ್ಧಿಸುತ್ತದೆ ಎಂಬುದು ನಂಬಿಕೆಯಾಗಿದೆ (Dakshina Kannada News).
ಅನ್ನವನ್ನು ರಾಶಿ ಹಾಕಿಕೊಂಡು ಏನು ಪೂಜೆ ಮಾಡುತ್ತಿದ್ದಾರೆ ಅಂತಾ ಯೋಚಿಸುತ್ತಿದ್ದೀರಾ? ಇದನ್ನು ಪಲ್ಲ ಪೂಜೆ ಎಂದು ಕರೆಯುತ್ತಾರೆ. ಸಾಮಾನ್ಯವಾಗಿ ದೇವಸ್ಥಾನಗಳಲ್ಲಿ ಜಾತ್ರೋತ್ಸವ, ಬ್ರಹ್ಮಕಲಶೋತ್ಸವದಂತಹ ದೊಡ್ಡ ಕಾರ್ಯಕ್ರಮಗಳಲ್ಲಿ ಈ ಪಲ್ಲ ಪೂಜೆ ಎನ್ನುವ ಧಾರ್ಮಿಕ ಆಚರಣೆಯನ್ನು ಮಾಡಲಾಗುತ್ತದೆ.
ಅನ್ನಪೂರ್ಣೇಶ್ವರಿ ದೇವಿಗೆ ಪೂಜೆ
ಅನ್ನದ ರಾಶಿ ಮಾಡಿ ಅದರಲ್ಲಿ ಅನ್ನಪೂರ್ಣೆಯ ಚಿತ್ರವನ್ನು ಬಿಡಿಸುತ್ತಾರೆ. ಬಳಿಕ ಅನ್ನದಲ್ಲಿ ಮೂಡಿಬಂದ ಅನ್ನಪೂರ್ಣೇಶ್ವರಿ ದೇವಿಗೆ ಪೂಜೆಯನ್ನು ಮಾಡಲಾಗುತ್ತದೆ. ಈ ಪಲ್ಲ ಪೂಜೆಯಲ್ಲಿ ಅನ್ನದ ರಾಶಿ, ಪಾಯಸ ಹಾಗೂ ಸಿಹಿತಿಂಡಿಯನ್ನು ಇಟ್ಟು ಪೂಜಿಸುತ್ತಾರೆ.
ಅನ್ನ ಮಾಡುವ ಸ್ಥಳದಲ್ಲಿ ನಡೆಯುವ ಪೂಜೆ
ಧಾರ್ಮಿಕ ಆಚರಣೆಗಳು ನಡೆಯುವ ವೇಳೆ ದೇವಸ್ಥಾನಕ್ಕೆ ಬರುವ ಭಕ್ತರಿಗೆ ಅನ್ನಪ್ರಸಾದವನ್ನು ನೀಡುವ ಮೊದಲು ಪಲ್ಲ ಪೂಜೆಯನ್ನು ಮಾಡಲಾಗುತ್ತದೆ. ಪುರೋಹಿತರು ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ಅನ್ನ ಬೇಯಿಸುವ ಸ್ಥಳದಲ್ಲಿ ಈ ಪೂಜೆಯನ್ನು ಮಾಡುತ್ತಾರೆ.
ಇದನ್ನೂ ಓದಿ: Belagavi: ಸಮಾಜಸೇವೆಗೆ ಮನಸ್ಸು ಮುಖ್ಯ ಎಂದು ತೋರಿಸಿಕೊಟ್ಟ ಬೈಲಹೊಂಗಲದ ಮಲ್ಲಿಕಾರ್ಜುನ ಗಾಣಿಗೇರ; ಜನರ ಮೆಚ್ಚುಗೆ
ಪಲ್ಲ ಪೂಜೆಯಿಂದ ಅನ್ನ ಅಕ್ಷಯದಂತೆ ವೃದ್ಧಿಸುತ್ತದೆ
ಪಲ್ಲ ಪೂಜೆ ಮಾಡುವುದರಿಂದ ಅನ್ನವು ಅಕ್ಷಯದಂತೆ ವೃದ್ಧಿಸುತ್ತದೆ. ಕ್ಷೇತ್ರಕ್ಕೆ ಬರುವ ಭಕ್ತರ್ಯಾರೂ ಹಸಿದು ಹೋಗದಂತೆ ಅನ್ನಪೂರ್ಣೆ ಹರಸುತ್ತಾಳೆ ಎನ್ನುವ ನಂಬಿಕೆ ಇದೆ. ಹೀಗಾಗಿಯೇ ತಲತಲಾಂತರದಿಂದ ಈ ಪೂಜೆಯನ್ನು ಮಾಡಿಕೊಂಡು ಬರಲಾಗುತ್ತಿದೆ.
ದೇವಸ್ಥಾನಗಳಲ್ಲಿ ಪಲ್ಲ ಪೂಜೆ ನೆರವೇರಿಸಿದ ಬಳಿಕವೇ ಅನ್ನಪ್ರಸಾದವನ್ನು ಭಕ್ತರಿಗೆ ನೀಡಲು ಆರಂಭಿಸಲಾಗುತ್ತದೆ. ಈ ಪೂಜೆ ನೆರವೇರಿಸಿದ ಬಳಿಕ ಅಡುಗೆಮನೆಯಲ್ಲಿ ನಿರಂತರವಾಗಿ ಅನ್ನ ಹಾಗೂ ಇತರ ಪದಾರ್ಥಗಳು ಬೇಯುತ್ತಲೂ, ಬಳಕೆಯಾಗುತ್ತಲೂ ಇರುತ್ತವೆ. ಇನ್ನು, ಈ ಪಲ್ಲ ಪೂಜೆಯ ದೃಶ್ಯ ಕಂಡುಬಂದಿದ್ದು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಎಂಬುದು ವಿಶೇಷ.
Dakshina Kannada,Karnataka
December 07, 2024 12:29 PM IST