Last Updated:
ಉಳುವೆ, ಗೊಬ್ಬರ, ನಾಟಿ ಮಾಡುವುದರಿಂದ ಹಿಡಿದು, ಇದೀಗ ಕಟಾವು, ತೆನೆಯಿಂದ ಭತ್ತವನ್ನು ಬೇರ್ಪಡಿಸುವ ಎಲ್ಲಾ ಕೆಲಸಗಳನ್ನು ಯುವಕರೇ ಮಾಡಿದ್ದು ವಿಶೇಷ.
ಮಂಗಳೂರು: ಎತ್ತ ನೋಡಿದರೂ ಬಂಗಾರದಂತೆ (Gold) ಹೊಳೆಯುವ ಭತ್ತದ ತೆನೆ. ಕಟಾವಿಗೆ ಸಿದ್ಧವಾದ ಗದ್ದೆಯಲ್ಲಿ ಬೆಳ್ಳಕ್ಕಿಗಳಂತೆ ಸಮವಸ್ತ್ರಧಾರಿಗಳಾಗಿ ಕಾಣಿಸುತ್ತಿರುವ ಜನ (People) ಗುಂಪು. ನಗುತ್ತಾ, ನಲಿಯುತ್ತಾ ಕತ್ತಿಯಿಂದ ಪರಪರನೇ ಭತ್ತ (Rice Plant) ಕಟಾವು ಮಾಡುತ್ತಿರುವ ಯುವಕ-ಯುವತಿಯರು. ಮಾರ್ಡನ್ (Modern Society) ಯುಗದಲ್ಲೂ ಭತ್ತ ಕಟಾವಿನ ಕೆಲಸದಲ್ಲಿ ಯುವ ಮನಸ್ಸುಗಳ ಅದ್ಭುಯ ಉತ್ಸಾಹ ಕಂಡುಬಂದಿದ್ದು ದಕ್ಷಿಣ ಕನ್ನಡ (Dakshina Kannada News) ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಉಜಿರೆಯಲ್ಲಿ.
ಭತ್ತ ಕಟಾವು ಕಾರ್ಯಕ್ರಮ
ಉಜಿರೆಯ ಅನಂತೋಡಿ ದೇವರ ಗದ್ದೆಯಲ್ಲಿ ಸಾವಿರಕ್ಕೂ ಅಧಿಕ ಜನ ಕೃಷಿ ಕಾರ್ಯ ಮಾಡಿ ಸಂಭ್ರಮಿಸಿದ್ದಾರೆ. ಉದ್ಯಮಿ ಮೋಹನ್ ಕುಮಾರ್ ನೇತೃತ್ವದ ಬದುಕು ಕಟ್ಟೋಣ ಬನ್ನಿ ಸಂಸ್ಥೆಯ ಆಶ್ರಯದಲ್ಲಿ ನಡೆದ ಕಾರ್ಯಕ್ರಮ ದಲ್ಲಿ ಸಾವಿರಾರು ಜನ ಭತ್ತದ ಗದ್ದೆಯಲ್ಲಿ ಕಟಾವು ಕಾರ್ಯ ಮಾಟಿ ಸಂಭ್ರಮಿಸಿದ್ದಾರೆ. ಹಬ್ಬದ ವಾತಾವರಣದಲ್ಲಿ ಉಜಿರೆಯ ಎಸ್ ಡಿ ಎಂ ಕಾಲೇಜಿನ ವಿದ್ಯಾರ್ಥಿಗಳು ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಭತ್ತ ಕಟಾವು ಕಾರ್ಯಕ್ರಮ ಅದ್ಭುತವಾಗಿ ಮೂಡಿ ಬಂದಿತ್ತು.
ತಲೆಗೆ ಮುಟ್ಟಾಳೆ, ಕೈ ಯಲ್ಲಿ ಕತ್ತಿ!
ಸುಮಾರು ನಾಲ್ಕುವರೆ ಎಕರೆ ಗದ್ದೆಯಲ್ಲಿ ಬೆಳೆದ ಭತ್ತ ತೆನೆ ತುಂಬಿ ಸಮೃದ್ಧಿಯಾಗಿ ಬೆಳೆದು ನಿಂತಿದೆ. ಯುವಕ ಯುವತಿಯರನ್ನು ಮರಳಿ ಮಣ್ಣಿಗೆ ಕರೆತರುವ ಅಪರೂಪದ ಪ್ರಯತ್ನ ಸಫಲವಾಗಿದೆ. ಸಾಂಪ್ರದಾಯಿಕ ಶೈಲಿಯ ಉಡುಗೆಯನ್ನು ತಿಟ್ಟು, ತಲೆಗೆ ಮುಟ್ಟಾಳೆ, ಕೈ ಯಲ್ಲಿ ಕತ್ತಿಯನ್ನು ಹಿಡಿದು ಗದ್ದೆಗೆ ಇಳಿದ ಯುವಕ ಯುವತಿಯರ ತಂಡ ಬಿಸಿಲಿನ ಬೇಗೆಗೂ ಸಂಭ್ರಮದಿಂದ ಭತ್ತ ಕಟಾವು ಮಾಡಿದ್ದಾರೆ.
ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಸೇರಿದ ಗದ್ದೆ ಇದಾಗಿದ್ದು, ಈ ಬಾರಿ ಯುವ ಜನರಿಗೆ ಕೃಷಿ ಬದುಕನ್ನು ತಿಳಿಸಬೇಕೆಂಬ ಉದ್ದೇಶದಿಂದಲೇ ಸಂಪೂರ್ಣ ಬಳಸಲಾಗಿತ್ತು. ಉಳುವೆ, ಗೊಬ್ಬರ, ನಾಟಿ ಮಾಡುವುದರಿಂದ ಹಿಡಿದು, ಇದೀಗ ಕಟಾವು, ತೆನೆಯಿಂದ ಭತ್ತವನ್ನು ಬೇರ್ಪಡಿಸುವ ಎಲ್ಲಾ ಕೆಲಸಗಳನ್ನು ಯುವಕರೇ ಮಾಡಿದ್ದು ವಿಶೇಷ.
ಇದನ್ನೂ ಓದಿ: Mandya: ವಿಜೃಂಭಣೆಯಿಂದ ನಡೆದ ಐತಿಹಾಸಿಕ ಭಾವೈಕ್ಯತೆಯ ಸಿಡಿ ಹಬ್ಬ, ನೋಡಲು ಎರಡು ಕಣ್ಣು ಸಾಲದು!
ಮಣ್ಣಿನ ಮಹತ್ವವನ್ನು ತಿಳಿಸುವ ಕೆಲಸವನ್ನು ಬದುಕು ಕಟ್ಟೋಣ
ಭತ್ತದ ಕೆಲಸಕ್ಕೆ ಊರಿನ ಅನುಭವಿ ಹಿರಿಯ ಕೃಷಿಕರು ಸಾಥ್ ನೀಡಿದರು. ಗದ್ದೆಯಿಂದ ಭತ್ತದ ತೆನೆಯನ್ನು ಹೊತ್ತು ತಂದು ದೇವಸ್ಥಾನದ ಎದುರು ಸಂಪ್ರದಾಯಿಕ ಶೈಲಿಯಲ್ಲಿ ಭತ್ತವನ್ನು ಬೇರ್ಪಡಿಸುವ ಕಾರ್ಯವೂ ನಡೆದಿದೆ. ಗದ್ದೆಗಳೆಲ್ಲಾ ಹಡೀಲು ಬಿದ್ದು ನಾಶವಾಗುತ್ತಿರುವ ಸಂದರ್ಭದಲ್ಲಿ ಮತ್ತೆ ಮಣ್ಣಿನ ಮಹತ್ವವನ್ನು ತಿಳಿಸುವ ಕೆಲಸವನ್ನು ಬದುಕು ಕಟ್ಟೋಣ ಸಂಸ್ಥೆ ಮಾಡುತ್ತಿದೆ.
ಕಳೆದು ಹೋದ ಕೃಷಿ ಸಂಸ್ಕೃತಿಯ ನೆನಪು
ನಾಲ್ಕೂ ವರೆ ಎಕರೆ ಗದ್ದೆಯಲ್ಲಿ ಬೆಳೆದ ಭತ್ತವನ್ನು ಅಕ್ಕಿ ಮಾಡಿ ಮುಂದೆ ದೇವಸ್ಥಾನಗಳ ಅನ್ನದಾನ ವನ್ನು ದೇವರ ನೈವೇದ್ಯಕ್ಕೆ ಬಳಸಲಾಗುತ್ತದೆ. ಬೈ ಹುಲ್ಲನ್ನು ಗೋ ಶಾಲೆಗಳಿಗೆ ನೀಡಲಾಗುತ್ತದೆ. ಒಟ್ಟಿನಲ್ಲಿ ಕೃಷಿ ಬದುಕಿನ ಸುಂದರ ಕ್ಷಣಗಳು ಮರೆಯಾಗುತ್ತಿರುವ ಸಂದರ್ಭದಲ್ಲಿ ಉಜಿರೆಯ ಅನಂತೋಡಿಯ ಪರಿಸರ ಕಳೆದು ಹೋದ ಕೃಷಿ ಸಂಸ್ಕೃತಿಯನ್ನು ನೆನಪಿಸುವಂತೆ ಮಾಡಿದೆ. ಭಾರತದ ಮೂಲ ಕೃಷಿ ಪರಂಪರೆಯನ್ನು ಉಳಿಸಿ ಬೆಳೆಸುವ ಈ ಪ್ರಯತ್ನ ಶ್ಲಾಘನೀಯವಾಗಿದೆ.
Dakshina Kannada,Karnataka
February 10, 2025 7:43 PM IST