ಮಳೆ ಸ್ವಲ್ಪ ವಿರಾಮ ನೀಡುತ್ತಿದ್ದಂತೆಯೇ ಕೋಣಗಳನ್ನು ಕಂಬಳದ ಗದ್ದೆಗೆ ಕರೆತಂದು ಸ್ಪರ್ಧೆಗೆ ಹುರಿಗೊಳಿಸಲಾಗುತ್ತಿದೆ. ಅತೀ ವೇಗವಾಗಿ ಓಡಬೇಕಾದರೆ ಓಟಗಾರನ ಜೊತೆಗೆ ಕೋಣಗಳಿಗೂ ಪೂರ್ವತಯಾರಿ ,ಅಭ್ಯಾಸ ಬೇಕಾಗುತ್ತದೆ. ಹೀಗಾಗಿ ಪ್ರತೀ ದಿನ ಈಗ ಕಂಬಳ ಗದ್ದೆಗಳಲ್ಲಿ ಕುದಿ ಕಂಬಳಗಳು ನಡೆಯುತ್ತಿವೆ. ಈ ಕುದಿ ಕಂಬಳದಲ್ಲೇ ಮುಂದಿನ ಋತುವಿನಲ್ಲಿ ಕೋಣಗಳ ವೇಗವನ್ನು ಅರಿಯಬಹುದಾಗಿದೆ. ಅಲ್ಲದೇ ಜೋಡಿಗಳನ್ನು ಇದೇ ಕುದಿಯಲ್ಲಿ ನಿರ್ಧಾರ ಮಾಡಲಾಗುತ್ತದೆ. ಜೋಡಿ ಕೋಣಗಳನ್ನು ಒಟ್ಟಿಗೆ ಓಡಿಸಿ ಅವುಗಳ ಸಾಧಕ-ಬಾಧಕಗಳನ್ನು ಗುರುತಿಸಿ ಮತ್ತೆ ತರಬೇತಿ ನೀಡಲಾಗುತ್ತದೆ.
ಇದನ್ನೂ ಓದಿ: First Hotel: ಬೆಂಗಳೂರಿನ ಮೊದಲ ಹೋಟೆಲ್ ಯಾವುದು? ಯಾರು, ಯಾವಾಗ ಪ್ರಾರಂಭಿಸಿದ್ದು ಗೊತ್ತಾ?
ಕಳೆದ ಬಾರಿ ಚಾಂಪಿಯನ್ ಆದ ಕೋಣಗಳು ಈ ಬಾರಿಯೂ ಚಾಂಪಿಯನ್ ಆಗಬೇಕೇಂದಿಲ್ಲ. ಬೇರೆ ಕೋಣಗಳೂ ತಮ್ಮ ಸಾಮರ್ಥ್ಯವನ್ನು ಹೆಚ್ಚಿಸಿ ಓಡಬಲ್ಲವು. ಅದಕ್ಕಾಗಿಯೇ ಕುದಿ ಕಂಬಳದಲ್ಲಿ ಕೋಣಗಳ ಚಿಗರೆಯ ವೇಗ, ಕಾಲುಗಳ ಚಲನೆಯನ್ನು ಗಮನಿಸಿ ಮುಂದಿನ ಸ್ಪರ್ಧೆಗೆ ಜೋಡಿಗಳನ್ನು ನಿರ್ಧಾರ ಮಾಡಲಾಗುತ್ತದೆ. ಈ ಬಾರಿ ಮೊದಲ ಕಂಬಳ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಡೆದರೆ, ಕೊನೆಯ ಕಂಬಳ ಮಲೆನಾಡು ಶಿವಮೊಗ್ಗದಲ್ಲಿ ನಡೆಯಲಿದೆ.
ಕಂಬಳದ ವೇಳಾಪಟ್ಟಿ ಈ ರೀತಿಯಾಗಿ ಇದೆ.
2024ರ ವೇಳಾಪಟ್ಟಿ:
ಅಕ್ಟೋಬರ್ 26 – ಬೆಂಗಳೂರು
ನವೆಂಬರ್ 9 – ಪಿಲಿಕುಳ
ನವೆಂಬರ್ 16 – ಪಣಪಿಲ
ನವೆಂಬರ್ 23 – ಕೊಡಂಗೆ
ನವೆಂಬರ್ 30 – ಕಕ್ಕೆಪದವು
ಡಿಸೆಂಬರ್ 7 – ಹೊಕ್ಕಾಡಿಗೋಳಿ
ಡಿಸೆಂಬರ್ 14 – ಬಾರಾಡಿಬೀಡು
ಡಿಸೆಂಬರ್ 21 – ಮೂಲ್ಕಿ
ಡಿಸೆಂಬರ್ 28 – ಮಂಗಳೂರು
ಜನವರಿ 4 – ಮಿಯ್ಯಾರು
ಜನವರಿ 11 – ನರಿಂಗಾನ
ಜನವರಿ 18 – ಅಡ್ವೆ
ಜನವರಿ 25 – ಮೂಡುಬಿದಿರೆ
ಫೆಬ್ರವರಿ 1 – ಐಕಳ
ಫೆಬ್ರವರಿ 8 – ಜೆಪ್ಪು
ಫೆಬ್ರವರಿ 15 – ವಾಮಂಜೂರು
ಫೆಬ್ರವರಿ 22 – ಕಟಪಾಡಿ
ಮಾರ್ಚ್ 1 – ಪುತ್ತೂರು
ಮಾರ್ಚ್ 8 – ಬಂಗಾಡಿ
ಮಾರ್ಚ್ 15 – ಬಂಟ್ವಾಳ
ಮಾರ್ಚ್ 22 – ಉಪ್ಪಿನಂಗಡಿ
ಮಾರ್ಚ್ 29 – ವೇಣೂರು
ಏಪ್ರಿಲ್ 5 – ಬಳ್ಕುಂಜೆ
ಏಪ್ರಿಲ್ 12 – ಗುರುಪುರ
ಏಪ್ರಿಲ್ 19 – ಶಿವಮೊಗ್ಗ
Dakshina Kannada,Karnataka
October 17, 2024 4:14 PM IST