Dakshina Kannada: ಇತಿಹಾಸ ಪ್ರಸಿದ್ದ ಪುತ್ತೂರಿನ ಮಹಾಲಿಂಗೇಶ್ವರ ಕ್ಷೇತ್ರದಲ್ಲಿ ದೇವರ ಬ್ರಹ್ಮರಥೋತ್ಸವ ಸಂಪನ್ನ! | Dakshina Kannada: The Brahma Rathotsava of God is celebrated in the historically famous Mahalingeshwara area of ​​Puttur!

Dakshina Kannada: ಇತಿಹಾಸ ಪ್ರಸಿದ್ದ ಪುತ್ತೂರಿನ ಮಹಾಲಿಂಗೇಶ್ವರ ಕ್ಷೇತ್ರದಲ್ಲಿ ದೇವರ ಬ್ರಹ್ಮರಥೋತ್ಸವ ಸಂಪನ್ನ! | Dakshina Kannada: The Brahma Rathotsava of God is celebrated in the historically famous Mahalingeshwara area of ​​Puttur!

Last Updated:

ವಿಶೇಷವೆಂದರೆ ಕೇವಲ ಬ್ರಹ್ಮರಥ ಸೇವೆಯೊಂದರಿಂದಲೇ ಕ್ಷೇತ್ರಕ್ಕೆ ಈ ಬಾರಿ 50 ಲಕ್ಷಕ್ಕೂ ಮಿಕ್ಕಿದ ಹಣ ಸಂಗ್ರಹವಾಗಿದೆ. ಪ್ರತೀ ಬಾರಿಯೂ ಜಾತ್ರೋತ್ಸವದ ಸಂದರ್ಭದಲ್ಲಿ ನಡೆಯುವ ಮಹಾಲಿಂಗೇಶ್ವರ ಸ್ವಾಮಿಯ ಬ್ರಹ್ಮರಥೋತ್ಸವಕ್ಕೆ ಸುಮಾರು 60 ರಿಂದ 70 ಸಂಖ್ಯೆಯ ಪೂಜಾ ಸೇವೆ ಮಾಡಿಸಲಾಗುತ್ತಿತ್ತು.

X

ವಿಡಿಯೋ ಇಲ್ಲಿ ನೋಡಿ

ದಕ್ಷಿಣ ಕನ್ನಡ: ಇತಿಹಾಸ ಪ್ರಸಿದ್ಧ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಮಹತೋಭಾರ ಮಹಾಲಿಂಗೇಶ್ವರ(Mahotobhara Mahalingeshwara) ದೇವರ ಬ್ರಹ್ಮರಥೋತ್ಸವ(Brahma Rathotsava) ಲಕ್ಷಾಂತರ ಸಂಖ್ಯೆಯ ಭಕ್ತರ ಭಾಗಿಯೊಂದಿಗೆ ಸಂಪನ್ನಗೊಂಡಿದೆ. ಗುರುವಾರ ತಡರಾತ್ರಿವರೆಗೆ ನಡೆದ ಬ್ರಹ್ಮರಥೋತ್ಸವದ ಸಂಭ್ರಮ ನೆರೆದಿದ್ದ ಭಕ್ತರನ್ನು ಪುನೀತರನ್ನಾಗಿಸಿದೆ. ದೇವಸ್ಥಾನದ ಒಳಾಂಗಣ ಮತ್ತು ಹೊರಾಂಗಣದಲ್ಲಿ ದೇವರ ದರ್ಶನ ಬಲಿ ಸೇರಿದಂತೆ ಹಲವು ವಿಧದ ಬಲಿ ಸೇವೆಗಳು ನಡೆದ ಬಳಿಕ ರಾತ್ರಿ ಸುಮಾರು 9.58 ಕ್ಕೆ ದೇವರು ಬ್ರಹ್ಮರಥವನ್ನು ಏರಿದ್ದಾರೆ.

ದೇವರು ಬ್ರಹ್ಮರಥವನ್ನು ಏರಿದ ಬಳಿಕ ಈ ಬಾರಿ ವಿಶೇಷವಾಗಿ ಭಕ್ತರೇ ಸೇರಿ ಸಿಡಿಮದ್ದು ಪ್ರದರ್ಶನವನ್ನು ಏರ್ಪಡಿಸಿದ್ದು, ಆಕರ್ಷಕ ಸುಡುಮದ್ದು ಪ್ರದರ್ಶನವು ನೆರೆದಿದ್ದ ಭಕ್ತರನ್ನು ಹರ್ಷದ ಕಡಲಿನಲ್ಲಿ ತೇಲಿಸಿತ್ತು. ಸಿಡಿಮದ್ದು ಪ್ರದರ್ಶನದ ನಡುವೆಯೇ ಬ್ರಹ್ಮರಥ ಪೂಜೆ ಸೇವೆ ಮಾಡಿಸಿದ ಭಕ್ತಾಧಿಗಳು ಬ್ರಹ್ಮರಥ ಪೂಜೆ ಸಲ್ಲಿಸಿದರು.

ಇದನ್ನೂ ಓದಿ: Puttur: ಮಹಾತೋಭಾರ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ವೈಭವದ ಜಾತ್ರೋತ್ಸವ- ಪುನೀತರಾದ ಲಕ್ಷಾಂತರ ಭಕ್ತ ಸಾಗರ!

ಈ ಬಾರಿ ಕ್ಷೇತ್ರದಲ್ಲಿ ದಾಖಲೆಯ ಸುಮಾರು 200 ಕ್ಕೂ ಮಿಕ್ಕಿದ ಬ್ರಹ್ಮರಥ ಪೂಜೆ ನೆರವೇರಿದ್ದು, ಕ್ಷೇತ್ರದ ವತಿಯಿಂದ ಪ್ರತೀ ಪೂಜೆಗೆ 25,000 ರೂಪಾಯಿಗಳನ್ನು ನಿಗದಿಪಡಿಸಲಾಗಿದೆ‌. ವಿಶೇಷವೆಂದರೆ ಕೇವಲ ಬ್ರಹ್ಮರಥ ಸೇವೆಯೊಂದರಿಂದಲೇ ಕ್ಷೇತ್ರಕ್ಕೆ ಈ ಬಾರಿ 50 ಲಕ್ಷಕ್ಕೂ ಮಿಕ್ಕಿದ ಹಣ ಸಂಗ್ರಹವಾಗಿದೆ. ಪ್ರತೀ ಬಾರಿಯೂ ಜಾತ್ರೋತ್ಸವದ ಸಂದರ್ಭದಲ್ಲಿ ನಡೆಯುವ ಮಹಾಲಿಂಗೇಶ್ವರ ಸ್ವಾಮಿಯ ಬ್ರಹ್ಮರಥೋತ್ಸವಕ್ಕೆ ಸುಮಾರು 60 ರಿಂದ 70 ಸಂಖ್ಯೆಯ ಪೂಜಾ ಸೇವೆ ಮಾಡಿಸಲಾಗುತ್ತಿತ್ತು.

ಆದರೆ ಈ ಬಾರಿ ಕಳೆದ ಎಲ್ಲಾ ವರ್ಷಗಳ ದಾಖಲೆಯನ್ನು ಮುರಿಯಲಾಗಿದ್ದು, ಮಂಗಳೂರು ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಶಾಸಕ ಅಶೋಕ್ ಕುಮಾರ್ ರೈ, ಶಾಸಕ ಕಿಶೋರ್ ಕುಮಾರ್ ಬೊಟ್ಯಾಡಿ, ಮಾಜಿ ಶಾಸಕ ಸಂಜೀವ ಮಠಂದೂರು ಸೇರಿದಂತೆ ಹಲವರು ಬ್ರಹ್ಮರಥ ಪೂಜೆಯನ್ನು ನೆರವೇರಿಸಿದ್ದಾರೆ.

ಪ್ರತೀ ವರ್ಷದಂತೆ ಈ ಬಾರಿಯೂ ಕ್ಷೇತ್ರದಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತಾಧಿಗಳು ಸೇರಿ ರಥೋತ್ಸವ ಮತ್ತು ಇತರ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗುವ ಮೂಲಕ ದೇವರ ಕೃಪೆಗೆ ಪಾತ್ರರಾದರು.