Dakshina kannada: ಕದ್ರಿ ಪಾರ್ಕ್‌ನಲ್ಲಿ ಮಾವು- ಹಲಸು ಮೇಳ, ಖರೀದಿ ಭರಾಟೆ ಬಲು ಜೋರು! | Dakshina kannada mango mela at Kadri park

Dakshina kannada: ಕದ್ರಿ ಪಾರ್ಕ್‌ನಲ್ಲಿ ಮಾವು- ಹಲಸು ಮೇಳ, ಖರೀದಿ ಭರಾಟೆ ಬಲು ಜೋರು! | Dakshina kannada mango mela at Kadri park

Last Updated:

ಈಗಾಗಲೇ ಸುಮಾರು 15ಕ್ಕೂ ಅಧಿಕ ಮಳಿಗೆಗಳು ತೆರೆಯಲ್ಪಟ್ಟಿದ್ದು, ಅಲ್ಫೋನ್ಸೋ, ರತ್ನಗಿರಿ ಅಲ್ಫೋನ್ಸೋ, ಕಲಪಾಡಿ, ಚಿಟ್ಟೆ ಬಾದಾಮಿ, ಶುಗರ್ ಬೇಬಿ, ರಸಪೂರಿ, ಸರ್ವಋತು ಹಲಸಿನ ಹಣ್ಣು ಮೇಳದಲ್ಲಿದೆ.

X

ವಿಡಿಯೋ ಇಲ್ಲಿ ನೋಡಿ

ದಕ್ಷಿಣ ಕನ್ನಡ: ಬಿರು ಬಿಸಿಲ ಧಗೆಯ ನಡುವೆ ಮಂಗಳೂರಿನ ಕದ್ರಿ ಪಾರ್ಕ್ ನಲ್ಲಿ(Kadri Park) ಮಾವು, ಹಲಸು ಮೇಳ ಆರಂಭವಾಗಿದೆ. ವಿವಿಧ ತಳಿಗಳ ಮಾವು, ಹಲಸಿನ ಹಣ್ಣುಗಳನ್ನು(Mango and Jackfruit) ಈ ಮೇಳದಲ್ಲಿ ಪ್ರದರ್ಶಿಸಲಾಗಿದ್ದು, ಬಿಸಿಲ ಝಳದ ನಡುವೆಯೂ ಮಾವು, ಹಲಸು ಖರೀದಿ ಭರಾಟೆ ಹೆಚ್ಚಾಗಿದೆ. ಬಿರು ಬೇಸಿಗೆಯ ನಡುವೆಯೇ ನಗರದ ಕದ್ರಿ ಪಾರ್ಕ್‌ನಲ್ಲಿ ದಕ್ಷಿಣ ಕನ್ನಡ ಜಿಲ್ಲಾಡಳಿತವು(Dakshina Kannada) ಜಿ.ಪಂ. ಹಾಗೂ ತೋಟಗಾರಿಕಾ ಇಲಾಖೆಯ ಸಹಯೋಗದಲ್ಲಿ ಮಾವು- ಹಲಸು ಮೇಳ ಆಯೋಜಿಸಿದೆ.

ಮೇ 18 ರವರೆಗೆ ಈ ಮೇಳ ಆಯೋಜಿಸಲಾಗಿದ್ದು, ಮೇಳದಲ್ಲಿ ವಿವಿಧ ತಳಿಯ ಮಾವು, ಹಲಸು ಖರೀದಿ ಭರಾಟೆ ಬಿರುಸಾಗಿದೆ. ನೈಸರ್ಗಿಕವಾಗಿ ಹಣ್ಣಾಗಿಸಿದ ಹಣ್ಣುಗಳನ್ನೇ ರೈತರು ಮಾರಾಟ ಮಾಡುತ್ತಿದ್ದಾರೆ. ರಾಮನಗರದ ವಿವಿಧ ಭಾಗಗಳ ರೈತರು ಸಾವಯವವಾಗಿ ಬೆಳೆದ ಮಾವು ಮತ್ತು ಹಲಸನ್ನು ಮೇಳದಲ್ಲಿ ಪ್ರದರ್ಶನ ಮತ್ತು ಮಾರಾಟಕ್ಕಿದ್ದು, ಬೆಳಗ್ಗೆ 9 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ಮೇಳ ನಡೆಯಲಿದೆ.

ಈಗಾಗಲೇ ಸುಮಾರು 15ಕ್ಕೂ ಅಧಿಕ ಮಳಿಗೆಗಳು ತೆರೆಯಲ್ಪಟ್ಟಿದ್ದು, ಅಲ್ಫೋನ್ಸೋ, ರತ್ನಗಿರಿ ಅಲ್ಫೋನ್ಸೋ, ಕಲಪಾಡಿ, ಚಿಟ್ಟೆ ಬಾದಾಮಿ, ಶುಗರ್ ಬೇಬಿ, ರಸಪೂರಿ, ಸರ್ವಋತು ಹಲಸಿನ ಹಣ್ಣು ಮೇಳದಲ್ಲಿದೆ.

ಮೇಳದ ಮಳಿಗೆಗಳಲ್ಲಿ ನೇರವಾಗಿ ರೈತರು ತಾವು ಬೆಳೆಸಿದ ಹಣ್ಣುಗಳನ್ನು ಗ್ರಾಹಕರಿಗೆ ಮಾರಾಟ ಮಾಡಲು ಅವಕಾಶವನ್ನು ಕಲ್ಪಿಸಲಾಗಿದೆ. ಮಾರಾಟವಾಗುವ ಮಾವು ತಳಿಗಳಿಗೆ ಸಾಮಾನ್ಯ ದರವನ್ನು ಖಾತರಿಪಡಿಸಲಾಗಿದೆ. ಮಾತ್ರವಲ್ಲದೆ, ನೈಸರ್ಗಿಕವಾಗಿ ಮಾಗಿಸಿದ ಹಾಗೂ ಕಾರ್ಬೈಡ್ ಉಪಯೋಗಿಸಿ ಮಾಗಿಸಿದ ಹಣ್ಣು ಯಾವ ರೀತಿ ಇರುತ್ತದೆ ಎಂಬ ಬಗ್ಗೆಯೂ ಮಾವು ಪ್ರಿಯರಿಗೆ ಮೇಳದಲ್ಲಿ ಮಾಹಿತಿಯನ್ನು ನೀಡಲಾಗುತ್ತಿದೆ.