Dakshina Kannada: ಉಳ್ಳಾಲ ಉರೂಸ್ ಕಾರ್ಯಕ್ರಮಕ್ಕೆ ಅದ್ದೂರಿ ತೆರೆ- 4 ಲಕ್ಷಕ್ಕೂ ಅಧಿಕ ಜನರಿಗೆ ಅನ್ನದಾನ! | Dakshina Kannada Ullal Urs program ended.

Dakshina Kannada: ಉಳ್ಳಾಲ ಉರೂಸ್ ಕಾರ್ಯಕ್ರಮಕ್ಕೆ ಅದ್ದೂರಿ ತೆರೆ- 4 ಲಕ್ಷಕ್ಕೂ ಅಧಿಕ ಜನರಿಗೆ ಅನ್ನದಾನ! | Dakshina Kannada Ullal Urs program ended.

Last Updated:

ಉಳ್ಳಾಲದ ಸಯ್ಯಿದ್ ಮುಹಮ್ಮದ್ ಶರೀಫುಲ್ ಮದನಿ ದರ್ಗಾದ ಉರೂಸ್ ಕಾರ್ಯಕ್ರಮದಲ್ಲಿ 4 ಲಕ್ಷಕ್ಕೂ ಅಧಿಕ ಜನರು ಅನ್ನದಾನ ಸ್ವೀಕರಿಸಿದರು. 40,000 ಕೆಜಿ ಅನ್ನ, 15-20 ಟನ್ ಮಾಂಸ ಬಡಿಸಲಾಯಿತು.

X

ವಿಡಿಯೋ ಇಲ್ಲಿ ನೋಡಿ

ದಕ್ಷಿಣ ಕನ್ನಡ: ಉಳ್ಳಾಲದ ಸಯ್ಯಿದ್ ಮುಹಮ್ಮದ್ ಶರೀಫುಲ್ ಮದನಿ ದರ್ಗಾದ ಉರೂಸ್ ಕಾರ್ಯಕ್ರಮಕ್ಕೆ(Urs Program) ಸಂಭ್ರಮದ ತೆರೆ ಬಿದ್ದಿದೆ. ಪ್ರತೀ ಐದು ವರ್ಷಗಳಿಗೊಮ್ಮೆ ನಡೆಯುವ ಉಳ್ಳಾಲ ಉರೂಸ್(Ullal Urs) ಕಾರ್ಯಕ್ರಮದ ಕೊನೆಯ ದಿನ ಮಹಾ ಅನ್ನದಾನ ಕಾರ್ಯಕ್ರಮದಲ್ಲಿ ನಾಲ್ಕು ಲಕ್ಷಕ್ಕೂ ಅಧಿಕ ಜನ ಅನ್ನದಾನವನ್ನು(Annadana) ಸ್ವೀಕರಿಸಿದ್ದಾರೆ. 432 ವರ್ಷಗಳ ಇತಿಹಾಸ ಹೊಂದಿರುವ ಉಳ್ಳಾಲ ಮಸೀದಿಯ 22ನೇ ಪಂಚ ವಾರ್ಷಿಕ ಉರೂಸ್ ಕಾರ್ಯಕ್ರಮ ಇದಾಗಿದ್ದು, ಕೊನೆಯ ದಿನ ನಾಡಿನ ವಿವಿಧ ಭಾಗದಿಂದ ಜನರು ಆಗಮಿಸಿದ್ದಾರೆ.

ಖಾಝಿ ಸುಲ್ತಾನುಲ್ ಉಲಮಾ ಕಾಂತಪುರಂ ಎ.ಪಿ. ಅಬೂಬಕ್ಕರ್ ಮುಸ್ಲಿಯಾರ್ ಅವರ ನೇತೃತ್ವದಲ್ಲಿ ಏಪ್ರಿಲ್ 24 ರಂದು ಆರಂಭವಾಗಿದ್ದ ಉರೂಸ್ ಕಾರ್ಯಕ್ರಮದಲ್ಲಿ ಪ್ರತಿದಿನ ಸಾವಿರಾರು ಸಂಖ್ಯೆಯಲ್ಲಿ ಜನ ಆಗಮಿಸಿದ್ದರು. ಕೊನೆಯ ದಿನ ನಾಲ್ಕು ಲಕ್ಷಕ್ಕೂ ಅಧಿಕ ಜನ ಭಾಗವಹಿಸಿದ್ದಾರೆ. ಇಲ್ಲಿನ ವಿಶೇಷ ಹರಕೆ ಅಂದ್ರೆ ಕುರಿ ಅಥವಾ ಆಡು. ಉಳ್ಳಾಲ ಉರುಸ್ ಗೆ ಆಡು ಕೊಡುತ್ತೇವೆ ಅಂತಾ ಹರಕೆ ಹೊತ್ರೆ ಅದೆಷ್ಟೋ ಹರಕೆಗಳು ತೀರಿದ ಉದಾಹರಣೆಗಳಿವೆ.

ಉಳ್ಳಾಲದ ಉರುಸ್ ಗೆ ದೇಶಾದ್ಯಂತ ಆಡುಗಳು ಹರಕೆ ರೂಪದಲ್ಲಿ ಬರೋದು ವಿಶೇಷವಾಗಿದೆ‌. ಮಂಗಳೂರಿಗೆ ಬರುವ ರೈಲಿನಲ್ಲಿ ಭಕ್ತರು ಕುರಿ ಅಥವಾ ಆಡನ್ನು ಹತ್ತಿಸುತ್ತಾರೆ. ಉಳ್ಳಾಲಕ್ಕೆ ಒಪ್ಪಿಸಿದ ಹರಕೆಯ ಆಡನ್ನು ಯಾರೂ ಕದ್ದ ಇತಿಹಾಸವಿಲ್ಲ.ಈ ಬಾರಿಯೂ ಸಾವಿರಾರು ಆಡು ಕುರಿಗಳು ಹರಕೆ ರೂಪದಲ್ಲಿ ಉಳ್ಳಾಲಕ್ಕೆ ಬಂದಿದ್ದವು. ಡಿಸಿಎಂ ಡಿಕೆ ಶಿವಕುಮಾರ್ ಕೂಡಾ ಐವತ್ತು ಕುರಿಗಳನ್ನು ಹರಕೆ ರೂಪದಲ್ಲಿ ನೀಡಿದ್ದರು.

ಹರಕೆ ರೂಪದಲ್ಲಿ ಬಂದ ಆಡು ಮತ್ತು ಕುರಿಗಳನ್ನು ಮಾಂಸ ಮಾಡಿ ಬಂದ ಜನ ಜನರಿಗೆ ಗೀ ರೈಸ್ ಜೊತೆಗೆ ಆಡಿನ ಪದಾರ್ಥವನ್ನು ಬಡಿಸಲಾಗುತ್ತದೆ. ಸುಮಾರು 40,000 ಕೆಜಿ ಅನ್ನ, 15 ರಿಂದ 20 ಟನ್ ಆಡಿನ ಮಾಂಸವನ್ನು ಬಡಿಸಲಾಗಿದೆ. 24 ಗಂಟೆ ನಿರಂತರವಾಗಿ ಅನ್ನದಾನ ಸೇವೆ ನಡೆದಿದ್ದು, ಮಹಿಳೆಯರು, ಮಕ್ಕಳೆನ್ನದೇ ದಾಖಲೆ ಸಂಖ್ಯೆಯಲ್ಲಿ ಜನ ಸ್ವೀಕಾರ ಮಾಡಿದ್ದಾರೆ.