Dakshina Kannada: ಕಡಲ ನಗರಿಯಲ್ಲಿ ಗೆಡ್ಡೆಗೆಣಸು ಮತ್ತು ಸೊಪ್ಪಿನ ಮೇಳ ಆಯೋಜನೆ! | 2 Days program of Soppu Mela at Dakshina Kannada

Dakshina Kannada: ಕಡಲ ನಗರಿಯಲ್ಲಿ ಗೆಡ್ಡೆಗೆಣಸು ಮತ್ತು ಸೊಪ್ಪಿನ ಮೇಳ ಆಯೋಜನೆ! | 2 Days program of Soppu Mela at Dakshina Kannada

Last Updated:

ಎರಡು ದಿನಗಳ ಕಾಲ ನಡೆದ ಈ ಮೇಳದಲ್ಲಿ ರಾಜ್ಯದ ನಾನಾಭಾಗಗಳಲ್ಲಿ ಬೆಳೆಯುವ ಮತ್ತು ಆಹಾರವಾಗಿ ಸ್ವೀಕರಿಸುವ ಗೆಡ್ಡೆಗೆಣಸುಗಳು ಇಲ್ಲಿ ಪ್ರದರ್ಶನಗೊಂಡಿವೆ. ದೂರದ ಒಡಿಶಾ ಸೇರಿದಂತೆ ಕೇರಳದಲ್ಲಿ ಬೆಳೆಯುವ ಅಪರೂಪದ ಗೆಡ್ಡೆ-ಗೆಣಸು, ಬೇರು-ಸೊಪ್ಪುಗಳನ್ನು ಪರಿಚಯಿಸಲಾಗಿದೆ.

X

ವಿಡಿಯೋ ಇಲ್ಲಿ ನೋಡಿ

ದಕ್ಷಿಣ ಕನ್ನಡ : ಆಧುನಿಕತೆಗೆ ಬೆನ್ನುಬಿದ್ದು ಆರೋಗ್ಯಕರ ಬದುಕನ್ನು(Healthy Life) ಕಳೆದುಕೊಳ್ಳುತ್ತಿರುವ ಇಂದಿನ ದಿನಗಳಲ್ಲಿ ಔಷಧೀಯ ಗುಣಗಳುಳ್ಳ ಗೆಡ್ಡೆ-ಗೆಣಸು, ಸೊಪ್ಪುಗಳ ಮಹತ್ವದ ಬಗ್ಗೆ ಅರಿವು ಮೂಡಿಸುವ ವಿಶಿಷ್ಟ ಮೇಳವನ್ನು(Specail Mela) ಮಂಗಳೂರಿನಲ್ಲಿ(Mangaluru) ಆಯೋಜಿಸಲಾಗಿದೆ. ಕಡಲ ನಗರಿಯಲ್ಲಿ ಮೊದಲ ಬಾರಿಗೆ ಆಯೋಜಿಸಲಾಗಿರುವ ಈ ಮೇಳಕ್ಕೆ ಜನರು ಆಕರ್ಷಿತರಾಗಿದ್ದಾರೆ. ವಿವಿಧ ರೀತಿಯ ಸೊಪ್ಪು, ಗೆಡ್ಡೆ- ಗೆಣಸುಗಳನ್ನು ಮುಗಿಬಿದ್ದು ಖರೀದಿಸಿದ್ದಾರೆ.

ಸೊಪ್ಪು ತರಕಾರಿ ಎಂದರೆ ಬಸಳೆ, ಹರಿವೆ, ಮೆಂತ್ಯೆ, ಕೊತ್ತಂಬರಿ. ಗೆಡ್ಡೆಗಳೆಂದರೆ ಗೆಣಸು, ಕೆಸು, ಸುವರ್ಣಗಡ್ಡೆ, ಬಟಾಟೆ ಇಷ್ಟೇ ಎಂದು ತಿಳಿದುಕೊಂಡಿದ್ದ ನಗರದ ಬಹುತೇಕ ಮಂದಿಯ ಮುಂದೆ ಸೊಪ್ಪು-ಗೆಡ್ಡೆಗಳ ಲೋಕವೇ ಮಂಗಳೂರಿನಲ್ಲಿ ತೆರೆದು ಕೊಂಡಿದೆ. ಮಂಗಳೂರಿನ ಸಂಘನಿಕೇತನದಲ್ಲಿ ನಡೆದ ‘ಕಂದಮೂಲ- ಗೆಡ್ಡೆಗೆಣಸು ಮತ್ತು ಸೊಪ್ಪು ಮೇಳ’ ಎಂದು ಕಂಡು ಕೇಳರಿಯದ ಗೆಡ್ಡೆಗಳನ್ನು ಮೇಳದಲ್ಲಿ ನಗರವಾಸಿಗಳಿಗೆ ಪರಿಚಯಿಸಲಾಗಿದೆ.

ಇದನ್ನೂ ಓದಿ: Uttara Kannada: ಈ ದೇವಾಲಯದಲ್ಲಿ ಸತ್ಯಭಾಮ ಮತ್ತು ರುಕ್ಮಿಣಿ ಜೊತೆಗಿದ್ದಾನೆ ಶ್ರೀಕೃಷ್ಣ!

ಎರಡು ದಿನಗಳ ಕಾಲ ನಡೆದ ಈ ಮೇಳದಲ್ಲಿ ರಾಜ್ಯದ ನಾನಾಭಾಗಗಳಲ್ಲಿ ಬೆಳೆಯುವ ಮತ್ತು ಆಹಾರವಾಗಿ ಸ್ವೀಕರಿಸುವ ಗೆಡ್ಡೆಗೆಣಸುಗಳು ಇಲ್ಲಿ ಪ್ರದರ್ಶನಗೊಂಡಿವೆ. ದೂರದ ಒಡಿಶಾ ಸೇರಿದಂತೆ ಕೇರಳದಲ್ಲಿ ಬೆಳೆಯುವ ಅಪರೂಪದ ಗೆಡ್ಡೆ-ಗೆಣಸು, ಬೇರು-ಸೊಪ್ಪುಗಳನ್ನು ಪರಿಚಯಿಸಲಾಗಿದೆ. ಅಷ್ಟು ಮಾತ್ರವಲ್ಲದೆ ಅವುಗಳ ಉಪಯೋಗ ಔಷಧೀಯ ಗುಣ ಪೌಷ್ಟಿಕತೆಯ ಬಗ್ಗೆಯೂ ಇಲ್ಲಿನ ಜನರಲ್ಲಿ ಜಾಗೃತಿ ಮೂಡಿಸಲಾಗಿದೆ. ಕಳೆ ಗಿಡ ಎಂದು ಕಿತ್ತು ಬಿಸಾಡುವ ಗಿಡಗಳು ಆರೋಗ್ಯಕಾರಿ ‘ಸೊಪ್ಪು’ಗಳಾಗಿ ಮೇಳೈಸಿವೆ.

ಒಂದೆಡೆ ಪಿರಿಯಾಪಟ್ಟಣದ ಕಾಡು ಮದ್ದು ಸೊಪ್ಪು, ಇನ್ನೊಂದೆಡೆ ಭಾರೀ ಗಾತ್ರದ ಗೆಡ್ಡೆಗಳ ಕೃಷಿಕ ರೇಜ್ ಜೋಸೆಫ್ ಅವರು ಬೆಳೆದ ಗೆಡ್ಡೆಗೆಣಸುಗಳ ಪ್ರದರ್ಶನ, ಉತ್ತರ ಕನ್ನಡ ಜಿಲ್ಲೆಯ ಜೋಯ್ಡಾದ ಮುಡ್ಲಿಗೆಡ್ಡೆ ಸೇರಿದಂತೆ ಅನೇಕ ಗೆಡ್ಡೆ-ಗೆಣಸುಗಳ ಮೌಲ್ಯವರ್ಧಿತ ಖಾದ್ಯ ವಸ್ತುಗಳ ಪ್ರದರ್ಶನ ಹಾಗೂ ಮಾರಾಟವನ್ನು ಕೂಡ ಏರ್ಪಡಿಸಲಾಗಿತ್ತು . ಟ್ಯೂಬರ್ ಮ್ಯಾನ್ ಎಂದೇ ಖ್ಯಾತಿ ಗಳಿಸಿರುವ ಕೇರಳದ ವೈನಾಡಿನ ಕೇದಾಟ ಶಾಜಿ ಗೆಡ್ಡೆ ಗೆಣಸುಗಳು ವಿಶೇಷ ಆಕರ್ಷಣೆಯಾಗಿದ್ದವು.