Dakshina Kannada: ಅಂತರಾಷ್ಟ್ರೀಯ ಮಟ್ಟದ ಫ್ಯಾಶನ್ ಶೋ ಸ್ಪರ್ಧೆಗೆ ಆಯ್ಕೆಯಾದ ಮಂಗಳೂರಿನ 7 ಹುಡುಗಿಯರು! | Dakshina Kannada: 7 girls from Mangalore selected for international fashion show competition!

Dakshina Kannada: ಅಂತರಾಷ್ಟ್ರೀಯ ಮಟ್ಟದ ಫ್ಯಾಶನ್ ಶೋ ಸ್ಪರ್ಧೆಗೆ ಆಯ್ಕೆಯಾದ ಮಂಗಳೂರಿನ 7 ಹುಡುಗಿಯರು! | Dakshina Kannada: 7 girls from Mangalore selected for international fashion show competition!

Last Updated:

ಮಿಸ್ ಕುಡ್ಲ 2025 ನಲ್ಲಿ ಭಾಗವಹಿಸಲು ಏಂಜೆಲ್ , ಸೋನಲ್ , ಜೆನಿಕಾ, ದಿವ್ಯ ಶ್ರೀನಿವಾಸ್, ನಿಶ್ಮಿತಾ, ಜಾಯ್ ಲಿನ್, ಅಯೋನ ಆಯ್ಕೆಯಾಗಿದ್ದಾರೆ.
ಮಂಗಳೂರಿನಿಂದ ಆಯ್ಕೆಯಾದ ಏಳು ಮಂದಿ ಕೂಡ ಮೊದಲ ಬಾರಿಗೆ ಅಂತರಾಷ್ಟ್ರೀಯ ಮಾಡೆಲಿಂಗ್ ಸ್ಪರ್ಧೆಗೆ ಹೋಗುತ್ತಿದ್ದಾರೆ.

X

ವಿಡಿಯೋ ಇಲ್ಲಿ ನೋಡಿ

ದಕ್ಷಿಣ ಕನ್ನಡ: ವಿಶ್ವದ ಮಾಡೆಲಿಂಗ್(Modeling) ಲೋಕಕ್ಕೆ ಮಂಗಳೂರಿನ ಕೊಡುಗೆ ದೊಡ್ಡದಿದೆ. ಇಲ್ಲಿಂದ ಫ್ಯಾಶನ್ ಲೋಕದಲ್ಲಿ ಮಿಂಚಿದವರು ಸಾಕಷ್ಟು ಮಂದಿ ಇದ್ದಾರೆ. ಮಾಡೆಲಿಂಗ್ ಮೂಲಕ ಸಾಧನೆ ಮಾಡಿ ಬಾಲಿವುಡ್, ಸ್ಯಾಂಡಲ್‌ವುಡ್‌ನಲ್ಲೂ(Sandalwood) ಮಿಂಚಿದ್ದಾರೆ. ಇದೀಗ ಬಹರೈನ್ ನಲ್ಲಿ ನಡೆಯುವ ಫ್ಯಾಶನ್ ಶೋಗೆ(Fashion Show) ಮಂಗಳೂರಿನ 7 ಯುವತಿಯರು ಆಯ್ಕೆಯಾಗಿದ್ದು, ಕಿರೀಟ ಗೆಲ್ಲುವ ನಿರೀಕ್ಷೆ ಹೊಂದಿದ್ದಾರೆ. ಬಾಲಿವುಡ್ ನಟಿ ಐಶ್ವರ್ಯಾ ರೈ ಸೇರಿದಂತೆ ಹಲವು ಮಂದಿ ಮಂಗಳೂರು ಮೂಲದ ಯುವತಿಯರು ಫ್ಯಾಶನ್ ಲೋಕದಲ್ಲಿ ಸಾಧನೆ ಮಾಡಿದ್ದಾರೆ. ಮಂಗಳೂರಿನಲ್ಲಿ(Mangaluru) ಯುವತಿಯರಲ್ಲಿ ಫ್ಯಾಶನ್ ಲೋಕದ ಬಗ್ಗೆ ಆಸಕ್ತಿ ಹೆಚ್ಚು. ಈ ಕಾರಣದಿಂದ ಮಾಡೆಲಿಂಗ್ ಕ್ಷೇತ್ರದಲ್ಲಿ ಹೆಚ್ಚಾಗಿ ಮಂಗಳೂರು ಹುಡುಗಿಯರು ಕಾಣಿಸಿಕೊಳ್ಳುತ್ತಾರೆ. ಇದೀಗ ಅಂತರಾಷ್ಟ್ರೀಯ ಮಟ್ಟದಲ್ಲಿ(International Level) ನಡೆಯುವ ಫ್ಯಾಶನ್ ಶೋ ಸ್ಪರ್ಧೆಗೆ ಮಂಗಳೂರಿನ ಏಳು ಹುಡುಗಿಯರು ಆಯ್ಕೆಯಾಗಿದ್ದಾರೆ.

ಬಹರೈನ್ ನಲ್ಲಿ ಪ್ರತಿ ವರ್ಷ ಕುಡ್ಲೋತ್ಸವ ಎಂಬ ಅದ್ದೂರಿ ಕಾರ್ಯಕ್ರಮ ನಡೆಯುತ್ತದೆ. ಮಂಗಳೂರು ಮೂಲದವರು ನಡೆಸುವ ಈ ಕಾರ್ಯಕ್ರಮದಲ್ಲಿ ಫ್ಯಾಶನ್ ಶೋ ಕೂಡ ಒಂದು. ಈ ಬಾರಿ ಏಪ್ರಿಲ್ 4 ರಂದು ಬಹರೈನ್ ನಲ್ಲಿ ಫ್ಯಾಶನ್ ಶೋ ನಡೆಯಲಿದೆ. ಈ ಫ್ಯಾಶನ್ ಶೋ ನಲ್ಲಿ ವಿದೇಶಗಳಲ್ಲಿ ನೆಲೆಸಿರುವ ಮಂಗಳೂರು ಮೂಲದ ಯುವತಿಯರು ಪಾಲ್ಗೊಳ್ಳಲಿದ್ದಾರೆ. ಇದರಲ್ಲಿ ಮಂಗಳೂರಿನ ವೆನ್ಜ್ ಮಾಡೆಲ್ ನಲ್ಲಿ ತರಬೇತಿಗೊಂಡ 7 ಯುವತಿಯರು ಪಾಲ್ಗೊಳ್ಳಲು ಆಯ್ಕೆಯಾಗಿದ್ದಾರೆ.

ಮಂಗಳೂರಿನ ಬಲ್ಲಾಲ್ ಭಾಗ್ ನಲ್ಲಿ ಎಂಟು ತಿಂಗಳ ಹಿಂದೆ ವೆನ್ಜ್ ಮಾಡೆಲ್ ಅಕಾಡೆಮಿ ಯನ್ನು ವೆನ್ಸಿಟಾ ಡಯಾಸ್ ಎಂಬವರು ಆರಂಭಿಸಿದ್ದರು. ವೆನ್ಸಿಟಾ ಅವರು ಥೈಲ್ಯಾಂಡ್ ನಲ್ಲಿ ನಡೆದ ಅಂತರಾಷ್ಟ್ರೀಯ ಫ್ಯಾಶನ್ ಶೋ ಸ್ಪರ್ಧೆಯಲ್ಲಿ ಕಿರೀಟ ಮುಡಿಗೇರಿಸಿಕೊಂಡಿದ್ದರು. ಇದೀಗ ಅವರು ಸಿನಿಮಾ ನಟಿಯು ಆಗಿದ್ದಾರೆ. ಇವರು ಆರಂಭಿಸಿದ ವೆನ್ಜ್ ಮಾಡೆಲ್ ಅಕಾಡೆಮಿಯಲ್ಲಿ ತರಬೇತಿ ಪಡೆದ ಏಳು ಚೆಲುವೆಯರು ಕುಡ್ಲೋತ್ಸವಕ್ಕೆ ಆಯ್ಕೆಯಾಗಿದ್ದಾರೆ. ಮಿಸ್ ಕುಡ್ಲ 2025 ನಲ್ಲಿ ಭಾಗವಹಿಸಲು ಏಂಜೆಲ್ , ಸೋನಲ್ , ಜೆನಿಕಾ, ದಿವ್ಯ ಶ್ರೀನಿವಾಸ್, ನಿಶ್ಮಿತಾ, ಜಾಯ್ ಲಿನ್, ಅಯೋನ ಆಯ್ಕೆಯಾಗಿದ್ದಾರೆ.

ಇದನ್ನೂ ಓದಿ: Dakshina Kannada: ನಿಯಮ ರೂಪಿಸುವವರಿಗೆ ಕಾನೂನಿನ ಪಾಠ ಮಾಡಿದ ಸಾಮಾನ್ಯ ಜನ!

ಮಂಗಳೂರಿನಿಂದ ಆಯ್ಕೆಯಾದ ಏಳು ಮಂದಿ ಕೂಡ ಮೊದಲ ಬಾರಿಗೆ ಅಂತರಾಷ್ಟ್ರೀಯ ಮಾಡೆಲಿಂಗ್ ಸ್ಪರ್ಧೆಗೆ ಹೋಗುತ್ತಿದ್ದಾರೆ. ಇವರಲ್ಲಿ ಕೆಲವರು ಮಂಗಳೂರಿನಲ್ಲಿ ನಡೆದ ಹಲವು ಫ್ಯಾಶನ್ ಶೋ ಸ್ಪರ್ಧೆಗಳಲ್ಲಿ ಕಿರೀಟ ಮುಡಿಗೇರಿಸಿಕೊಂಡಿದ್ದರು. ಇದೀಗ ಬಹರೈನ್ ನಲ್ಲಿ ನಡೆಯುವ ಫ್ಯಾಶನ್ ಶೋ ನಲ್ಲಿ ಕಿರೀಟ ಗೆಲ್ಲುವ ನಿರೀಕ್ಷೆಯಲ್ಲಿ ಪಯಣ ಬೆಳೆಸಿದ್ದಾರೆ.

ಈ ಬಗ್ಗೆ ಮಾತನಾಡಿದ ವೆನ್ಸಿಟಾ ಡಯಾಸ್ ಅವರು ನಾನು ಎಂಟು ತಿಂಗಳ ಹಿಂದೆ ಆರಂಭಿಸಿದ ವೆನ್ಸ್ ಮಾಡೆಲ್ ಅಕಾಡೆಮಿಯಲ್ಲಿ ತರಬೇತಿಗೊಂಡ ಏಳು ಮಂದಿ ಬಹರೈನ್ ನಲ್ಲಿ ನಡೆಯುವ ಕುಡ್ಲೋತ್ಸವ ಕಾರ್ಯಕ್ರಮದಲ್ಲಿ ಮಿಸ್ ಕುಡ್ಲ 2025 ಫ್ಯಾಶನ್ ಶೋ ನಲ್ಲಿ ಪಾಲ್ಗೊಳ್ಳಲಿದ್ದಾರೆ. ನಾನು ಕೂಡ ಇದರಲ್ಲಿ ಭಾಗಿಯಾಗಲು ಹೋಗುತ್ತಿದ್ದೇನೆ ಎಂದರು. ಸ್ಪರ್ಧಿ ದಿವ್ಯಾ ಶ್ರೀನಿವಾಸ್ ಮಾತನಾಡಿ ಬಹರೈನ್ ನಲ್ಲಿ ನಡೆಯುವ ಫ್ಯಾಶನ್ ಶೋ ಗೆ ಸ್ಪರ್ಧಿಸಲು ನಾನು ಆಯ್ಕೆಯಾಗಿರುವುದು ತುಂಬಾ ಖುಷಿಯಾಗಿದೆ. ನಾನು ಹಲವು ಫ್ಯಾಶನ್ ಶೋ ನಲ್ಲಿ ಭಾಗವಹಿಸಿದ್ದೆ. ಅಂತರಾಷ್ಟ್ರೀಯ ಸ್ಪರ್ಧೆಗೆ ಭಾಗಿಯಾಗಿರುವುದು ಇದೇ ಮೊದಲು ಎನ್ನುತ್ತಾರೆ.

ಸ್ಪರ್ಧಿ ನಿಶ್ಮಿತಾ ಮಾತನಾಡಿ ನಾನು ಇದರಲ್ಲಿ ಭಾಗಿಯಾಗಲು ವೆನ್ಜ್ ಮಾಡೆಲ್ ಅಕಾಡೆಮಿ ಅವಕಾಶ ಕೊಟ್ಟಿದೆ. ಇದು ನನ್ನ ಮೊದಲು ಅಂತರಾಷ್ಟ್ರೀಯ ಸ್ಪರ್ಧೆಯಾಗಿದೆ ಎನ್ನುತ್ತಾರೆ. ಸ್ಪರ್ಧಿ ಏಂಜೆಲ್ ಮಾತನಾಡಿ ಮಿಸ್ ಕುಡ್ಲ ಸ್ಪರ್ಧೆಯಲ್ಲಿ ಭಾಗಿಯಾಗಲು ಅವಕಾಶ ಸಿಕ್ಕಿದೆ. ವೆನ್ಸಿಟಾ, ಆನಂದ್ ಅವರು ಈ ಆಯ್ಕೆಗಾಗಿ ತುಂಬಾ ಶ್ರಮಪಟ್ಟಿದ್ದಾರೆ. ನಾನು ತುಂಬಾ ಫ್ಯಾಶನ್ ಶೋ ಸ್ಪರ್ಧೆಯಲ್ಲಿ ಭಾಗವಹಿಸಿದ್ದೆ. ಕೋಸ್ಟಲ್ ವುಡ್ ನಲ್ಲಿ ರನ್ನರ್ ಅಪ್ ಆಗಿದ್ದೆ ಎನ್ನುತ್ತಾರೆ.