Last Updated:
ಈ ಪೈಕಿ ಗಡಿಪಿಲದ ಕಾಮಗಾರಿ ಹೊರತುಪಡಿಸಿ ಉಳಿದ ಮೂರು ಕಾಮಗಾರಿಗಳು ಶೇ 60 ರಷ್ಟು ಮುಗಿದಿವೆ. ಕೋರಿಯಾರ್, ಬಜಕರೆ, ಹಾಗೂ ಪುರುಷರಕಟ್ಟೆಯ ಮೇಲ್ಸೇತುವೆ ಕಾಮಗಾರಿ ಫೆಬ್ರವರಿ ತಿಂಗಳಾಂತ್ಯಕ್ಕೆ ಮುಗಿಯುವ ಸಾಧ್ಯತೆಯಿದೆ. ಗಡಿಪಿಲದ ಕಾಮಗಾರಿ ಏಪ್ರಿಲ್ ತಿಂಗಳಲ್ಲಿ ಕೊನೆಗೊಳ್ಳಲಿದೆ.
ದಕ್ಷಿಣ ಕನ್ನಡ: ಕೇಂದ್ರ ಸರಕಾರದ ಅಮೃತ್ ಭಾರತ್ (Amruth Bharat) ವಿಶೇಷ ಯೋಜನೆಯಡಿ ಮೈಸೂರು ರೈಲ್ವೇ ವಿಭಾಗದ ಮಂಗಳೂರು -ಸುಬ್ರಹ್ಮಣ್ಯ ಮಧ್ಯೆ ನಾಲ್ಕು ಕಡೆ ರೈಲ್ವೇ ಮೇಲ್ಸೇತುವೆ ಕಾಮಗಾರಿ(Railway Flyover Construction) ನಡೆಯುತ್ತಿದ್ದು, ಇದೇ ಮಾರ್ಚ್ ಅಂತ್ಯದೊಳಗೆ ಕಾಮಗಾರಿ ಮುಗಿಯಲಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರು(PM Narendra Modi) 2024 ನೇ ಫೆಬ್ರವರಿ 26 ರಂದು ದೇಶಾದ್ಯಾಂತ ನನ್ನ ಕುಟುಂಬ ಸದಸ್ಯರಿಗೆ 41 ಸಾವಿರ ಕೋಟಿ ರೂ ಮೌಲ್ಯದ ರೈಲ್ವೇ ಯೋಜನೆಗಳ(Railway Projects) ಉಡುಗೊರೆ ಎನ್ನುವ ಘೋಷಣೆಯೊಂದಿಗೆ ಯೋಜನೆಗಳಿಗೆ ಚಾಲನೆ ನೀಡಿದ್ದರು.
ಶೀಘ್ರದಲ್ಲೇ ಕಾಮಗಾರಿ ಪೂರ್ಣ
ಅಮೃತ್ ಭಾರತ್ ಸ್ಪೆಷಲ್ ಯೋಜನೆಯಲ್ಲಿ 554 ರೈಲ್ವೇ ನಿಲ್ದಾಣಗಳ ಪುನರಾಭಿವೃದ್ಧಿ, 1500 ರಸ್ತೆ ಮೇಲ್ಸೇತುವೆಗಳು ಹಾಗೂ ಅಂಡರ್ ಪಾಸ್‌ಗಳ ಶಂಕುಸ್ಥಾಪನೆ ನೆರವೇರಿಸಿದ್ದರು. ಇದರ ಒಂದು ಭಾಗವೇ ಮಂಗಳೂರು-ಬೆಂಗಳೂರು ರೈಲ್ವೆ ಹಳಿಯ ಮೇಲೆ ಬರುವ ಸುಬ್ರಹ್ಮಣ್ಯ -ಮಂಗಳೂರು ಮಧ್ಯದ ಕಡಬ ತಾಲೂಕಿನ ಕೋಡಿಂಬಾಳ ಗ್ರಾಮದ ಕೋರಿಯಾರ್, 102 ನೇ ನೆಕ್ಕಿಲಾಡಿ ಗ್ರಾಮದ ಬಜಕರೆ, ಪುತ್ತೂರು ತಾಲೂಕಿನ ನರಿಮೊಗರು ಗ್ರಾಮದ ಪುರುಷರಕಟ್ಟೆ ಸಾಂದೀಪನಿ ವಿದ್ಯಾ ಸಂಸ್ಥೆಯ ಬಳಿ ಹಾಗೂ ನರಿಮೊಗರು ಗ್ರಾಮದ ಗಡಿಪಿಲ ಎಂಬಲ್ಲಿ ನಾಲ್ಕು ಕಡೆ ಸುಮಾರು 24 ಕೋಟಿ ರೂ ವೆಚ್ಚದಲ್ಲಿ ಮೇಲ್ಸೇತುವೆ ನಿರ್ಮಾಣವಾಗುತ್ತಿದೆ. ಈ ಪೈಕಿ ಗಡಿಪಿಲದ ಕಾಮಗಾರಿ ಹೊರತುಪಡಿಸಿ ಉಳಿದ ಮೂರು ಕಾಮಗಾರಿಗಳು ಶೇ 60 ರಷ್ಟು ಮುಗಿದಿವೆ. ಕೋರಿಯಾರ್, ಬಜಕರೆ, ಹಾಗೂ ಪುರುಷರಕಟ್ಟೆಯ ಮೇಲ್ಸೇತುವೆ ಕಾಮಗಾರಿ ಫೆಬ್ರವರಿ ತಿಂಗಳಾಂತ್ಯಕ್ಕೆ ಮುಗಿಯುವ ಸಾಧ್ಯತೆಯಿದೆ. ಗಡಿಪಿಲದ ಕಾಮಗಾರಿ ಏಪ್ರಿಲ್ ತಿಂಗಳಲ್ಲಿ ಕೊನೆಗೊಳ್ಳಲಿದೆ.
ಇದನ್ನೂ ಓದಿ: Makara Sankranti 2025: ಸಂಕ್ರಾಂತಿ ಹಬ್ಬದಲ್ಲಿ ರಾಸುಗಳನ್ನು ಕಿಚ್ಚು ಹಾಯಿಸೋದ್ರರ ಹಿಂದಿದೆ ವಿಶೇಷ ಕಾರಣ!
ಬಹುಕಾಲದ ಕನಸು ಈಡೇರಲು ಕೆಲವೇ ದಿನ ಬಾಕಿ
ರೈಲ್ವೇ ಹಳಿಯಿಂದ ಸುಮಾರು 6.53 ಮೀಟರ್ ಎತ್ತರ , 7.5 ಮೀಟರ್ ಅಗಲ, 10 ಮೀಟರ್ ಉದ್ದದ ಸೇತುವೆ ನಿರ್ಮಾಣವಾಗಲಿದೆ. ಇದಕ್ಕೆ ಪೂರಕವಾದ ಸಂಪರ್ಕ ರಸ್ತೆ ನಿರ್ಮಾಣ ಹಾಗೂ ಅದರ ಕಾಂಕ್ರೀಟಿಕರಣ ಆಗಲಿದೆ. ಬೆಂಗಳೂರು ಮೂಲದ ಎಸ್.ವಿ. ಕನ್‌ಸ್ಟ್ರಕ್ಷನ್‌ನವರು ಗುತ್ತಿಗೆ ಪಡೆದು ಕಾಮಗಾರಿ ಕೈಗೆತ್ತಿಕೊಂಡಿದ್ದಾರೆ. ಹವಾಮಾನ ವೈಪರೀತ್ಯದಿಂದಾಗಿ ಮಳೆಯ ಹಿನ್ನೆಲೆಯಲ್ಲಿ ಕಾಮಗಾರಿ ಸ್ವಲ್ಪ ನಿಧಾನಗತಿಯಲ್ಲಿ ಸಾಗಿದರೂ, ಮಳೆ ದೂರವಾದ ಬಳಿಕ ಕಾಮಗಾರಿ ವೇಗವನ್ನು ಪಡೆದುಕೊಂಡಿದೆ. ಈಗಾಗಲೇ ಈ ಭಾಗದ ರೈಲ್ವೇ ನಿಲ್ದಾಣಗಳ ವಿದ್ಯುದ್ಧೀಕರಣ, ಪ್ಲಾಟ್ ಫಾರ್ಮ್ ಗಳನ್ನು ಎತ್ತರಿಸುವ ಕಾರ್ಯಗಳು ನಡೆದು ಅಭಿವೃದ್ಧಿಗೊಂಡಿವೆ. ಮೇಲ್ಸೇತುವೆಗಳ ಕಾಮಗಾರಿ ಶೀಘ್ರ ಮುಗಿದಲ್ಲಿ ಆಯಾ ಭಾಗದ ಜನರ ಬಹುಕಾಲದ ಕನಸು ಈಡೇರಿದಂತಾಗುತ್ತದೆ.
ಅಮೃತ್ ಭಾರತ್ ಯೋಜನೆಯಡಿಯಲ್ಲಿ ಈ ಮೇಲ್ಸೇತುವೆ ನಿರ್ಮಾಣ
ಕೋರಿಯಾರ್ ಹಾಗೂ ಬಜಕರೆಯಲ್ಲಿ ರೈಲ್ವೆ ಮೇಲ್ಸೇತುವೆ ನಿರ್ಮಿಸುವಂತೆ ನಾವು ಅಂದಿನ ಸಂಸದ ನಳಿನ್ ಕುಮಾರ್ ಕಟೀಲ್ ಅವರಲ್ಲಿ ಮನವಿ ಮಾಡಿದ್ದೆವು. ಅವರು ಅದನ್ನು ನೆರವೇರಿಸುವ ಭರವಸೆ ನೀಡಿದ್ದರು. ಇದೀಗ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಅಮೃತ ಭಾರತ್ ಯೋಜನೆಯಲ್ಲಿ ಅನುದಾನ ಜೋಡಿಸಿಕೊಂಡು, ಮೇಲ್ಸೇತುವೆ ನಿರ್ಮಾಣ ಕಾರ್ಯವಾಗುತ್ತಿದೆ. ನಮ್ಮ ಭಾಗದ ರೈಲ್ವೇ ಇಲಾಖೆಗೆ ಸಂಬಂಧಪಟ್ಟ ಅಭಿವೃದ್ಧಿಯ ಬಗ್ಗೆ ಈಗಿನ ಸಂಸದ ಬ್ರಿಜೇಶ್ ಚೌಟಾ ಅವರಿಗೆ ಮನವಿ ಮಾಡಲಾಗುವುದು. ಈಗ ಮೇಲ್ಸೇತುವೆಗಳು ನಿರ್ಮಾಣವಾಗುತ್ತಿರುವುದರಿಂದ ನಾವು ಈ ಹಿಂದೆ ಗಂಟೆಗಟ್ಟಲೆ ರೈಲ್ವೇ ಗೇಟ್ ಬಳಿ ಕಾಯುವ ಸಮಸ್ಯೆ ತಪ್ಪಿಹೋಗಲಿದೆ ಎನ್ನುತ್ತಾರೆ ಎ.ಪಿ.ಎಂ.ಸಿ ಪುತ್ತೂರಿನ ಮಾಜಿ ನಿರ್ದೇಶಕ ಮೇದಪ್ಪಗೌಡ.
ಕೋರಿಯಾರ್, ಬಜಕರೆ, ಹಾಗೂ ಪುರುಷರಕಟ್ಟೆಯಲ್ಲಿ ರೈಲ್ವೇ ರಸ್ತೆ ಮೇಲ್ಸೇತುವೆ ಕಾಮಗಾರಿ ಶೇ 60 ರಷ್ಟು ಪೂರ್ತಿಗೊಳಿಸಲಾಗಿದೆ. ಗಡಿಪಿಲದ ಕಾಮಗಾರಿಯನ್ನು ಕೂಡಾ ಪ್ರಾರಂಭಿಸಲಾಗಿದೆ. ಈ ಕಾಮಗಾರಿ ಏಪ್ರಿಲ್ ತಿಂಗಳಲ್ಲಿ ಮುಕ್ತಾಯಗೊಳ್ಳಲಿದೆ. ರೈಲ್ವೇ ಇಲಾಖೆಯ ಸೂಚನೆಯಂತೆ ನಾಲ್ಕು ಮೇಲ್ಸೇತುವೆಗಳ ಕಾಮಗಾರಿಗಳನ್ನು ಶೀಘ್ರ ಮುಗಿಸಲು ಉದ್ದೇಶಿಸಲಾಗಿದೆ ಎನ್ನುತ್ತಾರೆ ಪ್ರಾಜೆಕ್ಟ್ ಎಂಜಿನಿಯರ್ ಗೋವರ್ಧನ್ ರೆಡ್ಡಿ.
Dakshina Kannada,Karnataka
January 14, 2025 10:10 AM IST