Last Updated:
110 ಅಡಿ ಎತ್ತರದ ಧ್ವಜ ಸ್ತಂಭದ ಮೇಲೆ 2022 ರ ಆಗಸ್ಟ್ 15 ರಂದು ಧ್ವಜ ಹಾರಿಸಿ ನೂತನ ಧ್ವಜಸ್ತಂಭವನ್ನು ಲೋಕಾರ್ಪಣೆ ಮಾಡಲಾಗಿತ್ತು.
ದಕ್ಷಿಣ ಕನ್ನಡ: ಉಳ್ಳಾಲದ ಹೆಬ್ಬಾಗಿಲು ತೊಕ್ಕೊಟ್ಟುವಿನಲ್ಲಿ(Tokkottu) 110 ಅಡಿ ಎತ್ತರದಲ್ಲಿ ಹಾರಾಡುತ್ತಿರುವ ರಾಷ್ಟ್ರಧ್ವಜ(National Flag) ಕುರೂಪವಾಗಿದೆ. ಧ್ವಜ ನಡುವಿನಲ್ಲಿ ಹರಿದುಹೋಗಿದ್ದು, ಅಧಿಕಾರಿಗಳು(Officials) ಮಾತ್ರ ಕಣ್ಮುಚ್ಚಿ ಕುರುಡಾಗಿದ್ದಾರೆ. ಧ್ವಜ ಸಂಹಿತೆ ನಿಯಮದ ಪ್ರಕಾರ ಹರಿದುಹೋದ ಧ್ವಜವನ್ನು ಹಾರಿಸುವಂತಿಲ್ಲ. ಆದರೆ ತೊಕ್ಕೊಟ್ಟುವಿನಲ್ಲಿ ಕಳೆದ ಎರಡು ದಿನಗಳಿಂದ ಧ್ವಜ ಹಾರುತ್ತಿದ್ದು, ಅಧಿಕಾರಿಗಳು ಮಾತ್ರ ಗಮನಿಸುತ್ತಿಲ್ಲ.
110 ಅಡಿ ಎತ್ತರದ ಧ್ವಜ ಸ್ತಂಭದ ಮೇಲೆ 2022 ರ ಆಗಸ್ಟ್ 15 ರಂದು ಧ್ವಜ ಹಾರಿಸಿ ನೂತನ ಧ್ವಜಸ್ತಂಭವನ್ನು ಲೋಕಾರ್ಪಣೆ ಮಾಡಲಾಗಿತ್ತು. ಸ್ಪೀಕರ್ ಯುಟಿ ಖಾದರ್ ಪ್ರತಿನಿಧಿಸುವ ಕ್ಷೇತ್ರ ಇದಾಗಿದ್ದು, ಇದು ಉಳ್ಳಾಲದ ಹೆಬ್ಬಾಗಿಲಾಗಿದ್ದು, ಮಂಗಳೂರಿನ ಅತೀ ಎತ್ತರದ ಧ್ವಜಸ್ತಂಭ ಎಂದು ಕೊಂಡಾಡಿದ್ದರು.
ಇದನ್ನೂ ಓದಿ: Dakshina Kannada: ಹೆಣ್ಣು ದೈವವಾದರೂ ಈ ದೈವದ ನರ್ತನ ಸೇವೆಯಲ್ಲಿ ಮಹಿಳೆಯರು ಭಾಗವಹಿಸುವಂತಿಲ್ಲ!
ಆದರೆ ಈ ಧ್ವಜಸ್ತಂಭವನ್ನು ನಿರ್ವಹಣೆ ಮಾಡಬೇಕಾಗಿದ್ದ ಉಳ್ಳಾಲ ನಗರಸಭೆ ಮಾತ್ರ ಇದೀಗ ಕಣ್ಮುಚ್ಚಿ ಕುಳಿತಿದೆ. ಧ್ವಜದ ನಡುವಿನಲ್ಲಿ 30 % ಹರಿದು ಹೋದರೂ ಧ್ವಜ ಬದಲಾಯಿಸುವ ಗೋಜಿಗೆ ಹೋಗುತ್ತಿಲ್ಲ. ಈ ಮೂಲಕ ರಾಷ್ಟ್ರ ಧ್ವಜಕ್ಕೆ ಅಪಮಾನ ಮಾಡಲಾಗಿದೆ.
ಪ್ರಖರ ಬಿಸಿಲಿಗೆ ಧ್ವಜದ ಬಣ್ಣವೂ ಮಾಸುತ್ತಿದ್ದು, ತುರ್ತಾಗಿ ಧ್ವಜವನ್ನು ಬದಲಾಯಿಸಬೇಕಾಗಿದೆ. 110 ಅಡಿ ಎತ್ತರದ ಕಬ್ಬಿಣ, ತಾಮ್ರ ಮಿಶ್ರಿತ ಧ್ವಜಸ್ತಂಭ ಇದಾಗಿದೆ. ರಾಷ್ಟ್ರಧ್ವಜ 30 ಅಡಿ ಉದ್ದ, 20 ಅಡಿ ಅಗಲವಿದೆ. 18.50 ಲಕ್ಷ ರೂಪಾಯಿ ವೆಚ್ಚದಲ್ಲಿ ಈ ಧ್ವಜಸ್ತಂಭವನ್ನು ನಿರ್ಮಾಣ ಮಾಡಲಾಗಿದೆ.
Dakshina Kannada,Karnataka
April 29, 2025 5:01 PM IST