Dakshina Kannada: ಎಣ್ಣೆಯಲ್ಲಿ ಅದ್ದಿದರೆ ಬತ್ತಿಯಂತೆ ಉರಿಯುವ ಈ ಗಿಡದ ವಿಶೇಷತೆ ಬಗ್ಗೆ ನಿಮಗೆ ತಿಳಿದಿದ್ಯಾ? | Pranati patra plant found in some parts of Dakshina Kannada burn like wicks

Dakshina Kannada: ಎಣ್ಣೆಯಲ್ಲಿ ಅದ್ದಿದರೆ ಬತ್ತಿಯಂತೆ ಉರಿಯುವ ಈ ಗಿಡದ ವಿಶೇಷತೆ ಬಗ್ಗೆ ನಿಮಗೆ ತಿಳಿದಿದ್ಯಾ? | Pranati patra plant found in some parts of Dakshina Kannada burn like wicks

Last Updated:

ದಕ್ಷಿಣ ಕನ್ನಡ ಜಿಲ್ಲೆಯ ಕೆಲವು ಭಾಗ ಸೇರಿದಂತೆ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಕಂಡುಬರುವ ಗಿಡವೊಂದರ ಚಿಗುರು ಎಣ್ಣೆಯಲ್ಲಿ ಅದ್ದಿದರೆ ಬತ್ತಿಯಂತೆ ಉರಿಯುತ್ತದೆ. ಅದು ಯಾವ ಗಿಡ, ಅದರ ವಿಶೇಷತೆಯೇನು ಎಂದು ತಿಳಿಯಲು ಈ ಸ್ಟೋರಿ ನೋಡಿ.

X

ಇಲ್ಲಿ ವಿಡಿಯೋ ನೋಡಿ

ದಕ್ಷಿಣ ಕನ್ನಡ: ಸುಳ್ಯದ ಕೆಲವು ತೋಟಗಳು ಸೇರಿದಂತೆ ಪಶ್ಚಿಮಘಟ್ಟ ಪ್ರದೇಶದ (Western Ghats) ಕಾಡಂಚಿನಲ್ಲಿ ಅಪರೂಪವಾಗಿ ಕಂಡುಬರುವ ಪ್ರಣತಿಪತ್ರ ಗಿಡದ (Pranati Patra Plant) ಚಿಗುರು ಬತ್ತಿಯಂತೆ ಉರಿಯುವ ಸಾಮರ್ಥ್ಯ ಹೊಂದಿದೆ. ದೀಪದಲ್ಲಿ ಎಣ್ಣೆ ಹಾಕಿ ಪ್ರಣತಿಪತ್ರ ಗಿಡದ ಚಿಗುರುಗಳನ್ನು (Dakshina Kannada News) ಅದರಲ್ಲಿ ಅದ್ದಿ ಬೆಂಕಿ ಹಚ್ಚಿದರೆ ಅದು ಬತ್ತಿಯಂತೆ ಉರಿಯುತ್ತದೆ. ಈ ಗಿಡದ ಚಿಗುರುಗಳು ಬೆಳದಿಂಗಳ ರಾತ್ರಿಯಲ್ಲಿ ಪ್ರಕಾಶಮಾನವಾಗಿ ಕಾಣುವುದು ಮತ್ತೊಂದು ವಿಶೇಷ.

ಕತ್ತಲಿನ ಸಮಯದಲ್ಲಿ ಬೆಳಕಿನ ಅವಶ್ಯಕತೆ ಪೂರೈಸಲು ಈಗಿರುವಂತೆ ಮೊದಲಿನ ಕಾಲದಲ್ಲಿ ಆಧುನಿಕ ಸಾಧನಗಳು ಇರಲಿಲ್ಲ. ಆದ್ರೂ ಅವರೆಲ್ಲ ಪ್ರಕೃತಿಯಲ್ಲಿ ಸಿಗುವ ವಿಶೇಷ ವಸ್ತುಗಳನ್ನು ಬಳಸಿಕೊಂಡು ದೀಪಗಳನ್ನು ಉರಿಸಿ, ತಮ್ಮ ಬೆಳಕಿನ ಅಗತ್ಯತೆಯನ್ನು ಪೂರೈಸಿಕೊಳ್ಳುತ್ತಿದ್ದರು. ಅಂತಹುದೇ ಒಂದು ದೀಪ ಬೆಳಗಿಸಲು ಉಪಯೋಗಿಸುತ್ತಿದ್ದ ಸಸ್ಯಗಳು ಪಶ್ಚಿಮಘಟ್ಟ ಪ್ರದೇಶದ ಕಾಡಂಚಿನಲ್ಲಿ ಅಪರೂಪಕ್ಕೆ ಕಂಡುಬರುತ್ತವೆ.

ಪ್ರಕೃತಿಯ ವಿಶೇಷ ಈ ಪ್ರಣತಿಪತ್ರ ಗಿಡ

ಮನೆ, ಮಠ ಎನ್ನುವ ವ್ಯವಸ್ಥೆಯಡಿ ಬರುವ ಮೊದಲು ಮನುಷ್ಯರೆಲ್ಲರೂ ಕಾಡಿನಲ್ಲಿ ವಾಸಿಸುತ್ತಿದ್ದರು. ಆಗ ಅವರು ಕಲ್ಲಿನಿಂದ ಉಜ್ಜಿ ಬೆಂಕಿ ತಯಾರಿಸುತ್ತಿದ್ದರು ಎಂಬುದನ್ನ ಎಲ್ಲರೂ ತಿಳಿದಿದ್ದೇವೆ. ಹೀಗೆ ತಯಾರಿಸಿದ ಕಿಡಿಯನ್ನು ಬೆಂಕಿಯಾಗಿ ಹೊತ್ತಿಸಲು ಅವರು ಈ ವಿಶೇಷ ಗಿಡದ ಚಿಗುರನ್ನು ಬಳಸುತ್ತಿದ್ದಿರಬಹುದು. ಅದೇ ಪ್ರಕೃತಿಯ ಮಡಿಲಲ್ಲಿ ಸಿಗುವ ಅಪರೂಪದ ಪ್ರಣತಿಪತ್ರ ಗಿಡ.

ಬತ್ತಿಯಂತೆ ಉರಿಯುತ್ತೆ ಈ ಗಿಡದ ಚಿಗುರು

ಪಶ್ಚಿಮಘಟ್ಟ ಪ್ರದೇಶಗಳಲ್ಲಿ ಹೆಚ್ಚಾಗಿ ಕಂಡುಬರುವ ಪ್ರಣತಿಪತ್ರ ಗಿಡದ ಚಿಗುರು ಬತ್ತಿಯಂತೆ ಉರಿಯುವ ಸಾಮರ್ಥ್ಯವನ್ನು ಹೊಂದಿದೆ. ದೀಪದಲ್ಲಿ ಎಣ್ಣೆ ಹಾಕಿ ಪ್ರಣತಿಪತ್ರ ಗಿಡದ ಚಿಗುರುಗಳನ್ನು ಅದರಲ್ಲಿ ಅದ್ದಿ ಬೆಂಕಿ ಹಚ್ಚಿದರೆ ಅದು ಬತ್ತಿಯಂತೆ ಉರಿಯುತ್ತದೆ. ಹತ್ತಿ ಅಥವಾ ಬಟ್ಟೆಯ ಬತ್ತಿಗಿಂತಲೂ ಹೆಚ್ಚು ಪ್ರಕಾಶಮಾನವಾಗಿ ಹಾಗೂ ಹೆಚ್ಚು ಸಮಯದವರೆಗೆ ಈ ಎಲೆಯ ಚಿಗುರು ಉರಿಯುತ್ತದೆ. ದೀಪದಲ್ಲಿ ಎಣ್ಣೆ ಕಾಲಿಯಾಗುವವರೆಗೂ ಈ ಚಿಗುರು ಹಾಗೇ ಉರಿಯುತ್ತಿರುತ್ತದೆ. ಈ ಗಿಡದ ಎಲೆಯ ಚಿಗುರುಗಳು ಬೆಳದಿಂಗಳ ರಾತ್ರಿಯಲ್ಲಿ ಪ್ರಕಾಶಮಾನವಾಗಿ ಕಾಣುವುದು ಮತ್ತೊಂದು ವಿಶೇಷ.

ಸುಳ್ಯದ ತೋಟಗಳಲ್ಲಿರುವ ಗಿಡಗಳು

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ಭಾಗದ ಕೆಲವು ತೋಟಗಳಲ್ಲಿ ಈ ಗಿಡಗಳು ಇನ್ನೂ ಕಾಣಸಿಗುತ್ತವೆ. ಈ ಗಿಡದ ಪರಿಚಯ ಇರುವ ಜನರು ಅದರ ಚಿಗುರನ್ನು ವಿಶೇಷ ಸಂದರ್ಭಗಳಲ್ಲಿ ಎಣ್ಣೆಯ ದೀಪ ಹಚ್ಚಲು ಬತ್ತಿಯಂತೆ ಉಪಯೋಗಿಸುತ್ತಾರೆ.

ಇದನ್ನೂ ಓದಿ: Deepavali Celebration: ಮೈಸೂರಿನ ಈ ಗ್ರಾಮದಲ್ಲಿ ಅದ್ದೂರಿ ದೀಪಾವಳಿ ಆಚರಣೆ- ಗಮನ ಸೆಳೆದ ದನಗಳ ಓಟ

ಮನುಷ್ಯರು ಆಧುನಿಕತೆಗೆ ಬರುವುದಕ್ಕೂ ಮೊದಲು ಕಲ್ಲುಗಳನ್ನು ಉಜ್ಜಿ ಬೆಂಕಿ ತಯಾರಿಸಲು ಕಾಡಿನಲ್ಲೇ ಸಿಗುವ ಪುಂಡಿ ಮರದ ಕಾಯಿಗಳ ಎಣ್ಣೆಯನ್ನು ಪಡೆಯುತ್ತಿದ್ದರು. ಜತೆಗೆ ಈ ಪ್ರಣತಿಪತ್ರ ಗಿಡದ ಚಿಗುರುಗಳನ್ನು ಬತ್ತಿಯಾಗಿ ಬಳಸಿಕೊಂಡು ರಾತ್ರಿ ಕಳೆಯುತ್ತಿದ್ದರು ಎಂದು ಲೋಕಲ್ 18 ಕನ್ನಡಕ್ಕೆ ಪ್ರಣತಿಪತ್ರ ಗಿಡದ ಸಂರಕ್ಷಕರಾಗಿರುವ ಜಿನ್ನಪ್ಪ ತಿಳಿಸಿದ್ದಾರೆ.

ಒಟ್ಟಿನಲ್ಲಿ, ವಿಶೇಷತೆಯಿಂದ ಕೂಡಿರುವ ಈ ಗಿಡಗಳನ್ನು ತಮ್ಮ ತೋಟಗಳಲ್ಲಿ ಹೊಂದಿರುವ ಜನರು, ದೀಪಾವಳಿ ಸೇರಿದಂತೆ ವಿಶೇಷ ಸಂದರ್ಭಗಳಲ್ಲಿ ಆ ಗಿಡದ ಚಿಗುರನ್ನು ಎಣ್ಣೆ ದೀಪ ಹಚ್ಚಲು ಬಳಸಿಕೊಳ್ಳುತ್ತಾರೆ. ಕೆಲವರು ಈ ಚಿಗುರಿನಿಂದ ಒಂದೆರಡು ದೀಪಗಳನ್ನು ಹಚ್ಚಿಯೇ ದೀಪಾವಳಿ ಆಚರಿಸುತ್ತಾರೆ.