Last Updated:
ಉಬ್ಬಸ ಇರುವರು ಆದಿನಾಥೇಶ್ವರ ದೇವಸ್ಥಾನಕ್ಕೆ ಬಂದು, ದೇವರಲ್ಲಿ ಸಂಕಲ್ಪ ಮಾಡಿದ ನಂತರ ದೇಗುಲದಲ್ಲಿ ನೀಡುವ ಗಂಧವನ್ನು ನಿರ್ದಿಷ್ಟ ದಿನಗಳವರೆಗೆ ಮದ್ಯ-ಮಾಂಸಾಹಾರ ತ್ಯಜಿಸಿ ವ್ರತ ಮಾಡಿ ಸೇವಿಸಬೇಕು. ಹೀಗೆ ಗಂಧ ಸೇವನೆಯಿಂದ ಅಸ್ತಮಾ ಕ್ರಮೇಣ ನಿವಾರಣೆಯಾಗುತ್ತದೆ.
ದಕ್ಷಿಣ ಕನ್ನಡ: ಅಸ್ತಮಾ(Asthma) ದೀರ್ಘ ಕಾಲ ಕಾಡುವ ರೋಗ. ಏನೇ ಮದ್ದು ಮಾಡಿದರೂ ಕೆಲವರಿಗೆ ಗುಣವೇ ಆಗೋದಿಲ್ಲ. ಥಂಡಿಯಾದರೆ(Cold) ಕಾಡುತ್ತದೆ. ಜೀವ ಹಿಂಡುತ್ತದೆ. ಆದ್ರೆ ಕರಾವಳಿಯ(Coastal) ಈ ದೇವಸ್ಥಾನಕ್ಕೆ(Temple) ಬಂದು ಪ್ರಸಾದ ತೆಗೆದುಕೊಂಡು ಹೋದ್ರೆ ಅಸ್ತಮಾ ನಿವಾರಣೆಯಾಗುತ್ತದೆ ಎಂಬ ಪ್ರತೀತಿಯಿದೆ. ಇಲ್ಲಿನ ಹರಕೆ ಸಂದಾಯ ಕ್ರಮವೇ ವಿಶೇಷವಾಗಿದೆ.
ಉಬ್ಬಸ ಅಥವಾ ಅಸ್ತಮಾ ಅನ್ನೋದು ಶ್ವಾಸಕೋಶ ಸಂಬಂಧಿ ಕಾಯಿಲೆ. ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಸಿನವರಿಗೂ ಈ ಉಬ್ಬಸ ರೋಗ ಭಾದಿಸುತ್ತದೆ. ಯಾವ ಮದ್ದು ಮಾಡಿದ್ರೂ, ಕೆಲವರಿಗೆ ಉಬ್ಬಸ ಅನ್ನೋದು ನಿವಾರಣೆಯೇ ಆಗಲ್ಲ..ಆದ್ರೆ ಮಂಗಳೂರು ಹೊರ ವಲಯದ ವಿಮಾನ ನಿಲ್ದಾಣದ ಸಮೀಪದ ಆದ್ಯಪಾಡಿ ಆದಿನಾಥೇಶ್ವರ ದೇವರಿಗೆ ಅಸ್ತಮಾ ನಿವಾರಿಸುವ ವಿಶೇಷ ಶಕ್ತಿ ಇದೆ.
ಇದನ್ನೂ ಓದಿ: Dakshina Kannada: ಅಂತರಾಷ್ಟ್ರೀಯ ಮಟ್ಟದ ಫ್ಯಾಶನ್ ಶೋ ಸ್ಪರ್ಧೆಗೆ ಆಯ್ಕೆಯಾದ ಮಂಗಳೂರಿನ 7 ಹುಡುಗಿಯರು!
ಉಬ್ಬಸ ಇರುವರು ಆದಿನಾಥೇಶ್ವರ ದೇವಸ್ಥಾನಕ್ಕೆ ಬಂದು, ದೇವರಲ್ಲಿ ಸಂಕಲ್ಪ ಮಾಡಿದ ನಂತರ ದೇಗುಲದಲ್ಲಿ ನೀಡುವ ಗಂಧವನ್ನು ನಿರ್ದಿಷ್ಟ ದಿನಗಳವರೆಗೆ ಮದ್ಯ-ಮಾಂಸಾಹಾರ ತ್ಯಜಿಸಿ ವ್ರತ ಮಾಡಿ ಸೇವಿಸಬೇಕು. ಹೀಗೆ ಗಂಧ ಸೇವನೆಯಿಂದ ಅಸ್ತಮಾ ಕ್ರಮೇಣ ನಿವಾರಣೆಯಾಗುತ್ತದೆ. ಅಸ್ತಮಾ ನಿವಾರಣೆಯಾದ ಬಳಿಕ ದೇವಸ್ಥಾನಕ್ಕೆ ಆಗಮಿಸಿ, ಒಂದು ಬೂದುಕುಂಬಳಕಾಯಿ, ಅಸ್ತಮಾ ಇದ್ದವನ ದೇಹದ ಉದ್ದಕ್ಕೆ ಸರಿಯಾದ ಬೆಳ್ಳಿಯ ತಂತಿ, ಹುರಿಹಗ್ಗ, ಒಂದು ಗಂಧದ ಕೊರಡು, ಒಂದು ಕೆಜಿ ಕರಿಮೆಣಸು ಹರಕೆ ರೂಪದಲ್ಲಿ ಸಮರ್ಪಿಸಬೇಕು.
ಆದ್ಯಪಾಡಿ ಆದಿನಾಥೇಶ್ವರ ದೇವಸ್ಥಾನ ಉಬ್ಬಸ ನಿವಾರಣೆಗೆ ಪ್ರಸಿದ್ಧಿಯಾಗಿದ್ದು, ಸಾವಿರಾರು ಮಂದಿ ಅಸ್ತಮಾ ರೋಗಿಗಳು ಬಂದು ಅಸ್ತಮಾದಿಂದ ಮುಕ್ತರಾಗಿದ್ದಾರೆ. ಸದ್ಯ ಉಬಸ ನಿವಾರಿಸುವ ದೇವಸ್ಥಾನ ಕೋಟ್ಯಾಂತರ ವೆಚ್ಚದಲ್ಲಿ ಜೀಣೋದ್ಧಾರಗೊಂಡು ಬ್ರಹ್ಮಕಳಸ ನೆರವೇರಿದೆ. ದೇವಸ್ಥಾನ ಬೆಟ್ಟದ ಮೇಲಿದ್ದರೂ, ಕೆಂಪು ಮುರಕಲ್ಲಿನ ಎಡೆಯಿಂದ ಸದಾ ಹರಿಯುವ ಶುದ್ಧ ತಿಳಿನೀರಿನ ಪ್ರಕೃತಿದತ್ತ ತೀರ್ಥ ಇಲ್ಲಿನ ವಿಶೇಷ. ಒಟ್ಟಿನಲ್ಲಿ ಉಬ್ಬಸ ನಿವಾರಿಸುವ ಆದಿನಾಥೇಶ್ವರ ಬ್ರಹ್ಮಕಲಶ ಅದ್ಧೂರಿಯಾಗಿ ನಡೆದಿದ್ದು, ಲಕ್ಷಾಂತರ ಮಂದಿ ಭಕ್ತರು ಭಾಗವಹಿಸಿ ದೇವರ ಕೃಪೆಗೆ ಪಾತ್ರರಾಗಿದ್ದಾರೆ.
Disclaimer
ಇಲ್ಲಿ ನೀಡಿರುವ ಎಲ್ಲಾ ಮಾಹಿತಿಯನ್ನು ಜ್ಯೋತಿಷ್ಯ ಶಾಸ್ತ್ರಜ್ಞರು ಮತ್ತು ತಜ್ಞರನ್ನು ಸಂಪರ್ಕಿಸಿ ರಾಶಿ, ಧರ್ಮ ಮತ್ತು ಶಾಸ್ತ್ರಗಳಿಗೆ ಅನುಸಾರವಾಗಿ ನೀಡಲಾಗಿದೆ. ಯಾವುದೇ ಘಟನೆ-ದುರ್ಘಟನೆ ಅಥವಾ ಲಾಭ-ನಷ್ಟಗಳು ಕೇವಲ ಕಾಕತಾಳೀಯ. ಸಾರ್ವಜನಿಕ ಹಿತದೃಷ್ಟಿಯಿಂದ ಜ್ಯೋತಿಷಿಗಳ ಮಾಹಿತಿ ನೀಡಲಾಗಿದೆ. ಇಲ್ಲಿ ತಿಳಿಸಿರುವ ಯಾವುದೇ ಮಾಹಿತಿಯನ್ನು ಲೋಕಲ್ 18 ವ್ಯಕ್ತಿಗತವಾಗಿ ಸಮರ್ಥಿಸಿಕೊಳ್ಳುವುದಿಲ್ಲ.
Dakshina Kannada,Karnataka
March 24, 2025 11:34 AM IST