Dakshina Kannada: ಈ ಬಾರಿ 28 ದಿನಗಳ ಕಾಲ ನಡೆಯುತ್ತೆ ಪೊಳಲಿ ಜಾತ್ರಾ ಮಹೋತ್ಸವ! | Dakshina Kannada: This time the Polali Jatra festival will be held for 28 days!

Dakshina Kannada: ಈ ಬಾರಿ 28 ದಿನಗಳ ಕಾಲ ನಡೆಯುತ್ತೆ ಪೊಳಲಿ ಜಾತ್ರಾ ಮಹೋತ್ಸವ! | Dakshina Kannada: This time the Polali Jatra festival will be held for 28 days!

Last Updated:

ವಾಲಗದ ಮುಖ್ಯಸ್ಥರು ದೈವದ ಪಾತ್ರಿಗೆ ಅದನ್ನು ತಿಳಿಸುತ್ತಾರೆ. ದೈವಪಾತ್ರಿ ಗಂಟೆ ಬಾರಿಸುತ್ತಾ ಈ ಬಾರಿ ಎಷ್ಟು ದಿನದ ಜಾತ್ರೆ ಎಂಬುದನ್ನು ತುಳುವಿನಲ್ಲಿ ಜೋರಾಗಿ ತಿಳಿಸುತ್ತಾನೆ. ಜಾತ್ರೆಯ ದಿನಗಳು ವರ್ಷದಿಂದ ವರ್ಷಕ್ಕೆ ಭಿನ್ನವಾಗಿರುತ್ತದೆ.

X

ವಿಡಿಯೋ ಇಲ್ಲಿ ನೋಡಿ

ದಕ್ಷಿಣ ಕನ್ನಡ‌: ‘ಇರುವತ್ತೆಣ್ಮ ಪೋಪಿನಾನಿ ಸುಕ್ರಾರ ದಿನತಾನಿ ಆರಡ’ ಎಂದು ತುಳುವಿನಲ್ಲಿ ದೈವಪಾತ್ರಿ ಹೇಳುವ ಜೋರಾದ ಧ್ವನಿಗೆ ಎಲ್ಲರೂ ಕಾತರರಾಗಿರುತ್ತಾರೆ. ಇದು ಇತಿಹಾಸ ಪ್ರಸಿದ್ಧ ಪೊಳಲಿ ಶ್ರೀರಾಜರಾಜೇಶ್ವರಿ ಕ್ಷೇತ್ರದಲ್ಲಿ(Polali Sri Rajarajeshwari Temple) ನಡೆಯುವ ಜಾತ್ರೆ ಎಷ್ಟು ದಿನ ನಡೆಯಲಿದೆ ಎಂಬುದನ್ನು ಸೂಚಿಸುವ ದೈವವಾಣಿ. ಇಲ್ಲಿನ ಜಾತ್ರೆಯ ದಿನಾಂಕವನ್ನು ದೈವಪಾತ್ರಿಯೇ(Daivapatri) ಸೂಚಿಸುವುದು ವಿಶೇಷ. ಈ ಮೂಲಕ ಈ ಬಾರಿ ಶ್ರೀಕ್ಷೇತ್ರ ಪೊಳಲಿಯ ಜಾತ್ರಾಮಹೋತ್ಸವ ಮಾರ್ಚ್‌ 15 ರಿಂದ ಏಪ್ರಿಲ್‌ 12ರವರೆಗೆ ಒಟ್ಟು 28 ದಿನಗಳ ಕಾಲ ಪೊಳಲಿ ಜಾತ್ರಾ ಮಹೋತ್ಸವ ನಡೆಯಲಿದೆ.

ದೇವಸ್ಥಾನಕ್ಕೆ ಸಂಬಂಧಪಟ್ಟ ನಟ್ಟೋಜ ಮನೆತನದ ಒಬ್ಬರು ಧ್ವಜಾರೋಹಣದ ಮುನ್ನ ದಿನ ಪುತ್ತಿಗೆ ಜೋಯಿಸರಲ್ಲಿ ಹೋಗಿ ದಿನ ನಿಗದಿ ಮಾಡಿ ಬರುತ್ತಾರೆ. ಧ್ವಜಾರೋಹಣದ ಬಳಿಕ ದೇವಸ್ಥಾನದಲ್ಲಿ ನಡೆಯುವ ಕಂಚು ಬೆಳಕು ಉತ್ಸವದ ಬಳಿಕ ನಟ್ಟೋಜರು ಅಡಿಕೆ ಹೂವನ್ನು ವಾಲಗದ ಮುಖ್ಯಸ್ಥ ಸೇರಿಗಾರನಿಗೆ ಕೊಟ್ಟು, ಆತನ ಕಿವಿಯಲ್ಲಿ ಎಷ್ಟು ದಿನಗಳ ಜಾತ್ರೆ ಎಂದು ಹೇಳುತ್ತಾರೆ. ವಾಲಗದ ಮುಖ್ಯಸ್ಥರು ದೈವದ ಪಾತ್ರಿಗೆ ಅದನ್ನು ತಿಳಿಸುತ್ತಾರೆ. ದೈವಪಾತ್ರಿ ಗಂಟೆ ಬಾರಿಸುತ್ತಾ ಈ ಬಾರಿ ಎಷ್ಟು ದಿನದ ಜಾತ್ರೆ ಎಂಬುದನ್ನು ತುಳುವಿನಲ್ಲಿ ಜೋರಾಗಿ ತಿಳಿಸುತ್ತಾನೆ. ಜಾತ್ರೆಯ ದಿನಗಳು ವರ್ಷದಿಂದ ವರ್ಷಕ್ಕೆ ಭಿನ್ನವಾಗಿರುತ್ತದೆ.

ಇದನ್ನೂ ಓದಿ: Dakshina Kannada: ಪುತ್ತೂರು ಮಹಾಲಿಂಗೇಶ್ವರ ದೇವರ ಬ್ರಹ್ಮರಥ ಕಟ್ಟುವ ಕೆಲಸ ಆರಂಭ!

ಪೊಳಲಿಯದ್ದು ಅತ್ಯಂತ ಸುದೀರ್ಘ ಅಂದರೆ ಒಂದು ತಿಂಗಳ ಕಾಲ ನಡೆಯುವ ಜಾತ್ರಾಮಹೋತ್ಸವ ಎಂಬ ಹೆಗ್ಗಳಿಕೆಯಿದೆ. ಮೀನ ಮಾಸದ ಸಂಕ್ರಮಣಕ್ಕೆ ಧ್ವಜಾರೋಹಣ ನಡೆದರೆ 1ತಿಂಗಳ ಕಾಲ ನಿರಂತರ ಜಾತ್ರೆ ನಡೆಯುತ್ತದೆ. ಈ ಜಾತ್ರಾಮಹೋತ್ಸವದ ನಿಮಿತ್ತ ಲೋಕಪ್ರಸಿದ್ಧ ಪೊಳಲಿ ಚೆಂಡು ನಡೆಯಲಿದೆ. ಈ ಬಾರಿ ಪೊಳಲಿಯ ಮೊದಲ ಚೆಂಡು ಏಪ್ರಿಲ್‌ 5ರಂದು ನಡೆದರೆ ಕಡೆಯ ಚೆಂಡು ಏಪ್ರಿಲ್ 9ರಂದು ನಡೆಯಲಿದೆ. ಏಪ್ರಿಲ್‌ 10ರಂದು ಬ್ರಹ್ಮರಥೋತ್ಸವ ನಡೆಯಲಿದೆ.

ಸಂಪ್ರದಾಯದಂತೆ ಶ್ರೀ ಭಗವತಿ, ಶ್ರೀ ಭದ್ರಕಾಳಿ ಹಾಗೂ ಅರಸು ದೈವಗಳ ಭಂಡಾರವು ದೋಣಿಯಲ್ಲಿ ಶ್ರೀಕ್ಷೇತ್ರ ಪೊಳಲಿಯಿಂದ ಫಲ್ಗುಣಿ ನದಿಯನ್ನು ದಾಟಿ ನಂದ್ಯ ಕ್ಷೇತ್ರಕ್ಕೆ ಆಗಮಿಸಿದೆ. ನಂದ್ಯ ಕ್ಷೇತ್ರಕ್ಕೆ ಪೊಳಲಿಯಿಂದ ಶ್ರೀ ಭಗವತಿಯ ಸಾನಿಧ್ಯ ಶ್ರೀ ಭದ್ರಕಾಳಿ ಹಾಗೂ ಅರಸು ದೈವಗಳ ಭಂಡಾರವು ಫಲ್ಗುಣಿ ನದಿಯನ್ನು ದೋಣಿಯ ಮೂಲಕ ದಾಟುವ ದೃಶ್ಯ ನಿಜಕ್ಕೂ ವಿಶೇಷ. ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಜಾತ್ರೆಯ ಸಂದರ್ಭ ತೀಯಾ ಸಮಾಜದವರಿಗೆ ಒಂದು ವಿಶಿಷ್ಟ ಸೇವೆ ಸಲ್ಲಿಸುವ ಅವಕಾಶವಿದೆ‌. ಪೊಳಲಿ ಕ್ಷೇತ್ರದ ಧ್ವಜಾರೋಹಣದ ದಿನದ ರಾತ್ರಿ ಶ್ರೀ ಭಗವತಿ ತೀಯಾ ಸಮಾಜ ಕೇಂದ್ರ ಸ್ಥಳವಾದ ಶ್ರೀ ನಂದ್ಯ ಕ್ಷೇತ್ರದಿಂದ ದೈವಗಳ ಭಂಡಾರವು ಶ್ರೀ ಕ್ಷೇತ್ರ ಪೊಳಲಿಗೆ ಬರುತ್ತದೆ. ದೋಣಿಯ ಮೂಲಕ ಮಕರ ಸಂಕ್ರಮಣದ ಮುನ್ನಾ ದಿನ ರಾತ್ರಿ ಬರುವ ಭಂಡಾರವು ಮುಂದೆ ಸೂಟೆಯ ಬೆಳಕಿನಲ್ಲಿ ನಡೆದುಕೊಂಡೇ ಸಾಗುತ್ತದೆ.

ನಂದ್ಯದ ಕ್ಷೇತ್ರದಿಂದ ಬರುವ ಭದ್ರಕಾಳಿಯ ಬಿಂಬವನ್ನು ಧರಿಸಿದವರು ಪೊಳಲಿಯ ಜಾತ್ರೆಯ ದಿನಾಂಕವನ್ನು ಪ್ರಕಟಿಸುವ ದೃಶ್ಯವೂ ವಿಶಿಷ್ಟ. ಶ್ರೀ ಅಖಿಲೇಶ್ವರ ದೇವಸ್ಥಾನಕ್ಕೆ ತೆರಳಿ ಅಲ್ಲಿ ಆರಾಡ ಕರೆದು, ನಿನ್ನೆ ತೀಯಾ ಸಮಾಜ ಬಾಂಧವರು ಭದ್ರಕಾಳಿಯನ್ನು ಅವಾಹಿಸಿಕೊಂಡವರನ್ನು ಸುಲಿಕ್ಕಿಪಡು ಮಹಾಮಾಯಿ ಕಟ್ಟೆಗೆ ಕರೆದುಕೊಂಡು ಬಂದು ಅಲ್ಲಿ ಆರಾಡ ಕರೆದಿದ್ದರು. ಇಂದು ಮತ್ತೆ ದೋಣಿಯ ಮೂಲಕ ಫಲ್ಗುಣಿ ನದಿಯನ್ನು ದಾಟಿ ನಂದ್ಯ ಕ್ಷೇತ್ರಕ್ಕೆ ಸಾಗಿ ಅಲ್ಲಿಯೂ ಆರಾಡ ಕರೆಯಲಾಗಿದೆ.