Dakshina Kannada: ಕಲುಷಿತವಾಗುತ್ತಿದೆ ಕುಮಾರಧಾರಾ ನದಿ ಒಡಲು! | Dakshina Kannada: Kumaradhara River is becoming polluted

Dakshina Kannada: ಕಲುಷಿತವಾಗುತ್ತಿದೆ ಕುಮಾರಧಾರಾ ನದಿ ಒಡಲು! | Dakshina Kannada: Kumaradhara River is becoming polluted

Last Updated:

ತೀರ್ಥಸ್ನಾನ ನೆರವೇರಿಸಿದ ಬಳಿಕ ಹಳೆ ಬಟ್ಟೆಗಳನ್ನು ನದಿಯಲ್ಲಿ ಬಿಡಬೇಕು ಎನ್ನುವ ಸಲಹೆಯನ್ನು ಕೆಲವು ಜೋತಿಷ್ಯರು ಮತ್ತು ಅರ್ಚಕರು ನೀಡುತ್ತಿರುವ ಹಿನ್ನಲೆಯಲ್ಲಿ ಎಲ್ಲಾ ಭಕ್ತರು ನದಿಗೇ ಹಳೆ ಬಟ್ಟೆಗಳನ್ನು ಸುರಿಯುತ್ತಿದ್ದರು. ಹೀಗೆ ಮಾಡುವುದರಿಂದ ಪುಣ್ಯ ಬರುತ್ತದೆ ಎನ್ನುವ ಮೌಡ್ಯವನ್ನು ಭಕ್ತಾಧಿಗಳ‌ ತಲೆಗೆ ತುಂಬಿರುವ ಕಾರಣಕ್ಕೆ ಈ ರೀತಿ ಮಾಡಿ ಪುಣ್ಯದ ಬದಲು ಪಾಪವನ್ನು‌ ಕಟ್ಟಿಕೊಂಡು ಹೋಗುತ್ತಿದ್ದಾರೆ.

X

ವಿಡಿಯೋ ಇಲ್ಲಿ ನೋಡಿ

ದಕ್ಷಿಣ ಕನ್ನಡ: ಪ್ರಸಿದ್ಧ ನಾಗಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದ(Kukke Subrahmanya) ಸ್ನಾನಘಟ್ಟ ಭಕ್ತಾದಿಗಳಿಂದಲೇ ಮಲಿನವಾಗುತ್ತಿದೆ. ತೀರ್ಥಸ್ನಾನ ಮಾಡಿ ಹಳೆ ಬಟ್ಟೆಗಳನ್ನು ನದಿಯಲ್ಲೇ ಬಿಡಬೇಕು ಎನ್ನುವ ಮೂಢನಂಬಿಕೆಯ ಹಿನ್ನಲೆಯಲ್ಲಿ ಸ್ವಚ್ಛಂದವಾಗಿ ಹರಿಯುವ ಕುಮಾರಧಾರಾ ನದಿ(Kumaradhara River) ಬಟ್ಟೆ-ಬರೆಗಳಿಂದ ತುಂಬಿ ಕಲುಷಿತಗೊಂಡಿದೆ. ಭಕ್ತರ ಈ ವರ್ತನೆಯಿಂದ ದಿನವೊಂದಕ್ಕೆ ಲೋಡುಗಟ್ಟಲೆ ಹಳೆ ಬಟ್ಟೆಗಳು ಸ್ನಾನಘಟ್ಟದಲ್ಲಿ ಶೇಖರಣೆಯಾಗುತ್ತಿದೆ.

ಪರಿಶುದ್ಧ ಪರಿಸರದಲ್ಲಿ ಇರಲು ಬಯಸುವ ನಾಗನ ಆರಾಧನಾ ಸ್ಥಳದಲ್ಲಿ ಕಲುಷಿತ ವಾತಾವರಣ ನಿರ್ಮಾಣಗೊಳ್ಳುತ್ತಿದೆ. ಕ್ಷೇತ್ರದ ಕುಮಾರಧಾರಾ ಸ್ನಾನಘಟ್ಟದ ಬಳಿ ಹರಿಯುವ ಪವಿತ್ರ ನದಿ ಕುಮಾರಧಾರಾದಲ್ಲಿ ಇಂದು ಹಳೆ ಬಟ್ಟೆಗಳೇ ತೇಲಾಡುತ್ತಿವೆ. ಇದು ದಕ್ಷಿಣ ಭಾರತದ ಹೆಸರಾಂತ ನಾಗಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದ ಸ್ನಾನಘಟ್ಟದಲ್ಲಿ ಕಂಡು‌ಬರುವ ಪ್ರತಿದಿನದ ದೃಶ್ಯಗಳು. ಕ್ಷೇತ್ರಕ್ಕೆ ಬಂದು ಕುಮಾರಧಾರಾ ನದಿಯಲ್ಲಿ ತೀರ್ಥಸ್ನಾನ ನೆರವೇರಿಸುವ ಭಕ್ತಾದಿಗಳು ಬಳಿಕ ತಾವು ತಂದ ಹಳೆ ಬಟ್ಟೆ-ಬರೆಗಳನ್ನು ನದಿಯಲ್ಲಿ ಮತ್ತು ಸ್ನಾನಘಟ್ಟದ ಸುತ್ತಮುತ್ತ ಬಿಟ್ಟು ಹೋಗುತ್ತಿದ್ದಾರೆ.

ಇದನ್ನೂ ಓದಿ: Chikkamagaluru: ಅಧಿಕಾರಿಗಳ ನಡೆ ಕಂಡು ಬೇಸತ್ತ ಜನರು- ಪೋಷಕರಿಂದಲೇ ಶಾಲೆಗೆ ಸುಣ್ಣ ಬಣ್ಣ

ತೀರ್ಥಸ್ನಾನ ನೆರವೇರಿಸಿದ ಬಳಿಕ ಹಳೆ ಬಟ್ಟೆಗಳನ್ನು ನದಿಯಲ್ಲಿ ಬಿಡಬೇಕು ಎನ್ನುವ ಸಲಹೆಯನ್ನು ಕೆಲವು ಜೋತಿಷ್ಯರು ಮತ್ತು ಅರ್ಚಕರು ನೀಡುತ್ತಿರುವ ಹಿನ್ನಲೆಯಲ್ಲಿ ಎಲ್ಲಾ ಭಕ್ತರು ನದಿಗೇ ಹಳೆ ಬಟ್ಟೆಗಳನ್ನು ಸುರಿಯುತ್ತಿದ್ದರು. ಹೀಗೆ ಮಾಡುವುದರಿಂದ ಪುಣ್ಯ ಬರುತ್ತದೆ ಎನ್ನುವ ಮೌಡ್ಯವನ್ನು ಭಕ್ತಾಧಿಗಳ‌ ತಲೆಗೆ ತುಂಬಿರುವ ಕಾರಣಕ್ಕೆ ಈ ರೀತಿ ಮಾಡಿ ಪುಣ್ಯದ ಬದಲು ಪಾಪವನ್ನು‌ ಕಟ್ಟಿಕೊಂಡು ಹೋಗುತ್ತಿದ್ದಾರೆ.

ಭಕ್ತಾಧಿಗಳು ಈ ರೀತಿಯ ವರ್ತನೆಗಳನ್ನು ಪವಿತ್ರ ನದಿಯಲ್ಲಿ ಮಾಡಬಾರದು ಎನ್ನುವ ಹಲವು ಎಚ್ಚರಿಕೆ ಫಲಕಗಳನ್ನು ಸ್ನಾನಘಟ್ಟದ ಸುತ್ತಮುತ್ತ ಕ್ಷೇತ್ರದ ವತಿಯಿಂದಲೇ ಅಳವಡಿಸಲಾಗಿದೆ.‌ ಆದರೆ ಈ ಎಚ್ಚರಿಕೆಗಳಿಗೂ, ತಮಗೂ ಸಂಬಂಧವೇ ಇಲ್ಲ ಎನ್ನುವ ರೀತಿಯಲ್ಲಿ ಕೆಲವು ಭಕ್ತಾಧಿಗಳು ವರ್ತಿಸುತ್ತಿರೋದು ಸ್ಥಳೀಯರ ಆಕ್ರೋಶಕ್ಕೂ ಕಾರಣವಾಗಿದೆ. ಹಳೆ ಬಟ್ಟೆಗಳನ್ನು ನದಿಯಲ್ಲಿ ಹಾಕಬಾರದು ಎಂದು ತಡೆದರೂ, ಜೋತಿಷ್ಯಿಗಳು ಹೇಳಿದ್ದಾರೆ ಎಂದು ಕಾರಲ್ಲಿ ಬಟ್ಟೆಗಳನ್ನು ತಂದು ಎಸೆಯುವ ಪ್ರಕ್ರಿಯೆಗಳೂ ನಡೆಯುತ್ತಿವೆ. ಈ ನಿಟ್ಟಿನಲ್ಲಿ ದೇವಸ್ಥಾನ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಲಾರಂಭಿಸಿದ್ದಾರೆ.

ಕುಮಾರಪರ್ವತದಿಂದ ಶುಭ್ರವಾಗಿ ಹರಿಯುವ ಕುಮಾರಧಾರಾ ನದಿ, ಭಕ್ತಾಧಿಗಳ ಮೂಢನಂಬಿಕೆಗೆ ಸಿಲುಕಿ ಇನ್ನಷ್ಟು ಮಲಿನವಾಗುವ ಮೊದಲು ಸಂಬಂಧಪಟ್ಟ ಇಲಾಖೆಗಳು ಈ ಬಗ್ಗೆ ಕ್ರಮ ವಹಿಸಬೇಕಿದೆ ಎನ್ನುವ ಆಗ್ರಹ ಪರಿಸರ ಪ್ರೇಮಿಗಳದ್ದಾಗಿದೆ.