Dakshina Kannada: ಕನ್ನಡ ಸಾಹಿತ್ಯ ಸಮ್ಮೇಳನ ಪ್ರಚಾರ ರಥಕ್ಕೆ ದಕ್ಷಿಣ ಕನ್ನಡದಲ್ಲಿ ಭವ್ಯ ಸ್ವಾಗತ; ಹೇಗಿತ್ತು ಕಾರ್ಯಕ್ರಮ? | Dakshina Kannada people welcomes Kannada Literary Conference promotional chariot

Dakshina Kannada: ಕನ್ನಡ ಸಾಹಿತ್ಯ ಸಮ್ಮೇಳನ ಪ್ರಚಾರ ರಥಕ್ಕೆ ದಕ್ಷಿಣ ಕನ್ನಡದಲ್ಲಿ ಭವ್ಯ ಸ್ವಾಗತ; ಹೇಗಿತ್ತು ಕಾರ್ಯಕ್ರಮ? | Dakshina Kannada people welcomes Kannada Literary Conference promotional chariot

Last Updated:

ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಚಾರದ ಅಂಗವಾಗಿ ಕನ್ನಡ ಭುವನೇಶ್ವರಿ ರಥವು ಉತ್ತರ ಕನ್ನಡ ಜಿಲ್ಲೆಯ ಶಿರಸಿಯಿಂದ ಸಂಚಾರ ಆರಂಭಿಸಿತ್ತು. ಸದ್ಯ ಈ ರಥವು ಎಲ್ಲಿಗೆ ತಲುಪಿದೆ ಎಂದು ತಿಳಿಯಲು ಈ ವರದಿ ನೋಡಿ.

X

ಇಲ್ಲಿ ವಿಡಿಯೋ ನೋಡಿ

ದಕ್ಷಿಣ ಕನ್ನಡ: ಮಂಡ್ಯದಲ್ಲಿ ಡಿಸೆಂಬರ್ 20 ರಿಂದ 3 ದಿನಗಳ ಕಾಲ ನಡೆಯಲಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ (All India Kannada Literary Conference) ಪ್ರಚಾರ ಕಾರ್ಯ ಜೋರಾಗಿದೆ. ಉತ್ತರ ಕನ್ನಡ (Uttara Kannada) ಜಿಲ್ಲೆಯ ಶಿರಸಿಯಿಂದ ಹೊರಟಿರುವ ಕನ್ನಡ ಭುವನೇಶ್ವರಿ ರಥಕ್ಕೆ ದಕ್ಷಿಣ ಕನ್ನಡ (Dakshina Kannada News) ಜಿಲ್ಲೆಯ ಪುತ್ತೂರಿನಲ್ಲಿ ಭವ್ಯ ಸ್ವಾಗತ ಸಿಕ್ಕಿದೆ .

ದಕ್ಷಿಣ ಕನ್ನಡ ಜಿಲ್ಲೆ ಪ್ರವೇಶಿಸಿದ ಕನ್ನಡ ಭುವನೇಶ್ವರಿಯ ರಥವನ್ನು ಪುತ್ತೂರಿನಲ್ಲಿ ಅದ್ಧೂರಿಯಾಗಿ ಸ್ವಾಗತಿಸಲಾಗಿದೆ. ಜಿಲ್ಲೆಯ ಅಧಿಕಾರಿಗಳು, ಜನಪ್ರತಿನಿಧಿಗಳು, ಸಂಘಸಂಸ್ಥೆಗಳು, ಸಾರ್ವಜನಿಕರು ಸೇರಿಕೊಂಡು ಕನ್ನಡ ರಥವನ್ನು ಅತ್ಯಂತ ಗೌರವದಿಂದ ಬರಮಾಡಿಕೊಂಡಿದ್ದಾರೆ.

ಡಿಸೆಂಬರ್ 20ರಿಂದ ಮೂರು ದಿನ ಸಮ್ಮೇಳನ

ಮಂಡ್ಯದಲ್ಲಿ ಡಿಸೆಂಬರ್ 20, 21, 22ರಂದು ನಡೆಯಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಚಾರ ಅಂಗವಾಗಿ ಕನ್ನಡ ರಥವು ಸಂಚರಿಸುತ್ತಿದೆ. ಉತ್ತರ ಕನ್ನಡ ಜಿಲ್ಲೆಯ ಶಿರಸಿ ನಗರದ ಮಾರಿಕಾಂಬಾ ದೇವಸ್ಥಾನದಿಂದ ಈ ರಥವು ತನ್ನ ಸಂಚಾರವನ್ನು ಆರಂಭಿದ್ದು ಹಲವು ಜಿಲ್ಲೆಗಳಿಗೆ ಹೋಗಿ ಈಗ ದಕ್ಷಿಣ ಕನ್ನಡ ಜಿಲ್ಲೆಯನ್ನು ಪ್ರವೇಶಿಸಿದೆ.

ಗಮನ ಸೆಳೆಯುತ್ತಿರುವ ಕನ್ನಡದ ರಥ

ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಚಾರದ ಅಂಗವಾಗಿ ಸಂಚರಿಸುತ್ತಿರುವ ಈ ಕನ್ನಡ ಭುವನೇಶ್ವರಿ ರಥವನ್ನು ಕಣ್ಮನ ಸೆಳೆಯುವಂತೆ ನಿರ್ಮಿಸಲಾಗಿದೆ. ಈ ರಥದಲ್ಲಿ ಕನ್ನಡದ ಪ್ರಮುಖ ಸಾಹಿತಿಗಳು, ಪ್ರಮುಖ ಕ್ಷೇತ್ರಗಳ ಚಿತ್ರಗಳನ್ನು ಕಾಣಬಹುದು. ರಥದ ಹಿಂಭಾಗದಲ್ಲಿ ಹೊಲ ಉಳುಮೆ ಮಾಡುತ್ತಿರುವ ಎತ್ತುಗಳು, ರೈತನ ಕಲಾಕೃತಿಯನ್ನು ಕಾಣಬಹುದು. ರಥದ ಮುಂಭಾಗದಲ್ಲಿ ಭುವನೇಶ್ವರಿ ತಾಯಿಯ ಸುಂದರ ಮೂರ್ತಿ, ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್, ವಿಶ್ವೇಶ್ವರಯ್ಯ ಅವರ ಮೂರ್ತಿಗಳನ್ನು ಅಳವಡಿಸಲಾಗಿದೆ.

ಇದನ್ನೂ ಓದಿ: Belagavi: ಶಂಕರ್ ನಾಗ್ ಮೊದಲ ಕನ್ನಡ ಸಿನಿಮಾ ಶೂಟಿಂಗ್ ನಡೆದಿದ್ದು ಇದೇ ಜಾಗದಲ್ಲಿ! ಆ ಸ್ಥಳ ನೆನಪಿದೆಯಾ?

ಎಲ್ಲ ಜಿಲ್ಲೆಗಳಲ್ಲೂ ಸಂಚಾರ

ಮಂಡ್ಯದಲ್ಲಿ 3 ದಿನಗಳ ಕಾಲ ನಡೆಯುವ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಚಾರದ ಅಂಗವಾಗಿ ಈ ರಥವು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಸಂಚಾರ ನಡೆಸಲಿದೆ. ಸದ್ಯ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿಗೆ ಆಗಮಿಸಿರುವ ಕನ್ನಡ ರಥವು, ಇಲ್ಲಿಂದ ನೇರವಾಗಿ ಬೆಳ್ತಂಗಡಿಗೆ ತೆರಳಿ ಅಲ್ಲಿಂದ ಧರ್ಮಸ್ಥಳಕ್ಕೆ ತೆರಳಲಿದೆ. ಬಳಿಕ ಧರ್ಮಸ್ಥಳದಿಂದ ನೇರವಾಗಿ ಕಡಬ ತಾಲೂಕಿಗೆ ತೆರಳಿ ಅಲ್ಲಿಂದ ಸುಳ್ಯ ಮೂಲಕ ಕೊಡಗು ಜಿಲ್ಲೆಯನ್ನು ಕನ್ನಡ ರಥವು ಪ್ರವೇಶಿಸಲಿದೆ.

ಕನ್ನಡ ಭುವನೇಶ್ವರಿ ರಥಕ್ಕೆ ಎಲ್ಲ ಜಿಲ್ಲೆಗಳಲ್ಲೂ ಸರ್ಕಾರಿ ಗೌರವವನ್ನು ಸಲ್ಲಿಸಲಾಗುತ್ತಿದೆ. ಅಲ್ಲದೇ ಸಾರ್ವಜನಿಕರೂ ಸಹ ಕನ್ನಡ ರಥವನ್ನು ಸಂಭ್ರಮದಿಂದ ಸ್ವಾಗತಿಸುತ್ತಿರುವುದು ವಿಶೇಷವಾಗಿದೆ.